Nema: ಅನ್ಯಾಯಕ್ಕೊಳಗಾದವರಿಗೆ ಈ ನೇಮೋತ್ಸವವೇ ಪರಿಹಾರ; ತುಳುನಾಡಿನ ನ್ಯಾಯದ ಮೂರ್ತಿಗಳು ಈ ಅಣ್ಣ-ತಂಗಿ! | Kalkuda Kallurti Nema Utsava in Puttur attracted lakhs of devotees | ಜ್ಯೋತಿಷ್ಯ

Nema: ಅನ್ಯಾಯಕ್ಕೊಳಗಾದವರಿಗೆ ಈ ನೇಮೋತ್ಸವವೇ ಪರಿಹಾರ; ತುಳುನಾಡಿನ ನ್ಯಾಯದ ಮೂರ್ತಿಗಳು ಈ ಅಣ್ಣ-ತಂಗಿ! | Kalkuda Kallurti Nema Utsava in Puttur attracted lakhs of devotees | ಜ್ಯೋತಿಷ್ಯ

Last Updated:

ಪುತ್ತೂರಿನ ಕಲ್ಲೇಗದ ಕಲ್ಕುಡ-ಕಲ್ಲುರ್ಟಿ ದೈವಸ್ಥಾನದಲ್ಲಿ ಜನವರಿ 31ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನೇಮೋತ್ಸವ ಜರುಗಿದ್ದು, ಮಹಾಮ್ಮಾಯಿ ದೇವಿಗೆ ವಿಶೇಷ ಪೂಜೆ ನಡೆಯಿತು.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ತುಳುನಾಡಿನಲ್ಲಿ ಅತೀ ಹೆಚ್ಚು ಜನರು (People) ನಂಬುವ ದೈವಗಳ ಪೈಕಿ ಕಲ್ಕುಡ-ಕಲ್ಲುರ್ಟಿಗೆ ವಿಶೇಷ ಸ್ಥಾನವಿದೆ. ಭೈರವರಸನ ಅನ್ಯಾಯಕ್ಕೆ (Injustice) ತಾಳದೇ ಕೊನೆಯುಸಿರುಳೆಯುವ ಶಂಭೂ ಕಲ್ಕುಡ ಹಾಗೆ ಆತನ ತಂಗಿ ಕಾಳಿಯೇ ಈಗಿನ ಕಲ್ಕುಡ-ಕಲ್ಲುರ್ಟಿ; ಇವರ ಜಾತ್ರೆ ಪುತ್ತೂರಲ್ಲಿ ನಡೆದಿದ್ದು, ಲಕ್ಷಾಂತರ ಭಕ್ತರು ಈ ಸಂಭ್ರಮದ ಪಾಲುದಾರರಾಗಿದ್ದಾರೆ.

ಎಲ್ಲಿದೆ ಈ ಕ್ಷೇತ್ರ?

ದಕ್ಷಿಣಕನ್ನಡ ಜಿಲ್ಲೆಯ ಅತೀ ದೊಡ್ಡ ಜಾತ್ರೆ ಎಂದು ಗುರುತಿಸಿಕೊಂಡಿರುವ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಬಳಿಕದ ಪುತ್ತೂರಿನ ಎರಡನೇ ಅತೀ ದೊಡ್ಡ ಜಾತ್ರೆಯಾಗಿ ಗುರುತಿಸಿಕೊಂಡಿರೋದು ಕಲ್ಲೇಗದ ಕಲ್ಕುಡ-ಕಲ್ಲುರ್ಟಿ ದೈವಸ್ಥಾನದಲ್ಲಿ ನಡೆಯುವ ನೇಮೋತ್ಸವವಾಗಿದೆ. ಮಾಣಿ-ಮೈಸೂರು ರಸ್ತೆಯ ಕಲ್ಲೇಗ ಎನ್ನುವ ಪ್ರದೇಶದ ರಸ್ತೆ ಪಕ್ಕದಲ್ಲೇ ಇರುವ ಈ ದೈವಸ್ಥಾನಕ್ಕೆ ಐತಿಹಾಸಿಕ ಹಿನ್ನಲೆಯೂ ಇದೆ.

ಏನೇನು ವಿಶೇಷ ಇರುತ್ತದೆ?

ಈ ಕಾರಣಕ್ಕಾಗಿಯೇ ಇಲ್ಲಿ ನಡೆಯುವ ನೇಮೋತ್ಸವಕ್ಕೆ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಆಗಮಿಸಿ ದೈವಗಳ ಕೃಪೆಗೆ ಪಾತ್ರರಾಗುತ್ತಾರೆ. ಒಂದು ದಿನಗಳ ಕಾಲ ನಡೆಯುವ ಈ ನೇಮೋತ್ಸವದಲ್ಲಿ ಕಲ್ಕುಡ-ಕಲ್ಲುರ್ಟಿ ದೈವಗಳು ಪ್ರಧಾನವಾಗಿದ್ದು, ಇವುಗಳ ಜೊತೆಗೆ ಮಹಾಮ್ಮಾಯಿ ದೇವಿಗೆ ಗೋಂದೋಲು ಪೂಜೆ ನಡೆಯುತ್ತದೆ.

ಜನವರಿ ಅಂತ್ಯಕ್ಕೆ ಶುರುವಾಗುತ್ತೆ ನೇಮೋತ್ಸವ

ಪ್ರತೀವರ್ಷವೂ ಜನವರಿ 31 ರಂದೇ ನಡೆಯುವ ಈ ಕಲ್ಕುಡ-ಕಲ್ಲುರ್ಟಿ ದೈವಗಳ ನೇಮೋತ್ಸವ ರಾತ್ರಿ 11 ಗಂಟೆಯ ಬಳಿಕ ಆರಂಭಗೊಳ್ಳುತ್ತದೆ. ನೇಮೋತ್ಸವದ ಮಧ್ಯಾಹ್ನ‌ ಸಾರ್ವಜನಿಕ ಅನ್ನಸಂತರ್ಪಣೆ ಕೂಡಾ ನಡೆಯುತ್ತದೆ. ಸಾವಿರಾರು ಸಂಖ್ಯೆಯ ಜನ ಈ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳುವ ಮೂಲಕ ದೈವಗಳ ಪ್ರಸಾದವನ್ನು ಸ್ವೀಕರಿಸುತ್ತಾರೆ.

ಈ ದೈವಗಳಿಗಿದ್ದಾರೆ ಲಕ್ಷಾಂತರ ಮಂದಿ ಭಕ್ತರು

ಇದನ್ನೂ ಓದಿ: Arecanut: ಚಟವೇ ಚಟ್ಟಕ್ಕೆ ಕಾರಣ, ಈ ಸಾಲಿಗೆ ಅಡಿಕೆ ಸೇರಿಸಲು ಚಿಂತನೆ; ಬೆಳೆಗಾರರು ಕಂಗಾಲು!

ಕಲ್ಲೇಗದ ಕಲ್ಕುಡ-ಕಲ್ಲುರ್ಟಿ ದೇವಸ್ಥಾನದಲ್ಲಿ ಪ್ರಾರ್ಥಿಸಿದಲ್ಲಿ ಎಲ್ಲಾ ಇಷ್ಟಾರ್ಥಗಳು ಸಿದ್ಧಿಸುತ್ತದೆ ಎನ್ನುವ ನಂಬಿಕೆ ಇರುವ ಹಿನ್ನಲೆಯಲ್ಲಿ ದೈವಗಳ ನೇಮೋತ್ಸವ ನೋಡಲು ದೇಶ-ವಿದೇಶಗಳಲ್ಲಿ ಇರುವ ದೈವದ ಭಕ್ತರು ಆಗಮಿಸಿ ದೈವಗಳ ಮೇಲಿನ ತಮ್ಮ ಭಯ-ಭಕ್ತಿಯನ್ನ ತೋರ್ಪಡಿಸುತ್ತಾರೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿ ದೈವತ್ವವನ್ನು ಪಡೆದ ಅಣ್ಣ-ತಂಗಿಯನ್ನು ಕಲ್ಕುಡ-ಕಲ್ಲುರ್ಟಿ ಹೆಸರಿನಲ್ಲಿ ಆರಾಧಿಸಿಕೊಂಡು ಬರಲಾಗುತ್ತಿದೆ. ಕಲ್ಲೇಗ ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ ನಡೆಯುವ ಮೊದಲು ಇದೇ ದೈವಗಳಿಗೆ ಸಖಬಂಧಪಟ್ಟ ಕಾರ್ಜಾಲು ಗುತ್ತಿನಿಂದ ದೈವಗಳ ಭಂಡಾರವನ್ನು ಮೆರವಣಿಗೆಯ ಮೂಲಕ ತರುವ ಜೊತೆಗೆ ನೇಮೋತ್ಸವದ ಪ್ರಕ್ರಿಯೆಗಳು ಇಲ್ಲಿ ಪ್ರಾರಂಭವಾಗುತ್ತದೆ.

Disclaimer

ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.