PAK vs SL: ಕಮಿಂದು ಮೆಂಡಿಸ್ ಅರ್ಧಶತಕ! ಪಾಕಿಸ್ತಾನಕ್ಕೆ 134ರನ್​ಗಳ ಸಾಧಾರಣ ಗುರಿ ನೀಡಿದ ಶ್ರೀಲಂಕಾ | Pakistan vs Sri Lanka Live Score: SL Sets 134-Run Target for PAK in Asia Cup 2025 Super 4 Match | ಕ್ರೀಡೆ

PAK vs SL: ಕಮಿಂದು ಮೆಂಡಿಸ್ ಅರ್ಧಶತಕ! ಪಾಕಿಸ್ತಾನಕ್ಕೆ 134ರನ್​ಗಳ ಸಾಧಾರಣ ಗುರಿ ನೀಡಿದ ಶ್ರೀಲಂಕಾ | Pakistan vs Sri Lanka Live Score: SL Sets 134-Run Target for PAK in Asia Cup 2025 Super 4 Match | ಕ್ರೀಡೆ

Last Updated:

ಅಬುಧಾಬಿಯಲ್ಲಿ ನಡೆಯುತ್ತಿರುವ 3ನೇ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ಬೌಲಿಂಗ್ ದಾಳಿಗೆ ತತ್ತರಿಸಿದ ಕೇವಲ 134 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ.

ಶ್ರೀಲಂಕಾ ತಂಡಶ್ರೀಲಂಕಾ ತಂಡ
ಶ್ರೀಲಂಕಾ ತಂಡ

ಶ್ರೀಲಂಕಾ ತಂಡ ತಮ್ಮ ಗುಂಪು ಹಂತದ ಪ್ರದರ್ಶನವನ್ನ ಸೂಪರ್​​ 4ನಲ್ಲಿ ಮರುಕಳಿಸಲು ವಿಫಲವಾಗಿದೆ. ಅಬುಧಾಬಿಯಲ್ಲಿ ನಡೆಯುತ್ತಿರುವ 3ನೇ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ಬೌಲಿಂಗ್ ದಾಳಿಗೆ ತತ್ತರಿಸಿದ ಕೇವಲ 134 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ. ಅಗ್ರಕ್ರಮಾಂಕದ ಬ್ಯಾಟರ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು. ಕಮಿಂದು ಮೆಂಡಿಸ್ ಅರ್ಧಶತಕ ಸಿಡಿಸಿ ತಂಡ ಅಲ್ಪ ಮೊತ್ತಕ್ಕೆ ಕುಸಿಯದಂತೆ ಕಾಪಾಡಿದರು.

ಫೈನಲ್ ಪ್ರವೇಶಿಸಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಮೊದಲ ಓವರ್​ನ 2ನೇ ಎಸೆತದಲ್ಲೇ ಕುಸಾಲ್ ಮೆಂಡಿಸ್ (0) ವಿಕೆಟ್ ಕಳೆದುಕೊಂಡಿತು. ಮೆಂಡಿಸ್ ಖಾತೆ ತೆರೆಯದೇ ಶಾಹೀನ್ ಅಫ್ರಿದಿ ಬೌಲಿಂಗ್​​ನಲ್ಲಿ ಗೋಲ್ಡನ್ ಡಕ್ ಆದರು. ನಂತರ ಮತ್ತೊಬ್ಬ ಆರಂಭಿಕ ಬ್ಯಾಟರ್ ಪಾತುಮ್ ನಿಸ್ಸಾಂಕ ಕೇವಲ 8 ರನ್​ಗಳಿಸಿ 3ನೇ ಓವರ್​ನಲ್ಲಿ ಅಫ್ರಿದಿಗೆ 2ನೇ ಬಲಿಯಾದರು. 3ನೇ ವಿಕೆಟ್ಗೆ ಒಂದಾದ ಕುಸಾಲ್ ಪೆರೆರಾ ಹಾಗೂ ನಾಯಕ ಚರಿತ್ ಅಸಲಂಕಾ 25 ರನ್​ ಸೇರಿಸಿದರು. ಆದರೆ 15 ರನ್​ಗಳ ಅಂತರದಲ್ಲಿ ಇಬ್ಬರು ಔಟ್ ಆದರು.

ಪೆರೆರಾ 12 ಎಸೆತಗಳಲ್ಲಿ 15 ರನ್​ಗಳಿಸಿ ಹ್ಯಾರಿಸ್ ರೌಫ್​ಗೆ ವಿಕೆಟ್ ಒಪ್ಪಿಸಿದರೆ, ಚರಿತ್ ಅಸಲಂಕಾ 19 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 20 ರನ್​ಗಳಿಸಿ ಹುಸೇನ್ ತಲತ್​ ಬೌಲಿಂಗ್​​ನಲ್ಲಿ ರೌಫ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸಿದ್ದ ಶನಕ ಖಾತೆ ತೆರೆಯದೇ ತಲತ್​ ಬೌಲ್ಡ್ ಆದರು.

ನಂತರ ಬಂದ ವನಿಂದು ಹಸರಂಗ 13 ಎಸೆತಗಳಲ್ಲಿ 15 ರನ್ಗಳಿಸಿದರು. ಚಮಿಕಾ ಕರುಣರತ್ನೆ ಹಾಗೂ ಕಮಿಂದು ಮೆಂಡಿಸ್ 7ನೇ ವಿಕೆಟ್​ ಜೊತೆಯಾಟದಲ್ಲಿ 43 ರನ್​ಗಳಿಸಿಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನ 100ರ ಗಡಿ ದಾಟಿಸಿದರು. ಮೆಂಡಿಸ್ 44 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್​ ಸಹಿತ 50 ರನ್​ಗಳಿಸಿದರು. ಆದರೆ ಕರುಣರತ್ನೆ 21 ಎಸೆತಗಳಲ್ಲಿ 2 ಬೌಂಡರಿ ಸಹಿತ ಕೇವಲ 17 ರನ್​ಗಳಿಸಿದರು.

ಹುಸೇನ್ ತಲಾತ್ 18ಕ್ಕೆ2, ಅಬ್ರಾರ್ ಅಹ್ಮದ್ 4 ಓವರ್​ಗಳಲ್ಲಿ 8 ರನ್ ನೀಡಿ 1 ವಿಕೆಟ್, ಹ್ಯಾರಿಸ್ ರೌಫ್ 37ಕ್ಕೆ2, ಶಾಹೀನ್ ಅಫ್ರಿದಿ 28ಕ್ಕೆ3 ವಿಕೆಟ್ ಪಡೆದು ಮಿಂಚಿದರು.