Last Updated:
ಹಾಸ್ಟೆಲ್ ವಿದ್ಯಾರ್ಥಿಗಳಿಂದಲೇ ಗದ್ದೆಯಲ್ಲಿ ಭತ್ತದ ಬೇಸಾಯ ನಡೆಸಿ ಕೃಷಿಯ ಬಗ್ಗೆ ಪ್ರಾಯೋಗಿಕ ಅನುಭವ ನೀಡಬೇಕೆನ್ನುವುದು ವಾಮದಪದವಿನ ಬಿಸಿಎಂ ಹಾಸ್ಟೆಲ್‌ನ ನಿಲಯ ಮೇಲ್ವಿಚಾರಕಿ ಭವಾನಿ ಅವರ ಕನಸಾಗಿತ್ತು.
ಸುಮಾರು ಅರ್ಧ ಎಕರೆ ವಿಸ್ತೀರ್ಣದ ಗದ್ದೆ(Agriculture Land). ಗದ್ದೆಯ ತುಂಬೆಲ್ಲಾ ಹಚ್ಚಹಸುರಿನಿಂದ ನಳನಳಿಸುತ್ತಿರುವ ಭತ್ತದ ಪೈರು. ಕಣ್ಣಾಯಿಸಿ ನೋಡುತ್ತಿದ್ದರೆ ಮನಸ್ಸಿಗೇನೋ ಸಂಭ್ರಮ. ಕೃಷಿಕರನ್ನು ಮೀರಿಸುವಂತೆ ಈ ಪರಿ ಸಾಗುವಳಿ ಮಾಡಿದವರು ಹಾಸ್ಟೆಲ್ ವಿದ್ಯಾರ್ಥಿನಿಯರು(Hostel Students). ಹೌದು, ಒಂದೂವರೆ ತಿಂಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಯ(Dakshina Kannada) ಬಂಟ್ವಾಳ ತಾಲೂಕಿನ ವಾಮದಪದವು ಹಾಗೂ ಚೆನ್ನೆತ್ತೋಡಿಯಲ್ಲಿರುವ ದೇವರಾಜ ಅರಸು ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿನಿಯರು ಕೃಷಿ ಕಲಿ-ನಲಿ ಕಾರ್ಯಕ್ರಮದ ಮೂಲಕ ಬೆಳೆಸಿದ ಭತ್ತದ ಕೃಷಿ(Paddy Planting) ತೆನೆ ಬಿಡಲಾರಂಭಿಸಿದೆ. ದಿನವಿಡೀ ಗದ್ದೆಯಲ್ಲಿ ಮೈಗೆಲ್ಲಾ ಕೆಸರು ಅಂಟಿಸಿಕೊಂಡು ನೇಜಿ ಕಿತ್ತು, ನಾಟಿ ಮಾಡಿದ ಪರಿಣಾಮ ಭೂಮಿ ತಾಯಿ ವಿದ್ಯಾರ್ಥಿಗಳಿಗೆ ಉತ್ತಮ ಫಸಲು ನೀಡುವ ನಿರೀಕ್ಷೆ ಹುಟ್ಟಿಸಿದ್ದಾಳೆ. ವಿದ್ಯಾರ್ಥಿಗಳ ಬೆವರಿನ ಪರಿಶ್ರಮಕ್ಕೆ ಪ್ರತಿಫಲ ಸಿಗುವ ಕಾಲ ಸನ್ನಿಹಿತವಾಗಿದೆ.
ಹಾಸ್ಟೆಲ್ ವಿದ್ಯಾರ್ಥಿಗಳಿಂದಲೇ ಗದ್ದೆಯಲ್ಲಿ ಭತ್ತದ ಬೇಸಾಯ ನಡೆಸಿ ಕೃಷಿಯ ಬಗ್ಗೆ ಪ್ರಾಯೋಗಿಕ ಅನುಭವ ನೀಡಬೇಕೆನ್ನುವುದು ವಾಮದಪದವಿನ ಬಿಸಿಎಂ ಹಾಸ್ಟೆಲ್‌ನ ನಿಲಯ ಮೇಲ್ವಿಚಾರಕಿ ಭವಾನಿ ಅವರ ಕನಸಾಗಿತ್ತು. ವಾಮದಪದವಿನ ವಾಂಬೆಟ್ಟುವಿನ ಯಜ್ಞ ನಾರಾಯಣ ವಿದ್ಯಾರ್ಥಿಗಳ ಬೇಸಾಯ ಚಟುವಟಿಕೆಗೆ ಗದ್ದೆ ನೀಡಿ ಸಹಕರಿಸಿದ್ದರು. ಬೀಜ ಬಿತ್ತನೆ, ನೇಜಿ ಕೊಯ್ದು, ನೇಜಿ ನಾಟಿ, ಔಷಧ ಸಿಂಪಡಣೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದರು. ಇದೀಗ ಪೈರು ಬಿಡುವ ಹಂತಕ್ಕೆ ಬಂದಿದ್ದು, ಭವಾನಿ ಅವರ ಕನಸು, ವಿದ್ಯಾರ್ಥಿಗಳ ಪರಿಶ್ರಮಕ್ಕೆ ಫಲ ಸಿಗುವ ಕಾಲ ಬಂದಿದೆ. ಇಲಾಖೆಯ ಅಧಿಕಾರಿ ಬಿಂದಿಯಾ ನಾಯಕ್ ಅವರ ಸಹಕಾರ, ಮಾರ್ಗದರ್ಶನ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ ಎನ್ನುತ್ತಾರೆ ಭವಾನಿ.
ಇದನ್ನೂ ಓದಿ: Deviramma Temple: ಮೈಸೂರು ಚಾಮುಂಡೇಶ್ವರಿ ದೇವಿಯ ಅವತಾರ ಈ ಬಿಂಡಿಗ ದೇವಿರಮ್ಮ!
ಸೆ.5ರಂದು ವಾಮದಪದವು ಬಳಿಯ ವಾಂಬೆಟ್ಟುವಿನಲ್ಲಿ ಸ್ಥಳೀಯರಾದ ಯಜ್ಞನಾರಾಯಣ ಎಂಬುವರ ಅರ್ಧ ಎಕರೆ ವಿಸ್ತೀರ್ಣದ ಗದ್ದೆಯಲ್ಲಿ ವಾಮದಪದವು, ಚೆನ್ನೈತ್ತೋಡಿಯಲ್ಲಿರುವ ಶ್ರೀ ದೇವರಾಜ ಅರಸು ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿನಿಯರು ಹಾಗೂ ಮೆಟ್ರಿಕ್ ಪೂರ್ವ ಬಾಲಕರ ನಿಲಯದ ವಿದ್ಯಾರ್ಥಿಗಳಿಗೆ ಕೃಷಿ ಕಲಿ-ನಲಿ ಎನ್ನುವ ಕೃಷಿ ಆಟದ ಜತೆಗೆ ಕೃಷಿಯ ಕಲಿಕೆಯ ಬಗ್ಗೆ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಮ್ಮ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕೃಷಿ ಕಲಿ-ನಲಿ ಕಾರ್ಯಕ್ರಮವನ್ನು ಸೆ.5ರಂದು ಹಮ್ಮಿಕೊಳ್ಳಲಾಗಿತ್ತು. ಹಾಸ್ಟೆಲ್ ವಿದ್ಯಾರ್ಥಿಗಳು ಕೆಸರಿನಲ್ಲಿ ಆಡಿ ಸಂಭ್ರಮಿಸುವುದರ ಜತೆಗೆ ನೇಜಿ ನಾಟಿ ಮಾಡಿ ಕೃಷಿ ವಿದ್ಯೆಯನ್ನು ಅರಿತುಕೊಂಡಿದ್ದರು. ಇದೀಗ ಪೈರು ತೆನೆ ಬಿಡುತ್ತಿರುವುದು ಖುಷಿ ಮೂಡಿಸಿದೆ ಎನ್ನುತ್ತಾರೆ ಭವಾನಿ.
ಊರಿನ ಗಣ್ಯರು, ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು. ಅಂದು ಹಾಸ್ಟೆಲ್ ವಿದ್ಯಾರ್ಥಿಗಳು ಕೆಸರಿನಲ್ಲಿ ವಿವಿಧ ಆಟೋಟಗಳನ್ನು ಆಡಿ ಸಂಭ್ರಮಿಸಿದ್ದರು. ಬಳಿಕ ಕೃಷಿಕ ಮಹಿಳೆಯರ ಮಾರ್ಗದರ್ಶನ ಪಡೆದು ನೇಜಿ ಕಿತ್ತು ಒಂದು ಮುಡಿ ವಿಸ್ತೀರ್ಣದ ಎರಡು ಗದ್ದೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳು ನೇಜಿ ನಾಟಿ ಮಾಡಿ ಕೃಷಿ ಪಾಠವನ್ನು ಕರಗತ ಮಾಡಿಕೊಂಡರು. ಬಾಗಲಕೋಟೆ, ರಾಯಚೂರು ಮೊದಲಾದ ಹೊರಜಿಲ್ಲೆಗಳ ವಿದ್ಯಾರ್ಥಿಗಳು ಈ ಹಾಸ್ಟೆಲ್‌ಗಳಲ್ಲಿದ್ದು, ಸುಮಾರು 300 ಮಂದಿ ವಿದ್ಯಾರ್ಥಿಗಳಿದ್ದಾರೆ.
Dakshina Kannada,Karnataka
October 31, 2024 1:27 PM IST