Last Updated:
ನವಮಂಗಳೂರು ಬಂದರು ಪ್ರಾಧಿಕಾರ 50ನೇ ವರ್ಷ ಸಂಭ್ರಮ ಅಂಬೇಡ್ಕರ್ ಮೈದಾನದಲ್ಲಿ NMPA ಕಾರ್ಯವೈಖರಿ, ಬೆಳವಣಿಗೆ, ಯೋಜನೆಗಳ ಪ್ರದರ್ಶನ ಜನರ ಮನಸೂರೆಗೊಳಿಸಿದೆ.
ಮಂಗಳೂರು: ದೇಶದ ಅಭಿವೃದ್ಧಿಗೆ (Progress) ಅತ್ಯಮೂಲ್ಯ ಕೊಡುಗೆ ನೀಡುತ್ತಿರುವ ನವಮಂಗಳೂರು ಬಂದರು ಪ್ರಾಧಿಕಾರ ಐವತ್ತನೇ ವರ್ಷದ ಸಂಭ್ರಮವನ್ನು (Celebration) ಆಚರಿಸುತ್ತಿದೆ. ದೇಶದ ಬೆಳವಣಿಗೆಯ ಹಾದಿಯಲ್ಲಿ ಪ್ರಮುಖ ಸೇವೆ ನೀಡುತ್ತಿರುವ ಎನ್. ಎಂ. ಪಿ. ಎ. ಯ (NMPA) ಕಾರ್ಯವೈಖರಿ ಬಹುಪಾಲು ಜನರಿಗೆ ತಿಳಿದಿಲ್ಲ! ಕಾರಣ ರಾಷ್ಟ್ರೀಯ ಸುರಕ್ಷತೆಯ ಹಿನ್ನೆಲೆಯಲ್ಲಿ ಜನರಿಗೆ ಬಂದರಿನ (Port) ಒಳಹೋಗೋಕೆ ಅವಕಾಶ ಇಲ್ಲ. ಆದರೆ ಈ ಬಾರಿ ಎನ್. ಎಂ. ಪಿ. ಎ. ಐವತ್ತನೇ ವರ್ಷದ ಸಂಭ್ರಮದಲ್ಲಿ ಬಂದರಿನ ಕಾರ್ಯವೈಖರಿಯನ್ನು ಜನರಿಗೆ ತಿಳಿಸಲು ವಿಶೇಷ ಪ್ರಯತ್ನವನ್ನು ನಡೆಸಿದೆ. ಜನರ ಬಳಿಗೆ ಬಂದರು ಎಂಬ ವಿಶೇಷ ಪರಿಕಲ್ಪನೆಯಲ್ಲಿ ಅದ್ಭುತ ಪ್ರದರ್ಶನವನ್ನು ಮಾಡಿದೆ.
ಮಂಗಳೂರಿನ ಪಣಂಬೂರಿನ ಅಂಬೇಡ್ಕರ್ ಮೈದಾನದಲ್ಲಿ ಈ ಪ್ರದರ್ಶನವನ್ನು ಮಾಡಿದ್ದು, ಜನರ ಮನಸೂರೆಗೊಳಿಸಿದೆ. ಎನ್. ಎಂ. ಪಿ. ಎ. ಯ 50 ವರ್ಷಗಳ ಸೇವೆ, ಬೆಳವಣಿಗೆಯ ಹಾದಿ, ಪಯಣದಲ್ಲಿನ ಪ್ರಮುಖ ಮೈಲಿಗಲ್ಲುಗಳು, ಅಭಿವೃದ್ಧಿಯ ಯೋಜನೆಗಳು, ಹಾಗೂ ಸಮುದ್ರಯಾನ ವಿಭಾಗದಲ್ಲಿನ ಕೊಡುಗೆಗಳ ಕುರಿತಾದ ಪ್ರದರ್ಶನ ಇದಾಗಿದೆ.
ಎಲ್. ಇ. ಡಿ. ಪರದೆಯಲ್ಲಿ ಉತ್ಕೃಷ್ಟ ಮಟ್ಟದ ವಿಡಿಯೋ ಸಾಕ್ಷ್ಯಚಿತ್ರದ ಮೂಲಕ ಎನ್. ಎಂ. ಪಿ. ನಡೆದು ಬಂದ ಹಾದಿಯನ್ನು ವಿವರಿಸಲಾಗಿದೆ. ರಾಷ್ಟ್ರೀಯ ಸುರಕ್ಷತೆಯ ಹಿನ್ನೆಲೆಯಲ್ಲಿ ಎನ್. ಎಂ. ಪಿ. ಎ. ಒಳಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧವಿರುವ ಕಾರಣ ಎನ್. ಎಂ. ಪಿ. ಎ. ಯ ಕಾರ್ಯಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಪ್ರದರ್ಶನ ಇದಾಗಿದೆ.
50 ವರ್ಷದ ಹಾದಿ ಸುಲಭವಲ್ಲ!
Dakshina Kannada,Karnataka
November 16, 2025 12:57 PM IST