Paddy Land: ಭತ್ತದ ಗದ್ದೆಯ ಸುತ್ತ ಸೀರೆ ಕಟ್ಟೋದ್ಯಾಕೆ ಗೊತ್ತಾ? | This is the reason farmers are knot the Sarees to paddy land in Coastal districts

Paddy Land: ಭತ್ತದ ಗದ್ದೆಯ ಸುತ್ತ ಸೀರೆ ಕಟ್ಟೋದ್ಯಾಕೆ ಗೊತ್ತಾ? | This is the reason farmers are knot the Sarees to paddy land in Coastal districts

Last Updated:

ಭತ್ತದ ಗದ್ದೆಯ ಸುತ್ತ ಸೀರೆಯನ್ನು ಕಟ್ಟಿ, ಸಂಪೂರ್ಣ ಗದ್ದೆಗೆ ಸೀರೆಯನ್ನು ಆವರಣಗೋಡೆಯಂತೆ ಕಟ್ಟುತ್ತಾರೆ. ಗದ್ದೆಯ ಸುತ್ತಲೂ ಮರದ ಗೂಟ ಹಾಕಿ, ಅದಕ್ಕೆ ಸುತ್ತ ಸೀರೆಯನ್ನು ಕಟ್ಟಲಾಗುತ್ತದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣಕನ್ನಡ: ಇಂದು ರೈತರು ಆಹಾರ ಬೆಳೆಯಾದ ಭತ್ತ ಬೆಳೆಯನ್ನು(Paddy Crop) ಬಿಟ್ಟು ಇತರ ಕೃಷಿಯತ್ತ ಮುಖ ಮಾಡಿದ್ದಾರೆ. ಭತ್ತದ ಕೃಷಿಗೆ ಎದುರಾಗುತ್ತಿರುವ ಸಮಸ್ಯೆಗಳಿಂದಾಗಿ ಇಂದು ಕೃಷಿಕರು(Farmers) ಈ ಬೆಳೆಯಿಂದ ಹಿಂದೆ ಸರಿದು ವಾಣಿಜ್ಯ ಬೆಳೆಗಳನ್ನು ನೆಚ್ಚಿಕೊಂಡಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ(Dakshina Kannada District) ಒಂದು ಕಾಲದಲ್ಲಿ ಭತ್ತವನ್ನೇ ಬೆಳೆಯುತ್ತಿದ್ದ ಕೃಷಿಕರಲ್ಲಿ ಇದೀಗ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಭತ್ತ ಬೆಳೆಯುತ್ತಿದ್ದಾರೆ.

ಭತ್ತ ನಾಟಿ ಮಾಡಿ ಅದು ಕಟಾವಿಗೆ ಬರುವ ಮೊದಲೇ, ಭತ್ತದ ಗದ್ದೆಗೆ ನವಿಲು ಮತ್ತು ಕಾಡು ಹಂದಿಗಳು ನುಗ್ಗಿ ಬೆಳೆಗೆ ಹಾನಿ ಮಾಡುತ್ತವೆ. ಈ ಹಂದಿ ಮತ್ತು ನವಿಲುಗಳ ಕಾಟ ತಪ್ಲಿಸಲು ಹಿಂದೆ ಗದ್ದೆಯಲ್ಲಿ ಬೇತಾಳ ಹಾಗು ಮನುಷ್ಯನ ಪ್ರತಿರೂಪವನ್ನು ನೆಟ್ಟು ಓಡಿಸುವ ಪ್ರಯತ್ನ ಮಾಡುತ್ತಿದ್ದರು. ಆದರೆ ಈ ಉಪಾಯವೂ ಹಂದಿಗಳನ್ನು , ನವಿಲುಗಳನ್ನು ಕಂಟ್ರೋಲ್ ಮಾಡಲು ಸಾಧ್ಯವಾಗದಿದ್ದಾಗ, ಇದೀಗ ಹೊಸ ಉಪಾಯವೊಂದನ್ನು ಭತ್ತದ ಕೃಷಿಕರು ಕಂಡುಕೊಂಡಿದ್ದಾರೆ.

ಇದನ್ನೂ ಓದಿ: Mysuru: ಪಿರಿಯಾಪಟ್ಟಣದಲ್ಲಿ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ; ಬೆಟ್ಟ ಹತ್ತಿ ದೇವರ ದರ್ಶನ ಪಡೆದ ಸಾವಿರಾರು ಭಕ್ತರು

ಭತ್ತದ ಗದ್ದೆಯ ಸುತ್ತ ಸೀರೆಯನ್ನು ಕಟ್ಟಿ, ಸಂಪೂರ್ಣ ಗದ್ದೆಗೆ ಸೀರೆಯನ್ನು ಆವರಣಗೋಡೆಯಂತೆ ಕಟ್ಟುತ್ತಾರೆ. ಗದ್ದೆಯ ಸುತ್ತಲೂ ಮರದ ಗೂಟ ಹಾಕಿ, ಅದಕ್ಕೆ ಸುತ್ತ ಸೀರೆಯನ್ನು ಕಟ್ಟಲಾಗುತ್ತದೆ. ನೆಲಕ್ಕೆ ಸೀರೆಯನ್ನು ಹಾಸುವ ರೀತಿ ಕಟ್ಟುವುದರಿಂದ ಹಂದಿಗಳು ಸೀತೆಯನ್ನು ಹಾರಿ ಬರುವುದಕ್ಕೂ, ಸೀರೆಯ ಅಡಿಯಿಂದ ನುಸುಳಿಕೊಂಡು ಬರುವುದಕ್ಕೂ ಸಾಧ್ಯವಾಗುವುದಿಲ್ಲ. ಅದೇ ರೀತಿ ಸೀರೆಯನ್ನು ಎತ್ತರಕ್ಕೆ ಕಟ್ಟಿರುವ ಕಾರಣ ನವಿಲಿಗೆ ಸೀರೆಯನ್ನು ಹಾರಿ ಬರಲೂ ಸಾಧ್ಯವಾಗುವುದಿಲ್ಲ. ಇದರಿಂದಾಗಿ ಭತ್ತದ ಕೃಷಿಕರು ಸದ್ಯಕ್ಕೆ ಈ ಪ್ರಾಣಿಗಳ ಕಾಟದಿಂದ ನಿರಾಳರಾಗಿದ್ದಾರೆ.

ಸೀರೆಯ ಉಪಯೋಗ ಕೇವಲ ಮಹಿಳೆಯರು ಉಡಲು ಮಾತ್ರವಲ್ಲ, ಉಟ್ಟು ಹಳೆಯದಾದ ಸೀರೆಯನ್ನು ಈ ರೀತಿಯೂ ಬಳಸಬಹುದು ಎನ್ನುವುದನ್ನು ಕರಾವಳಿಯ ಕೃಷಿಕರು ತೋರಿಸಿಕೊಟ್ಟಿದ್ದಾರೆ. ಗದ್ದೆಯ ಅಳತೆಗೆ ತಕ್ಕಂತೆ ಸೀರೆಗಳ ಅವಶ್ಯಕತೆಯಿದ್ದು, ಸುಮಾರು ಒಂದು ಎಕರೆ ವಿಸ್ತಾರದ ಗದ್ದೆಗೆ 25 ಕ್ಕೂ ಮಿಕ್ಕಿದ ಸೀರೆಗಳ ಅಗತ್ಯವಿದೆ.

ಸಾಮಾನ್ಯವಾಗಿ ಹಂದಿಗಳು ಬರದಂತೆ ಕೆಂಪು ಬಣ್ಣದ ಅಥವಾ ಬಿಳಿ ಬಣ್ಣದ ಸೀರೆಗಳನ್ನು ಕಟ್ಟಲಾಗುತ್ತದೆ. ಈ ಎರಡು ಬಣ್ಣಗಳು ಹಂದಿಯ ಕಣ್ಣುಗಳನ್ನು ಅತಿಯಾಗಿ ಕುಕ್ಕುವ ಕಾರಣಕ್ಕಾಗಿ ಈ ಎರಡು ಬಣ್ಣದ ಸೀರೆಗಳನ್ನು ಹೆಚ್ಚಾಗಿ ಕಟ್ಟಲಾಗುತ್ತದೆ ಎನ್ನುವುದು ಭತ್ತ ಬೆಳೆಯುವ ಕೃಷಿಕರ ಅಭಿಪ್ರಾಯವಾಗಿದೆ.