Ms Dhoni: ಈಗ ಪೈಲಟ್ ಆಗಲು ಸಿದ್ಧರಾದ ಕ್ಯಾಪ್ಟನ್ ಕೂಲ್ ಮಾಹಿ! DGCA ಟ್ರೈನಿಂಗ್ ಮುಗಿಸಿದ್ರಂತೆ! | CSK star MS Dhoni has completed DGCA drone pilot training and is set to become a pilot | ಕ್ರೀಡೆ

Ms Dhoni: ಈಗ ಪೈಲಟ್ ಆಗಲು ಸಿದ್ಧರಾದ ಕ್ಯಾಪ್ಟನ್ ಕೂಲ್ ಮಾಹಿ! DGCA ಟ್ರೈನಿಂಗ್ ಮುಗಿಸಿದ್ರಂತೆ! | CSK star MS Dhoni has completed DGCA drone pilot training and is set to become a pilot | ಕ್ರೀಡೆ

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಈಗಾಗಲೇ ನಿವೃತ್ತಿ ಪಡೆದಿರುವ ಧೋನಿ ಕೇವಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾತ್ರವೇ ಆಡುತ್ತಿದ್ದಾರೆ.

ಇದೀಗ ಧೋನಿ ಅವರ ಬಗ್ಗೆ ಹೊಸದಾಗಿ ತಳುಕು ಹಾಕುತ್ತಿದ್ದ ಸುದ್ದಿ ಎಂದರೆ ಧೋನಿ ಅವರು ಪೈಲಟ್ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಸಜ್ಜಾಗಿರುವುದು ಅಂತ ಹೇಳಲಾಗುತ್ತಿದೆ.

44 ವರ್ಷದ ಧೋನಿ ಏನೇ ಮಾಡಿದರೂ ಪರ್ಫೆಕ್ಟ್ ಆಗಿ ಮಾಡುವ ಮತ್ತು ಅದರ ಕಲೆಯನ್ನು ಕರಗತ ಮಾಡಿಕೊಳ್ಳುವ ಮತ್ತು ಅಷ್ಟೇ ಸಮಾಧಾನ ಮತ್ತು ಸಾವಧಾನತೆಯೊಂದಿಗೆ ಅದನ್ನು ಕಾರ್ಯರೂಪಕ್ಕೆ ತರುವ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದು ಈಗ ಹೊಸ ವೃತ್ತಿಜೀವನವನ್ನು ಆರಿಸಿಕೊಳ್ಳುವ ಹಂತದಲ್ಲಿದ್ದಾರೆ.

(ಐಪಿಎಲ್) ನಲ್ಲಿ ಚೈನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ದಶಕಗಳ ಕಾಲದವರೆಗೆ ಕ್ರಿಕೆಟ್ ಆಡಿಕೊಂಡು ಬಂದಿರುವ ಮಾಹಿ ಇದೀಗ ಚೆನ್ನೈ ಮೂಲದ ಡಿಜಿಸಿಎ ಅನುಮೋದಿತ ರಿಮೋಟ್ ಪೈಲಟ್ ತರಬೇತಿ ಸಂಸ್ಥೆ (ಆರ್‌ಪಿಟಿಒ) ಯಲ್ಲಿ ಡ್ರೋನ್ ಪೈಲಟ್ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ ಅಂತ ಹೇಳಲಾಗುತ್ತಿದೆ.

ಪೈಲಟ್ ಆಗಬೇಕು ಅಂತ ಡಿಜಿಸಿಎ ಅನುಮೋದಿತ ತರಬೇತಿ ಪಡೆದ್ರಂತೆ ಮಾಹಿ

ಧೋನಿ ಅವರು ಇದೀಗ ಈ ಸವಾಲಿನ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ತರಬೇತಿಯಲ್ಲಿ ಸೈದ್ಧಾಂತಿಕ ತರಗತಿಗಳು ಮತ್ತು ಸಿಮ್ಯುಲೇಟರ್‌ಗಳು ಮತ್ತು ನೈಜ ಡ್ರೋನ್‌ಗಳ ಕುರಿತು ಪ್ರಾಯೋಗಿಕ ಅವಧಿಗಳು ಸೇರಿವೆ. ಅವರು ಈಗ ಪ್ರಮಾಣೀಕೃತ ಡ್ರೋನ್ ಪೈಲಟ್ ಸಹ ಆಗಿದ್ದಾರೆ.

ಭಾರತದಲ್ಲಿ ಸುರಕ್ಷಿತ ಮತ್ತು ಪ್ರಮಾಣೀಕೃತ ಡ್ರೋನ್ ಕಾರ್ಯಾಚರಣೆಗಳನ್ನು ಮುಂದುವರೆಸುವಲ್ಲಿ ಧೋನಿಯ ಸಾಧನೆಯು ಮಹತ್ವದ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ. ಅವರ ತರಬೇತಿಯು ಈ ವಲಯದಲ್ಲಿ ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಯ ಬೆಳೆಯುತ್ತಿರುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.

ಗರುಡ ಏರೋಸ್ಪೇಸ್‌ನ ಸ್ಥಾಪಕ ಮತ್ತು ಸಿಇಒ ಅಗ್ನಿಶ್ವರ್ ಜಯಪ್ರಕಾಶ್ ಅವರು ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀಡುತ್ತಾ ಧೋನಿ ಅವರು ತಮ್ಮ ಪೈಲಟ್ ತರಬೇತಿಯನ್ನು ಈಗಾಗಲೇ ಪೂರ್ಣಗೊಳಿಸಿ ಪ್ರಮಾಣೀಕರಿಸಲ್ಪಟ್ಟಿರುವುದು ಒಂದು ಹೆಗ್ಗುರುತು ಸಾಧನೆಯಾಗಿದೆ ಎಂದು ಹೇಳಿದ್ದಾರೆ. ಅವರ ಸಮರ್ಪಣೆ ಮತ್ತು ಗಮನವು ಇಡೀ ತಂಡಕ್ಕೆ ಸ್ಫೂರ್ತಿ ನೀಡುತ್ತದೆ ಅಂತ ಸಹ ಇವರು ಹೇಳಿದ್ದಾರೆ.

ಗರುಡ ಏರೋಸ್ಪೇಸ್‌‌ನಲ್ಲಿ ಡ್ರೋನ್ ಪೈಲಟ್ ಟ್ರೈನಿಂಗ್ ಮುಗಿಸಿದ ಕ್ಯಾಪ್ಟನ್ ಕೂಲ್

ಗರುಡ ಏರೋಸ್ಪೇಸ್‌ನೊಂದಿಗೆ ಡಿಜಿಸಿಎ ಡ್ರೋನ್ ಪೈಲಟ್ ಪ್ರಮಾಣೀಕರಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಧೋನಿ ಘೋಷಿಸಿದರು, ಈ ಒಂದು ವಿನೂತನವಾದ ಅನುಭವವನ್ನು ಸವಾಲಿನ ಮತ್ತು ಉಲ್ಲಾಸಕರವಾಗಿತ್ತು ಅಂತ ಅವರು ಬಣ್ಣಿಸಿದರು.

ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿರುವ ಆಟಗಾರ ಧೋನಿ ಅವರನ್ನು ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ 4 ಕೋಟಿ ರೂಪಾಯಿಗೆ ಸಿಎಸ್‌ಕೆ ತಂಡವು ಉಳಿಸಿಕೊಂಡಿತು.

ಅವರು ಈ ಋತುವಿನಲ್ಲಿ ಎಲ್ಲಾ 14 ಲೀಗ್ ಪಂದ್ಯಗಳನ್ನು ಆಡಿದರು ಮತ್ತು ಗಾಯದಿಂದಾಗಿ ರುತುರಾಜ್ ಗಾಯಕ್ವಾಡ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವವನ್ನು ಸಹ ವಹಿಸಿದ್ದರು.

ಆದಾಗ್ಯೂ, ಈ ಋತುವಿನಲ್ಲಿ ಸಿಎಸ್‌ಕೆ ತಂಡವು ನಿರೀಕ್ಷೆಯಂತೆ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು ಮತ್ತು ಈ ಬಾರಿಯ ಪಾಯಿಂಟ್‌ಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು.

2025 ರ ಐಪಿಎಲ್ ಅಂತ್ಯದ ನಂತರ ಧೋನಿ ನಿವೃತ್ತರಾಗುವ ನಿರೀಕ್ಷೆಯಿತ್ತು, ಆದರೆ ಅವರು ಯಾವುದೇ ಔಪಚಾರಿಕ ಘೋಷಣೆ ಇನ್ನೂ ಸಹ ಮಾಡಿಲ್ಲ, ಇದು ಅವರು 2026 ರ ಐಪಿಎಲ್‌ನಲ್ಲಿ ಆಡುವ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ ಅಂತಾನೆ ಹೇಳಬಹುದು.