Last Updated:
ಮಂಗಳೂರು ಮತ್ತು ಕೇರಳದಲ್ಲಿ ಓಣಂ ಹಬ್ಬದ ಸಂಭ್ರಮ, ಮಹಾಬಲಿ ರಾಜನ ಪುನರಾಗಮನದ ನಂಬಿಕೆ, ಪೂಕ್ಕಳ ರಚನೆ, ಹತ್ತು ದಿನಗಳ ಆಚರಣೆ, ವಿಶಿಷ್ಟ ಹೂವುಗಳ ಬಳಕೆ ಮುಖ್ಯಾಂಶ.
ಮಂಗಳೂರು: ವಿಶ್ವದೆಲ್ಲೆಡೆ ಇರುವ ಮಲಯಾಳಿಗಳು ಓಣಂ (Onam) ಆಚರಣೆಯ ಸಂಭ್ರಮದಲ್ಲಿದ್ದಾರೆ. ಓಣಂ ಅನ್ನೋದು ಕೇರಳದ ಅತ್ಯಂತ ಪ್ರಮುಖ ಹಬ್ಬ (Festival) ವಾಗಿದ್ದು, ಜಾತಿ, ಧರ್ಮದ ಎಲ್ಲೆಗಳನ್ನು ಮೀರಿ ಈ ಹಬ್ಬವನ್ನು ಎಲ್ಲರೂ ಒಟ್ಟಾಗಿ ಆಚರಿಸುತ್ತಾರೆ. ಈ ಹಬ್ಬದ ಒಂದು ಪ್ರಮುಖ ಭಾಗವೆಂದರೆ ಪೂಕ್ಕಳವನ್ನು ತಯಾರಿಸುವುದು. ಪೂಕ್ಕಳವು ಸಮೃದ್ಧಿ ಮತ್ತು ಸಂತೋಷದ (Joy) ಸಂಕೇತವಾಗಿದೆ. ಸಾಮಾನ್ಯವಾಗಿ ಓಣಂ ಅನ್ನು ಹತ್ತು ದಿನಗಳ ಕಾಲ ಆಚರಣೆ (Celebrate) ಮಾಡಲಾಗುತ್ತಿದ್ದರೂ, ಕೊನೆಯ ಮೂರು ದಿನಗಳು ವಿಶಿಷ್ಟವಾಗಿದೆ. ಈ ಮೂರು ದಿನಗಳಲ್ಲಿ ಒಂದಾದ ಅತ್ತಂನಲ್ಲಿ ರಾಜ್ಯಾದ್ಯಂತ ಮಲಯಾಳಿ ಮನೆಗಳಲ್ಲಿ ಪೂಕ್ಕಳಗಳನ್ನು ತಯಾರಿಸಲಾಗುತ್ತದೆ.
ಮಹಾಬಲಿಯನ್ನು ಸ್ವಾಗತಿಸಲು ಈ ಪೂಕ್ಕಳಗಳನ್ನು ತಯಾರಿಸಲಾಗುತ್ತದೆ ಎಂದು ನಂಬಲಾಗಿದೆ. ಹಿಂದಿನ ಕಾಲದಲ್ಲಿ, ಪೂಕ್ಕಳಗಳನ್ನು ರಚಿಸಲು ಸ್ಥಳೀಯವಾಗಿ ಲಭ್ಯವಿರುವ ಹೂವುಗಳನ್ನು ಮಾತ್ರ ಬಳಸಲಾಗುತ್ತಿತ್ತು. ಈಗಲೂ ಮನೆಯಂಗಳದಲ್ಲಿ ಬೆಳೆದ ಹೂಗಳನ್ನು ಬಳಸಿಯೇ ಪೂಕ್ಕಳ ಎಂದರೆ ಪುಷ್ಪ ರಂಗೋಲಿಯನ್ನು ರಚಿಸುವುದು ವಾಡಿಕೆ.
ಮನೆಯ ಮುಂಭಾಗದ ಅಂಗಳದಲ್ಲಿ ಪೂಕ್ಕಳವನ್ನು ಹಾಕಲಾಗುತ್ತದೆ. ಅತ್ತಂ ತಿಂಗಳ ಮೊದಲ ದಿನದಂದು, ‘ತುಂಬಾ’ ಹೂವನ್ನು ಬಳಸಿ ಸರಳವಾದ ಪೂಕ್ಕಳವನ್ನು ತಯಾರಿಸಲಾಗುತ್ತದೆ. ಚಿತ್ತಿರ ದಿನದಂದು, ಬಿಳಿ ಹೂವುಗಳನ್ನು ಹಾಕಲಾಗುತ್ತದೆ. ಪೂಕ್ಕಳಂನ ಗಾತ್ರವು ಪ್ರತಿ ದಿನ ಕಳೆದಂತೆ ಹೆಚ್ಚಾಗುತ್ತಲೇ ಇರುತ್ತದೆ. ‘ಮುಕ್ಕುಟ್ಟಿ’ ಮತ್ತು ‘ಕೊಲಂಬಿ’ ನಂತಹ ಹಳದಿ ಹೂವುಗಳಿಂದ ಪೂಕಳಂ ತಯಾರಿಸಲಾಗುತ್ತದೆ. ಬಳಿಕದ ದಿನಗಳಲ್ಲಿ ದಾಸವಾಳದಂತಹ ಪ್ರಕಾಶಮಾನವಾದ ಹೂವುಗಳನ್ನು ಪೂಕ್ಕಳಂ ಮೇಲೆ ಹಾಕಿ ಅದರ ಅಂದವನ್ನು ಹೆಚ್ಚು ಮಾಡಲಾಗುತ್ತದೆ.
ಕೇರಳವನ್ನು ಆಳುತ್ತಿದ್ದ ಮಹಾಬಲಿ ರಾಜನು ಅತ್ಯಂತ ಧರ್ಮಿಷ್ಠ ಮತ್ತು ಪ್ರಜಾಸ್ನೇಹಿಯಾಗಿದ್ದ. ಅಸುರ ವಂಶಕ್ಕೆ ಸೇರಿದ್ದ ಈತನ ಪ್ರಸಿದ್ಧಿಯನ್ನು ತಡೆಯಲಾರದೆ ದೇವೇಂದ್ರನು ವಿಷ್ಣುವಿನ ಮೊರೆ ಹೋಗಿ ಬಲಿ ಚಕ್ರವರ್ತಿಯನ್ನು ತಡೆಯುವಂತೆ ಕೇಳಿಕೊಳ್ಳುತ್ತಾರೆ. ಅದೇ ರೀತಿ ವಾಮನ ರೂಪದಲ್ಲಿ ಬಲಿ ಚಕ್ರವರ್ತಿಯ ಬಳಿ ಬಂದ ಶ್ರೀ ವಿಷ್ಣು ತನಗೆ ಮೂರು ಹೆಜ್ಜೆ ಭೂಮಿ ಬೇಕೆಂದು ಕೇಳುತ್ತಾನೆ. ಅದಕ್ಕೆ ಒಪ್ಪಿಕೊಂಡ ಬಲಿಯು ಮೂರು ಹೆಜ್ಜೆ ಭೂಮಿಯನ್ನು ನೀಡಲು ಮುಂದಾಗುತ್ತಾರೆ.
ವಾಮನ ರೂಪದಲ್ಲಿದ್ದ ವಿಷ್ಣು ತನ್ನ ಒಂದು ಹೆಜ್ಜೆಯನ್ನು ಭೂಮಿಯ ಮೇಲಿಟ್ಟಾಗ ಇಡೀ ಭೂಮಿ ಆತನ ಪಾದದ ಕೆಳಗೆ ಸೇರುತ್ತದೆ. ಅದೇ ಪ್ರಕಾರ ಆಕಾಶಕ್ಕೆ ಒಂದು ಹೆಜ್ಜೆ ಇಟ್ಟಾಗ ಅದೆಲ್ಲವೂ ಪಾದದ ಕೆಳಗೆ ಬಂದು ಸೇರುತ್ತವೆ. ಮೂರನೇ ಹೆಜ್ಜೆ ಎಲ್ಲಿ ಇಡೋದು ಎಂದು ವಾಮನ ರೂಪದ ವಿಷ್ಣು ಮಹಾಬಲಿಯಲ್ಲಿ ಕೇಳುವ ಸಂದರ್ಭದಲ್ಲಿ ಬಲಿಯು ತನ್ನ ತಲೆ ಮೇಲೆ ಇಡುವಂತೆ ಕೇಳಿಕೊಳ್ಳುತ್ತಾರೆ. ವಾಮನ ರೂಪದಲ್ಲಿ ವಿಷ್ಣುವೇ ಬಂದಿರುವುದಾಗಿ ಮಹಾಬಲಿಗೆ ತಿಳಿದ ಕಾರಣ ವಿಷ್ಣುವಿನಲ್ಲಿ ತನ್ನ ಪ್ರಜೆಗಳನ್ನು ನೋಡುವ ಆಸೆಯನ್ನು ವ್ಯಕ್ತಪಡಿಸುತ್ತಾನೆ.
ವಿಷ್ಣುವಿನ ಆಶೀರ್ವಾದ, ಬಲಿಯ ಪುನರಾಗಮನ
Dakshina Kannada,Karnataka
September 06, 2025 2:06 PM IST