MLC 2025 6,6,6,6: ಒಂದೇ ಓವರ್​​ನಲ್ಲಿ ಸಿಎಸ್​ಕೆ ಬೌಲರ್​​ಗೆ ಸತತ 4 ಸಿಕ್ಸರ್​ ಚಚ್ಚಿದ ಬೆಂಗಳೂರು ಹುಡುಗ! | Meet Sanjay Krishnamurthi Bengaluru Boy Smashes Rachin Ravindra for 4 Sixes

MLC 2025 6,6,6,6: ಒಂದೇ ಓವರ್​​ನಲ್ಲಿ ಸಿಎಸ್​ಕೆ ಬೌಲರ್​​ಗೆ ಸತತ 4 ಸಿಕ್ಸರ್​ ಚಚ್ಚಿದ ಬೆಂಗಳೂರು ಹುಡುಗ! | Meet Sanjay Krishnamurthi Bengaluru Boy Smashes Rachin Ravindra for 4 Sixes

ಫಿನ್ ಅಲೆನ್ ಜೊತೆ ಭರ್ಜರಿ ಜೊತೆಯಾಟ

ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 269/5 ರನ್‌ಗಳ ದೊಡ್ಡ ಮೊತ್ತವನ್ನು ಗಳಿಸಿತು. ಫಿನ್ ಆಲೆನ್‌ನ 51 ಎಸೆತಗಳಲ್ಲಿ 151 ರನ್‌ಗಳ ದಾಖಲೆಯ ಇನಿಂಗ್ಸ್ (19 ಸಿಕ್ಸರ್‌ಗಳು, 5 ಬೌಂಡರಿಗಳು) ಈ ಗೆಲುವಿನ ಪ್ರಮುಖ ಕಾರಣವಾಯಿತು. ಇವರಿಗೆ ಸಾಥ್ ನೀಡಿದ ಸಂಜಯ್ ಕೃಷ್ಣಮೂರ್ತಿ ನಂಬರ್ 4 ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಇಳಿದು, ಕೇವಲ 20 ಎಸೆತಗಳಲ್ಲಿ 36 ರನ್‌ಗಳನ್ನು ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್‌ಗಳು ಒಳಗೊಂಡಿದ್ದವು. ವಿಶೇಷವೆಂದರೆ ಸಂಜಯ್ ಒಂದೇ ಓವರ್​​ನಲ್ಲಿ ಕಿವೀಸ್ ಸ್ಟಾರ್ ಐಪಿಎಲ್​​ನಲ್ಲಿ ಸಿಎಸ್​ಕೆ ಪರ ಆಡುವ ರಚಿನ್ ರವೀಂದ್ರ ಬೌಲಿಂಗ್​​​ನಲ್ಲಿ ಹೊಡೆದರು. ಈ ಪಂದ್ಯದಲ್ಲಿ 270 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವಾಷಿಂಗ್ಟನ್ ಫ್ರೀಡಂ 13.1 ಓವರ್‌ಗಳಲ್ಲಿ 146 ರನ್‌ಗೆ ಆಲೌಟ್ ಆಗಿ, 123 ರನ್‌ಗಳಿಂದ ಸೋಲು ಕಂಡಿತು.

ಕರ್ನಾಟಕ ಮೂಲದ ಸಂಜಯ್ ಕೃಷ್ಣಮೂರ್ತಿ

ಸಂಜಯ್ ಕೃಷ್ಣಮೂರ್ತಿ ಬೆಂಗಳೂರಿನಲ್ಲಿ ಜನಿಸಿ ಬೆಳೆದವರು. ಭಾರತದ ಬಹುತೇಕ ಮಕ್ಕಳಂತೆ, ಅವರೂ ಕೂಡ ಭಾರತ ತಂಡಕ್ಕೆ ಆಡುವ ಕನಸು ಕಂಡಿದ್ದರು. ಬೆಂಗಳೂರಿನ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಅವರು, ಜೋನಲ್ ಕ್ರಿಕೆಟ್ ಮತ್ತು ಕರ್ನಾಟಕದ U-16 ತಂಡವನ್ನು ಪ್ರತಿನಿಧಿಸಿದ್ದರು.

ಆದರೆ, ಸಂಜಯ್ ಅಮೆರಿಕಾದಲ್ಲಿ ಜನಿಸಿದವರು. ಅವರ ಕುಟುಂಬವು 2011ರಲ್ಲಿ ಅರಿಜೋನಾದಿಂದ ಕರ್ನಾಟಕಕ್ಕೆ ಸ್ಥಳಾಂತರಗೊಂಡಿತು. ಆದರೂ, ಸಂಜಯ್ ಅಮೆರಿಕದ ನಾಗರಿಕತ್ವವನ್ನು ಉಳಿಸಿಕೊಂಡಿದ್ದಾರೆ ಮತ್ತು OCI (Overseas Citizen of India) ಕಾರ್ಡ್‌ಹೋಲ್ಡರ್ ಆಗಿದ್ದಾರೆ.

ಕ್ರಿಕೆಟ್‌ನಲ್ಲಿ ಸಂಜಯ್‌ರ ಆಯ್ಕೆ

ಭಾರತಕ್ಕೆ ಆಡುವ ಕನಸು ಕಾಣುತ್ತಿದ್ದ ಸಂಜಯ್, ಭಾರತದಲ್ಲಿ ಕ್ರಿಕೆಟ್‌ನ ತೀವ್ರ ಸ್ಪರ್ಧೆ ಅಡ್ಡಿಯಾಯಿತು. OCI ಕಾರ್ಡ್‌ಹೋಲ್ಡರ್‌ಗಳು ಕರ್ನಾಟಕದ ರಾಜ್ಯ ತಂಡಕ್ಕೆ ಆಡಲು ಅರ್ಹರಲ್ಲ ಎಂಬ ನಿಯಮವು ಅವರಿಗೆ ಮತ್ತೊಂದು ತೊಡಕಾಯಿತು. ಭಾರತಕ್ಕೆ ಆಡಲು ಅವರು ತಮ್ಮ ಅಮೆರಿಕದ ನಾಗರಿಕತ್ವವನ್ನು ತ್ಯಜಿಸಬೇಕಾಗಿತ್ತು, ಇದು ಒಂದು ದೀರ್ಘ ಮತ್ತು ಸಂಕೀರ್ಣ ಪ್ರಕ್ರಿಯೆಯಾಗಿತ್ತು.

MLC ಅವಕಾಶ

2019ರಲ್ಲಿ ಮೇಜರ್ ಲೀಗ್ ಕ್ರಿಕೆಟ್‌ನಿಂದ ಟ್ರಯಲ್‌ಗೆ ಕರೆ ಬಂದಾಗ, ಸಂಜಯ್ ತಮ್ಮ ಭವಿಷ್ಯವನ್ನು ಅಮೆರಿಕದ ಕ್ರಿಕೆಟ್‌ನಲ್ಲಿ ಕಂಡುಕೊಂಡರು. ಈ ನಿರ್ಧಾರವು ಅವರ ಕ್ರಿಕೆಟ್ ವೃತ್ತಿಜೀವನಕ್ಕೆ ಒಂದು ದೊಡ್ಡ ತಿರುವು ನೀಡಿತು. 2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ, ಸಂಜಯ್‌ರ ಯುಎಸ್‌ಗೆ ತಾತ್ಕಾಲಿಕ ಭೇಟಿಯು ಅವರನ್ನ ದೀರ್ಘಾವಧಿಯಲ್ಲಿ ಅಲ್ಲಿಯೇ ಉಳಿಯುವಂತೆ ಮಾಡಿತು. ಈ ಸಮಯದಲ್ಲಿ ಅವರು ಹೂಸ್ಟನ್‌ನಲ್ಲಿ MLC ಶಿಬಿರಕ್ಕೆ ಸೇರಿದರು.

2021ರಲ್ಲಿ ಒಮಾನ್‌ನಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ, ತಂಡದ ಆಟಗಾರ ಆರನ್ ಜೋನ್ಸ್‌ಗೆ ಗಾಯವಾದಾಗ ಸಂಜಯ್ ಯುಎಸ್‌ಎ ತಂಡಕ್ಕೆ ODI ಚೊಚ್ಚಲ ಪಂದ್ಯವಾಡಿದರು. ಇಲ್ಲಿಂದ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಆರಂಭವಾಯಿತು.

ಸಂಜಯ್‌ರ ಕ್ರಿಕೆಟ್ ವೃತ್ತಿಜೀವನ

ಸಂಜಯ್ 14 ಏಕದಿನ ಪಂದ್ಯಗಳನ್ನಾಡಿದ್ದು 255 ರನ್‌ಗಳು (ಸರಾಸರಿ 25.5, ಸ್ಟ್ರೈಕ್ ರೇಟ್ 85). 9 ಟಿ20 ಪಂದ್ಯಗಳಲ್ಲಿ 90 ರನ್‌ಗಳು (ಸ್ಟ್ರೈಕ್ ರೇಟ್ 120).

ಇನ್ನು ಎಂಎಲ್​ಸಿಯಲ್ಲಿ 2025ರ ಆರಂಭಿಕ ಪಂದ್ಯ ಸೇರಿದಂತೆ, ಸಂಜಯ್ 10 MLC ಪಂದ್ಯಗಳಲ್ಲಿ 205 ರನ್‌ಗಳನ್ನು 142.36ರ ಸ್ಟ್ರೈಕ್ ರೇಟ್‌ನೊಂದಿಗೆ ಗಳಿಸಿದ್ದಾರೆ, ಇದರಲ್ಲಿ ಒಂದು ಅರ್ಧಶತಕವೂ ಒಳಗೊಂಡಿದೆ.

ಸಂಜಯ್‌ ಯುಎಸ್​ಎ ಕ್ರಿಕೆಟ್​ನ ಆಸ್ತಿ

22 ವರ್ಷದ ಸಂಜಯ್ ಕೃಷ್ಣಮೂರ್ತಿಯ ಆಕರ್ಷಕ ಆಟದ ಶೈಲಿ ಮತ್ತು ಸ್ಥಿರ ಪ್ರದರ್ಶನವು ಅವರನ್ನು ಯುಎಸ್‌ಎ ಕ್ರಿಕೆಟ್‌ನ ಭವಿಷ್ಯದ ತಾರೆಯಾಗಿ ಮಾಡಿದೆ. MLC ಮತ್ತು ಯುಎಸ್‌ಎ ತಂಡದಲ್ಲಿ ಅವರ ಕೊಡುಗೆಯು ಅಮೆರಿಕದಲ್ಲಿ ಕ್ರಿಕೆಟ್‌ನ ಜನಪ್ರಿಯತೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಅಲ್ಲದೆ ಭಾರತೀಯ ಮೂಲದ ಆಟಗಾರನಾಗಿ, ಸಂಜಯ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ಗಮನ ಸೆಳೆಯುತ್ತಿದ್ದಾರೆ. ಅವರ ಯಶಸ್ಸು ಯುಎಸ್‌ಎ ಕ್ರಿಕೆಟ್‌ಗೆ ಹೊಸ ಆಯಾಮವನ್ನು ತಂದುಕೊಡಬಹುದು.