Last Updated:
ಮುಗುಡು ಮೀನು ಕರಾವಳಿಯಲ್ಲಿ ಹೆಚ್ಚು ಬೇಡಿಕೆಯಿದ್ದು, ಕರ್ನಾಟಕದ ಹಿನ್ನೀರಿನಲ್ಲಿ ಬೆಳೆಯುತ್ತದೆ. ಈ ಮೀನುಗಳು ಜಾರುವ ಕಾರಣದಿಂದ ಹಿಡಿಯಲು ಕಷ್ಟ. ಕಿಲೋಗೆ 200 ರೂಪಾಯಿ ದರದಲ್ಲಿ ಮಾರಾಟವಾಗುತ್ತದೆ.
ದಕ್ಷಿಣ ಕನ್ನಡ: ಮುಗುಡು ಮೀನು (Mugudu Fish) ಎಂದು ಕರೆಯಲ್ಪಡುವ ಮೀನಿಗೆ ಕರಾವಳಿ ಭಾಗದಲ್ಲಿ (Coastal Area) ಉತ್ತಮ ಬೇಡಿಕೆಯಿದೆ (Demand). ಇಂಗ್ಲೀಷ್ ನಲ್ಲಿ ‘ಕ್ಯಾಟ್ ಫಿಶ್’ ಎಂದು ಕರೆಯಲ್ಪಡುವ ಮೀನು ಅತ್ಯಂತ ವಿಚಿತ್ರವಾದ ಮೀನಾಗಿದೆ. ಮುಗುಡು ಮೀನಿನ ಜಾತಿಗೆ ಸೇರಿದ ಮೀನುಗಳು ಪ್ರಪಂಚದ ಹಲವಾರು ಕಡೆಗಳಲ್ಲಿ ಕಾಣಸಿಗುತ್ತದೆ. ಆದರೆ ಕರ್ನಾಟಕದ (Karnataka) ಹಿನ್ನೀರಿನಲ್ಲಿ ಸಿಗುವ ಈ ಮೀನುಗಳೇ ಬಹಳ ಅಚ್ಚರಿದಾಯಕ ಪ್ರಾಣಿಗಳು. ನದಿ, ತೋಡುಗಳಲ್ಲಿ ವರ್ಷಪೂರ್ತಿ ನೀರಿರುವುದಿಲ್ಲ. ಈ ನೀರಿರದ ಸಂದರ್ಭದಲ್ಲಿ ಇದರಲ್ಲಿರುವ ಮೀನುಗಳು ಎಲ್ಲಿಗೆ ಹೋಗುತ್ತದೆ ಎಂಬ ಸಂಶಯ ನಮ್ಮನ್ನು ಕಾಡದೆ ಇರದು. ಮಳೆ (Rain) ನಿಂತ ಬಳಿಕ ತೋಡು ನದಿ, ಕೊಳಗಳಲ್ಲಿ ನೀರು ಆವಿಯಾಗಿ ಖಾಲಿಯಾಗುತ್ತದೆ.
ನೀರಿರುವ ತಾಣಗಳಲ್ಲಿ ನೀರು ಆವಿಯಾಗುತ್ತಿದ್ದಂತೆ ಕೊಕ್ಕರೆ, ನೀರು ಕಾಗೆ ಮುಂತಾದ ಪಕ್ಷಿಗಳು ಅಲ್ಲಿರುವ ಮೀನುಗಳನ್ನು ತಿನ್ನಲು ಆರಂಭಿಸುತ್ತದೆ. ಆದರೆ ಈ ಮುಗುಡು ಮೀನುಗಳು ಇಂತಹ ಹಕ್ಕಿಗಳಿಗೆ ಸಿಗದೇ ಬೆಳೆಯುತ್ತದೆ. ಮೈಮೇಲೆ ಜೆಲ್ಲಿಯಂತಹ ವಸ್ತುವನ್ನು ಹೊಂದಿದ್ದು, ಇದರಿಂದಾಗಿಯೇ ಈ ಮೀನುಗಳ ತಮ್ಮ ಜೀವವನ್ನು ಉಳಿಸಿಕೊಳ್ಳುತ್ತವೆ. ಈ ಮೀನುಗಳನ್ನು ನೀರಿಲ್ಲದ ಜಾಗದಲ್ಲೂ ಸುಲಭವಾಗಿ ಹಿಡಿಯಲು ಸಾಧ್ಯವಿಲ್ಲ. ಅತ್ಯಂತ ಹೆಚ್ಚು ಜಾರುವ ಕಾರಣಕ್ಕಾಗಿ ಈ ಮೀನುಗಳು ಮನುಷ್ಯನ ಕೈಗೆ ಬಿಡಿ,ಯಾವ ಪ್ರಾಣಿಗಳಿಗೂ ಸುಲಭವಾಗಿ ಸಿಗದ ಮೀನು ಇದಾಗಿದೆ.
ಕರಾವಳಿಯಲ್ಲಿ ಅತ್ಯಂತ ಹೆಚ್ಚು ಬೇಡಿಕೆಯ ಮೀನು ಕೂಡಾ ಇದಾಗಿದ್ದು, ಇವುಗಳು ಸಿಹಿ ನೀರಿನಲ್ಲೇ ಹೆಚ್ಚಾಗಿ ಬದುಕುತ್ತವೆ. ಮಳೆ ನಿಂತ ಮೇಲೆ ಕೆಸರು ಹೆಚ್ಚು ಇರುವ ಜಾಗದಲ್ಲಿ ಈ ಮೀನಗಳು ಬೆಳೆಯುತ್ತಿದ್ದು, ಕೆಸರೂ ಕೂಡಾ ಈ ಮೀನಿನ ಒಂದು ಆಹಾರವಾಗಿದೆ. ಕೈಯಲ್ಲಿ ಸುಲಭವಾಗಿ ಹಿಡಿಯಲು ಸಾಧ್ಯವಾಗದ ಹಿನ್ನಲೆಯಲ್ಲಿ ಈ ಮೀನಿಗಳನ್ನು ಬಲೆಯ ಮೂಲಕ ಹಿಡಿಯಲಾಗುತ್ತದೆ.
Dakshina Kannada,Karnataka
September 11, 2025 9:29 AM IST