ಈ ಪ್ರದರ್ಶನದಲ್ಲಿ, ನತಾಶಾ ಗೋಲ್ಡ್ ಪ್ರಿಂಟೆಡ್ ಹೊಂದಿರುವ ಕಪ್ಪು ಆಫ್-ಶೋಲ್ಡರ್ ಗೌನ್ ಧರಿಸಿದ್ದರು. ರೂಮರ್ಡ್ ಬಾಯ್‌ಫ್ರೆಂಡ್, ಮಗನ ಮುಂದೆಯೇ ಸ್ಕರ್ಟ್ ಬಟನ್ ಬಿಚ್ಚಿ ರ‍್ಯಾಂಪ್ ವಾಕ್ ಮಾಡಿದರು. ಕಿವಿಯಲ್ಲಿ ದೊಡ್ಡ ಚಿನ್ನದ ಕಿವಿಯೋಲೆಗಳು, ಕುತ್ತಿಗೆಗೆ ಹಾರ ಮತ್ತು ಅದಕ್ಕೆ ಹೊಂದಿಕೆಯಾಗುವ ಹೈ ಹೀಲ್ಡ್‌ಳಿಂದ ತುಂಬಾ ಸೊಗಸಾಗಿ ಕಾಣುತ್ತಿದ್ದರು. ಗುಂಗುರು ಕೂದಲಿನ ಶೈಲಿಯು ಅವಳ ಲುಕ್‌ಗೆ ಪರಿಪೂರ್ಣವಾಗಿ ಇತ್ತು.
ರ‍್ಯಾಂಪ್ ಕೆಳಗೆ ನಡೆಯುವಾಗ, ನತಾಶಾ ತನ್ನ ಗೌನ್ ಬಟನ್ ಬಿಚ್ಚಿ, ಪೋಸ್ ಕೊಟ್ಟಿದ್ದಾರೆ. ಈ ನಡೆ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿತು. ಕುತೂಹಲಕಾರಿಯಾಗಿ, ಆಕೆಯ ಗೆಳೆಯ ಎಂದು ಹೇಳಲಾಗುವ ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಮುಂದಿನ ಸಾಲಿನಲ್ಲಿ ಕುಳಿತು ಹುರಿದುಂಬಿಸುತ್ತಿದ್ದ.
ಇದನ್ನೂ ಓದಿ: Leak Photo: ಆ ಹೀರೋಯಿನ್ ಕಿಸ್ಸಿಂಗ್ ಫೋಟೋ ಲೀಕ್! ಸ್ಟಾರ್ ನಟನ ಮಗನ ಜೊತೆಗೆ ಲಿಪ್‌ಲಾಕ್!
ಅಷ್ಟೇ ಅಲ್ಲ, ನತಾಶಾ ಮತ್ತು ಹಾರ್ದಿಕ್ ಅವರ ಮಗ ಅಗಸ್ತ್ಯ ಕೂಡ ಅಲೆಕ್ಸಾಂಡರ್ ಜೊತೆ ಇದ್ದ. ತಾಯಿಗೆ ಫ್ಲೈಯಿಂಗ್ ಕಿಸ್ ಕೂಡ ಕೊಡುತ್ತಿದ್ದ. ಈ ವಿಡಿಓ ವೈರಲ್ ಆಗುತ್ತಿದ್ದಂತೆ ಟ್ರೋಲ್‌ಗೆ ಗುರಿಯಾಗಿದ್ದಾರೆ ನತಾಶ.
ಇನ್ನು “ಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಏಕೆ ಕರೆತರಬೇಕು? ತಾಯಿ ರ‍್ಯಾಂಪ್ ಮೇಲೆ ನಡೆಯುತ್ತಿದ್ದಾರೆ ಎಂಬ ಕಾರಣಕ್ಕಾಗಿ? ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಪಾಂಡ್ಯನಿಂದ ದೂರ ಆಗಿದ್ದೇ ಒಳ್ಳೆದಾಯ್ತು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಇದು ನತಾಶಾ ಮತ್ತು ಅಲೆಕ್ಸಾಂಡರ್ ನಡುವಿನ ಡೇಟಿಂಗ್ ವದಂತಿಗಳಿಗೆ ಇನ್ನಷ್ಟು ಪುಷ್ಠಿ ನೀಡಿದೆ. ಈ ಹಿಂದೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ನತಾಶಾ ಮತ್ತೆ ಪ್ರೀತಿಯಲ್ಲಿ ಬೀಳಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದರು. ನಾನು ಮುಂಬರುವ ವರ್ಷವನ್ನು ಆಶಾವಾದದಿಂದ ಎದುರು ನೋಡುತ್ತಿದ್ದೇನೆ. ಹೊಸ ಅನುಭವಗಳು, ಅವಕಾಶಗಳು ಮತ್ತು ಪ್ರೀತಿಗೆ ನಾನು ಮುಕ್ತಳಾಗಿದ್ದೇನೆ. ಸರಿಯಾದ ಸಮಯ ಬಂದಾಗ, ಸರಿಯಾದ ಸಂಬಂಧವು ಸ್ವಾಭಾವಿಕವಾಗಿ ಬರುತ್ತದೆ ಎಂದು ಅವರು ಹೇಳಿದ್ದರು.
ನತಾಶಾ ಸ್ಟಾಂಕೋವಿಕ್ ಮತ್ತು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮೇ 2020ರಲ್ಲಿ COVID-19 ಲಾಕ್‌ಡೌನ್ ಸಮಯದಲ್ಲಿ ವಿವಾಹವಾದರು. ಜುಲೈ 2020ರಲ್ಲಿ ಅಗಸ್ತ್ಯ ಜನಸಿದ. ಜುಲೈ 2024ರಲ್ಲಿ, ನತಾಶಾ ಮತ್ತು ಹಾರ್ದಿಕ್ ಬೇರ್ಪಡುವುದಾಗಿ ಘೋಷಿಸಿದರು.
ತಮ್ಮ 3 ವರ್ಷದ ಮಗ ಅಗಸ್ತ್ಯನನ್ನು ಸಹ-ಪೋಷಕರಾಗಿ ಮುಂದುವರಿಸುವುದಾಗಿ ತಿಳಿಸಿದರು. ನತಾಶಾ 2014 ರಲ್ಲಿ ಭಾರತೀಯ ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ 8 ರ ಸ್ಪರ್ಧಿಯಾಗಿ ಸೇರಿದಾಗ ಗಮನ ಸೆಳೆದಿದ್ದರು.
April 13, 2025 11:28 AM IST