Last Updated:
ಟೆಸ್ಟ್ ಕ್ರಿಕೆಟ್ ಆಟದಲ್ಲೇ ಅತ್ಯಂತ ಹಳೆಯ ಹಾಗೂ ಪ್ರಸಿದ್ಧ ಆಟ. ಈ ಸ್ವರೂಪದಲ್ಲಿ ಆಡುವ ಮೂಲಕ ಅನೇಕ ಆಟಗಾರರು ಗಮನಾರ್ಹ ದಾಖಲೆಗಳನ್ನು ನಿರ್ಮಿಸಿದ್ದಾರೆ . ಇಂದಿನ ಯುವ ಪೀಳಿಗೆಯೂ ಸಹ ತಮ್ಮ ದೇಶವನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಲು ಆಶಿಸುತ್ತದೆ. ಈ ಸುದ್ದಿಯಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ದ್ವಿಶತಕ ಸಿಡಿಸಿದ ಆಟಗಾರರ ಬಗ್ಗೆ ಚರ್ಚಿಸೋಣ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ದ್ವಿಶತಕಗಳನ್ನು ಗಳಿಸಿದ ವಿಶ್ವ ದಾಖಲೆಯನ್ನು ಆಸ್ಟ್ರೇಲಿಯಾದ ದಂತಕಥೆ ಸರ್ ಡಾನ್ ಬ್ರಾಡ್ಮನ್ ಹೊಂದಿದ್ದಾರೆ . ಬ್ರಾಡ್ಮನ್ ಅವರ ಈ ದಾಖಲೆ ಶತಮಾನದಿಂದಲೂ ಯಾರಿಂದಲೂ ಮುರಿಯದೇ ಉಳಿದುಕೊಂಡಿದೆ . ಈ ವಿಶ್ವ ದಾಖಲೆಯನ್ನು ಭವಿಷ್ಯದಲ್ಲಿ ಮುರಿಯುವ ಸಾಧ್ಯತೆಯೂ ಕಡಿಮೆ . ಶ್ರೀಲಂಕಾದ ದಂತಕಥೆ ವಿಕೆಟ್ ಕೀಪರ್ ಕುಮಾರ್ ಸಂಗಕ್ಕಾರ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಬ್ರಾಡ್ಮನ್ ಅವರ ದಾಖಲೆಯ ಹತ್ತಿರ ಬಂದರಾದರೂ, ಅವರಿಂದಲೂ ಮುರಿಯಲು ಸಾಧ್ಯವಾಗಲಿಲ್ಲ .
1928 ರಿಂದ 1948 ರವರೆಗೆ ಡಾನ್ ಬ್ರಾಡ್ಮನ್ ಆಸ್ಟ್ರೇಲಿಯಾ ಪರ 52 ಟೆಸ್ಟ್ ಪಂದ್ಯಗಳನ್ನು ಆಡಿದ್ದರು . ಈ ಅವಧಿಯಲ್ಲಿ , ಅವರು 80 ಇನ್ನಿಂಗ್ಸ್‌ಗಳಲ್ಲಿ 10 ಬಾರಿ ಅಜೇಯರಾಗಿ ಉಳಿದರು . ಅವರ ಬ್ಯಾಟಿಂಗ್ ಸರಾಸರಿ 99.94 . ಬ್ರಾಡ್ಮನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 12 ದ್ವಿಶತಕಗಳು ಸೇರಿದಂತೆ 6996 ರನ್ ಗಳಿಸಿದ್ದಾರೆ . ಬ್ರಾಡ್ಮನ್ ಅವರ ಅತ್ಯುತ್ತಮ ಸ್ಕೋರ್ 334. ಬ್ರಾಡ್ಮನ್ ಅವರ ಈ ಅಮೋಘ ದಾಖಲೆಯನ್ನು ಮುರಿಯುವುದು ಇಂದಿನ ಬ್ಯಾಟ್ಸ್‌ಮನ್‌ಗಳಿಗೆ ಸುಲಭವಲ್ಲ .
ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಶ್ರೀಲಂಕಾದ ಕುಮಾರ್ ಸಂಗಕ್ಕಾರ ಇದ್ದಾರೆ, ಅವರು 134 ಟೆಸ್ಟ್ ಪಂದ್ಯಗಳಲ್ಲಿ 11 ದ್ವಿಶತಕಗಳನ್ನು ಸಿಡಿಸಿದ್ದಾರೆ. ಸಂಗಕ್ಕಾರ 233 ಇನ್ನಿಂಗ್ಸ್‌ಗಳಲ್ಲಿ 12400 ರನ್ ಗಳಿಸಿದ್ದಾರೆ, ಇದರಲ್ಲಿ 319 ಅವರ ಅತ್ಯಧಿಕ ಸ್ಕೋರ್ ಆಗಿದೆ . ಸಂಗಕ್ಕಾರ 38 ಶತಕಗಳು ಮತ್ತು 12 ಅರ್ಧಶತಕಗಳನ್ನು ಗಳಿಸಿದ್ದಾರೆ . ಈ ಅವಧಿಯಲ್ಲಿ, ಅವರ ಬ್ಯಾಟಿಂಗ್ ಸರಾಸರಿ 57.40 ಆಗಿತ್ತು .
ವೆಸ್ಟ್ ಇಂಡೀಸ್‌ನ ದಂತಕಥೆ ಬ್ರಿಯಾನ್ ಲಾರಾ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂಬತ್ತು ದ್ವಿಶತಕ ಬಾರಿಸಿ 3ನೇ ಸ್ಥಾನದಲ್ಲಿದ್ದಾರೆ. ಲಾರಾ 131 ಟೆಸ್ಟ್ ಪಂದ್ಯಗಳ 232 ಇನ್ನಿಂಗ್ಸ್‌ಗಳಲ್ಲಿ 52.88 ಸರಾಸರಿಯಲ್ಲಿ 11,953 ರನ್ ಗಳಿಸಿದ್ದಾರೆ . ಲಾರಾ ಅವರ ಅತ್ಯುತ್ತಮ ಸ್ಕೋರ್ ಅಜೇಯ 400. ಅವರು ಟೆಸ್ಟ್‌ನಲ್ಲಿ 34 ಶತಕಗಳು ಮತ್ತು 48 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅವರ ಸತತ ನಾಲ್ಕು ಶತಕಗಳ ವಿಶ್ವ ದಾಖಲೆಯನ್ನು ಇಲ್ಲಿಯವರೆಗೆ ಯಾವುದೇ ಬ್ಯಾಟ್ಸ್‌ಮನ್ ಮುರಿಯಲು ಸಾಧ್ಯವಾಗಿಲ್ಲ .
ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 123 ಟೆಸ್ಟ್ ಪಂದ್ಯಗಳಲ್ಲಿ 7 ದ್ವಿಶತಕಗಳನ್ನು ಬಾರಿಸಿದ್ದಾರೆ. ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ಭಾರತದ ದಂತಕಥೆ ವಿರಾಟ್ ಕೊಹ್ಲಿ 123 ಟೆಸ್ಟ್‌ಗಳಲ್ಲಿ 210 ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ 30 ಶತಕಗಳು ಮತ್ತು 31 ಅರ್ಧಶತಕ ಸಿಡಿಸಿದ್ದಾರೆ.ಟೆಸ್ಟ್‌ನಲ್ಲಿ ಕೊಹ್ಲಿಯ ಬ್ಯಾಟಿಂಗ್ ಸರಾಸರಿ 46.85 .
ಇಂಗ್ಲೆಂಡ್‌ನ ವ್ಯಾಲಿ ಹ್ಯಾಮಂಡ್ ಕೂಡ 85 ಟೆಸ್ಟ್ ಪಂದ್ಯಗಳಲ್ಲಿ ಏಳು ದ್ವಿಶತಕಗಳನ್ನು ಗಳಿಸಿದ್ದಾರೆ . ಹ್ಯಾಮಂಡ್ 140 ಇನ್ನಿಂಗ್ಸ್‌ಗಳಲ್ಲಿ 7249 ರನ್ ಗಳಿಸಿದ್ದಾರೆ, ಅವರ ಅತ್ಯುತ್ತಮ ಸ್ಕೋರ್ 336 ನಾಟ್ ಔಟ್ ಆಗಿದೆ.
ಶ್ರೀಲಂಕಾ ತಂಡದ ಮಾಜಿ ನಾಯಕ ಮಹೇಲಾ ಜಯವರ್ದನೆ 149 ಪಂದ್ಯಗಳಲ್ಲಿ 7 ದ್ವಿಶತಕ ಸಿಡಿಸಿ ಕೊಹ್ಲಿ, ಹ್ಯಾಮಂಡ್ ಜೊತೆಗೆ ಜಂಟಿ 4ನೇ ಸ್ಥಾನದಲ್ಲಿದ್ದಾರೆ. ಮರ್ವನ್ ಅಟಪಟ್ಟು, ವೀರೇಂದರ್ ಸೆಹ್ವಾಗ್, ಕೇನ್ ವಿಲಿಯಮ್ಸನ್, ಜಾವೇದ್ ಮಿಯಾಂದಾದ್, ಯೂನಸ್ ಖಾನ್, ರಿಕಿ ಪಾಂಟಿಂಗ್, ಜೋ ರೂಟ್, ಸಚಿನ್ ತೆಂಡೂಲ್ಕರ್ ತಲಾ 6 ದ್ವಿಶತಕ ಸಿಡಿಸಿದ್ದಾರೆ.