Nagara Panchami: ಸುಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿಯ ವಿಶೇಷ ಪೂಜೆ, ನಾಗನ ದರ್ಶನ ಪಡೆದ ಸಾವಿರಾರು ಭಕ್ತರು! | Kukke Subramanya

Nagara Panchami: ಸುಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿಯ ವಿಶೇಷ ಪೂಜೆ, ನಾಗನ ದರ್ಶನ ಪಡೆದ ಸಾವಿರಾರು ಭಕ್ತರು! | Kukke Subramanya

Last Updated:

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿ ಹಿನ್ನಲೆಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ. ಭಕ್ತರು ನಾಗನಿಗೆ ಹಾಲು ಮತ್ತು ಸೀಯಾಳ ಸಮರ್ಪಿಸಿದರು.

+

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ನಾಗಾರಾಧನೆಯ ಅತ್ಯಂತ ಪ್ರಸಿದ್ಧ ಕ್ಷೇತ್ರ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ (Kukke Subramanya) ನಾಗರಪಂಚಮಿ (Nagara Panchami) ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ. ಕ್ಷೇತ್ರದಲ್ಲಿ ಒಳಾಂಗಣದಲ್ಲಿರುವ ನಾಗನ ವಿಗ್ರಹಕ್ಕೆ ತನು ಅರ್ಪಿಸಲು ಮುಂಜಾನೆಯಿಂದಲೇ ಭಕ್ತರ (Devotees) ದಂಡು ಕ್ಷೇತ್ರದಲ್ಲಿ ಕಂಡು ಬಂದಿದೆ. ನಾಗರಪಂಚಮಿ ಹಿನ್ನಲೆಯಲ್ಲಿ ನಾಗನಿಗೆ ಹಾಲು ಮತ್ತು ಸೀಯಾಳವನ್ನು ಸಮರ್ಪಿಸುವ ಮೂಲಕ ಭಕ್ತರು ನಾಗನ ಕೃಪೆಗೆ ಪಾತ್ರರಾದರು.

ನಾಗನಿಗೆ ವಿಶೇಷ ಸ್ಥಾನ

ಕೃಷಿ ಪ್ರಧಾನ ತುಳುನಾಡಿನಲ್ಲಿ ನಾಗನಿಗೆ ವಿಶೇಷ ಸ್ಥಾನವಿದ್ದು, ಇಲ್ಲಿನ ಪ್ರತಿಯೊಬ್ಬ ಕೃಷಿಕನೂ ತನ್ನ ಕೃಷಿ ಚಟುವಟಿಕೆ ಆರಂಭಿಸುವ ಮೊದಲು ನಾಗನಿಗೆ ಪೂಜೆ ಸಲ್ಲಿಸುವ ವಿಶೇಷ ಸಂಪ್ರದಾಯ ಇಲ್ಲಿದೆ. ಪ್ರತಿಯೊಂದು ಕುಟುಂಬಕ್ಕೆ ಇಲ್ಲಿ ನಾಗನ ಕಟ್ಟೆಯಿದ್ದು, ಎಲ್ಲಾ ಕಟ್ಟೆಗಳಿಗೆ ಪ್ರಧಾನ ರೂಪದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವಿದೆ.

ನಾಗ ಸಂಬಂಧಿ ದೋಷಗಳ ಪರಿಹಾರಕ್ಕಾಗಿ ಇರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಪೂಜೆಗೆ ಭಾರೀ ಮಹತ್ವವೂ ಇದೆ. ಇದೇ ಕಾರಣಕ್ಕಾಗಿ ನಾಗರಪಂಚಮಿಯ ದಿನ ಈ ಭಾಗದ ಜನ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಭೇಟಿ ನೀಡಿ ಸೀಯಾಳ ಮತ್ತು ಹಾಲು ಸಮರ್ಪಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.