ಗುಂಪು ಹಂತದಲ್ಲಿ ಪಾಕ್ ವಿರುದ್ಧ ಆಡದಿರಲು ಭಾರತ ನಿರ್ಧಾರ
ಭಾರತ ತಂಡವು ಗುಂಪಿನಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಬಯಸುವುದಿಲ್ಲ. ಭಾರತ ತಂಡ ಪಾಕಿಸ್ತಾನ ವಿರುದ್ಧ ಪಂದ್ಯ ಆಡದಿದ್ದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟ ಉಂಟಾಗುವುದು ಖಚಿತ ಎಂದು ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.
ಮಹಿಳಾ ಕ್ರಿಕೆಟ್ನಲ್ಲಿ ಆಡಲೇಬೇಕಾದ ಅನಿವಾರ್ಯತೆ
ಕ್ರಿಕ್ಬಜ್ನ ವರದಿಯ ಪ್ರಕಾರ, ಬಿಸಿಸಿಐ ಐಸಿಸಿ ಟೂರ್ನಮೆಂಟ್ಗಳ ಗ್ರೂಪ್ ಸ್ಟೇಜ್ ಪಂದ್ಯಗಳಲ್ಲಿ ಪಾಕಿಸ್ತಾನ ಜೊತೆ ಆಡಲು ಬಯಸುವುದಿಲ್ಲ, ಆದರೆ ಎರಡೂ ತಂಡಗಳು ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಭಾಗವಹಿಸಲಿವೆ. ಇದರಲ್ಲಿ 8 ತಂಡಗಳು ಅರ್ಹತೆ ಪಡೆದಿವೆ. ಈ ಪಂದ್ಯಾವಳಿಯಲ್ಲಿ ಪ್ರತಿ ತಂಡವು ರೌಂಡ್ ರಾಬಿನ್ ಸ್ವರೂಪದಲ್ಲಿ ಪರಸ್ಪರ ವಿರುದ್ಧ ಆಡಲಿದೆ.
ತಟಸ್ಥ ಸ್ಥಳದಲ್ಲಿ ಆಡಲು ನಿರ್ಧಾರ
ಐಸಿಸಿ, ಪಿಸಿಬಿ ಮತ್ತು ಬಿಸಿಸಿಐ ನಡುವಿನ ಒಪ್ಪಂದದ ಪ್ರಕಾರ, ಭಾರತ ತಂಡ ಪಾಕಿಸ್ತಾನದಲ್ಲಿ ಆಡುವುದಿಲ್ಲ ಮತ್ತು ಪಾಕಿಸ್ತಾನ ತಂಡ ಭಾರತದಲ್ಲಿ ಆಡುವುದಿಲ್ಲ, ಆದ್ದರಿಂದ ಇಬ್ಬರೂ ತಟಸ್ಥ ಸ್ಥಳಗಳಲ್ಲಿ ಪರಸ್ಪರ ವಿರುದ್ಧವಾಗಿ ಆಡಬೇಕೆಂದು ನಿರ್ಧರಿಸಲಾಗಿದೆ.
ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿಕೆ
ಪಹಲ್ಗಾಮ್ ದಾಳಿಯ ನಂತರ ಭಾರತ ಐಸಿಸಿ ಟೂರ್ನಮೆಂಟ್ಗಳಲ್ಲಿ ಪಾಕಿಸ್ತಾನದ ವಿರುದ್ಧ ಆಡುವುದಿಲ್ಲವೇ? ಈ ಪ್ರಶ್ನೆಯನ್ನು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರಿಗೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅವರು, ಭಾರತ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಬಿಸಿಸಿಐ ಸ್ವಾಗತಿಸುತ್ತದೆ. ಮತ್ತು ಅದರಂತೆ ನಡೆದುಕೊಳ್ಳುತ್ತದೆ ಎಂದು ರಾಜೀವ್ ಶುಕ್ಲಾ ಉತ್ತರಿಸಿದರು. ಈ ವಿಷಯದ ಬಗ್ಗೆ ಬಿಸಿಸಿಐ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಕ್ರಿಕ್ಬಜ್ ವರದಿ ಸ್ಪಷ್ಟಪಡಿಸಿದೆ.
ಕುತೂಹಲ ಹೆಚ್ಚಿಸಿದ ಏಷ್ಯಾಕಪ್
ಟಿ-20 ವಿಶ್ವಕಪ್ ಭಾರತ ಮತ್ತು ಶ್ರೀಲಂಕಾದಲ್ಲಿ ಫೆಬ್ರವರಿ-ಮಾರ್ಚ್ 2026 ರಲ್ಲಿ ನಡೆಯಲಿದೆ. ಅಲ್ಲದೆ, ಏಷ್ಯಾಕಪ್ ಸೆಪ್ಟೆಂಬರ್ನಲ್ಲಿ ಭಾರತದಲ್ಲಿ ನಡೆಯಲಿದೆ, ಹಾಗಾದರೆ ಏಷ್ಯಾಕಪ್ ಕುರಿತು ಉಭಯ ತಂಡಗಳ ನಿಲುವು ಏನಾಗಿರಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: IPL 2025: ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸರ್, ರೋಹಿತ್ ದಾಖಲೆ ಸನಿಹ ಬಂದ ಕೊಹ್ಲಿ! ಟಾಪ್ 5 ಸಿಕ್ಸರ್ ವೀರರ ಪಟ್ಟಿ ಇಲ್ಲಿದೆ
ಈ ನಡುವೆ, ಪಹಲ್ಗಾಮ್ ದಾಳಿಯ ನಂತರ, ಭಾರತದಲ್ಲಿ PSL 2025 ರ ಪ್ರಸಾರವನ್ನು ಸಹ ನಿಷೇಧಿಸಲಾಗಿದೆ. ಪಾಕಿಸ್ತಾನ್ ಸೂಪರ್ ಲೀಗ್ ಪಂದ್ಯಗಳನ್ನು OTT ಅಪ್ಲಿಕೇಶನ್ ಫ್ಯಾನ್ಕೋಡ್ನಲ್ಲಿ ಲೈವ್ ಮಾಡಲಾಗಿತ್ತು. ಆದ್ರೆ, ಘಟನೆ ಬಳಿಕ ಫ್ಯಾನ್ಕೋಡ್ ಈ ಪಂದ್ಯಗಳ ಪ್ರಸಾರವನ್ನು ನಿಲ್ಲಿಸಲು ನಿರ್ಧರಿಸಿತು.
ಪಾಕಿಸ್ತಾನ ಸೂಪರ್ ಲೀಗ್ನ ಡಿಜಿಟಲ್ ವೀಕ್ಷಕರ ಸಂಖ್ಯೆಯಲ್ಲಿ ಭಾರೀ ಕುಸಿತ
ಫ್ಯಾನ್ಕೋಡ್ನ ಈ ನಿರ್ಧಾರದ ನಂತರ, ಪಾಕಿಸ್ತಾನ ಸೂಪರ್ ಲೀಗ್ನ ಡಿಜಿಟಲ್ ವೀಕ್ಷಕರ ಸಂಖ್ಯೆಯಲ್ಲಿ ಭಾರೀ ಕುಸಿತವಾಗುವ ಸಾಧ್ಯತೆಯಿದೆ. ಇದು ಪಿಸಿಬಿ ಅಂದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆದಾಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆರ್ಥಿಕ ಬಿಕ್ಕಟ್ಟಿನಲ್ಲಿದೆ, ಈ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಿಎಸ್ಎಲ್ ಮೊರೆ ಹೋಗಿತ್ತು. ಆದ್ರೆ ಈಗ ಅದರ ವೀಕ್ಷಕರ ಸಂಖ್ಯೆಯಲ್ಲಿ ತೀವ್ರ ಕುಸಿತವಾಗಿರುವುದು ಪಿಸಿಬಿಗೆ ದೊಡ್ಡ ಹೊಡೆತವಾಗಿದೆ.
April 25, 2025 7:19 PM IST