Last Updated:
ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಈ ಪಂದ್ಯದಲ್ಲಿ (New Zealand vs England ), ಪ್ರವಾಸಿ ತಂಡವು ಆತಿಥೇಯ ತಂಡವನ್ನು 65 ರನ್‌ಗಳಿಂದ ಸೋಲಿಸಿ ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿತು.
ಮೂರು ಪಂದ್ಯಗಳ ಟಿ20ಐ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದೆ. ಈ ಪ್ರವಾಸದ ಭಾಗವಾಗಿ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಇದೀಗ ಇಂದು ನಡೆದ ಎರಡನೇ ಟಿ20ಐ ನಡೆದಿದ್ದು, ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಈ ಪಂದ್ಯದಲ್ಲಿ (New Zealand vs England), ಪ್ರವಾಸಿ ತಂಡವು ಆತಿಥೇಯ ತಂಡವನ್ನು 65 ರನ್‌ಗಳಿಂದ ಸೋಲಿಸಿ ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿತು.ಮೂರನೇ ಟಿ20ಐ ಅಕ್ಟೋಬರ್ 23 ರಂದು ಆಕ್ಲೆಂಡ್‌ನಲ್ಲಿ ನಡೆಯಲಿದ್ದು, ಕಿವೀಸ್ಗೆ ಸರಣಿ ಡ್ರಾ ಮಾಡಿಕೊಳ್ಳಲು ಕೊನೆಯ ಅವಕಾಶವಾಗಲಿದೆ. ಆ ನಂತರ ನವೆಂಬರ್ 26, 29 ಮತ್ತು 1 ರಂದು ಮೌಂಟ್ ಮೌಂಗನುಯಿ, ಹ್ಯಾಮಿಲ್ಟನ್ ಮತ್ತು ವೆಲ್ಲಿಂಗ್ಟನ್‌ನಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲಿವೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಇಂಗ್ಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 236 ರನ್ ಗಳಿಸಿತು. ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ 56 ಎಸೆತಗಳಲ್ಲಿ 11 ಬೌಂಡರಿ, ಒಂದು ಸಿಕ್ಸರ್ ಸಹಿತ 85, ನಾಯಕ ಹ್ಯಾರಿ ಬ್ರೂಕ್ 35 ಎಸೆತಗಳಲ್ಲಿ, 5 ಸಿಕ್ಸರ್, 6 ಬೌಂಡರಿಗಳ ಸಹಿತ 78 ರನ್ ರನ್ ಸಿಡಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.
ಜಾಕೋಬ್ ಬೆಥೆಲ್ ಕೇವಲ 12 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಿತ 24, ಮತ್ತು ಟಾಮ್ ಬ್ಯಾಂಟನ್ 12 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 29 ರನ್ಗಳಿಸಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ಜೋಸ್ ಬಟ್ಲರ್ (4) ಮಾತ್ರ ನಿರಾಶಾದಾಯಕ ಪ್ರದರ್ಶನ ನೀಡಿದರು. ನ್ಯೂಜಿಲೆಂಡ್ ಬೌಲರ್‌ಗಳಲ್ಲಿ, ಜೇಮಿಸನ್ 2, ಡಫಿ ಮತ್ತು ಬ್ರೇಸ್‌ವೆಲ್ ತಲಾ ಒಂದು ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಇಂಗ್ಲೆಂಡ್ ಸಿಡಿಸಿದ 236 ಸ್ಕೋರ್ ಟಿ20ಐಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡನೇ ಅತ್ಯಧಿಕ ಸ್ಕೋರ್ ಆಗಿತ್ತು.
237 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಆರಂಭದಿಂದಲೂ ಪರದಾಡಿತು. ಒಬ್ಬ ಬ್ಯಾಟ್ಸ್‌ಮನ್ ಕೂಡ ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾಗಲಿಲ್ಲ. ಸೋಲು ಖಚಿತವಾದ ಮೇಲೆ ನಾಯಕ ಮಿಚೆಲ್ ಸ್ಯಾಂಟ್ನರ್ (15 ಎಸೆತಗಳಲ್ಲಿ 36) ಬ್ಯಾಟಿಂಗ್ ಮಾಡಿ ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು. ಟಿಮ್ ಸೀಫರ್ಟ್ (39) ಮತ್ತು ಚಾಪ್ಮನ್ (28) 20ರ ಗಡಿ ದಾಟಿಸಿದರು.
ಆದಿಲ್ ರಶೀದ್ (4-0-32-4) ತಮ್ಮ ಅತ್ಯುತ್ತಮ ಸ್ಪಿನ್ ಮ್ಯಾಜಿಕ್ ಮೂಲಕ ನ್ಯೂಜಿಲೆಂಡ್‌ನ ಪತನಕ್ಕೆ ಕಾರಣರಾದರು. ಅವರಿಗೆ ಲ್ಯೂಕ್ ವುಡ್ (4-0-36-2), ಬ್ರೈಡನ್ ಕಾರ್ಸ್ (3-0-27-2) ಮತ್ತು ಲಿಯಾಮ್ ಡಾಸನ್ (4-0-38-2) ಸಾಥ್ ನೀಡಿದರು. ಇವರಿಬ್ಬರಿ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ 18 ಓವರ್‌ಗಳಲ್ಲಿ 171 ರನ್‌ಗಳಿಗೆ ಆಲೌಟ್ ಆಯಿತು. ನ್ಯೂಜಿಲೆಂಡ್ ಇನ್ನಿಂಗ್ಸ್‌ನಲ್ಲಿ 10 ಆಟಗಾರರು ಕ್ಯಾಚ್ ಔಟ್ ಆದರು. ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಇದು ಕೇವಲ 13 ನೇ ಬಾರಿ ಮಾತ್ರ ನಡೆದಿದೆ.
October 20, 2025 6:34 PM IST