Last Updated:
ಮಂಗಳೂರಿನ ಕುದ್ರೋಳಿ ಜಾಮೀಯ ಮಸೀದಿಯಲ್ಲಿ ವಿವಿಧ ಧರ್ಮೀಯರು ಭಾಗವಹಿಸಿದ ಮಸೀದಿ ಭೇಟಿ ಕಾರ್ಯಕ್ರಮ ಯಶಸ್ವಿಯಾಗಿ ಇಸ್ಲಾಂ ಧರ್ಮದ ಬಗ್ಗೆ ಜಿಜ್ಞಾಸೆ ಪರಿಹರಿಸಿತು.
ಮಂಗಳೂರು: ಶತಶತಮಾನಗಳಾಚೆ ಇಸ್ಲಾಂ ಧರ್ಮ (Islam) ಭಾರತವನ್ನು ಪ್ರವೇಶಿಸಿದರೂ ಈ ಧರ್ಮ, ಮಸೀದಿ, ನಮಾಜ್, ಅಝಾನ್, ಕುರ್‌ಆನ್ ಈ ದೇಶಕ್ಕೆ ತೆರೆದುಕೊಂಡದ್ದು ಕಡಿಮೆಯೇ. ಆದ್ದರಿಂದ ಹಿಂದೂಗಳು ಸೇರಿದಂತೆ ದೇಶದ ಇತರ ಧರ್ಮೀಯರಿಗೆ ಇಸ್ಲಾಂ ಧರ್ಮದ ಬಗ್ಗೆ ಕುತೂಹಲ, ಅನುಮಾನ ಇರುವುದು ಸಹಜ. ಇದಕ್ಕೆ ಅಂತ್ಯ ಹಾಡಲು ಕುದ್ರೋಳಿ ಜಾಮೀಯಾ ಮಸೀದಿ (Mosque) ನೋಡ ಬನ್ನಿ ವಿಶೇಷ ಕಾರ್ಯಕ್ರಮವೊಂದು ಮಂಗಳೂರಿನಲ್ಲಿ (Mangaluru) ನಡೆಯಿತು.
ಕುದ್ರೋಳಿ ಜಾಮೀಯಾ ಮಸೀದಿ ಆಡಳಿತ ಮಂಡಳಿ, ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಜಂಟಿಯಾಗಿ ಮಸೀದಿ ದರ್ಶನ ಎಂಬ ಕಾರ್ಯಕ್ರಮ ಏರ್ಪಡಿಸಿತ್ತು. ಈ ಮಸೀದಿ ದರ್ಶನ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು, ಪಾದ್ರಿಗಳು, ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು. ಮಸೀದಿಯು ಬೆಳಗ್ಗೆಯಿಂದ ಸಂಜೆ 7 ಗಂಟೆವರೆಗೆ ಸಾರ್ವಜನಿಕರಿಗೆ ತೆರೆದಿತ್ತು. ಈ ಸಮಯದಲ್ಲಿ ಸರ್ವಧರ್ಮದ ಸ್ತ್ರೀಪುರುಷರಿಗೆ ತೆರೆದಿತ್ತು. ಯಾರೂ ಬೇಕಾದರೂ ಆಗಮಿಸಿ ಮಸೀದಿಯನ್ನು ವೀಕ್ಷಿಸಲು ಅವಕಾಶ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಕುದ್ರೋಳಿ ಜಾಮಿಯಾ ಮಸೀದಿಗೆ ಬಹಳಷ್ಟು ಇತರ ಧರ್ಮೀಯರು ಆಗಮಿಸಿ ಮಸೀದಿಯೊಳಗಿನ ವಾಸ್ತುವೈಭವವನ್ನು ವೀಕ್ಷಿಸಿದರು. ಮಸೀದಿ ಆಡಳಿತ ಮಂಡಳಿಯವರು, ಸ್ವಯಂಸೇವಕರು ಮಸೀದಿಯಲ್ಲಿ ನಡೆಯುವ ನಮಾಝ್, ಆಝಾನ್‌ಗಳ ಬಗ್ಗೆ ಇರುವ ಕುತೂಹಲ, ಜಿಜ್ಞಾಸೆಗಳನ್ನು ಪರಿಹರಿಸಿದರು. ಇಸ್ಲಾಂ ಧರ್ಮ, ಕುರ್‌ಆನ್ ವಿಚಾರದಲ್ಲಿ ಇರುವ ಅನುಮಾನವನ್ನು ಬಗೆಹರಿಸಿದರು.
ಇದರಿಂದ ಬದಲಾವಣೆ ಸಾಧ್ಯವೇ?
Mangalore,Dakshina Kannada,Karnataka
September 16, 2025 6:36 AM IST