Last Updated:
ಅನೇಕರು ರಾತ್ರಿ ಹೊತ್ತು ತಮ್ಮ ಫೋನ್‌ಗಳನ್ನು ಚಾರ್ಜ್ಗೆ ಹಾಕಿ ಮಲಗುತ್ತಾರೆ. ಇದು ಮೊಬೈಲ್ ಬ್ಯಾಟರಿ ಮೇಲೆ ನೇರ ಪರಿಣಾಮ ಬೀರುತ್ತದೆ. ಏಕೆಂದರೆ ಹೀಗೆ ಮಾಡುವುದರಿಂದ ಕೆಲವೊಮ್ಮೆ ಬ್ಯಾಟರಿ ಸ್ಫೋಟಗೊಂಡು ಹಾನಿಯನ್ನುಂಟು ಮಾಡುವ ಸಾಧ್ಯತೆಗಳು ಹೆಚ್ಚಿರುತ್ತದೆ.
ಸ್ಮಾರ್ಟ್‌ಫೋನ್‌ಗಳು (SmartPhone) ಈಗ ನಮ್ಮ ದೈನಂದಿನ ಜೀವನದ (Daily Life) ಒಂದು ಭಾಗವಾಗಿದೆ. ನಾವು ಬೆಳಿಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ಫೋನ್‌ಗಳು (Phones) ನಮ್ಮೊಂದಿಗಿರುತ್ತವೆ. ಬೇರೆ ಏನೂ ಅಗತ್ಯವಿಲ್ಲದಷ್ಟು ಫೋನ್‌ಗಳ ಬಗ್ಗೆ ತುಂಬಾ ಗೀಳು ಹೊಂದಿರುವ ಜನರಿದ್ದಾರೆ. ಆದರೆ ಈ ಫೋನ್‌ಗಳನ್ನು ಬಳಸುವಾಗ ಸಣ್ಣ ಅಭ್ಯಾಸಗಳು ಬ್ಯಾಟರಿ (Battery) ಬಾಳಿಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ ಎಂಬುದನ್ನು ಯಾರೂ ಗಮನಿಸುವುದಿಲ್ಲ. ಕೆಲವರು ಬ್ಯಾಟರಿ ಫುಲ್ ಖಾಲಿ ಆಗೋವರೆಗೂ ಯೂಸ್ ಮಾಡ್ತಾನೆ ಇರುತ್ತಾರೆ. ಇನ್ನು ಕೆಲವರು 100 ಪರ್ಸೆಂಟ್ ಬ್ಯಾಟರಿ ಚಾರ್ಜ್ (Charge) ಆದರೂ ಕೂಡ ಕೇಬಲ್ನ ತೆಗೆಯುವುದಿಲ್ಲ. ಹೀಗೆಲ್ಲಾ ಮಾಡುವುದರಿಂದ ಫೋನ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ತಾಂತ್ರಿಕ ತಜ್ಞರು ಹೇಳುತ್ತಾರೆ.
ಅನೇಕರು ರಾತ್ರಿ ಹೊತ್ತು ತಮ್ಮ ಫೋನ್‌ಗಳನ್ನು ಚಾರ್ಜ್ಗೆ ಹಾಕಿ ಮಲಗುತ್ತಾರೆ. ಇದು ಮೊಬೈಲ್ ಬ್ಯಾಟರಿ ಮೇಲೆ ನೇರ ಪರಿಣಾಮ ಬೀರುತ್ತದೆ. ಏಕೆಂದರೆ ಹೀಗೆ ಮಾಡುವುದರಿಂದ ಕೆಲವೊಮ್ಮೆ ಬ್ಯಾಟರಿ ಸ್ಫೋಟಗೊಂಡು ಹಾನಿಯನ್ನುಂಟು ಮಾಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇನ್ನು ಫೋನ್‌ನ ಸಂಪೂರ್ಣವಾಗಿ ಡಿಸ್ಚಾರ್ಜ್ ಆಗುವವರೆಗೆ ಬಳಸುವುದರಿಂದ ಮತ್ತು ನಂತರ ಅದನ್ನು ಮತ್ತೆ 100 ಪರ್ಸೆಂಟ್ ಚಾರ್ಜ್ ಮಾಡುವುದರಿಂದ ಬ್ಯಾಟರಿ ನಿಷ್ಪ್ರಯೋಜಕವಾಗಬಹುದು. ಇವು ಮೊದಲಿಗೆ ಗೊತ್ತಾಗದಿದ್ದರೂ, ಕ್ರಮೇಣ ಬ್ಯಾಟರಿ ಕಾರ್ಯಕ್ಷಮತೆಯ ಮೇಲಿನ ಪರಿಣಾಮವು ತಿಳಿಯುತ್ತಾ ಹೋಗುತ್ತದೆ.
ಅನೇಕ ಜನರು ತಮ್ಮ ಫೋನ್‌ನ ಬ್ಯಾಟರಿ ಜಿರೋ ಪರ್ಸೆಂಟ್ ತಲುಪಿದ ನಂತರವೇ ಚಾರ್ಜ್ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದನ್ನು ಆಗಾಗ್ಗೆ ಮಾಡುವುದರಿಂದ ಬ್ಯಾಟರಿಯಲ್ಲಿನ ರಾಸಾಯನಿಕ ಶಕ್ತಿ ಸಂಪೂರ್ಣವಾಗಿ ಖಾಲಿಯಾಗುತ್ತದೆ. ಅಲ್ಲದೆ, ಪ್ರತಿ ಬಾರಿಯೂ 100 ಪರ್ಸೆಂಟ್ ಚಾರ್ಜ್ ಮಾಡುವುದರಿಂದ ಬ್ಯಾಟರಿಯ ಮೇಲಿನ ಒತ್ತಡವು ಹೆಚ್ಚಾಗುತ್ತದೆ.
ಅದಕ್ಕಾಗಿಯೇ ತಂತ್ರಜ್ಞಾನ ತಜ್ಞರು 80-20 ನಿಯಮವನ್ನು ಅನುಸರಿಸುವುದು ಉತ್ತಮ ಎಂದು ಹೇಳುತ್ತಾರೆ. ಅಂದರೆ, ಬ್ಯಾಟರಿ ಮಟ್ಟವು 20 ಪ್ರತಿಶತಕ್ಕಿಂತ ಕಡಿಮೆಯಾಗದಂತೆ ಮತ್ತು 80 ಪರ್ಸೆಂಟ್ ಮೇಲೆ ಚಾರ್ಜ್ ಆಗದಂತೆ ನೋಡಿಕೊಳ್ಳುವುದು. ಈ ವಿಧಾನವು ದೀರ್ಘಕಾಲದವರೆಗೆ ಬ್ಯಾಟರಿಯನ್ನು ಆರೋಗ್ಯಕರವಾಗಿರಿಸುತ್ತದೆ.
ಫೋನ್ ಸಂಪೂರ್ಣವಾಗಿ ಚಾರ್ಜ್ ಆದ ನಂತರವೂ ಅದು ವಿದ್ಯುತ್ ಬಳಸುತ್ತಲೇ ಇರುತ್ತದೆ. ಇದು ಅತಿಯಾಗಿ ಬಿಸಿಯಾಗುವುದು ಮತ್ತು ಬ್ಯಾಟರಿ ಸಾಮರ್ಥ್ಯ ಕಡಿಮೆಯಾಗುವಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಸ್ಮಾರ್ಟ್‌ಫೋನ್‌ಗಳು ಈಗ ಬ್ಯಾಟರಿಯನ್ನು ಉಳಿಸಲು ವಿಶೇಷ ಸೆಟ್ಟಿಂಗ್‌ಗಳನ್ನು ಹೊಂದಿವೆ. ನೀವು ಅವುಗಳನ್ನು ಆನ್ ಮಾಡಿದರೆ, ನಿರ್ದಿಷ್ಟ ಶೇಕಡಾವಾರು ಮೀರಿದ ನಂತರ ಚಾರ್ಜಿಂಗ್ ನಿಲ್ಲುತ್ತದೆ. ಹೀಗೆ ಮಾಡುವುದರಿಂದ, ರಾತ್ರಿಯಿಡೀ ಚಾರ್ಜ್ ಮಾಡುವುದರಿಂದ ಉಂಟಾಗುವ ಹಾನಿಯನ್ನು ನೀವು ಕಡಿಮೆ ಮಾಡಬಹುದಾಗಿದೆ.
ಚಾರ್ಜ್ ಆಗುತ್ತಿರುವಾಗ ಫೋನ್‌ನಲ್ಲಿ ಹೆಚ್ಚು ಕೆಲಸ ಮಾಡುವುದರಿಂದ ಬ್ಯಾಟರಿಗೆ ಹಾನಿ ಉಂಟು ಮಾಡುತ್ತದೆ. ಚಾರ್ಜ್ಗೆ ಹಾಕಿ ಗೇಮ್ ಆಡುವುದು, ವೀಡಿಯೊಗಳನ್ನು ನೋಡುವುದು ಅಥವಾ ಕರೆಗಳನ್ನು ಮಾಡುವುದರಿಂದ ಫೋನ್ ಅತಿಯಾಗಿ ಹೀಟ್ ಆಗುತ್ತದೆ. ಈ ಬಿಸಿ ಶಾಖವು ಬ್ಯಾಟರಿಯ ದೊಡ್ಡ ಶತ್ರುವಾಗಿದ್ದು. ಅದಕ್ಕಾಗಿಯೇ ಚಾರ್ಜ್ ಮಾಡುವಾಗ ಫೋನ್ ಅನ್ನು ವಿಶ್ರಾಂತಿಯಲ್ಲಿಡುವುದು ಉತ್ತಮ.
ಅಲ್ಲದೆ, ಮೊಬೈಲ್ನ್ನು ದಿಂಬಿನ ಕೆಳಗೆ ಅಥವಾ ಹಾಸಿಗೆ ಮೇಲೆ ಇಟ್ಟು ಚಾರ್ಜ್ ಮಾಡಬೇಡಿ, ಮೊಬೈಲ್ ಚಾರ್ಜ್ ಮಾಡುವಾಗ ಗಾಳಿ ಇರುವ ಸ್ಥಳದಲ್ಲಿ ಇಡಿ. ಅಗತ್ಯವಿದ್ದರೆ, ಫೋನ್ ಕವರ್ ತೆಗೆಯುವುದು ಸಹ ಉಪಯುಕ್ತವಾಗಿದೆ.
ನ್ಯೂಸ್ 18 ಕನ್ನಡ ಟೆಕ್ನಾಲಜಿ ವಿಭಾಗದಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಹಿತಿ, ಮೊಬೈಲ್ ವಿಮರ್ಶೆಗಳು, ಗ್ಯಾಜೆಟ್‌ಗಳು, ತಂತ್ರಜ್ಞಾನ ಸಲಹೆಗಳು, ಇ-ಕಾಮರ್ಸ್ ಮಾರಾಟ, ಆನ್‌ಲೈನ್ ಶಾಪಿಂಗ್, ಅಪ್ಲಿಕೇಶನ್‌ಗಳು, ವಾಟ್ಸಾಪ್ ಅಪ್ಡೇಟ್ಸ್, ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ