Last Updated:
ಮಿಂಚಿನಪದವು ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಕಾವೇರಿ ತೀರ್ಥೋದ್ಭವ, ಕುಂಕುಮಾರ್ಚನೆ ಹಾಗೂ ಐತಿಹಾಸಿಕ ಪವಾಡಗಳು ನಡೆಯುತ್ತವೆ, ಇದು ಕೇರಳದವರಿಗೆ ಪುಣ್ಯಕ್ಷೇತ್ರವಾಗಿ ಪ್ರಸಿದ್ಧ.
ದಕ್ಷಿಣ ಕನ್ನಡ: ತುಲಾ ಸಂಕ್ರಮಣದ ಪುಣ್ಯ ಕಾಲ, ಭಾಗಮಂಡಲದ ತಲಕಾವೇರಿಯಲ್ಲಿ ಕಾವೇರಿ ಉದಿಸುತ್ತಾಳೆ ಎಂಬ ನಂಬಿಕೆಯಿದೆ. ಹೀಗಾಗಿ ಅಲ್ಲಿ ಲಕ್ಷಾಂತರ ಭಕ್ತರು (Devotees) ಜಮಾವಣೆಯಾಗುತ್ತಾರೆ. ಆದರೆ ಕಾವೇರಿ ಸಂಕ್ರಮಣ ಬರೀ ಕೊಡಗಿಗೆ (Kodagu) ಸೀಮಿತವಲ್ಲ, ದಕ್ಷಿಣ ಕನ್ನಡದಲ್ಲೂ ಕಾವೇರಿ (Cauvery) ಇದ್ದಾಳೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ಐತಿಹಾಸಿಕ (Historical) ಸತ್ಯ! ಪೌರಾಣಿಕ ಪುಣ್ಯ ಕ್ಷೇತ್ರದ ಪವಾಡ!
ಹೌದು, ಕಾಸರಗೋಡಿನ ಕುಂಬಳೆ ಸೀಮೆಯ ಮಧ್ಯಭಾಗದಲ್ಲಿ ಇರುವುದು ಈ ಮಿಂಚಿನಪದವು ಎಂಬ ಶಿವ ಕ್ಷೇತ್ರ. ಇಲ್ಲಿರುವ ಲಿಂಗ ಬಹು ಅಪರೂಪವಾದದ್ದು. ಇದನ್ನು ಖರಾಸುರ ತನ್ನ ಅಸುರೀ ಪ್ರವೃತ್ತಿ ತ್ಯಜಿಸಿ ಪ್ರಾಯಶ್ಚಿತ್ತಕ್ಕಾಗಿ ನಿರ್ಮಿಸಿ ನಂತರ ಅದರಲ್ಲಿ ಲೀನವಾದ ಎಂಬ ಐತಿಹ್ಯವಿದೆ. ಮುಚುಕುಂದ ಮುನಿಗಳು ಇಲ್ಲಿ ತಪಗೈದಿದ್ದಾರೆ.
ಇಂತಹ ಕ್ಷೇತ್ರದಲ್ಲಿ ಪೂರ್ವ ದಿಕ್ಕಿನಲ್ಲಿ ಒಂದು ಗುಹೆಯಿದೆ. ಆ ಗುಹೆಯಿಂದ ಸದಾ ಕಾಲ ಕಾವೇರಿ ಪ್ರವಹಿಸುತ್ತಾಳೆ. ಆ ಕಾವೇರಿ ತೀರ್ಥ ಪುಷ್ಕರಣಿಯಲ್ಲಿ ಸಂಗ್ರಹವಾಗುತ್ತದೆ. ಈ ಪುಣ್ಯ ಪುಷ್ಕರಣಿಯಲ್ಲಿ ತಲಕಾವೇರಿಯಲ್ಲಿ ನಡೆಯುವ ತೀರ್ಥೋದ್ಭವಕ್ಕೆ ಸರಿಯಾಗಿಯೇ ತಟಾಕದಲ್ಲಿ ತೀರ್ಥೋದ್ಭವವಾಗುವುದು ಒಂದು ದೈವೀಕ ಆಶ್ಚರ್ಯವೇ ಸರಿ. ತಲಕಾವೇರಿಗೆ ಸಮನಾಗಿ ಇಲ್ಲಿ ಇಂದು ತೀರ್ಥೋದ್ಭವವಾಗಲಿದೆ.
ಕೇರಳದ ಜನ ಈ ಕಾವೇರಿ ತೀರ್ಥದಲ್ಲಿ ಮುಳುಗಿ ತಮ್ಮ ಚರ್ಮರೋಗಗಳನ್ನು ಕಳೆದುಕೊಳ್ಳುತ್ತಾ ಬರುತ್ತಿದ್ದಾರೆ. ಅಲ್ಲದೇ ತುಳುನಾಡಿನ ಉತ್ತರದಿಂದ ದಕ್ಷಿಣದವರೆಗೂ ಕಾವೇರಿ ಅಪ್ಪೆಯಾಗಿ ಈ ತಾಯಿ ನಿರಂತರ ಒಂದು ತಿಂಗಳ ಕಾಲ ತೀರ್ಥೋದ್ಭವ ಮಾಡಿ ಜನರ ನಾನಾ ರೋಗ ಕಳೆಯುತ್ತಾಳೆ. ಇಲ್ಲಿ ಕಾವೇರಮ್ಮನಿಗೆ ಕುಂಕುಮಾರ್ಚನೆ ನಡೆಯುತ್ತದೆ. ಶ್ರೀ ಭಾರ್ಗವ ಪರಶುರಾಮ ಇಲ್ಲಿ ಕಾವೇರಿಯನ್ನು ನೆಲೆಗೊಳಿಸಿದ ಪ್ರತೀತಿ ಇದೆ.
ಕೇರಳದವರಿಗೆ ಪುಣ್ಯಕ್ಷೇತ್ರ ಈ ತಾಣ!
Disclaimer
ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.
Dakshina Kannada,Karnataka
October 19, 2025 12:21 PM IST