Mohammed Taha: ಮಹಾರಾಜ ಟ್ರೋಫಿಯಲ್ಲಿ ಬ್ಯಾಕ್​ ಟು ಬ್ಯಾಕ್ ಶತಕ! IPLನಲ್ಲಿ ಈ ವರ್ಷವಾದ್ರೂ ಅವಕಾಶ ಕೊಡಿ ಎಂದು ಫ್ಯಾನ್ಸ್ ಮನವಿ | Mohammed Taha’s Century Blitz: Back-to-Back Tons Ignite IPL 2026 Hopes | ಕ್ರೀಡೆ

Mohammed Taha: ಮಹಾರಾಜ ಟ್ರೋಫಿಯಲ್ಲಿ ಬ್ಯಾಕ್​ ಟು ಬ್ಯಾಕ್ ಶತಕ! IPLನಲ್ಲಿ ಈ ವರ್ಷವಾದ್ರೂ ಅವಕಾಶ ಕೊಡಿ ಎಂದು ಫ್ಯಾನ್ಸ್ ಮನವಿ | Mohammed Taha’s Century Blitz: Back-to-Back Tons Ignite IPL 2026 Hopes | ಕ್ರೀಡೆ

Last Updated:

ತಹಾ ಆಗಸ್ಟ್ 12 ರಂದು, ಶಿವಮೊಗ್ಗ ಲಯನ್ಸ್ ವಿರುದ್ಧದ ಪಂದ್ಯದಲ್ಲಿ, ಕೇವಲ 53 ಎಸೆತಗಳಲ್ಲಿ 10 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 101 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಹುಬ್ಬಳ್ಳಿ ತಂಡ 216 ರನ್​ಗಳಿಸಿದರೆ, ಇದಕ್ಕೆ ಉತ್ತರವಾಗಿ ಶಿವಮೊಗ್ಗ 187 ರನ್​ಗಳಿಸಿ 29 ರನ್​ಗಳ ಸೋಲು ಕಂಡಿತ್ತು.

ಮೊಹಮ್ಮದ್ ತಹಾಮೊಹಮ್ಮದ್ ತಹಾ
ಮೊಹಮ್ಮದ್ ತಹಾ

ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ(KACA) ಆಯೋಜಿಸುತ್ತಿರುವ 2025 ರ ಮಹಾರಾಜ ಟ್ರೋಫಿ(Maharaja Trophy) T20 ಟೂರ್ನಮೆಂಟ್‌ನಲ್ಲಿ ಕರ್ನಾಟಕದ ಸ್ಪೋಟಕ ಬ್ಯಾಟರ್ ಮೊಹಮ್ಮದ್ ತಹಾ (Mohammed Taha) ತಮ್ಮ ಅದ್ಭುತ ಪ್ರದರ್ಶನದಿಂದ ಎಲ್ಲರನ್ನೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಟೂರ್ನಮೆಂಟ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್ ಅನ್ನು ಪ್ರತಿನಿಧಿಸುತ್ತಿರುವ ತಹಾ ರನ್​ಗಳ ಮಳೆಯನ್ನೇ ಸುರಿಸುತ್ತಿದ್ದಾರೆ. ಟೂರ್ನಿಯಲ್ಲಿ ಈಗಾಗಲೇ ಸತತ ಎರಡನೇ ಪಂದ್ಯದಲ್ಲಿ ಶತಕ ಗಳಿಸಿ ಐಪಿಎಲ್ ಫ್ರಾಚೈಸಿಗಳ ಗಮನ ಸೆಳೆಯುತ್ತಿದ್ದಾರೆ.

ಸತತ 2 ದಿನಗಳಲ್ಲಿ 2 ಶತಕ

ತಹಾ ಆಗಸ್ಟ್ 12 ರಂದು, ಶಿವಮೊಗ್ಗ ಲಯನ್ಸ್ ವಿರುದ್ಧದ ಪಂದ್ಯದಲ್ಲಿ, ಕೇವಲ 53 ಎಸೆತಗಳಲ್ಲಿ 10 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 101 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಹುಬ್ಬಳ್ಳಿ ತಂಡ 216 ರನ್​ಗಳಿಸಿದರೆ, ಇದಕ್ಕೆ ಉತ್ತರವಾಗಿ ಶಿವಮೊಗ್ಗ 187 ರನ್​ಗಳಿಸಿ 29 ರನ್​ಗಳ ಸೋಲು ಕಂಡಿತ್ತು. ನಂತರ ಆಗಸ್ಟ್ 13 ರಂದು, ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ, ಅವರು 54 ಎಸೆತಗಳಲ್ಲಿ 9 ಬೌಂಡರಿ ಮತ್ತು 7 ಸಿಕ್ಸರ್‌ಗಳೊಂದಿಗೆ ಮತ್ತೊಂದು 101 ರನ್ ಗಳಿಸಿದರು. ಈ ಪಂದ್ಯದಲ್ಲಿ ಬೆಂಗಳೂರು ನೀಡಿದ್ದ 226 ರನ್​ಗಳ ಗುರಿಯನ್ನ ಚೇಸ್ ಮಾಡುವ ವೇಳೆ ತಹಾ ಶತಕ ಸಿಡಿಸಿದ್ದು ವಿಶೇಷವಾಗಿತ್ತು. ಈ ಪಂದ್ಯವನ್ನ ಹುಬ್ಬಳ್ಳಿ 2 ವಿಕೆಟ್​ಗಳ ರೋಚಕ ಜಯ ಸಾಧಿಸಿತ್ತು.

190ರ ಸ್ಟ್ರೈಕ್​ರರೇಟ್​​ನಲ್ಲಿ ಸ್ಕೋರ್

ಎರಡೂ ಪಂದ್ಯಗಳಲ್ಲಿ ಒಟ್ಟು 202 ರನ್ ಗಳಿಸಿರುವ ತಹಾ, ಈ ವರ್ಷದ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಎಲ್ ಆರ್ ಚೇತನ್ ಅವರಿಗಿಂತ 80 ರನ್ ಮುಂದಿದ್ದಾರೆ. ಅವರ ಸ್ಟ್ರೈಕ್ ರೇಟ್ ಹತ್ತಿರತ್ತಿರ 190ರ ಸನಿಹದಲ್ಲಿದೆ. ಅವರ ಪ್ರದರ್ಶನವನ್ನು ಮೆಚ್ಚಿಕೊಂಡಿರುವ ನೆಟಿಜನ್‌ಗಳು ಅವರ ಆಟಕ್ಕೆ ಪ್ರಶಂಸೆಯ ಮಳೆಗೈಯ್ಯುತ್ತಿದ್ದಾರೆ. ಭಾರತಕ್ಕೆ ಮತ್ತೊಬ್ಬ ವೀರೇಂದ್ರ ಸೆಹ್ವಾಗ್ ಸಿಕ್ಕಿದ್ದಾರೆ ಎಂದು ಪೋಸ್ಟ್‌ ಮಾಡುತ್ತಿದ್ದಾರೆ. ಈ ವರ್ಷದ ಐಪಿಎಲ್ ಮಿನಿ ಹರಾಜಿನಲ್ಲಿ ಅವರನ್ನು ಯಾವುದಾದರು ತಂಡಗಳು ಆಯ್ಕೆ ಮಾಡಲಾಗುವುದು ಎಂದು ಕೆಲವರು ಸೂಚಿಸುತ್ತಿದ್ದಾರೆ.

2016ರಲ್ಲಿ ಕರ್ನಾಟಕ ಪದ ಪದಾರ್ಪಣೆ

ಬೆಂಗಳೂರಿನ 31 ವರ್ಷದ ತಹಾ ಮೊಹಮ್ಮದ್ ತಾಹ 2016 ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ಪರ ಟಿ20ಗೆ ಪಾದಾರ್ಪಣೆ ಮಾಡಿದ್ದರು. ಅವರು ತಮ್ಮ ಮೊದಲ ಪಂದ್ಯದಲ್ಲಿ ಅಲ್ಪಮೊತ್ತಕ್ಕೆ ಔಟಾದರು. ಅದರ ನಂತರ, ಅವರಿಗೆ ಹೆಚ್ಚಿನ ಅವಕಾಶ ಸಿಗಲಿಲ್ಲ. ಅವರು ರಾಜ್ಯದ ಪರ ಕೇವಲ 5 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಕೊನೆಯದಾಗಿ 2017 ರಲ್ಲಿ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಪರ ಕಾಣಿಸಿಕೊಂಡಿದ್ದರು.

ಆರ್​ಸಿಬಿ ನೆಟ್ ಬೌಲರ್ ಆಗಿ ಕೆಲಸ

ಒಟ್ಟಾರೆಯಾಗಿ, ಅವರು ಕರ್ನಾಟಕ ಪರ 5 ಟಿ20 ಪಂದ್ಯಗಳನ್ನು ಆಡಿ ಕೇವಲ 91 ರನ್ ಗಳಿಸಿದ್ದಾರೆ. ತಹಾ ಬಲಗೈ ಬ್ಯಾಟಿಂಗ್ ಜೊತೆಗೆ ಬಲಗೈ ಆಫ್-ಬ್ರೇಕ್ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ತಾಹ ಐಪಿಎಲ್-2012 ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ನೆಟ್ ಬೌಲರ್ ಆಗಿ ಕೆಲಸ ಮಾಡಿದರು. ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್‌ರಂತಹ ತಾರೆಯರಿಗೆ ಬೌಲಿಂಗ್ ಮಾಡಿದ್ದರು.

ಮೊಗಮ್ಮದ್ ತಹಾ

ದಿ ಹಿಂದೂ ವರದಿಯ ಪ್ರಕಾರ, ಮೊಹಮ್ಮದ್ ತಹಾ ಟನ್‌ಬ್ರಿಡ್ಜ್ ಹೈಸ್ಕೂಲ್‌ನಲ್ಲಿ ಅಧ್ಯಯನ ಮಾಡಿದ್ದಾರೆ. ನಂತರ, ಅವರು ಜೈನ್ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ತಹಾ 16 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ತಹಾ ಅವರ ತಂದೆ ಮಗನನ್ನ ಕರ್ನಾಟಕ ಕ್ರಿಕೆಟ್ ಸಂಸ್ಥೆಯಲ್ಲಿ (ಕೆಐಒಸಿ) ಸೇರಿಸಿದ್ದರು. ಸಂದರ್ಶನವೊಂದರಲ್ಲಿ, ತಹಾ 2015 ರಲ್ಲಿ ತಮ್ಮ ತಂದೆಯ ಮರಣದ ನಂತರ, ತಮ್ಮ ಕುಟುಂಬವನ್ನು ಪೋಷಿಸಲು ಅರೆಕಾಲಿಕ ಕೋಚ್ ಆಗಿ ಕೆಲಸ ಮಾಡುತ್ತಿದ್ದಾಗಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.