Last Updated:
ಮೊದಲ ಪಂದ್ಯದಂತೆಯೇ ಎರಡನೇ ಪಂದ್ಯದಲ್ಲೂ ಮುಷೀರ್ ಇದೇ ರೀತಿಯ ಪ್ರದರ್ಶನಗಳನ್ನು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಪಂದ್ಯದಲ್ಲೂ ಮುಶೀರ್ ಒಂದು ಶತಕ ಮತ್ತು 6 ವಿಕೆಟ್ಗಳನ್ನು ಗಳಿಸಿದ್ದಾರೆ ಎಂದು ವರದಿಗಳಿವೆ.
ಭಾರತದ ಯುವ ಬ್ಯಾಟ್ಸ್ಮನ್ ಮುಶೀರ್ ಖಾನ್ (Musheer Khan) ಇಂಗ್ಲೆಂಡ್ ಪ್ರವಾಸದಲ್ಲೂ (England Tour) ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಉದಯೋನ್ಮುಖ ತಂಡ (ಎಂಸಿಎ ಕೋಲ್ಟ್ಸ್) ಪರ ಇಂಗ್ಲೆಂಡ್ ಪ್ರವಾಸದಲ್ಲಿರುವ ಮುಶೀರ್, ಸತತ ಎರಡನೇ ಪಂದ್ಯದಲ್ಲೂ ಅದ್ಭುತ ಆಲ್ರೌಂಡ್ ಪ್ರದರ್ಶನ ನೀಡುವ ಮೂಲಕ ಪ್ರಭಾವಶಾಲಿಯಾಗಿದ್ದಾರೆ. ನಾಟ್ಸ್ ಸೆಕೆಂಡ್ ಇಲೆವೆನ್ ವಿರುದ್ಧದ ಮೊದಲ ಪಂದ್ಯದಲ್ಲಿ, ಮೊದಲು ಬ್ಯಾಟ್ ಮಾಡುವಾಗ ಮುಶೀರ್ 123 ರನ್ ಗಳಿಸಿದರು (127 ಎಸೆತಗಳು 14 ಬೌಂಡರಿಗಳೊಂದಿಗೆ). ನಂತರ ಅವರು 6 ವಿಕೆಟ್ ಗೊಂಚಲು (8.2 ಓವರ್ಗಳಲ್ಲಿ 6/31) ಪಡೆದು ಮಿಂಚಿದರು.
ಮೊದಲ ಪಂದ್ಯದಂತೆಯೇ ಎರಡನೇ ಪಂದ್ಯದಲ್ಲೂ ಮುಷೀರ್ ಇದೇ ರೀತಿಯ ಪ್ರದರ್ಶನಗಳನ್ನು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಪಂದ್ಯದಲ್ಲೂ ಮುಶೀರ್ ಒಂದು ಶತಕ ಮತ್ತು 6 ವಿಕೆಟ್ಗಳನ್ನು ಗಳಿಸಿದ್ದಾರೆ ಎಂದು ವರದಿಗಳಿವೆ. ಇದನ್ನು ತಿಳಿದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮುಶೀರ್ ಆಟವನ್ನ ಪ್ರಶಂಸಿಸುತ್ತಿದ್ದಾರೆ. ಭಾರತೀಯ ಕ್ರಿಕೆಟ್ಗೆ ಮತ್ತೊಬ್ಬ ಭವಿಷ್ಯದ ತಾರೆ ಸಿಕ್ಕಿದ್ದಾರೆ ಎಂದು ಅವರು ಹರ್ಷಿಸುತ್ತಿದ್ದಾರೆ.
20 ವರ್ಷದ ಮುಶೀರ್ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕಾರು ಅಪಘಾತಕ್ಕೀಡಾಗಿದ್ದರು. ಅಪಘಾತದಲ್ಲಿ ಮುಶೀರ್ ಅವರ ಕುತ್ತಿಗೆಗೆ ತೀವ್ರ ಪೆಟ್ಟಾಗಿತ್ತು. ಅಪಘಾತದ ನಂತರ ಮುಶೀರ್ ಆಡುತ್ತಿರುವ ಮೊದಲ ರೆಡ್ ಬಾಲ್ ಟೂರ್ನಮೆಂಟ್ ಇದಾಗಿದೆ. ಮುಶೀರ್ ದುಲೀಪ್ ಟ್ರೋಫಿಯಲ್ಲಿ ಭಾರತ ಬಿ ಪರ ತಮ್ಮ ಕೊನೆಯ ರೆಡ್-ಬಾಲ್ ಪಂದ್ಯವನ್ನು ಆಡಿದ್ದರು.
ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ, ಮುಶೀರ್ ಐಪಿಎಲ್ 2025 ರಲ್ಲಿ ಆಡಿದರು (ಪಂಜಾಬ್ ಕಿಂಗ್ಸ್ ಪರ ಒಂದು ಪಂದ್ಯ). ಆರ್ಸಿಬಿ ವಿರುದ್ಧದ ಆ ಪಂದ್ಯದಲ್ಲಿ ಮುಶೀರ್ ಧವನ್ ನಿರಾಶಾದಾಯಕ ಪ್ರದರ್ಶನ ನೀಡಿದ್ದರು. ಆ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಟಕ್ಕೆ ಬಂದ ಮುಶೀರ್, 3 ಎಸೆತಗಳನ್ನು ಎದುರಿಸಿದ ನಂತರ ಸುಯಾಶ್ ಶರ್ಮಾ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಆಗಿ ಬಿದ್ದರು.
ಮುಶೀರ್ ಖಾನ್, ಟೀಮ್ ಇಂಡಿಯಾದ ಮತ್ತೊಬ್ಬ ಉದಯೋನ್ಮುಖ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸರ್ಫರಾಜ್ ಖಾನ್ ಅವರ ಕಿರಿಯ ಸಹೋದರ. ದೇಶೀಯ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಮುಷೀರ್ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. 2022-23ರ ರಣಜಿ ಋತುವಿನಲ್ಲಿ ಮುಂಬೈ ಪರ ಪಾದಾರ್ಪಣೆ ಮಾಡಿದ ಮುಶೀರ್, 9 ಪಂದ್ಯಗಳಲ್ಲಿ 51.14 ಸರಾಸರಿಯಲ್ಲಿ 3 ಶತಕ ಮತ್ತು ಒಂದು ಅರ್ಧಶತಕದ ಸಹಾಯದಿಂದ 716 ರನ್ ಗಳಿಸಿದರು. ಇದರಲ್ಲಿ ಅಜೇಯ ದ್ವಿಶತಕವೂ ಸೇರಿದೆ.
ಮುಷೀರ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಬೌಲರ್ ಆಗಿಯೂ ಉತ್ತಮ ಪ್ರದರ್ಶನ ನೀಡಿದರು. ಅವರು 9 ಪಂದ್ಯಗಳಲ್ಲಿ 8 ವಿಕೆಟ್ಗಳನ್ನು ಪಡೆದಿದ್ದಾರೆ. ಮುಶೀರ್ 2024 ರ 19 ವರ್ಷದೊಳಗಿನವರ ವಿಶ್ವಕಪ್ನಲ್ಲಿ ಭಾರತ ತಂಡದ ಸದಸ್ಯರಾಗಿದ್ದಾರೆ. ಈ ಪಂದ್ಯಾವಳಿಯಲ್ಲಿ ಮುಶೀರ್ ಎರಡು ಶತಕಗಳನ್ನು ಸಿಡಿಸಿದ್ದರು. ಇದರಲ್ಲಿ ಟೀಮ್ ಇಂಡಿಯಾ ರನ್ನರ್-ಅಪ್ ಆಗಿತ್ತು. 2024ರ ರಣಜಿ ಫೈನಲ್ನಲ್ಲಿ ಶತಕ ಗಳಿಸಿದ್ದ ಮುಶೀರ್, ಮುಂಬೈ ಪರ ರಣಜಿ ಫೈನಲ್ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿದ್ದರು.
July 04, 2025 9:07 PM IST