Olavaina Payana: ಕರಾವಳಿ ಯುವ ನಿರ್ದೇಶಕನ ಚೊಚ್ಚಲ ಕನ್ನಡ ಚಿತ್ರ ತೆರೆಗೆ ಸಿದ್ಧ! | Olavaina Payana The debut Kannada film of a young coastal director is ready for release

Olavaina Payana: ಕರಾವಳಿ ಯುವ ನಿರ್ದೇಶಕನ ಚೊಚ್ಚಲ ಕನ್ನಡ ಚಿತ್ರ ತೆರೆಗೆ ಸಿದ್ಧ! | Olavaina Payana The debut Kannada film of a young coastal director is ready for release

Last Updated:

ಪುತ್ತೂರಿನ ನಿವಾಸಿಯಾಗಿರುವ ಕಿಶನ್‌ಗೆ ತನ್ನ ಚೊಚ್ಚಲ ಕನ್ನಡ ಚಿತ್ರವನ್ನು ಪುತ್ತೂರಿನಿಂದಲೇ ಪ್ರೊಮೋಶನ್ ಆರಂಭಿಸಬೇಕು ಎನ್ನುವ ಆಶಯ ಇತ್ತು. ಹೀಗಾಗಿ ಪುತ್ತೂರಿನಲ್ಲಿ ಚಿತ್ರತಂಡದ ಪರಿಚಯ ಮಾಡುವ ಪ್ರಯತ್ನವನ್ನೂ ಮಾಡಿದ್ದಾರೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಕರಾವಳಿಯ ಯುವಕನ(Coastal Guy) ಚೊಚ್ಚಲ ಕನ್ನಡ ಸಿನಿಮಾವೊಂದು ಶೀಘ್ರದಲ್ಲೇ ತೆರೆ ಮೇಲೆ ಪ್ರದರ್ಶನಕ್ಕೆ ಸಿದ್ಧಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada District) ಪುತ್ತೂರಿನ ಬಲ್ನಾಡು ನಿವಾಸಿ ಕಿಶನ್ ಬಲ್ನಾಡು(Kishan Balnadu) ನಿರ್ದೇಶನದ ʼಒಲವಿನ ಪಯಣʼ (Olavaina Payana) ಫೆಬ್ರವರಿ 21 ರಂದು ರಾಜ್ಯದೆಲ್ಲೆಡೆ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ. ಈ ಚಿತ್ರದಲ್ಲಿ ಪ್ರತಿಭಾವಂತ ಕಲಾವಿದರ ದಂಡೇ(Artist Team) ಇರೋದು ಈ ಸಿನಿಮಾದ(Film) ಪ್ರಮುಖ ಆಕರ್ಷಣೆಯೂ ಆಗಿದೆ.

ಚಿತ್ರತಂಡದಲ್ಲಿ ಯಾರ್ಯಾರು ಇದ್ದಾರೆ?

ಮುಳಗುಂದ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ಕಥೆ ಮತ್ತು ನಿರ್ಮಾಪಕರಾಗಿ ನಾಗರಾಜ್ ಮುಳಗೊಂಡ, ನಿರ್ದೇಶಕರಾಗಿ ಕಿಶನ್‌ ಬಲ್ನಾಡ್ ಮಿಂಚಲಿದ್ದಾರೆ. ಚಿತ್ರದ ನಾಯಕ ನಟನಾಗಿ ಹಲವು ಧಾರಾವಾಹಿಗಳಲ್ಲಿ ಮಿಂಚಿರುವ ಸುನಿಲ್, ನಾಯಕಿಯರಾಗಿ ಖುಷಿ ಮತ್ತು ಪ್ರಿಯಾ ಹೆಗ್ಡೆ, ಪೋಷಕ ಕಲಾವಿದರಾಗಿ ಪದ್ಮಜಾ ರಾವ್, ಬಾಲ ರಾಜ್ವಾಡಿ, ನಾಗೇಶ್ ಮಯ್ಯ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Kolar: ಮಣ್ಣಿನ ಪರೀಕ್ಷೆಯಿಂದ ಆಘಾತಕಾರಿ ಅಂಶ ಬೆಳಕಿಗೆ- ರೈತಾಪಿ ವರ್ಗ ಇನ್ನಾದ್ರೂ ಎಚ್ಚೆತ್ತುಕೊಳ್ಳಲೇಬೇಕು!

ಕಿಶನ್‌ ಬಲ್ನಾಡು ಯಾರು?

ಚಿತ್ರದ ನಿರ್ದೇಶನ ಮಾಡುತ್ತಿರುವ ಕಿಶನ್ ಬಲ್ನಾಡು ಪುತ್ತೂರಿನ ನಿವಾಸಿಯಾಗಿದ್ದು, ಕಳೆದ 17 ವರ್ಷಗಳಿಂದ ಬೆಂಗಳೂರಿನ ಸಿನಿಮಾ ಮತ್ತು ಧಾರಾವಾಹಿ ಸೆಟ್‌ಗಳಲ್ಲಿ ನಿರ್ದೇಶಕ, ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡವರು. ತನ್ನ ಚೊಚ್ಚಲ ಕನ್ನಡ ಸಿನಿಮಾವನ್ನು ಕರಾವಳಿಯ ಜನ ಇಷ್ಟಪಡುತ್ತಾರೆ ಎನ್ನುವ ನಂಬಿಕೆಯಿಂದ ಕ್ವಾಲಿಟಿಯಲ್ಲಿ ಕಾಂಪ್ರಮೈಜ್ ಮಾಡಿಕೊಳ್ಳದೆ, ಪ್ರತಿಭಾವಂತ ಹಿರಿಯ ಮತ್ತು ಕಿರಿಯ ಕಲಾವಿದರ ತಂಡ ಕಟ್ಟಿಕೊಂಡು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪುತ್ತೂರಿನ ನಿವಾಸಿಯಾಗಿರುವ ಕಿಶನ್‌ಗೆ ತನ್ನ ಚೊಚ್ಚಲ ಕನ್ನಡ ಚಿತ್ರವನ್ನು ಪುತ್ತೂರಿನಿಂದಲೇ ಪ್ರೊಮೋಶನ್ ಆರಂಭಿಸಬೇಕು ಎನ್ನುವ ಆಶಯ ಇತ್ತು. ಹೀಗಾಗಿ ಪುತ್ತೂರಿನಲ್ಲಿ ಚಿತ್ರತಂಡದ ಪರಿಚಯ ಮಾಡುವ ಪ್ರಯತ್ನವನ್ನೂ ಮಾಡಿದ್ದಾರೆ.

ಫುಲ್ ಪ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರ ಆಗಿರುವ ʼಒಲವಿನ ಪಯಣʼ ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ನೈಜ ಕಥೆಗಳನ್ನು ಪೋಣಿಸಿ ಹೆಣೆದ ಕಥೆಯಾಗಿದೆ. ಪ್ರೇಕ್ಷಕನಿಗೆ ಯಾವುದೇ ಸಂದರ್ಭದಲ್ಲೂ ನಿರಾಸೆ ಮೂಡಿಸದಂತೆ ಚಿತ್ರವನ್ನು ನಿರ್ಮಿಸಲಾಗಿದ್ದು, ಚಿತ್ರ ಸಸ್ಪೆನ್ಸ್ ಎಂಡಿಗ್ ಕೊಡುವ ಮೂಲಕ ಪ್ರೇಕ್ಷಕನನ್ನು ಕೊನೆಯ ತನಕ ಹಿಡಿದಿಟ್ಟುಕೊಳ್ಳಲಿದೆ ಅನ್ನೋದು ಚಿತ್ರತಂಡದ ವಿಶ್ವಾಸ.