Neeraj Chopra: ಹೊಸ ಇತಿಹಾಸ ಸೃಷ್ಟಿಸಿದ ನೀರಜ್‌ ಚೋಪ್ರಾ, ಇಷ್ಟು ದೂರ ಜಾವಲಿನ್ ಎಸೆದ ಮೊದಲ ಭಾರತೀಯ!Neeraj Chopra Breaks 90m Barrier with 90.23m Throw at Doha Diamond League, Finishes Second

Neeraj Chopra: ಹೊಸ ಇತಿಹಾಸ ಸೃಷ್ಟಿಸಿದ ನೀರಜ್‌ ಚೋಪ್ರಾ, ಇಷ್ಟು ದೂರ ಜಾವಲಿನ್ ಎಸೆದ ಮೊದಲ ಭಾರತೀಯ!Neeraj Chopra Breaks 90m Barrier with 90.23m Throw at Doha Diamond League, Finishes Second

Last Updated:

Neeraj Chopra: ನೀರಜ್ ಚೋಪ್ರಾ ದೋಹಾ ಡೈಮಂಡ್ ಲೀಗ್‌ನಲ್ಲಿ 90.23 ಮೀಟರ್ ಜಾವೆಲಿನ್ ಎಸೆದು ದಾಖಲೆ ಬರೆದರು. ಜರ್ಮನಿಯ ಜೂಲಿಯನ್ ವೆಬರ್ ಚಿನ್ನ ಗೆದ್ದರೂ, ನೀರಜ್ ಬೆಳ್ಳಿ ಪದಕ ಗೆದ್ದರು. 90 ಮೀಟರ್ ದಾಟಿದ ಮೊದಲ ಭಾರತೀಯ.

ನೀರಜ್ ಚೋಪ್ರಾನೀರಜ್ ಚೋಪ್ರಾ
ನೀರಜ್ ಚೋಪ್ರಾ

ಭಾರತದ ಹೆಮ್ಮೆಯ ಜಾವೆಲಿನ್ ಪಟು ನೀರಜ್ ಚೋಪ್ರಾ (Javelin thrower Neeraj Chopra) ಇಂದು ಹೊಸ ದಾಖಲೆ ಬರೆದಿದ್ದಾರೆ. ಎಲ್ಲರೂ ಕಾಯ್ತಾ ಇದ್ದ 90 ಮೀಟರ್ ಗಡಿಯನ್ನ ನೀರಜ್ ಕೊನೆಗೂ ದಾಟಿದ್ದಾರೆ! ಶುಕ್ರವಾರ ದೋಹಾದಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ (Daimond League) ಅವರು ಬರೋಬ್ಬರಿ 90.23 ಮೀಟರ್ ದೂರ ಜಾವೆಲಿನ್ ಎಸೆದು ಈ ಸಾಧನೆ ಮಾಡಿದ್ದಾರೆ. ಆದ್ರೆ ಇಷ್ಟೊಂದು ಅದ್ಭುತ ಪ್ರದರ್ಶನ ನೀಡಿದ್ರೂ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲೋಕೆ ಸಾಧ್ಯವಾಗಲಿಲ್ಲ. ಜರ್ಮನಿಯ ಜೂಲಿಯನ್ ವೆಬರ್ 91.06 ಮೀಟರ್ ಎಸೆದು ಚಿನ್ನ ಗೆದ್ದರು. ಹಾಗಾಗಿ ನೀರಜ್ ಚೋಪ್ರಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯ್ತು.

ಇತಿಹಾಸ ಸೃಷ್ಟಿಸಿದ ನೀರಜ್‌ ಚೋಪ್ರಾ!

ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರೋ ನೀರಜ್ ಚೋಪ್ರಾ ದೋಹಾ ಡೈಮಂಡ್ ಲೀಗ್‌ನಲ್ಲಿ ಚಿನ್ನ ಮಿಸ್ ಮಾಡ್ಕೊಂಡ್ರೂ, 90 ಮೀಟರ್‌ಗಿಂತ ಹೆಚ್ಚು ಜಾವೆಲಿನ್ ಎಸೆದ ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆ ಅವರದಾಯಿತು. ಇಂಥಾ ಸಾಧನೆ ಮಾಡಿದ ವಿಶ್ವದ 25ನೇ ಆಟಗಾರ ಇವರು, ಮತ್ತೆ ಏಷ್ಯಾದಲ್ಲಿ ಮೂರನೇ ಆಟಗಾರ ಅನ್ನೋದು ನಮ್ಮೆಲ್ಲರಿಗೂ ಹೆಮ್ಮೆ ಪಡುವ ವಿಷಯ.

90 ಮೀಟರ್ ಗಡಿ ದಾಟಿದ ಮೊದಲ ಭಾರತೀಯ!

ದೋಹಾ ಡೈಮಂಡ್ ಲೀಗ್ ಗೆಲ್ಲೋ ಫೇವರಿಟ್ ಪ್ಲೇಯರ್ ಅಂತ ಮೊದಲೇ ನೀರಜ್ ಅವರನ್ನ ಗುರುತಿಸಲಾಗಿತ್ತು. ನಮ್ಮ ಭಾರತೀಯ ಆಟಗಾರ ನಿರೀಕ್ಷೆಗೆ ತಕ್ಕಂತೆ ಆಡಿದ್ರು. ತಮ್ಮ ಮೊದಲ ಪ್ರಯತ್ನದಲ್ಲೇ 88.44 ಮೀಟರ್ ಜಾವೆಲಿನ್ ಎಸೆದು ತಮ್ಮ ಸ್ಪರ್ಧಿಗಳಿಗಿಂತ ಮುಂದಿದ್ರು. ಆದ್ರೆ ಇದು ಬರೀ ಟ್ರೇಲರ್ ಅಷ್ಟೇ ಇತ್ತು. ನೀರಜ್ ಚೋಪ್ರಾ ಅವರ ಬೆಸ್ಟ್ ಥ್ರೋ ಮೂರನೇ ಪ್ರಯತ್ನದಲ್ಲಿ ಬಂತು. ಈ ಬಾರಿ ಅವರು 90.23 ಮೀಟರ್ ದೂರ ಜಾವೆಲಿನ್ ಎಸೆದ್ರು!

ದೋಹಾದಲ್ಲಿ ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ!

ದೋಹಾ ಡೈಮಂಡ್ ಲೀಗ್‌ನಲ್ಲಿ ಭಾರತದ ನಾಲ್ಕು ಆಟಗಾರರು ಭಾಗವಹಿಸಿದ್ರು. ನೀರಜ್ ಚೋಪ್ರಾ ಅವರ ಜೊತೆ ಕಿಶೋರ್ ಜೆನಾ ಕೂಡ ಜಾವೆಲಿನ್ ಎಸೆತದಲ್ಲಿ ಸ್ಪರ್ಧಿಸಿದ್ರು ಆದ್ರೆ ಪದಕ ಗೆಲ್ಲೋಕೆ ಆಗಲಿಲ್ಲ. ಗುಲ್ವೀರ್ ಸಿಂಗ್ 5000 ಮೀಟರ್ ಓಟದಲ್ಲಿ ಭಾಗವಹಿಸಲಿದ್ದಾರೆ. ಪಾರುಲ್ ಚೌಧರಿ ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.

2020ರ ಒಲಿಂಪಿಕ್ಸ್‌ನಲ್ಲಿ ಚಿನ್ನ!

ನೀರಜ್ ಚೋಪ್ರಾ 2020ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತೆ 2024ರಲ್ಲಿ ಬೆಳ್ಳಿ ಪದಕ ಗೆದ್ದಿದ್ರು. ಪಾಕಿಸ್ತಾನದ ಅರ್ಷದ್ ನದೀಮ್ ಒಲಿಂಪಿಕ್ಸ್‌ನಲ್ಲಿ ನೀರಜ್ ಸತತ ಎರಡನೇ ಚಿನ್ನ ಗೆಲ್ಲೋದನ್ನ ತಪ್ಪಿಸಿದ್ರು. ಈ ಅದ್ಭುತ ಸಾಧನೆಗಾಗಿ ನೀರಜ್ ಅವರಿಗೆ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ (ಗೌರವ) ಹುದ್ದೆನೂ ಕೊಟ್ಟಿದ್ದಾರೆ. ಅವರಿಗೆ ಪ್ರಾದೇಶಿಕ ಸೇನೆಯಲ್ಲಿ ಈ ಗೌರವ ಸಿಕ್ಕಿದೆ.

ಒಟ್ಟಿನಲ್ಲಿ ನೀರಜ್ ಚೋಪ್ರಾ ದೋಹಾ ಡೈಮಂಡ್ ಲೀಗ್‌ನಲ್ಲಿ ಚಿನ್ನ ಗೆಲ್ಲದೇ ಇದ್ರೂ, 90 ಮೀಟರ್ ಗಡಿ ದಾಟಿ ಇತಿಹಾಸ ಸೃಷ್ಟಿಸಿದ್ದಾರೆ. ಇದು ಭಾರತೀಯ ಕ್ರೀಡಾ ಜಗತ್ತಿಗೆ ಒಂದು ದೊಡ್ಡ ಹೆಮ್ಮೆ ತಂದ ವಿಷಯ ಅಂದ್ರೆ ತಪ್ಪಾಗಲಾರದು. ಮುಂದಿನ ಟೂರ್ನಮೆಂಟ್‌ಗಳಲ್ಲಿ ನೀರಜ್ ಇನ್ನಷ್ಟು ಸಾಧನೆ ಮಾಡ್ಲಿ ಅಂತ ಹಾರೈಸೋಣ.