OPPOs Grand Festive Sale: ಮತ್ತೆ ಬಂದಿದೆ OPPO ಗ್ರ್ಯಾಂಡ್ ಫೆಸ್ಟಿವ್ ಸೇಲ್: ಹೊಚ್ಚ ಹೊಸ F31 ಸಿರೀಸ್ ಮತ್ತು Reno14 ಸಿರೀಸ್ ಮನೆಗೆ ತನ್ನಿ, ₹10 ಲಕ್ಷ ಗೆಲ್ಲುವ ಅವಕಾಶ ಪಡೆಯಿರಿ! | oppo s grand fstive aale is back bring home the latest f31 series and reno14 and get a chance to win 10 Lakh rupees | ಮೊಬೈಲ್- ಟೆಕ್

OPPOs Grand Festive Sale: ಮತ್ತೆ ಬಂದಿದೆ OPPO ಗ್ರ್ಯಾಂಡ್ ಫೆಸ್ಟಿವ್ ಸೇಲ್: ಹೊಚ್ಚ ಹೊಸ F31 ಸಿರೀಸ್ ಮತ್ತು Reno14 ಸಿರೀಸ್ ಮನೆಗೆ ತನ್ನಿ, ₹10 ಲಕ್ಷ ಗೆಲ್ಲುವ ಅವಕಾಶ ಪಡೆಯಿರಿ! | oppo s grand fstive aale is back bring home the latest f31 series and reno14 and get a chance to win 10 Lakh rupees | ಮೊಬೈಲ್- ಟೆಕ್

ಮುಂಗಡ ವೆಚ್ಚದ ಬಗ್ಗೆ ಚಿಂತಿಸಬೇಡಿ; ಹೊಚ್ಚಹೊಸ F31 ಸಿರೀಸ್ ಮತ್ತು Reno14 ಸಿರೀಸ್ ಅನ್ನು ಮನೆಗೆ ತನ್ನಿ: ಎಂಟು ತಿಂಗಳವರೆಗೆ ಶೂನ್ಯ ಮುಂಗಡ ಪಾವತಿ ಮತ್ತು ಬಡ್ಡಿರಹಿತ EMI ಮತ್ತು 10% ಎಕ್ಸ್‌ಚೇಂಜ್ ಬೋನಸ್ ಬಗ್ಗೆ ಒಮ್ಮೆ ಯೋಚಿಸಿ. ನಿಮ್ಮ ಬಜೆಟ್‌ಗೆ ಯಾವ ಧಕ್ಕೆಯೂ ಆಗದಂತೆಯೇ ನಿಮ್ಮ ಪ್ರೀತಿಪಾತ್ರರು ಬಯಸುತ್ತಿರುವ ಸಾಧನವನ್ನು ಅವರಿಗೆ ಉಡುಗೊರೆ ನೀಡಿ. ಎಲ್ಲ OPPO ಮೊಬೈಲ್ ಫೋನ್‌ಗಳ ಮೇಲೆ ಕಡಿಮೆ ಮುಂಗಡ ಪಾವತಿಗಳು ಮತ್ತು ಕಡಿಮೆ EMI ಯಂತಹ ಅದ್ಭುತ ಆಯ್ಕೆಗಳ ಜೊತೆಗೆ 10% ವರೆಗೆ ತ್ವರಿತ ಕ್ಯಾಶ್‌ಬ್ಯಾಕ್ ಆನಂದಿಸಿ!

ಜೊತೆಗೆ, OPPO ಕಂಪನಿಯು SBI, HDFC, Kotak Mahindra, IDFC First, Bank of Baroda, Bajaj Finserv, TVS Credit, ಮತ್ತು HDB Financial Services ಸೇರಿದಂತೆ ಪ್ರಮುಖ ಬ್ಯಾಂಕ್‌ಗಳೊಂದಿಗೆ ಪಾಲುದಾರಿಕೆ ಹೊಂದಿರುವುದರಿಂದ ನೀವು EMI ಅಥವಾ EMI-ರಹಿತ ವಹಿವಾಟುಗಳ ನಡುವೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ, ಈ ಹಬ್ಬದ ಡೀಲ್‌ಗಳು OPPO ಇಂಡಿಯಾ ರಿಟೇಲ್ ಸ್ಟೋರ್‌ಗಳು, OPPO e-store, Flipkart, ಮತ್ತು Amazon ನಲ್ಲಿ ಇಂದಿನಿಂದ 31 ಅಕ್ಟೋಬರ್ 2025 ರವರೆಗೂ ಲಭ್ಯವಿದ್ದು, ನಿಮಗೆ ಅನುಕೂಲಕರವಾದ ಜಾಗದಲ್ಲೇ ನಿಮ್ಮ ಶಾಪಿಂಗ್ ಮಾಡಿಕೊಳ್ಳಬಹುದಾಗಿದೆ.

ಉಡುಗೊರೆಗಳು ಅನಿರೀಕ್ಷಿತವಾಗಿದ್ದಾಗ ಅದರ ಖುಷಿಯೇ ಬೇರೆ! ಇಲ್ಲಿನ ಪ್ರತಿ ಖರೀದಿಯೊಂದಿಗೆ ಇನ್ನೂ ದೊಡ್ಡದನ್ನು ಗೆಲ್ಲುವ ಅವಕಾಶ ನಿಮ್ಮದಾಗುತ್ತದೆ. My OPPO Exclusive Diwali Raffle ನಲ್ಲಿ 10 ಖರೀದಿದಾರರು ಅತ್ಯದ್ಭುತ ಉಡುಗೊರೆಯಾದ ₹10 ಲಕ್ಷ ನಗದು ಬಹುಮಾನವನ್ನು ಗೆಲ್ಲುತ್ತಾರೆ, ಮತ್ತು ಒಬ್ಬ ಅದೃಷ್ಟಶಾಲಿ ಗ್ರಾಹಕರು ಪ್ರತಿ ದಿನ ₹1 ಲಕ್ಷವನ್ನು ಗೆಲ್ಲುತ್ತಾರೆ. ಇದಲ್ಲದೆ Find X8, Reno14, F31 Pro, ಮತ್ತು Enco Buds 3 Pro ನಂತಹ ಪ್ರೀಮಿಯಂ OPPO ಉತ್ಪನ್ನಗಳನ್ನು ಗೆಲ್ಲುವ ಅವಕಾಶವೂ ಇದ್ದು, ಸಂತಸವು ಹೆಚ್ಚುತ್ತಲೇ ಸಾಗುತ್ತದೆ. ಇನ್ನೂ ಖುಷಿಯ ವಿಚಾರವೆಂದರೆ, ನಿಮಗಾಗಿ ವಿಸ್ತೃತ ವಾರಂಟಿಗಳು ಲಭ್ಯ, ಹಾಗೂ ಯಾರು ಖಾಲಿ ಕೈಯಲ್ಲಿ ಹೋಗದಂತೆ ನೋಡಿಕೊಳ್ಳಲು ಹೇರಳವಾದ ರಿವಾರ್ಡ್ ಪಾಯಿಂಟ್‌ಗಳೂ ಇವೆ.

ಇಂತಹ ಗ್ರ್ಯಾಂಡ್ ಆಫರ್‌ಗಳು ಕಣ್ಣೆದುರಿರುವಾಗ, ಉಳಿದಿರುವ ಏಕೈಕ ಪ್ರಶ್ನೆಯೆಂದರೆ: ಈ ದೀಪಾವಳಿಗೆ ನೀವು ಯಾರಿಗೆ ಉಡುಗೊರೆ ನೀಡುತ್ತಿದ್ದೀರಿ? ಕುಟುಂಬದಲ್ಲಿನ ಮನೋರಂಜಕರಿಗಾಗಿರಲಿ, ಎಲ್ಲರ ವೇಳಾಪಟ್ಟಿಯನ್ನು ನಿರ್ವಹಿಸುವ ಮಲ್ಟಿ ಟಾಸ್ಕರ್‌ಗೆ ಆಗಿರಲಿ, ಅಥವಾ ಕಂಟ್ರೋಲರ್ ಅನ್ನು ಕೆಳಗೇ ಇರಿಸದಂತಹ ಪ್ರೋ ಗೇಮರ್‌ಗೆ ಆಗಿರಲಿ, ನಿಮ್ಮ ಪಟ್ಟಿಯಲ್ಲಿರುವ ಪ್ರತಿಯೊಬ್ಬರಿಗೂ ಸರಿಹೊಂದುವಂತಹ ಸಾಧನಗಳನ್ನು OPPO ನಿಮ್ಮೆದುರು ಇರಿಸುತ್ತದೆ.

OPPO F31 ಸಿರೀಸ್: ಹಬ್ಬದ ಋತುವಿನಲ್ಲಿ ಪರ್ಫೆಕ್ಟ್ ಉಡುಗೊರೆ

ಸದಾ ಫೋನ್ ಅನ್ನು ಕೈಯಿಂದ ಜಾರಿ ಬೀಳಿಸಿಕೊಳ್ಳುವ ಅಜ್ಜನಿಗಾಗಿರಲಿ, ಫೋನ್‌ ಅನ್ನು ಹಿಂದಿನ ಜೇಬಿನಲ್ಲಿ ಇಟ್ಟುಕೊಂಡೇ ಕುಳಿತುಕೊಳ್ಳುವ ಕಸಿನ್‌ಗಾಗಿರಲಿ, ಅಥವಾ ಜೀವನವನ್ನು ಬೈಕ್‌ ಮೇಲೆಯೇ ಕಳೆಯುವ ಯುವ ಉದ್ಯಮಿಗಾಗಿರಲಿ, ಈ OPPO F31 ಸಿರೀಸ್ 5G ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಆಲ್-ರೌಂಡರ್ ಆಗಿದೆ. IP66/68/69 ರಕ್ಷಣೆಗಳೊಂದಿಗೆ ಮತ್ತು ಗಟ್ಟಿಮುಟ್ಟಾದ, ತೆಳುವಾದ ವಿನ್ಯಾಸದೊಂದಿಗೆ ಬಲಿಷ್ಠವಾಗಿ ನಿರ್ಮಿಸಲಾಗಿರುವ ಈ ಫೋನ್‌ಗಳು ಮಳೆಯ ಹನಿಗಳು, ಎಣ್ಣೆಯುಕ್ತ ಕೈಬೆರಳುಗಳಿಂದ ಮಾಡುವ ಸ್ವೈಪ್‌ಗಳು, ಜನಸಂದಣಿಯ ಮಾರುಕಟ್ಟೆಗಳಲ್ಲಿನ ಡಿಕ್ಕಿಗಳು ಮತ್ತು ದೈನಂದಿನ ಆಘಾತಗಳಂತಹ ತೊಂದರೆಗಳನ್ನು ಸಲೀಸಾಗಿ ನಿಭಾಯಿಸುತ್ತವೆ. ಹಾಗಾಗಿ, ನೀವು ಇದನ್ನು ಯಾರಿಗಾದರೂ ಉಡುಗೊರೆ ನೀಡಿ, ಇದು ಎಲ್ಲರಿಗೂ ಪರಿಪೂರ್ಣವಾಗಿದೆ.

OPPO F31 ಸಿರೀಸ್ 5GOPPO F31 Pro+ 5G, OPPO F31 Pro 5G ಮತ್ತು OPPO F31 5G – ಎಲ್ಲರಿಗೂ ಉಪಯುಕ್ತವಾಗುವಂತೆ ನಿರ್ಮಿಸಲಾದ ಸಾಧನಗಳಾಗಿವೆ. ಈ ಸಿರೀಸ್‌ನ ಫೋನ್‌ಗಳು ಅವುಗಳ ಅತ್ಯದ್ಭುತ ಲುಕ್‌ಗೆ ತಕ್ಕಂತೆಯೇ ಕಾರ್ಯವೈಖರಿಯನ್ನೂ ಹೊಂದಿದ್ದು, ಹಬ್ಬಗಳ ಸಮಯದಲ್ಲಿ ಮೊಬೈಲ್‌ನ ಮೇಲೆ ಬೀಳುವ ದ್ರವ ಪದಾರ್ಥಗಳನ್ನು ಮತ್ತು ಆಕಸ್ಮಿಕವಾಗಿ ಸುರಿಯುವ ಮಳೆಯನ್ನೂ ತಡೆದುಕೊಳ್ಳುವಂತಹ ಗಟ್ಟಿಮುಟ್ಟಾದ ವಿನ್ಯಾಸ, ವಿರಾಮವೇ ಇಲ್ಲದ ನಿಮ್ಮ ದಿನಚರಿಗೆ ಹೇಳಿಮಾಡಿಸಿದ ಸುಪರ್ ಸ್ಮೂತ್ ಪರ್ಫಾರ್ಮೆನ್ಸ್ ಮತ್ತು ಯಾವುದೇ ಉಡುಪಿಗೆ ತತ್‌ಕ್ಷಣದ ಮೆರಗು ನೀಡುವ ರೋಮಾಂಚಕ ಬಣ್ಣಗಳನ್ನು ಹೊಂದಿವೆ. ನಿಮಗೆ ಇಷ್ಟವಾದ ಬಣ್ಣವನ್ನು ಆರಿಸಿಕೊಳ್ಳಿ: F31 Pro+ ನಲ್ಲಿ Festive Pink, Gemstone Blue, Himalayan White; F31 Pro ನಲ್ಲಿ Desert Gold, Space Grey; ಮತ್ತು F31 ನಲ್ಲಿ Midnight Blue, Cloud Green, Bloom Red.

ಈ ಸಿರೀಸ್ ತನ್ನೊಳಗೆ ಅಗಾಧ ಶಕ್ತಿಯನ್ನು ಹೊಂದಿದ್ದು, OPPO F31 Pro+ 5G  ಫೋನ್ Snapdragon® 7 Gen 3 ಅನ್ನು ಬಳಸಿದರೆ, OPPO F31 Pro 5G  ಫೋನ್ MediaTek Dimensity 7300 Energy ಅನ್ನು ಹೊಂದಿದೆ – ಭಾರೀ ಪ್ರಮಾಣದ ಮಲ್ಟಿಟಾಸ್ಕಿಂಗ್ ಸಮಯದಲ್ಲೂ ಸ್ಪಂದನಶೀಲ, ಸ್ಥಿರ ಕಾರ್ಯನಿರ್ವಹಣೆಯನ್ನು ಒದಗಿಸುವುದಕ್ಕಾಗಿ ಇವೆರಡನ್ನೂ OPPO ಡ್ಯುಯಲ್ ಇಂಜಿನ್ ಸ್ಮೂತ್‌ನೆಸ್ ಸಿಸ್ಟಂನೊಂದಿಗೆ ಆಪ್ಟಿಮೈಸ್ ಮಾಡಲಾಗಿದೆ. ದೀರ್ಘಕಾಲದವರೆಗೆ ಅತ್ಯುತ್ತಮ ಗುಣಮಟ್ಟವನ್ನು ನಿಮಗೆ ಒದಗಿಸಲು ಇದು ಬದ್ಧವಾಗಿದ್ದು, 72 ತಿಂಗಳ ಸುಗಮ ಕಾರ್ಯನಿರ್ವಹಣೆಯ ಗ್ಯಾರಂಟಿಯನ್ನೂ ನೀಡುತ್ತದೆ.

ಭಾರತದಲ್ಲಿ ವಾತಾವರಣವು ಸಾಮಾನ್ಯವಾಗಿ ತೀವ್ರ ಬಿಸಿಯಾಗಿರುತ್ತದೆ – ಗಿಜಿಗುಡುವ ಮಾರುಕಟ್ಟೆಗಳಲ್ಲಿನ ಓಡಾಟದಿಂದ ಹಿಡಿದು ನವರಾತ್ರಿ-ದೀಪಾವಳಿ ಸಂಭ್ರಮಗಳ ನಿರಂತರ ಕಾರ್ಯಕ್ರಮಗಳವರೆಗೆ – ಇಂತಹ ಸಮಯದಲ್ಲಿ ಶಾಖ ನಿಯಂತ್ರಣವು ಮಹತ್ವದ ಪಾತ್ರ ವಹಿಸುತ್ತದೆ. ಈ ಎಲ್ಲ ಮಾದರಿಯ ಫೋನ್‌ಗಳೂ ದೊಡ್ಡ ವೇಪರ್ ಚೇಂಬರ್‌ಗಳು ಮತ್ತು ವಿಸ್ತರಿತ ಗ್ರ್ಯಾಫೈಟ್ ಪದರಗಳ ಸುಧಾರಿತ ಕೂಲಿಂಗ್ ಸ್ಟಾಕ್ ಅನ್ನು ಬಳಸುತ್ತವೆ; OPPO F31 Pro+ 5Gಯಲ್ಲಿ, ಶಾಖ ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಸಿಸ್ಟಂ ಅನ್ನು 5,219 mm² VC ಯೊಂದಿಗೆ ಉನ್ನತೀಕರಿಸಲಾಗಿದ್ದು, ಇದು ಫೋನ್ ತೀವ್ರವಾಗಿ ಕಾರ್ಯನಿರ್ವಹಿಸುತ್ತಿದ್ದರೂ ತಂಪಾಗಿರಲು ಮತ್ತು ಸ್ಪಂದನಶೀಲವಾಗಿರಲು ಸಹಾಯ ಮಾಡುತ್ತದೆ.

ಈಗ ಗಟ್ಟಿತನದ ವಿಷಯಕ್ಕೆ ಬರೋಣ. ಈ ಸಿರೀಸ್‌ನ ಫೋನ್‌ಗಳು IP66/IP68/IP69 ರೇಟಿಂಗ್‌ಗಳನ್ನು ಹೊಂದಿವೆ, ಅದರರ್ಥ ಮಳೆ ಬರಲಿ, ಧೂಳಿರಲಿ, ಮತ್ತು ಅಧಿಕ ಒತ್ತಡದ ನೀರು ತಾಗಲಿ, ಇವುಗಳು ಯಾವುದಕ್ಕೂ ಜಗ್ಗುವುದಿಲ್ಲ. MIL-STD-810H ಮಿಲಿಟರಿ-ದರ್ಜೆಯ ಬಾಳಿಕೆಯನ್ನು ಹೊಂದಿರುವ 360° Armour Body ಆಘಾತ ನಿರೋಧಕತೆಯನ್ನು ಒದಗಿಸಿದರೆ, 18 ಸಾಮಾನ್ಯ ಚೆಲ್ಲುವಿಕೆಗಳ (ಚಹಾ, ಎಣ್ಣೆ, ಕೋಲಾ ಮುಂತಾದವು) ಪ್ರತಿಯಾಗಿ ನೀಡುವ ರಕ್ಷಣೆಯು, ಜೀವನವು ಗೊಂದಲಮಯವಾದರೂ ಸಂಭ್ರಮವು ಮುಂದುವರಿಯುವುದಕ್ಕೆ ಅನುವು ಮಾಡಿಕೊಡುತ್ತದೆ.

ಇದೆಲ್ಲದಕ್ಕೂ ಶಕ್ತಿ ತುಂಬಲು, ಇಡೀ ಶ್ರೇಣಿಯ ಫೋನ್‌ಗಳು 7,000 mAh ಬ್ಯಾಟರಿಯನ್ನು ಹೊಂದಿದ್ದು, ಪೂಜೆ ಮತ್ತು ಪಾರ್ಟಿಗಳಂತಹ ಸಂದರ್ಭಗಳ ನಡುವೆ ವೇಗದ ಚಾರ್ಜಿಂಗ್‌ಗಾಗಿ 80W SUPERVOOC™ ಫ್ಲ್ಯಾಶ್ ಚಾರ್ಜಿಂಗ್‌ ಒದಗಿಸಲಾಗಿದೆ. ದೀರ್ಘಕಾಲದವರೆಗೆ ನ್ಯಾವಿಗೇಶನ್ ಬಳಸುವಾಗ ಅಥವಾ ಗೇಮಿಂಗ್ ಸೆಷನ್‌ಗಳ ಸಮಯದಲ್ಲಿ ಶಾಖವನ್ನು ಕಡಿಮೆ ಮಾಡಲು ಬೈಪಾಸ್ ಚಾರ್ಜಿಂಗ್ ನೆರವಾಗುತ್ತದೆ, ಮತ್ತು ಬೇರೊಬ್ಬರ ಬ್ಯಾಟರಿಯು ಖಾಲಿಯಾಗುತ್ತ ಬಂದಾಗ ಚಾರ್ಜ್ ಅನ್ನು ಹಂಚಿಕೊಳ್ಳಲು ರಿವರ್ಸ್ ಚಾರ್ಜಿಂಗ್ ಅನುವು ಮಾಡಿಕೊಡುತ್ತದೆ.

ಸುಂದರ ಕ್ಷಣಗಳನ್ನು ಸೆರೆಹಿಡಿಯುವ ವಿಷಯಕ್ಕೆ ಬಂದರೆ, ಈ ಸಿರೀಸ್ ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳೆರಡರಲ್ಲೂ ಸುಸ್ಪಷ್ಟವಾದ ಚಿತ್ರಗಳನ್ನು ನಿಮ್ಮ ಮುಂದಿರಿಸುವ ಸಾಮರ್ಥ್ಯವನ್ನು ಹೊಂದಿದೆ. OPPO F31 Pro+ 5G ಮತ್ತು OPPO F31 Pro 5G ಫೋನ್‌ಗಳು OIS ಹೊಂದಿರುವ 50MP ಮುಖ್ಯ ಕ್ಯಾಮೆರಾ, 2MP ಮೊನೊಕ್ರೋಮ್ ಕ್ಯಾಮೆರಾ, ಮತ್ತು ಹಗಲು ರಾತ್ರಿಯೆಂಬ ಭೇದಭಾವವಿಲ್ಲದೆ ಸುಸ್ಪಷ್ಟ ಚಿತ್ರಗಳನ್ನು ನೀಡುವ 32MP ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿವೆ. OPPO F31 5G ಫೋನ್ 50MP ಹಿಂಭಾಗದ ಕ್ಯಾಮೆರಾ, 2MP ಪೋರ್ಟ್ರೆಟ್ ಕ್ಯಾಮೆರಾ, ಮತ್ತು 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದ್ದು, ಇದು ದೈನಂದಿನ ಚಿತ್ರಗಳನ್ನು ಅತ್ಯುತ್ತಮವಾಗಿ ಕಾಣುವಂತೆ ಮಾಡುತ್ತದೆ. ಸಿರೀಸ್‌ನ ಎಲ್ಲ ಫೋನ್‌ಗಳಲ್ಲೂ ಪ್ರಸ್ತುತವಿರುವ Dual-View Video ಮತ್ತು Snapshot mode ನಂತಹ ಸ್ಮಾರ್ಟ್ ಟೂಲ್‌ಗಳು ಸ್ಟೋರಿಯ ಎರಡೂ ಬದಿಗಳನ್ನು ಚಿತ್ರೀಕರಿಸಲು ಮತ್ತು ಮೊದಲ ಪ್ರಯತ್ನದಲ್ಲಿಯೇ ಚಿತ್ರವನ್ನು ಸುಂದರವಾಗಿ ಪಡೆದುಕೊಳ್ಳಲು ನೆರವಾಗುತ್ತವೆ.

ದೀಪಾವಳಿಗೆ ಇದು ಫರ್ಫೆಕ್ಟ್ ಉಡುಗೊರೆ ಹೇಗೆ:

ಎಲ್ಲ ರೀತಿಯ ಬಳಕೆದಾರರಿಗೂ ಸರಿಹೊಂದುವ ಆಲ್-ರೌಂಡರ್ ಇದಾಗಿದ್ದು, OPPO ಗ್ರ್ಯಾಂಡ್ ಫೆಸ್ಟಿವ್ ಸೇಲ್‌ ನಿಂದಾಗಿ ಇನ್ನಷ್ಟು ಕೈಗೆಟುಕುವ ದರದಲ್ಲಿ ಲಭ್ಯವಿದೆ. ಹಬ್ಬದ ವಿಶೇಷವಾಗಿ ₹20,700 ಬೆಲೆಯಿಂದ ಪ್ರಾರಂಭವಾಗುವ ಈ ಫೋನ್‌ಗಳನ್ನು ಉಡುಗೊರೆ ನೀಡುವುದರಿಂದ, ಅತ್ಯದ್ಭುತ ಫೋನ್ ಅವರದ್ದಾಗುತ್ತದೆ ಮತ್ತು ವಿಶ್ವಾಸಾರ್ಹ ಸಾಧನವನ್ನು ನೀಡಿದ ನೆಮ್ಮದಿ ನಿಮ್ಮದಾಗುತ್ತದೆ.

OPPO Reno14: ಸ್ಟೋರಿಟೆಲ್ಲರ್ ಮತ್ತು ಅನ್ವೇಷಕರ ಪ್ರಯಾಣದ ಪರಿಪೂರ್ಣ ಸಂಗಾತಿಯಾಗಿರುವ AI ಕ್ಯಾಮೆರಾ.

ಪ್ರತಿ ಕುಟುಂಬದಲ್ಲೂ ಒಬ್ಬರು ಅಂತಹವರು ಇರುತ್ತಾರೆ. ಒಂದು ರಂಗೋಲಿಯನ್ನೂ ಪೋಸ್ಟರ್‌ನಂತೆ ಫ್ರೇಮ್ ಮಾಡುವ ಸ್ಟೋರಿಟೆಲ್ಲರ್, ಮತ್ತು ಕಾರ್ಡ್ ಆಟಗಳ ನಂತರ ದೀಪಾವಳಿ ಸಂಭ್ರಮವನ್ನು ಇನ್ನಷ್ಟು ಅನ್ವೇಷಿಸುವ, ಸಂಬಂಧಿಕರನ್ನು ಭೇಟಿ ಮಾಡಲು ರೋಡ್ ಟ್ರಿಪ್‌ಗಳನ್ನು ಆಯೋಜಿಸುವ, ಅಥವಾ ಪಟಾಕಿಗಳಿಂದ ಹೊರಹೊಮ್ಮುವ ರಂಗುರಂಗಿನ ಬೆಳಕನ್ನು  ಚಿತ್ರೀಕರಿಸಲು ಪರ್ಫೆಕ್ಟ್ ಸ್ಪಾಟ್ ಅನ್ನು ಹುಡುಕುವ ಅನ್ವೇಷಕರು. ಅಂತಹವರಿಗೆ OPPO Reno14 ಅನ್ನು ಉಡುಗೊರೆ ನೀಡಿ: ಟ್ರಿಪ್ ಅನ್ನು ಸೆರೆಹಿಡಿದು ಕಥೆಯನ್ನು ಎಲ್ಲರಿಗೂ ತಿಳಿಸಲು ಅನುವು ಮಾಡಿಕೊಡುವ ಪಾಕೆಟ್ ಟ್ರಾವೆಲ್ ಪಾರ್ಟ್‌ನರ್ ಇದಾಗಿದೆ.

3.5x ಟೆಲಿಫೋಟೋ ಲೆನ್ಸ್ ಮತ್ತು ಮುಖ್ಯ, ಟೆಲಿಫೋಟೋ ಮತ್ತು ಮುಂಭಾಗದ ಕ್ಯಾಮೆರಾಗಳಲ್ಲಿ 60fps ನಲ್ಲಿ 4K HDR ವೀಡಿಯೊ ಸೌಲಭ್ಯಗಳನ್ನು ಹೊಂದಿರುವ OPPO Reno14 50MP ಹೈಪರ್‌ಟೋನ್ ಟ್ರಿಪಲ್ ಕ್ಯಾಮೆರಾವು ದೀಪಗಳು, ನಗರದ ದೃಶ್ಯಗಳು ಮತ್ತು ಆಕಾಶಕ್ಕೆ ಲಗ್ಗೆಯಿಡುವ ಪಟಾಕಿಯ ದೃಶ್ಯಾವಳಿಗಳನ್ನು ಸಿನಿಮೀಯ ಮಾದರಿಯಲ್ಲಿ ಸೆರೆಹಿಡಿದು ನಿಮ್ಮೆದುರು ಇರಿಸುತ್ತದೆ. ಈಜುಕೊಳಗಳ ಮಧುರ ಕ್ಷಣಗಳಿಂದ ಹಿಡಿದು ಬೀಚ್ ಟ್ರಿಪ್‌ಗಳ ಮರೆಯಲಾರದ ಕ್ಷಣಗಳವರೆಗೆ, Underwater Photography Mode ನೀರಿನಾಳದ ನೆನಪುಗಳನ್ನು ಸೆರೆಹಿಡಿಯುತ್ತ ಸಾಗುತ್ತದೆ. ಮತ್ತು ನೀವು ಪ್ರಯಾಣದಲ್ಲಿರುವಾಗ, AI Editor 2.0 ಟೂಲ್ AI Perfect Face, AI Recompose, AI Best Face, AI Unblur, AI Eraser ಮತ್ತು AI Reflection Remover ಮೂಲಕ ಚಿತ್ರಗಳಲ್ಲಿರುವ ಗೊಂದಲಗಳನ್ನು ಸರಾಗವಾಗಿ ಮತ್ತು ತ್ವರಿತವಾಗಿ ನಿವಾರಿಸಿ – ಮುಂದಿನ ನಿಲ್ದಾಣಕ್ಕೆ ಹೋಗುವ ಮೊದಲೇ ಚಿತ್ರಗಳನ್ನು ಹಂಚಿಕೊಳ್ಳಲು ಸಿದ್ಧವಾಗಿರಿಸುತ್ತದೆ.

ಪ್ರಯಾಣಕ್ಕೆ ಹೊರಟಿದ್ದೀರಿ ಎಂದರೆ ವಿಶ್ವಾಸಾರ್ಹ ಕಾರ್ಯಕ್ಷಮತೆ ಮತ್ತು ಸಿಗ್ನಲ್ ಹೊಂದಿರುವ ಸಂಗಾತಿ ನಿಮ್ಮ ಜೊತೆಗಿರಲೇಬೇಕು. MediaTek Dimensity 8350 (30% ಸುಧಾರಿತ ದಕ್ಷತೆಯೊಂದಿಗೆ) ಚಿತ್ರೀಕರಣ, ಎಡಿಟಿಂಗ್ ಮತ್ತು ನ್ಯಾವಿಗೇಶನ್ ಅನ್ನು ಸುಲಲಿತವಾಗಿಸಿದರೆ, AI HyperBoost 2.0 ಅನುಭವವನ್ನು ಸುಗಮವಾಗಿಸುತ್ತದೆ ಮತ್ತು AI LinkBoost 3.0 ಜನದಟ್ಟಣೆಯ ಪ್ರದೇಶಗಳಲ್ಲಿ ಅಥವಾ ಆಫ್ ಬೀಟ್ ದಾರಿಗಳಲ್ಲಿ ಸ್ಥಿರವಾದ ಸಂಪರ್ಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ಏರೋಸ್ಪೇಸ್ದರ್ಜೆಯ ಅಲ್ಯೂಮಿನಿಯಂ ಫ್ರೇಮ್, Gorilla® Glass 7i ಮತ್ತು IP66/68/69 ರಕ್ಷಣೆಯೊಂದಿಗೆ ನಿರ್ಮಿಸಲಾಗಿದ್ದು, ಈ ವೈಶಿಷ್ಟ್ಯಗಳು ಫೋನ್ ಅನ್ನು ಆಲ್ರೌಂಡ್ ಆರ್ಮರ್‌ ಆಗಿ ರಕ್ಷಿಸುತ್ತದೆ, ಇಷ್ಟೆಲ್ಲ ರಕ್ಷಣೆಯ ಮಹಾಪೂರವೇ ಇದ್ದರೂ, ಕೈಗೆ ಒಂದಿನಿತೂ ಭಾರವೆನಿಸುವುದಿಲ್ಲ. ನಿಮ್ಮ ಪಯಣಕ್ಕೆ ತಕ್ಕ ಶೈಲಿಯನ್ನು ಆರಿಸಿಕೊಳ್ಳಿ: ಫಾರೆಸ್ಟ್ ಗ್ರೀನ್, ಪರ್ಲ್ ವೈಟ್ ಅಥವಾ ಮಿಂಟ್ ಗ್ರೀನ್.

ದಿನವಿಡೀ ಹೊರಗಡೆಯೇ ಇರುತ್ತೀರಾ? ಚಿಂತಿಸುವ ವಿಷಯವೇ ಇಲ್ಲ. ನಿಮ್ಮ ಫೋನ್‌ನಲ್ಲಿ ಅಡಕವಾಗಿರುವ 6000mAh ಸಾಮರ್ಥ್ಯದ 5 ವರ್ಷಗಳ ಬಾಳಿಕೆ ಬರುವ ಬ್ಯಾಟರಿಯು 80W SUPERVOOC™ ಚಾರ್ಜಿಂಗ್‌ನೊಂದಿಗೆ ನೋಡನೋಡುತ್ತಿದ್ದಂತೆ ನಿಮ್ಮನ್ನು 100% ಗೆ ತಲುಪಿಸುತ್ತದೆ. GenAI ಇಂಟಿಗ್ರೇಶನ್ ಹೊಂದಿರುವ ColorOS 15 ಮತ್ತು AI Toolbox 2.0 (AI Mind Space, AI VoiceScribe ಸೇರಿದಂತೆ) ಟೂಲ್‌ಗಳು ದೈನಂದಿನ ಜೀವನವನ್ನು ಇನ್ನಷ್ಟು ಸುಗಮವಾಗಿಸುತ್ತವೆ.

ದೀಪಾವಳಿಗೆ ಇದು ಪರ್ಫೆಕ್ಟ್ ಏಕೆ:

ಏಕೆಂದರೆ ಉತ್ತಮ ಸ್ಟೋರಿಗಳಿಗಾಗಿ ಉತ್ತಮ ಕ್ಯಾಮರಾಗಳು ಬೇಕೇಬೇಕು! ಈ ದೀಪಾವಳಿಯಲ್ಲಿ OPPO ಗ್ರ್ಯಾಂಡ್ ಫೆಸ್ಟಿವ್ ಸೇಲ್‌ನೊಂದಿಗೆ, ಪ್ರೀಮಿಯಂ ಸ್ಟೋರಿಟೆಲ್ಲಿಂಗ್ ಈಗ ಯಾವುದೇ ಮುಂಗಡ ಪಾವತಿ ಇಲ್ಲದೆ, ಬಡ್ಡಿರಹಿತ EMIನೊಂದಿಗೆ ಮತ್ತು 10% ಎಕ್ಸ್‌ಚೇಂಜ್ ಬೋನಸ್‌ನೊಂದಿಗೆ, ಹಬ್ಬದ ವಿಶೇಷ ಬೆಲೆಯಾದ ಕೇವಲ 34,999 ರಿಂದ ಪ್ರಾರಂಭವಾಗುತ್ತದೆ.

OPPO A5 ಸಿರೀಸ್: ಕ್ಯಾಂಪಸ್ ಹೀರೋಗಳಿಗಾಗಿ ಪರ್ಫೆಕ್ಟ್ ಗಿಫ್ಟ್

ಬೆಳಗ್ಗೆ 9ಕ್ಕೆ ಉಪನ್ಯಾಸ, ಮಧ್ಯಾಹ್ನ 12ಕ್ಕೆ ಲ್ಯಾಬ್, ಸಂಜೆ 5ಕ್ಕೆ ಕ್ಲಬ್ ಮೀಟಿಂಗ್, ರಾತ್ರಿ 8ಕ್ಕೆ ಕ್ಯಾಂಪಸ್ ಫೆಸ್ಟ್ – ಇದೆಲ್ಲದರ ನಡುವೆ ನೋಟ್ಸ್ ಸ್ಕ್ಯಾನ್ ಮಾಡಬೇಕು, ರೀಲ್ಸ್ ಶೂಟ್ ಮಾಡಬೇಕು ಮತ್ತು ಮನೆಗೆ ಕರೆ ಮಾಡಬೇಕು. ಇಂತಹ ದಿನಗಳಿಗಾಗಿಯೇ OPPO A5 ಸಿರೀಸ್ ಅನ್ನು ನಿರ್ಮಿಸಲಾಗಿದ್ದು, ಇದು ಕೇವಲ ಕಣ್ಮನ ಸೆಳೆಯುವುದಷ್ಟೇ ಅಲ್ಲ; ಗಟ್ಟಿಮುಟ್ಟಾಗಿ, ಸ್ಮಾರ್ಟ್ ಆಗಿ ಇದ್ದು, ಕ್ಯಾಂಪಸ್ ಜೀವನಕ್ಕೆ ಸದಾ ಸಿದ್ಧವಾಗಿದೆ.

ನೈಜ-ಜೀವನದ ಸವಾಲುಗಳನ್ನು ಎದುರಿಸಲು ವಿನ್ಯಾಸಗೊಳಿಸಲಾದ ಈ ಸಿರೀಸ್, 360° ಆರ್ಮರ್ ಬಾಡಿ ಮತ್ತು ಸ್ಪಾಂಜ್ ಬಯೋನಿಕ್ ಕುಶನಿಂಗ್‌ನೊಂದಿಗೆ ಮಿಲಿಟರಿಗ್ರೇಡ್ ಗಟ್ಟಿತನವನ್ನು ಹೊಂದಿದ್ದು, ಇದು ಬ್ಯಾಕ್‌ಪ್ಯಾಕ್‌ನಲ್ಲಿದ್ದಾಗ ಎದುರಾಗುವ ಆಘಾತಗಳನ್ನು ಮತ್ತು ಟೇಬಲ್‌ನಿಂದ ಕೆಳಗೆ ಬಿದ್ದಾಗ ಆಗುವ ಹೊಡೆತವನ್ನು ಏನೂ ಆಗಲೇ ಇಲ್ಲ ಎಂಬಂತೆ ತಡೆದುಕೊಳ್ಳುತ್ತದೆ. IP65, IP66, IP68, ಮತ್ತು IP69 ರೇಟಿಂಗ್‌ಗಳನ್ನು ಹೊಂದಿರುವ ಇದು ಆಕಸ್ಮಿಕ ಮಳೆ, ಬಸ್ ಪ್ರಯಾಣದ ಧೂಳು, ಮತ್ತು ಕ್ಯಾಂಟೀನ್‌ನಲ್ಲಿ ಚೆಲ್ಲುವ ದ್ರವಗಳಂತಹ ಸವಾಲುಗಳನ್ನೂ ಸಮರ್ಥವಾಗಿ ನಿಭಾಯಿಸುತ್ತದೆ – ವಿದ್ಯಾರ್ಥಿಯು ನಿಜವಾಗಿಯೂ ನಂಬಿಕೆಯಿಡಬಲ್ಲ ವಿಶ್ವಾಸಾರ್ಹತೆ.

ಬ್ಯಾಟರಿ ಖಾಲಿಯಾಗಬಹುದೆಂಬ ಯೋಚನೆಯೇ? ಇನ್ನು ಆ ಚಿಂತೆ ಬೇಡ. ಇದರ 6000mAh ಬ್ಯಾಟರಿಯು OPPO 5-ವರ್ಷ ಬ್ಯಾಟರಿ ಹೆಲ್ತ್ ಭರವಸೆಯೊಂದಿಗೆ ಬೆಂಬಲಿತವಾಗಿದ್ದು, ಉಪನ್ಯಾಸಗಳು, ಸ್ಟಡಿ ಗ್ರೂಪ್‌ಗಳು, ಮತ್ತು ಫೆಸ್ಟ್ ರಾತ್ರಿಗಳಲ್ಲಿನ ದಿನವಿಡೀ (ಮತ್ತು ಇಡೀ ರಾತ್ರಿಯೂ) ಬಳಕೆಗೆ ಅತ್ಯುಪಯುಕ್ತವಾಗಿದೆ. ಅಲ್ಟ್ರಾಬ್ರೈಟ್ ಡಿಸ್‌ಪ್ಲೇಗಳು ಹೊರಗಿನ ಬೆಳಕಿನ ವಾತಾವರಣದಲ್ಲಿಯೂ ನೋಟ್ಸ್ ಓದಲು ಮತ್ತು ಸುಗಮವಾಗಿ ಸ್ಕ್ರೋಲಿಂಗ್ ಅನ್ನು ಮುಂದುವರಿಸಲು ಅನುವು ಮಾಡಿಕೊಟ್ಟರೆ, 36-ತಿಂಗಳ ಫ್ಲುಯೆನ್ಸಿ ಸರ್ಟಿಫಿಕೇಶನ್, ಫೈನಲ್ ಪರೀಕ್ಷೆಗಳ ನಂತರವೂ ಫೋನ್ ವೇಗವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಮುಂದುವರಿದು, A ಸಿರೀಸ್ AI-ಪವರ್ಡ್ ಕ್ಯಾಮರಾ ಟೂಲ್‌ಗಳ ಸಹಾಯದಿಂದ, ವೀಕೆಂಡ್ ಕಂಟೆಂಟ್‌ಗಳು ಹೆಚ್ಚಿನ ಎಡಿಟಿಂಗ್‌ ಬಯಸದೇ ಸುಂದರವಾಗಿ ಕಾಣುತ್ತವೆ.

ನಿಮ್ಮ ಅಗತ್ಯಕ್ಕೆ (ಮತ್ತು ಬಜೆಟ್‌ಗೆ) ಸೂಕ್ತವಾದ ಫೋನ್ ಅನ್ನು ಆಯ್ಕೆ ಮಾಡಿಕೊಳ್ಳಿ: ಸ್ಟೈಲಿಶ್ OPPO A5x, ಸ್ಮೂತ್ ಕನೆಕ್ಟಿವಿಟಿಗಾಗಿ OPPO A5x 5G, ಗಟ್ಟಿಮುಟ್ಟಾದ OPPO A5 5G, ಅಥವಾ ಅಲ್ಟ್ರಾ-ಟಫ್ OPPO A5 Pro 5G – ಇವುಗಳಲ್ಲಿ ಪ್ರತಿಯೊಂದು ಮಾದರಿಯೂ, ಫ್ಲ್ಯಾಗ್‌ಶಿಪ್ ಫೋನ್‌ಗಳ ವೈಶಿಷ್ಟ್ಯಗಳನ್ನು ದೀರ್ಘಕಾಲಿಕ ಬಾಳಿಕೆಯೊಂದಿಗೆ ನೀಡುತ್ತವೆ.

ದೀಪಾವಳಿಗೆ ಇದು ಪರ್ಫೆಕ್ಟ್ ಏಕೆ:

ಏಕೆಂದರೆ ವಿದ್ಯಾರ್ಥಿಗಳಿಗೆ ಫೋನ್ ಕ್ಯಾಂಪಸ್‌ನಲ್ಲಿ ದೀರ್ಘಕಾಲದವರೆಗೆ ಬಾಳಿಕೆಯೂ ಬರಬೇಕು, ಜೊತೆಗೆ ಆಕರ್ಷಕವಾಗಿಯೂ ಕಾಣಬೇಕು – ಹಾಗಾಗಿ ಈಗ ಉಡುಗೊರೆಯಾಗಿ ನೀಡುವುದು ಸುಲಭ. OPPO ಗ್ರ್ಯಾಂಡ್ ಫೆಸ್ಟಿವ್ ಸೇಲ್‌ನೊಂದಿಗೆ, A5 ಸಿರೀಸ್ 8,999 ರಿಂದ ಪ್ರಾರಂಭವಾಗುತ್ತದೆ.

ಗೇಮರ್‌ಗಳಿಗೆ ಮತ್ತು ಮನರಂಜನೆ ಇಷ್ಟಪಡುವವರಿಗೆ ಪರ್ಫೆಕ್ಟ್ ಉಡುಗೊರೆ: OPPO K ಸಿರೀಸ್

ಅವರು “ಇನ್ನೊಂದು ಗೇಮ್ ಅಷ್ಟೇ” ಎಂದು ಹೇಳುತ್ತಾರೆ – ಮೂರು ಗಂಟೆಗಳ ನಂತರವೂ ನೀವು ಇನ್ನೂ ಅವರನ್ನು ಕಾಯುತ್ತಲೇ ಇರುತ್ತೀರಿ. ನಿಮ್ಮ ಆತ್ಮೀಯರಾಗಿರುವ ಇಂತಹ ಗೇಮರ್‌ಗಾಗಿ, ಪರ್ಫೆಕ್ಟ್ ಉಡುಗೊರೆ ಎಂದರೆ OPPO K ಸಿರೀಸ್.

OPPO K ಸರಣಿ: ಗೇಮರ್‌ಗಳಿಗಾಗಿ ಪರ್ಫೆಕ್ಟ್ ಉಡುಗೊರೆ

OPPO K ಸಿರೀಸ್ ಅತ್ಯದ್ಭುತ ಕಾರ್ಯಕ್ಷಮತೆ ಮತ್ತು ಉತ್ಪಾದಕತೆಯನ್ನು ಹೊಂದಿದ್ದು — ಈಗ ಇದು ಮತ್ತಷ್ಟು ರೋಮಾಂಚನಕಾರಿಯಾಗಿದೆ! FlipKart ನಲ್ಲಿ ಫ್ಯಾನ್-ಫೇವರಿಟ್ ಆಗಿರುವ ಜನಪ್ರಿಯ OPPO K13x 5G ಈಗ ಬೆರಗುಗೊಳಿಸುವ ಎರಡು ಹೊಸ ಶೇಡ್‌ಗಳಲ್ಲಿ ಲಭ್ಯವಿದೆ: ಮಿಸ್ಟ್ ವೈಟ್ (ಪ್ರೀಮಿಯಂ ಲಿಮಿಟೆಡ್ ಎಡಿಷನ್) ಮತ್ತು ಬ್ರೀಜ್ ಬ್ಲೂ (1.7 ದಶಲಕ್ಷ K12x ಬಳಕೆದಾರರು ಇಷ್ಟಪಟ್ಟಿದ್ದು, ಅದನ್ನು ಈಗ K13x ಗೆ ತರಲಾಗಿದೆ). SGS ಗೋಲ್ಡ್ ಡ್ರಾಪ್ ಸರ್ಟಿಫಿಕೇಶನ್, ಮಿಲಿಟರಿ-ಗ್ರೇಡ್ ಬಾಳಿಕೆ, ಏರೋಸ್ಪೇಸ್ ಅಲಾಯ್ ಫ್ರೇಮ್, ಕ್ರಿಸ್ಟಲ್ ಶೀಲ್ಡ್ ಗ್ಲಾಸ್, ಮತ್ತು IP65 ರಕ್ಷಣೆಯೊಂದಿಗೆ ಗಟ್ಟಿಮುಟ್ಟಾಗಿ ನಿರ್ಮಿತವಾಗಿರುವ ಈ ಸಿರೀಸ್, ಆಘಾತಗಳನ್ನು ಲೆಕ್ಕಿಸುವುದೇ ಇಲ್ಲ. ಇದರ 120Hz HD+ ಡಿಸ್‌ಪ್ಲೇ, 45W ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಬೃಹತ್ 6000 mAh ಬ್ಯಾಟರಿ, ಮತ್ತು ಸ್ಮಾರ್ಟ್ AI ಕ್ಯಾಮೆರಾಗಳು, ಈ ಫೋನ್ ಅನ್ನು ಸ್ಟೈಲಿಶ್ ಆಗಿಸುವ ಜೊತೆಗೆ ಅತ್ಯಾಧುನಿಕ ಅನುಕೂಲಗಳನ್ನು ನೀಡುತ್ತದೆ.

ದೀಪಾವಳಿಗೆ ಇದು ಪರ್ಫೆಕ್ಟ್ ಏಕೆ:

ಏಕೆಂದರೆ ಗೇಮರ್‌ಗಳಿಗೆ “ಇನ್ನೊಂದು ಗೇಮ್ ಮಾತ್ರ” ಎನ್ನುವುದಕ್ಕಿಂತ ಹೆಚ್ಚು ಬೇಕಾಗಿರುತ್ತದೆ – ಅದಕ್ಕಾಗಿಯೇ ನಿರ್ಮಿಸಲಾದ ಫೋನ್ ದೊರಕಿದರೆ ಅವರ ಖುಷಿಗೆ ಎಲ್ಲೆಯೇ ಇರುವುದಿಲ್ಲ! FlipKart Big Billion Day Sale (ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2, 2025) ಸಮಯದಲ್ಲಿ, ನೀವು ಇದನ್ನು ಕೇವಲ 9,999 ಕ್ಕೆ ಪಡೆಯಬಹುದಾಗಿದೆ. ಅಂದರೆ, ಕನಸಿನ ಫೋನ್ ಗೇಮರ್‌ನ ಕೈಯಲ್ಲಿರುತ್ತದೆ, ಮತ್ತು “ಬೆಸ್ಟ್ ಗಿಫ್ಟರ್ ಎವರ್” ಬಿರುದು ನಿಮ್ಮದಾಗುತ್ತದೆ.

ಕಲಿಕಾಸಕ್ತರಿಗಾಗಿ ಮತ್ತು ವೃತ್ತಿಪರರಿಗಾಗಿ ಪರ್ಫೆಕ್ಟ್ ಉಡುಗೊರೆ: OPPO Pad SE

ಅವರು ಸೋಮವಾರ ಕ್ಲಾಸ್‌ನಲ್ಲಿರುತ್ತಾರೆ, ಮಂಗಳವಾರ ಮೂವಿ ಸ್ಟ್ರೀಮ್ ಮಾಡುತ್ತಿರುತ್ತಾರೆ, ಮತ್ತು ಬುಧವಾರ ಯಾವುದೋ ವಿಷಯದ ಕುರಿತು ಪ್ರೆಸೆಂಟೇಶನ್ ನೀಡುತ್ತಿರುತ್ತಾರೆ. ಸದಾ ತಂತ್ರಜ್ಞಾನದ ಜೊತೆಗೇ ಸಾಗುವ ಇಂತಹ ವ್ಯಕ್ತಿಗಳಿಗಾಗಿಯೇ OPPO Pad SE ಅನ್ನು ನಿರ್ಮಿಸಲಾಗಿದೆ. 11-ಇಂಚಿನ ಕೇರ್ ಡಿಸ್‌ಪ್ಲೇ ಇರುವುದರಿಂದ, ದೀರ್ಘಾವಧಿಯ ಅಧ್ಯಯನ ಅಥವಾ ಕೆಲಸದ ಅವಧಿಗಳಲ್ಲಿ ಕಣ್ಣುಗಳಿಗೆ ಆಯಾಸದ ಅನುಭವವೇ ಆಗುವುದಿಲ್ಲ. 9,340mAh ಬ್ಯಾಟರಿ ಎಂದರೆ ಉಪನ್ಯಾಸದ ನಡುವೆ ಅಥವಾ ಮೂವಿ ಸ್ಟ್ರೀಮಿಂಗ್ ನಡುವೆ ಚಾರ್ಜರ್‌ಗಾಗಿ ಹುಡುಕಾಟ ನಡೆಸುವ ಅಗತ್ಯವೇ ಇಲ್ಲ. ಮತ್ತು ಗೂಗಲ್ ಜೆಮಿನಿಯಿಂದ ಚಾಲಿತ AI ಪ್ರಾಡಕ್ಟಿವಿಟಿ ಟೂಲ್‌ಗಳೊಂದಿಗೆ, ಅವರು ಎಲ್ಲಿದ್ದರೂ ಸೃಜನಾತ್ಮಕವಾಗಿ ಯೋಚಿಸಬಹುದು, ಸಂಶೋಧನೆ ಮಾಡಬಹುದು ಮತ್ತು ಕೆಲಸ ಮಾಡಬಹುದು.

ದೀಪಾವಳಿಗೆ ಇದು ಪರ್ಫೆಕ್ಟ್ ಏಕೆ:

ಏಕೆಂದರೆ ಯಾರ ಕಲಿಕೆಯೂ, ಕೆಲಸವೂ ಮತ್ತು ಸ್ಟ್ರೀಮ್ ಮಾಡುವಿಕೆಯೂ ನಿಲ್ಲಬಾರದು! FlipKart Big Billion Day Sale ನಲ್ಲಿ 9,900 ರಿಂದ ಪ್ರಾರಂಭವಾಗುವ OPPO ಗ್ರ್ಯಾಂಡ್ ಫೆಸ್ಟಿವ್ ಸೇಲ್ ಬೆಲೆಯಲ್ಲಿ, ಈ ಉಡುಗೊರೆಯು ಹೇಳುತ್ತದೆ – “ನಿಮ್ಮ ಅವಿರತ ಕೆಲಸಗಳ ಬಗ್ಗೆ ನನಗೆ ಗೊತ್ತು – ಅದನ್ನು ಸುಲಭಗೊಳಿಸುವ ಅವಕಾಶ ಇಲ್ಲಿದೆ” ಎಂದು.

ಸಂಗೀತ ಪ್ರಿಯರಿಗಾಗಿ ಪರ್ಫೆಕ್ಟ್ ಉಡುಗೊರೆ: OPPO Enco Buds 3 Pro

ಸಂಗೀತಪ್ರಿಯರು ಅಡುಗೆಗೆ ಒಂದು ಪ್ಲೇಲಿಸ್ಟ್, ವರ್ಕೌಟ್‌ಗೆ ಇನ್ನೊಂದು ಪ್ಲೇಲಿಸ್ಟ್, ಮತ್ತು ಪ್ರತಿಯೊಂದು ಪಾರ್ಟಿಗೂ ಪರ್ಫೆಕ್ಟ್ ಆದ ಮತ್ತೊಂದಿಷ್ಟು ಪ್ಲೇಲಿಸ್ಟ್‌ಗಳನ್ನು ಹೊಂದಿರುತ್ತಾರೆ. ಪ್ರತಿಯೊಂದು ಸಂಭ್ರಮಕ್ಕೂ ಒಂದು ಹಿನ್ನೆಲೆ ಸಂಗೀತ ಬೇಕಾಗುತ್ತದೆ. OPPO Enco Buds 3 Pro ಅನ್ನು ಉಡುಗೊರೆಯಾಗಿ ನೀಡುವ ಮೂಲಕ, ನೀವು ಅವರ ಪ್ರತಿ ಪ್ರಯಾಣ, ಗೇಮಿಂಗ್ ಸೆಶನ್, ನಿರಂತರ ಅಧ್ಯಯನ ಮತ್ತು ಬಹುಪಾಲು ಇನ್ನಿತರ ಎಲ್ಲಾ ಸಂದರ್ಭಗಳಲ್ಲಿಯೂ ದೀರ್ಘಕಾಲದವರೆಗೆ ಬಾಳಿಕೆ ಬರುವ ಮಂತ್ರಮುಗ್ಧಗೊಳಿಸುವ ಧ್ವನಿಯನ್ನು ನೀಡುತ್ತಿದ್ದೀರಿ. 54 ಗಂಟೆಗಳ ಪ್ಲೇಬ್ಯಾಕ್, 12.4mm ಡೈನಾಮಿಕ್ ಡ್ರೈವರ್‌ಗಳು, ಮತ್ತು 47ms ಅಲ್ಟ್ರಾಲೋ ಲೇಟೆನ್ಸಿಯೊಂದಿಗೆ, ಇವುಗಳು ಚಿಕ್ಕದಾಗಿ ಮತ್ತು ಸ್ಟೈಲಿಶ್ ಆಗಿದ್ದು, ಸಂಗೀತಕ್ಕಾಗಿರಲಿ, ಮೂವಿಗಳಿಗಾಗಿರಲಿ ಅಥವಾ ಗೇಮಿಂಗ್‌ಗಾಗಿರಲಿ ಅಗಾಧ ಶಕ್ತಿಯನ್ನು ತಮ್ಮಲ್ಲಿರಿಸಿಕೊಂಡಿವೆ. ಅಷ್ಟೇ ಅಲ್ಲದೆ, IP55 ಬಾಳಿಕೆಯನ್ನೂ ಹೊಂದಿರುವುದರಿಂದ, ಜೀವನ ಸ್ವಲ್ಪ ಗೊಂದಲಮಯವಾದಾಗಲೂ ಅವು ಕೇರ್ ಮಾಡುವುದಿಲ್ಲ.

ದೀಪಾವಳಿಗೆ ಇದು ಪರ್ಫೆಕ್ಟ್ ಏಕೆ:

ಏಕೆಂದರೆ ಸರಿಯಾದ ಸಂಗೀತವು ಪ್ರತಿ ಸಂಭ್ರಮದ ಕ್ಷಣವನ್ನು ಇನ್ನಷ್ಟು ಅವಿಸ್ಮರಣೀಯ ಅನುಭವವನ್ನಾಗಿಸುತ್ತದೆ – ಮತ್ತು FlipKart Big Billion Day Sale ಸಮಯದಲ್ಲಿ 1499 ಹಬ್ಬದ ಬೆಲೆಯಲ್ಲಿ, ಅವುಗಳಿಗೆ ಮಾಡಬೇಕಾದ ಖರ್ಚು ಸಣ್ಣದು, ಸಿಗುವ ಆನಂದ ದೊಡ್ಡದು.

ನಿಮ್ಮ ಸುಂದರ ಕ್ಷಣವನ್ನು ರೂಪಿಸಿ: ಇಂದು ಖುಶಿಯನ್ನು ಉಡುಗೊರೆ ನೀಡಿ, ನಾಳೆ ನೆನಪುಗಳನ್ನು ಸೃಷ್ಟಿಸಿ!

ದೀಪಾವಳಿ ಅಂದರೆ ಕೇವಲ ದೀಪಗಳು ಮತ್ತು ಆಚರಣೆಗಳಷ್ಟೇ ಅಲ್ಲ. ಪ್ರೀತಿ ಮತ್ತು ಕಾಳಜಿಯಿಂದ ಇನ್ನೊಬ್ಬರ ಜೀವನವನ್ನು ಬೆಳಗಿಸಲು ಏನನ್ನಾದರೂ ನೀಡುವ ಸಂತೋಷ, ಅದರಿಂದ ಸಿಗುವ ತೃಪ್ತಿ. ಹಾಗಾಗಿ, ನೀವು ನೀಡುವ ಉಡುಗೊರೆಯು ತೆರೆಯುವ ಕ್ಷಣದಲ್ಲಿ ಮಾತ್ರ ಖುಷಿ ನೀಡಿದರೆ ಸಾಲದು. ಅದು ನೆನಪುಗಳನ್ನು ಸೆರೆಹಿಡಿದಾಗ, ಜನರನ್ನು ಕನೆಕ್ಟ್ ಆಗಿರಿಸಿದಾಗ ಮತ್ತು ವರ್ಷಗಟ್ಟಲೆ ಬಾಳಿಕೆ ಬಂದಾಗ – ಉಡುಗೊರೆಯು ಅವಿಸ್ಮರಣೀಯವೂ ಆಗುತ್ತದೆ, ಉಡುಗೊರೆಗೊಂದು ಅರ್ಥವೂ ಬರುತ್ತದೆ.

ಇದುವೇ OPPO ಈ ಹಬ್ಬದ ಋತುವಿನಲ್ಲಿ ನಿಮ್ಮೆದುರು ಇರಿಸುತ್ತಿರುವುದು. “ಮೇಕ್ ಯುವರ್ ಮುಮೆಂಟ್” ಎಂಬ ತನ್ನ ಜಾಗತಿಕ ತತ್ವದ ಮೇಲೆ ನಿರ್ಮಿತವಾಗಿರುವ OPPO, ಎಲ್ಲೆಡೆ ಜನರಿಗೆ ಖುಶಿಯ ಕ್ಷಣಗಳನ್ನು ಭವ್ಯವಾಗಿ ಆಚರಿಸಲು, ದೈನಂದಿನ ಜೀವನದ ಸೌಂದರ್ಯವನ್ನು ಸೆರೆಹಿಡಿಯಲು ಮತ್ತು ಕ್ಷಣಿಕ ಅನುಭವಗಳನ್ನು ಶಾಶ್ವತ ನೆನಪುಗಳಾಗಿ ಪರಿವರ್ತಿಸಲು ಶಕ್ತಿ ನೀಡುತ್ತದೆ. ನಿಮ್ಮ ಪ್ರತಿಯೊಂದು ಸುಂದರ ಕ್ಷಣಗಳನ್ನು ಅಚ್ಚುಕಟ್ಟಾಗಿ ಸೆರೆಹಿಡಿಯುವ ಕ್ಯಾಮರಾಗಳು, ಅಗಾಧ ಬಾಳಿಕೆಯ ಅವಧಿ ಮತ್ತು ವಿಶ್ವಾಸಾರ್ಹತೆಯೊಂದಿಗೆ, OPPO ಸಾಧನಗಳು ಕೇವಲ ಉಡುಗೊರೆಗಳಲ್ಲ – ಅವು ಜೀವನದ ಸುಮಧುರ ಕ್ಷಣಗಳ ಸಂಗಾತಿಗಳಾಗಿವೆ.

ಹಿಂದೆಂದೂ ಕಂಡರಿಯದಂತಹ ಕೊಡುಗೆಗಳನ್ನು ನೀಡುತ್ತಿರುವ ಗ್ರ್ಯಾಂಡ್ ಫೆಸ್ಟಿವ್ ಸೇಲ್ ಮತ್ತು ಮೈ OPPO ಎಕ್ಸ್‌ಕ್ಲೂಸಿವ್ ದೀಪಾವಳಿ ರಾಫಲ್‌ನ ಥ್ರಿಲ್‌ನೊಂದಿಗೆ, OPPO ಪ್ರತಿಯೊಂದು ಉಡುಗೊರೆಯೂ ಕೇವಲ ಮೌಲ್ಯವನ್ನು ಮಾತ್ರವಲ್ಲ – ಅದು ಅವಕಾಶಗಳು, ಸ್ಫೂರ್ತಿ ಮತ್ತು ಸಂತೋಷವನ್ನು ಸಹ ಹೊತ್ತು ತರುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.

ಈ ದೀಪಾವಳಿಯಲ್ಲಿ, ಕೇವಲ ಫೋನ್ ಅಥವಾ ಗ್ಯಾಜೆಟ್ ನೀಡಬೇಡಿ. ಕ್ಷಣಿಕ ಅನುಭವಗಳನ್ನು ಚಿರನೂತನವಾಗಿಸಲು, ಜನರನ್ನು ಸದಾ ಸಂಪರ್ಕದಲ್ಲಿರಿಸಲು ಮತ್ತು ಪ್ರಸ್ತುತ ಕ್ಷಣವನ್ನು ಮನದುಂಬಿ ಜೀವಿಸಲು ಅಗತ್ಯವಾಗಿರುವ ಉಡುಗೊರೆಯನ್ನು ನೀಡಿ. OPPOದೊಂದಿಗೆ, ನೀವು ಕೇವಲ ನೀಡುವುದಿಲ್ಲ – ಸುಂದರ ಕ್ಷಣಗಳನ್ನು ರೂಪಿಸುತ್ತೀರಿ.