MS Dhoni In IPL: ಐಪಿಎಲ್​​ನಲ್ಲಿ ಎಂಎಸ್ ಧೋನಿಗೆ ಇಂದೇ ಕೊನೆಯ ಪಂದ್ಯನಾ? ಹಿಂಟ್​ ಕೊಡ್ತಿವೆ ಈ ಫೋಟೋಗಳು/ CSK vs DC: Is This Dhoni’s Last IPL Match? Retirement Rumors Go Viral on Social Media

MS Dhoni In IPL: ಐಪಿಎಲ್​​ನಲ್ಲಿ ಎಂಎಸ್ ಧೋನಿಗೆ ಇಂದೇ ಕೊನೆಯ ಪಂದ್ಯನಾ? ಹಿಂಟ್​ ಕೊಡ್ತಿವೆ ಈ ಫೋಟೋಗಳು/ CSK vs DC: Is This Dhoni’s Last IPL Match? Retirement Rumors Go Viral on Social Media

Last Updated:

IPL 2025: ಎಂ ಎಸ್ ಧೋನಿ ಈ ಐಪಿಎಲ್ ಸೀಸನ್‌ನಲ್ಲಿ ಆಡ್ತಾರ ಅಥವಾ ನಿವೃತ್ತಿ ಆಗ್ತಾರ ಎಂಬ ಚರ್ಚೆ ತೀವ್ರವಾಗಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುವ ಇಂದಿನ ಪಂದ್ಯವೇ ಅವರ ಕೊನೆಯ ಪಂದ್ಯ ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಧೋನಿಧೋನಿ
ಧೋನಿ

ಈ ಬಾರಿಯ ಐಪಿಎಲ್ (IPL 2025) ಆರಂಭಕ್ಕೂ ಮುನ್ನವೇ ತೀವ್ರ ಚರ್ಚೆಗೆ ಕಾರಣರಾದ ವ್ಯಕ್ತಿ ಅಂದ್ರೆ ಅದು ಎಂ ಎಸ್ ಧೋನಿ (MS Dhoni). ಕಾರಣ ಅವರು ಈ ಸೀಸನ್‌ನಲ್ಲಿ ಆಡ್ತಾರ ಇಲ್ಲವಾ ಎಂಬುದೇ ಆಗಿತ್ತು. ಈ ಹಿಂದೆ ಧೋನಿ ಐಪಿಎಲ್‌ಗೆ ನಿವೃತ್ತಿ ಆಗುವುದೇ ಚೆನ್ನೈನ ಚೆಪಾಕ್ ಮೈದಾನದಲ್ಲಿ ಎಂದು ಅವರು ಹೇಳಿದ್ದರು. ಅದರಂತೆ ಇಂದಿನ ಪಂದ್ಯ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿದೆ. ಮಾತ್ರವಲ್ಲ ಧೋನಿ ಅವರು ಫ್ಯಾಮಿಲಿ ಇಂದಿನ ಪಂದ್ಯದಲ್ಲಿ ಹಾಜರಿದ್ದು, ಸೋಷಿಯಲ್ ಮೀಡಿಯಾದಲ್ಲಿ ಇದೇ ಅವರ ಕೊನೆಯ ಪಂದ್ಯ ಎಂದು ಚರ್ಚೆಗಳು ನಡೆಯುತ್ತಿವೆ ಎಂದು ವೈರಲ್ ಆಗ್ತಾ ಇದೆ