MLC T20: 2 ಬೌಂಡರಿ, 11 ಸಿಕ್ಸರ್, 38 ಎಸೆತಕ್ಕೆ 88ರನ್​! ಐಪಿಎಲ್​​ನಲ್ಲಿ ಇಂತಹ ಒಂದು ಆಟ ಆಡಿದ್ರೆ ಡೆಲ್ಲಿ ತಂಡ ಪ್ಲೇ ಆಫ್ ತಲುಪುತ್ತಿತ್ತು! | McGurk s Masterclass Jake Fraser-McGurk Lights Up MLC with 2 Fours and 11 Sixes

MLC T20: 2 ಬೌಂಡರಿ, 11 ಸಿಕ್ಸರ್, 38 ಎಸೆತಕ್ಕೆ 88ರನ್​! ಐಪಿಎಲ್​​ನಲ್ಲಿ ಇಂತಹ ಒಂದು ಆಟ ಆಡಿದ್ರೆ ಡೆಲ್ಲಿ ತಂಡ ಪ್ಲೇ ಆಫ್ ತಲುಪುತ್ತಿತ್ತು! | McGurk s Masterclass Jake Fraser-McGurk Lights Up MLC with 2 Fours and 11 Sixes

Last Updated:



ಡೆಲ್ಲಿ ಕ್ಯಾಪಿಟಲ್ಸ್ ತಂಡ 2025ರ ಐಪಿಎಲ್​​ನಲ್ಲಿ ಆರಂಭದ 4 ಪಂದ್ಯಗಳನ್ನ ಗೆದ್ದಿತ್ತು. ಮೊದಲ 8 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಪ್ಲೇ ಆಫ್​ ರೇಸ್​ನಲ್ಲಿ ಟಾಪ್ನಲ್ಲಿತ್ತು. ಆದರೆ ದ್ವಿತೀಯಾರ್ಧದಲ್ಲಿ ದಯನೀಯ ವೈಫಲ್ಯ ಅನುಭವಿಸಿತು.

ಜೇಕ್ ಫ್ರೇಸರ್​ ಮೆಕ್​ಗರ್ಕ್​ಜೇಕ್ ಫ್ರೇಸರ್​ ಮೆಕ್​ಗರ್ಕ್​
ಜೇಕ್ ಫ್ರೇಸರ್​ ಮೆಕ್​ಗರ್ಕ್​

ಐಪಿಎಲ್ (IPL 2025) ಮುಗಿಯುತ್ತಿದ್ದಂತೆ ಮತ್ತೊಂದು ಟಿ20 ಲೀಗ್ (MLC T20) ಗಮನ ಸೆಳೆಯುತ್ತಿದೆ. ಐಪಿಎಲ್​ ಫ್ರಾಂಚೈಸಿಗಳ ಮಾಲಿಕತ್ವ ಇರುವ ಅಮೆರಿಕಾದ ಮೇಜರ್ ಕ್ರಿಕೆಟ್ ಲೀಗ್​ ಅದ್ದೂರಿಯಾಗಿ ಆರಂಭವಾಗಿದೆ. ಕಳೆದ ಬಾರಿಯ ರನ್ನರ್ ಅಪ್ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ತಂಡವು ಮೇಜರ್ ಲೀಗ್ ಕ್ರಿಕೆಟ್ 2025 ರ ಋತುವಿನಲ್ಲಿ ಸತತ ಎರಡನೇ ಜಯ ಸಾಧಿಸಿದೆ. ಭಾನುವಾರ ಕ್ಯಾಲಿಫೋರ್ನಿಯಾದಲ್ಲಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ 32 ರನ್‌ಗಳಿಂದ ಜಯಗಳಿಸಿತು. 220 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ 19.5 ಓವರ್‌ಗಳಲ್ಲಿ 187 ರನ್‌ಗಳಿಗೆ ಆಲೌಟ್ ಆಯಿತು.

ಮೆಕ್‌ಗರ್ಕ್ ಅವರ ಬಿರುಗಾಳಿಯ ಇನ್ನಿಂಗ್ಸ್

ಮೊದಲು ಬ್ಯಾಟಿಂಗ್ ಮಾಡಿದ ಸ್ಯಾನ್ ಫ್ರಾನ್ಸಿಸ್ಕೊ ​​ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 219 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಯುನಿಕಾರ್ನ್ಸ್ ತಂಡದ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಯುವ ಆಟಗಾರ ಜೇಕ್ ಫ್ರೇಸರ್-ಮೆಕ್‌ಗರ್ಕ್ ಅದ್ಭುತ ಪ್ರದರ್ಶನ ನೀಡಿದರು. ಫಸ್ಟ್ ಡೌನ್ ನಲ್ಲಿ ಬ್ಯಾಟಿಂಗ್ ಮಾಡಲು ಬಂದ ಮೆಕ್ ಗರ್ಕ್ ಎದುರಾಳಿ ಬೌಲರ್ ಗಳನ್ನು ಬೆಂಡೆತ್ತಿದರು.

11 ಸಿಕ್ಸರ್ ಸಿಡಿಸಿದ ಜೇಕ್

ಅವರು ಕ್ರೀಸ್‌ನಲ್ಲಿದ್ದ ಉದ್ದಕ್ಕೂ ಬೌಂಡರಿ, ಸಿಕ್ಸರ್​ಗಳ ಮಳೆಗರೆದರು. ಮೆಕ್‌ಗರ್ಕ್ ಕೇವಲ 38 ಎಸೆತಗಳಲ್ಲಿ 2 ಬೌಂಡರಿ ಮತ್ತು 11 ಸಿಕ್ಸರ್‌ಗಳೊಂದಿಗೆ 88 ರನ್ ಗಳಿಸಿ ಔಟಾದರು. ಅವರೊಂದಿಗೆ ಫಿನ್ ಅಲೆನ್ (52) ಅರ್ಧಶತಕ ಗಳಿಸಿ ಮಿಂಚಿದರು. ಲಾಸ್ ಏಂಜಲೀಸ್ ಬೌಲರ್‌ಗಳಲ್ಲಿ, ವ್ಯಾನ್ ಶಾಲ್ಕ್‌ವಿಕ್ ಮೂರು ವಿಕೆಟ್‌ಗಳನ್ನು ಪಡೆದರು, ಅಲಿ ಖಾನ್ ಎರಡು ವಿಕೆಟ್‌ಗಳನ್ನು ಪಡೆದರು ಮತ್ತು ರಸೆಲ್ ಮತ್ತು ನರೈನ್ ತಲಾ ಒಂದು ವಿಕೆಟ್ ಪಡೆದರು.

ಐಪಿಎಲ್‌ನಲ್ಲಿ ಅಟ್ಟರ್ ಫ್ಲಾಫ್

ಜೇಕ್ ಫ್ರೇಸರ್ ಮೆಕ್‌ಗರ್ಕ್ ಐಪಿಎಲ್-2025 ಋತುವಿನಲ್ಲಿ ದಯನೀಯವಾಗಿ ವೈಫಲ್ಯ ಕಂಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಪರ 6 ಪಂದ್ಯಗಳನ್ನು ಆಡಿದ್ದ ಮೆಕ್‌ಗರ್ಕ್, 9.17 ರ ಸರಾಸರಿಯಲ್ಲಿ ಕೇವಲ 55 ರನ್ ಗಳಿಸಿದ್ದರು. ಇದರಿಂದಾಗಿ ಅವರನ್ನು ಉಳಿದ ಪಂದ್ಯಗಳಿಗೆ ತಂಡದಿಂದ ಕೈಬಿಡಲಾಯಿತು. ಒಂದು ವೇಳೆ ಇಂತಹ ಒಂದೆರಡು ಪ್ರದರ್ಶನ ತೋರಿದರೆ ಡೆಲ್ಲಿ ತಂಡ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಇರುತ್ತಿತ್ತು.

ಐಪಿಎಲ್​ನಲ್ಲಿ ಡೆಲ್ಲಿ ಪ್ರದರ್ಶನ

ಡೆಲ್ಲಿ ಕ್ಯಾಪಿಟಲ್ಸ್ ತಂಡ 2025ರ ಐಪಿಎಲ್​​ನಲ್ಲಿ ಆರಂಭದ 4 ಪಂದ್ಯಗಳನ್ನ ಗೆದ್ದಿತ್ತು. ಮೊದಲ 8 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಪ್ಲೇ ಆಫ್​ ರೇಸ್​ನಲ್ಲಿ ಟಾಪ್ನಲ್ಲಿತ್ತು. ಆದರೆ ದ್ವಿತೀಯಾರ್ಧದಲ್ಲಿ ದಯನೀಯ ವೈಫಲ್ಯ ಅನುಭವಿಸಿತು. ಕೊನೆಯ 6 ಪಂದ್ಯಗಳಲ್ಲಿ ಕೇವಲ 2 ರಲ್ಲಿ ಮಾತ್ರ ಗೆಲುವು ಕಂಡಿತು. ಹಾಗಾಗಿ ಪ್ಲೇ ಆಫ್ ರೇಸ್​​ನಲ್ಲಿ ಹೊರಗುಳಿದು ನಿರಾಶೆ ಮೂಡಿಸಿತು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

MLC T20: 2 ಬೌಂಡರಿ, 11 ಸಿಕ್ಸರ್, 38 ಎಸೆತಕ್ಕೆ 88ರನ್​! ಐಪಿಎಲ್​​ನಲ್ಲಿ ಇಂತಹ ಒಂದು ಆಟ ಆಡಿದ್ರೆ ಡೆಲ್ಲಿ ತಂಡ ಪ್ಲೇ ಆಫ್ ತಲುಪುತ್ತಿತ್ತು!