Nat Sciver-Brunt Out of T20Is vs India: England Announces Replacement

Nat Sciver-Brunt Out of T20Is vs India: England Announces Replacement

Last Updated:

ಸೀವರ್-ಬ್ರಂಟ್ ಎರಡೂ ಪಂದ್ಯಗಳಲ್ಲಿ ಬೌಲಿಂಗ್ ಮಾಡಿರಲಿಲ್ಲ, ಸರಣಿಗೆ ಮುಂಚಿತವಾಗಿ ತಂಡದ ಆಡಳಿತ ಮಂಡಳಿಯು ಅವರ ಕೆಲಸದ ಹೊರೆಯನ್ನು ನಿರ್ವಹಿಸಲು ಈ ನಿರ್ಧಾರ ತೆಗೆದುಕೊಂಡಿತ್ತು. ಅವರು ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ತಂಡಕ್ಕೆ ಕೊಡುಗೆ ನೀಡಿದ್ದರು, 43 ಎಸೆತಗಳಲ್ಲಿ 66 ರನ್ ಗಳಿಸಿದ್ದ ಅವರು, ಇಂಗ್ಲೆಂಡ್‌ ತಂಡದ ಗರಿಷ್ಠ ಸ್ಕೋರರ್ ಆಗಿದ್ದರು.

ಇಂಗ್ಲೆಂಡ್ ಮಹಿಳಾ ತಂಡಇಂಗ್ಲೆಂಡ್ ಮಹಿಳಾ ತಂಡ
ಇಂಗ್ಲೆಂಡ್ ಮಹಿಳಾ ತಂಡ

ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ (Test Series) ಪ್ರಸ್ತುತ ನಡೆಯುತ್ತಿದೆ. ಏತನ್ಮಧ್ಯೆ, ಭಾರತೀಯ ಮಹಿಳೆಯರು ಮತ್ತು ಇಂಗ್ಲೆಂಡ್ ಮಹಿಳಾ ಆಟಗಾರ್ತಿಯರ ( (India women vs England Women) ನಡುವಿನ ಟಿ20 ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ 1-2ರಲ್ಲಿ ಹಿನ್ನಡೆ ಅನುಭವಿಸಿರುವ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹಿನ್ನಡೆ ಉಂಟಾಗಿದೆ. ಏಕೆಂದರೆ ಇಂಗ್ಲೆಂಡ್ ನಾಯಕ ನ್ಯಾಟ್ ಸೀವರ್-ಬ್ರಂಟ್​ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಹಾಗಾದರೆ ನಾಯಕಿಗೆ ಏನಾಗಿದೆ ಎಂಬುದನ್ನ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.

ಗಾಯದಿಂದ ಸರಣಿಯಿಂದಲೇ ಔಟ್

ಬ್ರಿಸ್ಟಲ್‌ನಲ್ಲಿ ಎಡ ತೊಡೆಯ ಗಾಯದಿಂದಾಗಿ ಇಂಗ್ಲೆಂಡ್ ನಾಯಕ ನ್ಯಾಟ್ ಸೀವರ್-ಬ್ರಂಟ್ ಭಾರತದ ವಿರುದ್ಧದ ಉಳಿದ ಟಿ20ಐ ಸರಣಿಯಿಂದ ಹೊರಗುಳಿದಿದ್ದಾರೆ. ನ್ಯಾಟ್ ಸೀವರ್-ಬ್ರಂಟ್ ಬ್ರಿಸ್ಟಲ್‌ನಲ್ಲಿ ನಡೆದ ಸರಣಿಯ ಮೂರನೇ ಟಿ20ಐ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದರು. ಆದರೂ ಇಂಗ್ಲೆಂಡ್ ಐದು ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು. ಈ ಗೆಲುವಿನೊಂದಿಗೆ, ಸರಣಿ ಗೆಲ್ಲುವ ಅವಕಾಶವನ್ನ ಇಂಗ್ಲೆಂಡ್‌ ಉಳಿಸಿಕೊಂಡಿದೆ.

ಟ್ಯಾಮಿ ಬ್ಯೂಮಾಂಟ್ ಕ್ಯಾಪ್ಟನ್

ಸೀವರ್-ಬ್ರಂಟ್ ಅನುಪಸ್ಥಿತಿಯಲ್ಲಿ ಟ್ಯಾಮಿ ಬ್ಯೂಮಾಂಟ್ ಈಗ ಸರಣಿಯ ಉಳಿದ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಸೀವರ್-ಬ್ರಂಟ್ ಬದಲಿಗೆ ಮಾಯಾ ಬೌಚಿಯರ್ ಅವರನ್ನು ತಂಡಕ್ಕೆ ಬದಲಿ ಆಟಗಾರ್ತಿಯಾಗಿ ಹೆಸರಿಸಿದೆ. ಜುಲೈ 16 ರಿಂದ ಪ್ರಾರಂಭವಾಗುವ ODI ಸರಣಿಗೆ ಸೀವರ್-ಬ್ರಂಟ್ ಮರಳುವ ಸಾಧ್ಯತೆಯಿದೆ ಎಂದು ಮಂಡಳಿ ಹೇಳಿದೆ.

ಏಕದಿನ ಸರಣಿಗೆ ಕಮ್​ಬ್ಯಾಕ್

ಬ್ರಿಸ್ಟಲ್‌ನಲ್ಲಿ ಎಡ ತೊಡೆಯ ಗಾಯದಿಂದಾಗಿ ನ್ಯಾಟ್ ಸೀವರ್-ಬ್ರಂಟ್ ಭಾರತದ ವಿರುದ್ಧದ ಐಟಿ20 ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಎಕ್ಸ್‌ನಲ್ಲಿ ಬರೆದಿದೆ. ಇದೀಗ ಟ್ಯಾಮಿ ಬ್ಯೂಮಾಂಟ್ ನಾಯಕಿಯಾಗಿ ಮುಂದಿನ 2 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಸೀವರ್-ಬ್ರಂಟ್ ಬದಲಿಗೆ ಮಾಯಾ ಬೌಚಿಯರ್ ಆಯ್ಕೆಯಾಗಿದ್ದಾರೆ. ODI ಸರಣಿಯ ಆರಂಭದಲ್ಲಿ ಸೀವರ್-ಬ್ರಂಟ್ ಆಯ್ಕೆಗೆ ಲಭ್ಯವಾಗುವ ನಿರೀಕ್ಷೆಯಿದೆ” ಎಂದು ಅದು ಹೇಳಿದೆ.

ಮೊದಲೆರಡು ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು

ಮೊದಲ ಎರಡು T20I ಗಳಲ್ಲಿ ಸೀವರ್-ಬ್ರಂಟ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದರು. ಎರಡರಲ್ಲೂ ಭಾರತ ಜಯಗಳಿಸಿತ್ತು. ಮೊದಲನೆಯ ಪಂದ್ಯದಲ್ಲಿ ಸ್ಮೃತಿ ಮಂಧಾನ ಸಿಡಿಸಿದ ಶತಕದಿಂದ ಭಾರತ 97 ರನ್‌ಗಳಿಂದ ಗೆಲುವು ಸಾಧಿಸಿದರೆ, ಎರಡನೆ ಪಂದ್ಯದಲ್ಲಿ 24 ರನ್‌ಗಳಿಂದ ಗೆದ್ದರು, ಜೆಮಿಮಾ ರೊಡ್ರಿಗಸ್ ಮತ್ತು ಅಮನ್‌ಜೋತ್ ಕೌರ್ ತಲಾ 63 ರನ್‌ಗಳನ್ನು ಗಳಿಸಿದ್ದರು.