Mobile Hacks: ಹಳೆಯ ಫೋನ್ ಮಾರಾಟ ಮಾಡುವ ಮೊದಲು ಕಡ್ಡಾಯವಾಗಿ ಮಾಡಬೇಕಾದ 5 ಕೆಲಸಗಳು: ಯಾವುವು ಗೊತ್ತಾ? | Before Selling Old Phone: 5 Crucial Steps to Secure Your Data | Tech Trend

Mobile Hacks: ಹಳೆಯ ಫೋನ್ ಮಾರಾಟ ಮಾಡುವ ಮೊದಲು ಕಡ್ಡಾಯವಾಗಿ ಮಾಡಬೇಕಾದ 5 ಕೆಲಸಗಳು: ಯಾವುವು ಗೊತ್ತಾ? | Before Selling Old Phone: 5 Crucial Steps to Secure Your Data | Tech Trend

Last Updated:

Mobile Hacks: ಹಳೆಯ ಸ್ಮಾರ್ಟ್‌ಫೋನ್ ಮಾರುವಾಗ ಅಥವಾ ಬೇರೆಯವರಿಗೆ ಕೊಡುವಾಗ, ಕೇವಲ ಫ್ಯಾಕ್ಟರಿ ರೀಸೆಟ್ ಮಾಡಿದರೆ ಸಾಲದು. ನಿಮ್ಮ ಫೋಟೋಗಳು, ಚಾಟ್‌ಗಳು, ಮತ್ತು ಬ್ಯಾಂಕಿಂಗ್ ಪಾಸ್‌ವರ್ಡ್‌ಗಳಂತಹ ವೈಯಕ್ತಿಕ ಡೇಟಾವನ್ನು ವಿಶೇಷ ಸಾಫ್ಟ್‌ವೇರ್ ಬಳಸಿ ಮರಳಿ ಪಡೆಯಬಹುದು. ಅದರಲ್ಲೂ ಕೆಲುವೊಂದು ಮಾಹಿತಿಗಳು ಅಪರಿಚಿತರ ಕೈಗೆ ಸಿಕ್ಕರೆ ಅಪಾಯ. ಆದ್ದರಿಂದ, ನಿಮ್ಮ ಡೇಟಾವನ್ನು ಸಂಪೂರ್ಣವಾಗಿ ಅಳಿಸಲು ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಆ ಕುರಿತ ಮಾಹಿತಿ ಇಲ್ಲಿದೆ:

News18News18
News18

Mobile Hacks: ಇಂದಿನ ಕಾಲದಲ್ಲಿ ಹೊಸ ಸ್ಮಾರ್ಟ್‌ಫೋನ್ (Smartphone) ಖರೀದಿಸುವುದು ಸಾಮಾನ್ಯವಾಗಿದೆ. ಆದರೆ ಹಳೆಯ ಫೋನ್ ಮಾರಾಟ (Selling old phones) ಮಾಡುವಾಗ ಅಥವಾ ಬೇರೆಯವರಿಗೆ ಕೊಡುವಾಗ ಹೆಚ್ಚು ಮಂದಿ ಗಮನಿಸದ ಒಂದು ದೊಡ್ಡ ಅಪಾಯವೆಂದರೆ ಡೇಟಾ ಸುರಕ್ಷತೆ. ಫೋನ್‌ನಲ್ಲಿರುವ ಫೋಟೋಗಳು, WhatsApp ಚಾಟ್‌ಗಳು, ಬ್ಯಾಂಕಿಂಗ್ ವಿವರಗಳು, ಇಮೇಲ್‌ಗಳು ಮತ್ತು ಪಾಸ್‌ವರ್ಡ್‌ಗಳು (Password) ತಪ್ಪು ಕೈಗೆ ಸಿಕ್ಕರೆ ಅದು ದೊಡ್ಡ ಮಟ್ಟದ ಹಾನಿ ಮಾಡಬಹುದು. ಸಾಮಾನ್ಯವಾಗಿ ಫೋನ್ ಫಾರ್ಮ್ಯಾಟ್ ಅಥವಾ ಫ್ಯಾಕ್ಟರಿ ರೀಸೆಟ್ (Factory reset) ಮಾಡಿದರೆ ಸಾಕು ಎಂದು ಹಲವರು ಭಾವಿಸುತ್ತಾರೆ. ಆದರೆ ನಿಜವಾಗಿ ಅಳಿಸಿದ ಡೇಟಾವನ್ನು ವಿಶೇಷ ಸಾಫ್ಟ್‌ವೇರ್‌ಗಳ ಮೂಲಕ ಮರುಪಡೆಯಬಹುದು. ಆದ್ದರಿಂದ ಹಳೆಯ ಫೋನ್ ಮಾರಾಟ ಮಾಡುವ ಮೊದಲು ಕೆಲವು ಹೆಚ್ಚುವರಿ ಹಂತಗಳನ್ನು ಅನುಸರಿಸುವುದು ಬಹಳ ಮುಖ್ಯ.

ಫ್ಯಾಕ್ಟರಿ ರೀಸೆಟ್ ಪ್ರೊಟೆಕ್ಷನ್ (FRP) ತೆಗೆದುಹಾಕುವುದು

ನಿಮ್ಮ ಫೋನ್ Android Lollipop (5.0) ಅಥವಾ ನಂತರದ ಆವೃತ್ತಿಯನ್ನು ಬಳಸುತ್ತಿದ್ದರೆ ಅದು Factory Reset Protection (FRP) ಹೊಂದಿರುತ್ತದೆ. ಈ ವೈಶಿಷ್ಟ್ಯವನ್ನು ತೆಗೆದುಹಾಕದಿದ್ದರೆ ಹೊಸ ಮಾಲೀಕರು ಫೋನ್ ಬಳಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಫ್ಯಾಕ್ಟರಿ ರೀಸೆಟ್ ಮಾಡುವ ಮೊದಲು Google ಖಾತೆಯಿಂದ ಲಾಗ್ ಔಟ್ ಆಗಿ. ಫೋನ್ ಹಳೆಯ ಆವೃತ್ತಿಯಲ್ಲಿದ್ದರೆ ಈ ಹಂತವನ್ನು ಬಿಟ್ಟುಬಿಡಬಹುದು.

ಡೇಟಾ ಬ್ಯಾಕಪ್ ಮಾಡುವುದು

ಡೇಟಾವನ್ನು ಅಳಿಸುವ ಮೊದಲು ನಿಮ್ಮ ಪ್ರಮುಖ ಫೈಲ್‌ಗಳು, ಫೋಟೋಗಳು ಮತ್ತು ದಾಖಲೆಗಳನ್ನು ಬ್ಯಾಕಪ್ ಮಾಡುವುದು ಅತ್ಯಂತ ಅಗತ್ಯ. Android 8.1 ಅಥವಾ ಅದರ ನಂತರದ ಆವೃತ್ತಿಗಳಲ್ಲಿ ಸಂದೇಶಗಳು ಸ್ವಯಂ ಬ್ಯಾಕಪ್ ಆಗುತ್ತವೆ, ಆದರೆ ಕರೆ ಲಾಗ್‌ಗಳು ಉಳಿಯುವುದಿಲ್ಲ. ಇದಕ್ಕಾಗಿ ತೃತೀಯ ಪಕ್ಷದ ಆ್ಯಪ್‌ಗಳನ್ನು ಬಳಸಬಹುದು. ಕಂಪನಿಗಳ ಪ್ರಕಾರ ವಿಭಿನ್ನ ಬ್ಯಾಕಪ್ ಅಪ್ಲಿಕೇಶನ್‌ಗಳು ಲಭ್ಯವಿವೆ. ಉದಾಹರಣೆಗೆ, Samsung ಬಳಕೆದಾರರಿಗೆ Smart Switch ಎಂಬ ಅಪ್ಲಿಕೇಶನ್ ಲಭ್ಯ.

ಫ್ಯಾಕ್ಟರಿ ರೀಸೆಟ್ ಮಾಡುವ ಮೊದಲು ಡಮ್ಮಿ ಡೇಟಾ ತುಂಬುವುದು

ಕೇವಲ ಫ್ಯಾಕ್ಟರಿ ರೀಸೆಟ್ ಮಾಡಿದರೆ ಹಳೆಯ ಡೇಟಾವನ್ನು ಮರುಪಡೆಯುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಒಂದು ಸಣ್ಣ ತಂತ್ರ ಎಂದರೆ ಡಮ್ಮಿ ಡೇಟಾವನ್ನು ಅಪ್‌ಲೋಡ್ ಮಾಡುವುದು. ಉದಾಹರಣೆಗೆ, ದೊಡ್ಡ ಗಾತ್ರದ ವೀಡಿಯೊ, ಹಾಡುಗಳು, ಚಲನಚಿತ್ರಗಳನ್ನು ಫೋನ್‌ನಲ್ಲಿ ತುಂಬಿ ನಂತರ ಫ್ಯಾಕ್ಟರಿ ರೀಸೆಟ್ ಮಾಡಿ. ಇದರ ಪ್ರಯೋಜನವೆಂದರೆ ಹಳೆಯ ಡೇಟಾ ಈಗಾಗಲೇ ಎನ್‌ಕ್ರಿಪ್ಟ್ ಆಗಿ ಈ ನಕಲಿ ಡೇಟಾದಿಂದ ಮುಚ್ಚಲ್ಪಡುತ್ತದೆ. ಹೀಗಾಗಿ ಹೊಸ ಮಾಲೀಕರು ಡೇಟಾವನ್ನು ಮರುಪಡೆಯಲು ಯತ್ನಿಸಿದರೂ ಅವರಿಗೆ ಕೇವಲ ಈ ಅನಗತ್ಯ ಫೈಲ್‌ಗಳು ಮಾತ್ರ ಸಿಗುತ್ತವೆ.

ಫ್ಯಾಕ್ಟರಿ ರೀಸೆಟ್ ಸರಿಯಾಗಿ ಮಾಡುವುದು

ಪ್ರತಿ ಫೋನ್ ತಯಾರಕ ಕಂಪನಿಯ ಪ್ರಕಾರ ಫ್ಯಾಕ್ಟರಿ ರೀಸೆಟ್ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು. ಸಾಮಾನ್ಯವಾಗಿ Settings > System > Reset > Factory Data Reset ಮೂಲಕ ಈ ಪ್ರಕ್ರಿಯೆ ಮಾಡಬಹುದು. ಫ್ಯಾಕ್ಟರಿ ರೀಸೆಟ್ ಮಾಡಿದ ನಂತರ ಫೋನ್‌ನಲ್ಲಿ ಎಲ್ಲಾ ಆ್ಯಪ್‌ಗಳು, ಫೈಲ್‌ಗಳು ಮತ್ತು ಸೆಟ್ಟಿಂಗ್‌ಗಳು ಅಳಿಸಲ್ಪಡುತ್ತವೆ. ಆದರೆ ಈ ಹಂತದ ಬಳಿಕ Google ಖಾತೆಯಿಂದ ಫೋನ್ ಅನ್ನು unlink ಮಾಡುವುದು ಮರೆಯಬಾರದು.

Google ಖಾತೆ unlink ಮಾಡುವುದು

ಫ್ಯಾಕ್ಟರಿ ರೀಸೆಟ್ ಮಾಡಿದ ನಂತರವೂ, ಫೋನ್ ನಿಮ್ಮ Google ಖಾತೆಗೆ ಲಿಂಕ್ ಆಗಿರುವುದರಿಂದ ಹೊಸ ಮಾಲೀಕರು ಬಳಸುವಲ್ಲಿ ತೊಂದರೆ ಅನುಭವಿಸಬಹುದು. ಅದೇ ರೀತಿ ನಿಮ್ಮ ಡೇಟಾ ಕೂಡಾ ಲಿಂಕ್ ಆಗಿರಬಹುದು. ಇದನ್ನು ತಪ್ಪಿಸಲು Google ಖಾತೆಯ ಸೆಟ್ಟಿಂಗ್‌ಗಳಲ್ಲಿ “recently used devices” ವಿಭಾಗಕ್ಕೆ ಹೋಗಿ, ಮಾರಾಟ ಮಾಡಲು ಹೊರಟಿರುವ ಫೋನ್ ಆಯ್ಕೆ ಮಾಡಿ “remove” ಆಯ್ಕೆಯನ್ನು ಕ್ಲಿಕ್ ಮಾಡಿ. ಇದರಿಂದ ಫೋನ್ ನಿಮ್ಮ ಖಾತೆಯಿಂದ ಸಂಪೂರ್ಣವಾಗಿ ಬೇರ್ಪಡುತ್ತದೆ.

ಯಾಕೆ ಈ ಹಂತಗಳು ಮುಖ್ಯ?

ಡೇಟಾ ಕಳ್ಳತನ ಇಂದು ದೊಡ್ಡ ಸವಾಲಾಗಿದೆ. ಬ್ಯಾಂಕಿಂಗ್ ವಿವರಗಳು, ವೈಯಕ್ತಿಕ ಫೋಟೋಗಳು, ಚಾಟ್‌ಗಳು ಅಥವಾ ಇಮೇಲ್‌ಗಳು ಯಾರಾದರೂ ದುರುಪಯೋಗ ಮಾಡಿದರೆ ದೊಡ್ಡ ಆರ್ಥಿಕ ಮತ್ತು ಮಾನಸಿಕ ಹಾನಿ ಉಂಟಾಗಬಹುದು. ಆದ್ದರಿಂದ ಹಳೆಯ ಫೋನ್ ಮಾರಾಟ ಮಾಡುವ ಮೊದಲು ಕೇವಲ ಅಳಿಸುವುದರ ಮೇಲೆ ನಂಬಿಕೆ ಇಡುವುದರಿಂದ ಸಾಕಾಗುವುದಿಲ್ಲ. ಮೇಲ್ಕಂಡ ಎಲ್ಲಾ ಹಂತಗಳನ್ನು ಅನುಸರಿಸುವುದರಿಂದ ಮಾತ್ರ ನಿಮ್ಮ ಡೇಟಾ ಸುರಕ್ಷಿತವಾಗಿರುತ್ತದೆ.