ಇದು ಬಾಳೆ ಎಲೆಯ ಮೇಲೆ ಬಡಿಸುವ ಒಂದು ಬಹುಬಗೆಯ ಸಸ್ಯಾಹಾರಿ ಔತಣವಾಗಿದೆ, ಇದರಲ್ಲಿ ಅನ್ನ, ಸಾಂಬಾರು, ಅವಿಯಲ್, ಓಲನ್, ಉಪ್ಪಿನಕಾಯಿ, ರಸಂ, ಪಾಯಸಂ ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ಖಾದ್ಯಗಳನ್ನು ಬಡಿಸಲಾಗುತ್ತದೆ. ಈ ಊಟವು ಸಿಹಿ ಮತ್ತು ಖಾರದ ರುಚಿಗಳ ಸಮತೋಲನವನ್ನು ಹೊಂದಿರುತ್ತದೆ ಮತ್ತು ಕೇರಳದ ಪಾಕಶೈಲಿಯ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸುತ್ತದೆ.
ಅತ್ತ ಕೇರಳದಲ್ಲಿ ಓಣಂ ಸಂಭ್ರಮವಿದ್ದರೆ, ಇತ್ತ ಕೇರಳ ಗಡಿಯನ್ನು ಹಂಚಿಕೊಂಡಿರುವ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಓಣಂ ಸದ್ಯದ ವ್ಯವಸ್ಥೆಯೊಂದು ಪಾಕಪ್ರಿಯರ ಗಮನಸೆಳೆದಿದೆ. ಹೋಮ್ಲಿ ಬೈಟ್ಸ್ ಎನ್ನುವ ಪಾಕಶಾಲೆ ಪ್ರವೀಣರ ತಂಡ ಈ ಹೊಸ ಪ್ರಯೋಗವನ್ನು ಮಾಡಿದ್ದು, ಈ ಪ್ರಯತ್ನಕ್ಕೆ ಉತ್ತಮ ಸ್ಪಂದನೆಯೂ ದೊರೆತಿದೆ.
25 ಕ್ಕೂ ಹೆಚ್ಚು ಖಾದ್ಯ ಸವಿದು ಖುಷ್ ಆದ ಪುತ್ತೂರು ಜನ
ಕೇರಳ ಗಡಿಯನ್ನು ಹಂಚಿಕೊಂಡಿರುವ ಪುತ್ತೂರಿನಲ್ಲಿರುವ ಮಲಯಾಳಿಗಳು ಮತ್ತು ಮಲಯಾಳಂನ ಟಚ್ ಇರುವ ಜನರನ್ನು ಒಟ್ಟುಗೂಡಿಸಿ ಮತ್ತು ಕನ್ನಡಿಗರಿಗೆ ಓಣಂ ಸದ್ಯದ ಸವಿ ಉಣಬಡಿಸಬೇಕು ಎನ್ನುವ ಉದ್ದೇಶದಿಂದ ಈ ವಿಶಿಷ್ಟ ಊಟದ ವ್ಯವಸ್ಥೆ ಮಾಡಲಾಗಿದೆ. ಸುಮಾರು 25ಕ್ಕೂ ಮಿಕ್ಕಿದ ಐಟಂಗಳನ್ನು ಬಡಿಸಲಾಗಿದ್ದು, ಅನ್ನ, ಬೀಟ್ರೋಟ್ ಸಾಸಿವೆ, ಹಾಗಲಕಾಯಿ ಸಾಸಿವೆ, ಪಲ್ಯ, ಪುಳಿಯಿಂಜಿ, ಅವಿಲು, ಸಾಂಬಾರು, ಕೂಟುಕರಿ, ಕಾಳನ್, ಓಲನ್, ಸಾರು, ಮಜ್ಜಿಗೆ, ಹೆಸ್ರುಬೇಳೆ ಪಾಯಸ, ಅಡೆ ಪ್ರಥಮನ್, ಹಪ್ಪಳ, ಶರ್ಕರ ವರಟ್ಟಿ, ಚಿಪ್ಸ್, ಬಾಳೆಹಣ್ಣು, ಗಟ್ಟಿತೋವೆ, ತುಪ್ಪ, ಉಣ್ಣಿಯಪ್ಪ, ಮುಳ್ಳುಸೌತೆ ಸಳ್ಳಿ, ಹೋಳಿಗೆ, ಉಪ್ಪಿನಕಾಯಿ, ಉಪ್ಪು ಈ ಓಣಂ ಸದ್ಯದಲ್ಲಿ ಇದ್ದ ಐಟಂಗಳಾಗಿವೆ. ಓಣಂ ಊಟವನ್ನು ಭರ್ಜರಿಯಾಗಿ ಸವಿದ ಜನ ಫುಲ್ ಖುಷ್ ಆಗಿದ್ದಾರೆ.
Puttur,Dakshina Kannada,Karnataka
September 06, 2025 5:24 PM IST