Last Updated:
ಬೆಂಗಳೂರಿನ ಮಂಜುನಾಥ್, ಉಮೇಶ್, ಬಾಲಾಜಿ, ಶರತ್ ಬಾಬು, ಶೋಭನಾದ್ರಿ, ರಂಜನ್, ಕೃಷ್ಣಮೂರ್ತಿ, ರಾಜಣ್ಣ,ಪ್ರಸಾದ್, ಹೇಮಾದ್ರಿ ಮತ್ತು ಧರಣಿ ಹೀಗೆ ಹತ್ತು ಸದಸ್ಯರ ಶ್ರೀ ಸ್ಕಂದ ಟ್ರಸ್ ಈ ವಿಶಿಷ್ಟ ಸೇವೆಯನ್ನು ನೆರವೇರಿಸಿಕೊಂಡು ಬರುತ್ತಿದೆ.
ದಕ್ಷಿಣಕನ್ನಡ: ಹೊಸ ವರ್ಷಕ್ಕೆ(New Year 2025) ಹೊಸ ಹೊಸ ವಿಚಾರಗಳನ್ನು, ಆಲೋಚನೆಗಳನ್ನು, ಕೆಲಸಗಳನ್ನು ಮಾಡೋದು ಸಹಜ. ಇಂಥಹುದೇ ಒಂದು ಕೆಲಸದ ಮೂಲಕ ಬೆಂಗಳೂರಿನ ಓಂ ಶ್ರೀ ಸ್ಕಂದ ಚಾರಿಟಬಲ್ ಟ್ರಸ್ಟ್ ನ ಸದಸ್ಯರು ಗುರುತಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು(Kukke Subrahmanya) ಹೊಸವರ್ಷದಂದು ಅಲಂಕರಿಸುವ ಜವಾಬ್ದಾರಿಯನ್ನು ಈ ಟ್ರಸ್ಟ್ ಕಳೆದ 7 ವರ್ಷಗಳಿಂದ ತೆಗೆದುಕೊಂಡಿದೆ. 2018 ರಿಂದ ಆರಂಭಗೊಂಡ ಈ ಯೋಜನೆ ಇಂದಿನವರೆಗೂ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.
ಈ ಬಾರಿ ಮತ್ತೆ ಹೊಸ ವರ್ಷದ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಹೂವಿನಿಂದ ಶೃಂಗಾರಗೊಳಿಸಿದೆ ಈ ಟ್ರಸ್ಟ್. ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ವಿವಿಧ ಬಗೆಯ ಹೂವುಗಳಿಂದ ಕ್ಷೇತ್ರವನ್ನು ಸಿಂಗರಿಸುವ ಮೂಲಕ ದೇವಸ್ಥಾನದ ಸೌಂದರ್ಯಕ್ಕೆ ಮತ್ತಷ್ಟು ಮೆರುಗನ್ನು ನೀಡಿದೆ.
ಇದನ್ನೂ ಓದಿ: New Year 2025: ವರ್ಷದ ಕೊನೆಯ ದಿನ ಪಣಂಬೂರು ಬೀಚ್ನಲ್ಲಿ ಸೂರ್ಯಾಸ್ತ ಕಣ್ತುಂಬಿಕೊಂಡ ಜನರು!
ತೆಂಗಿನಗರಿಯಿಂದ ಹಿಡಿದು ತುಳಸೀದಳದವರೆಗೆ ಹಲವಾರು ಬಗೆಯ ಹೂವುಗಳನ್ನು ದೇವಸ್ಥಾನದ ಶೃಂಗಾರಕ್ಕಾಗಿ ಬಳಸಿಕೊಳ್ಳಲಾಗಿದೆ. 10 ಬಗೆಯ ಚೆಂಡುಹೂವು, 10 ಬಗೆಯ ಸೇವಂತಿಗೆ ಹೂವು, ಸುಗಂಧ ಪುಷ್ಪಗಳು ಸೇರಿದಂತೆ 50 ಕ್ಕೂ ಮಿಕ್ಕಿದ ಹೂವಿನ ರಾಶಿಗಳಿಂದ ದೇವಸ್ಥಾನವನ್ನು ಶೃಂಗರಿಸಲಾಗಿತ್ತು. ಹೂವಿನ ಜೊತೆಗೆ ಜೋಳ, ಅನಾನಸು, ಕಿತ್ತಳೆ, ದ್ರಾಕ್ಷಿ ಹೀಗೆ ಹಲವು ಬಗೆಯ ಹಣ್ಣುಗಳನ್ನೂ ಜೋಡಿಸಲಾಗಿತ್ತು.
ಬೆಂಗಳೂರಿನ ಮಂಜುನಾಥ್, ಉಮೇಶ್, ಬಾಲಾಜಿ, ಶರತ್ ಬಾಬು, ಶೋಭನಾದ್ರಿ, ರಂಜನ್, ಕೃಷ್ಣಮೂರ್ತಿ, ರಾಜಣ್ಣ,ಪ್ರಸಾದ್, ಹೇಮಾದ್ರಿ ಮತ್ತು ಧರಣಿ ಹೀಗೆ ಹತ್ತು ಸದಸ್ಯರ ಶ್ರೀ ಸ್ಕಂದ ಟ್ರಸ್ ಈ ವಿಶಿಷ್ಟ ಸೇವೆಯನ್ನು ನೆರವೇರಿಸಿಕೊಂಡು ಬರುತ್ತಿದೆ.
ಹೊಸ ವರ್ಷಾಚರಣೆಯ ಅಂಗವಾಗಿ ಹಿಂದಿನ ರಾತ್ರಿ ನಡೆಯುವ ದೇವರ ಉತ್ಸವದಲ್ಲಿ ದೇವರಿಗೆ 5 ವಿಶೇಷ ಹೂವಿನ ಮಾಲೆಯನ್ನೂ ಈ ತಂಡ ಸಿದ್ಧಪಡಿಸಿದೆ. ಹೊಸ ವರ್ಷದ ಆರಂಭವನ್ನು ದೇವರ ಸೇವೆಯ ಮೂಲಕ ಆರಂಭಿಸಬೇಕು ಎನ್ನುವ ಆಶಯದಲ್ಲಿ 2018 ರಲ್ಲಿ ಆರಂಭಗೊಂಡ ಈ ಸೇವೆಯನ್ನು ಟ್ರಸ್ಟ್ ಆ ಬಳಿಕ ನಿರಂತರವಾಗಿ ಮುಂದುವರಿಸಿಕೊಂಡು ಬಂದಿದೆ.
Dakshina Kannada,Karnataka
January 02, 2025 6:05 PM IST