Pakistan Cricketer: ಪಾಕಿಸ್ತಾನದ ಮಾಜಿ ಸ್ಟಾರ್ ಬೌಲರ್ ನಿಧನ! ಈ ಕಾರಣದಿಂದ ಕೊನೆಯುಸಿರು!

Pakistan Cricketer: ಪಾಕಿಸ್ತಾನದ ಮಾಜಿ ಸ್ಟಾರ್ ಬೌಲರ್ ನಿಧನ! ಈ ಕಾರಣದಿಂದ ಕೊನೆಯುಸಿರು!

Last Updated:

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಅಂಪೈರ್ 78 ವರ್ಷ ಆಲ್ರೌಂಡರ್ ಗುರುವಾರ ತಮ್ಮ ತವರು ಲಾಹೋರ್‌ನಲ್ಲಿ ನಿಧನರಾಗಿದ್ದಾರೆ. ಇವರು ವಿವಿಎನ್ ರಿಚರ್ಡ್ಸ್ ಅವರಿಗೆ ತಮ್ಮ ಬೌಲಿಂಗ್ ಮೂಲಕ ಕಾಡಿದ್ದರು.

ಸಾಂದರ್ಭಿಕ ಚಿತ್ರಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಧೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ (Former Cricketer) ಮತ್ತು ಅಂಪೈರ್ ಮುಹಮ್ಮದ್ ನಜೀರ್ ಜೂನಿಯರ್ (Muhammad Nazir) (78 ವರ್ಷ) ಗುರುವಾರ ತಮ್ಮ ತವರು ಲಾಹೋರ್‌ನಲ್ಲಿ (Lahor) ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಹಾಸಿಗೆ ಹಿಡಿದಿದ್ದ ನಜೀರ್ ಇಂದು ನಿಧನರಾಗಿದ್ದು, ಕ್ರಿಕೆಟ್ ಜಗತ್ತು ಅವರ ನಿಧನಕ್ಕೆ ಕಂಬನಿ ಮಿಡಿದಿದೆ.

ವಿಂಡೀಸ್ ಸ್ಟಾರ್ ಬ್ಯಾಟರ್‌ ಕಾಡಿದ್ದ ಬೌಲರ್

ನಜೀರ್ ಅವರು ತಮ್ಮ ಆಫ್ ಸ್ಪಿನ್‌ನಿಂದ ವೆಸ್ಟ್ ಇಂಡೀಸ್ ದಂತಕಥೆ ವಿವ್ ರಿಚರ್ಡ್ಸ್‌ ಅವರಿಗೆ ಕೆಲವು ಕಾಲ ಕಾಡಿದ್ದರು. ನಜೀರ್ ಅವರು, ಕಳೆದ ಕೆಲವು ತಿಂಗಳುಗಳಿಂದ ಹಾಸಿಗೆ ಹಿಡಿದಿದ್ದರು. ಮತ್ತು ಇಂದು ಅವರು ನಿಧನರಾಗಿದ್ದಾರೆ ಎಂದು ಅವರ ಮಗ ನೋಮನ್ ನಜೀರ್ ದೃಢಪಡಿಸಿದ್ದಾರೆ.

ಪಾಕ್ ಕ್ರಿಕೆಟ್‌ ಮಂಡಳಿಗೆ ಸಹಾಯಕ್ಕೆ ಮನವಿ

‘ನನ್ನ ತಂದೆ ಸುಮಾರು ಐದು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ನಂತರ ಅವರು ತಮ್ಮ ಆರೋಗ್ಯ ಸಮಸ್ಯೆಗಳಿಂದ ಹೊರಬರಲಿಲ್ಲ ಮತ್ತು ಕಳೆದ ಕೆಲವು ತಿಂಗಳುಗಳಿಂದ ಹಾಸಿಗೆ ಹಿಡಿದಿದ್ದರು. ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ’ ಎಂದು ನೋಮನ್ ದೃಢಪಡಿಸಿದ್ದಾರೆ. ನೋಮನ್ ಕಳೆದ ವಾರ ತಮ್ಮ ಅನಾರೋಗ್ಯ ಪೀಡಿತ ತಂದೆಗೆ ಸಹಾಯ ಮಾಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದ್ದರು.

ಇದನ್ನೂ ಓದಿ: IPL 2025: ಐಪಿಎಲ್‌ ಇತಿಹಾಸದಲ್ಲೇ ಅದೊಂದು ‘ಬಿಗ್ ಮಿಸ್ಟೇಕ್’! ಧೋನಿಯಿಂದ ಶಾಕಿಂಗ್ ಸ್ಟೇಟ್‌ಮೆಂಟ್

ಇಮ್ರಾನ್ ನಾಯಕತ್ವದ ತಂಡದಲ್ಲಿ ಆಡಿದ್ದ ನಜೀರ್

1979/80 ರಲ್ಲಿ ಇಮ್ರಾನ್ ಖಾನ್ ಐದು ವರ್ಷಗಳ ಅಂತರದ ನಂತರ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ಆಡಲು ಪಾಕಿಸ್ತಾನ ತಂಡಕ್ಕೆ ಕರೆಸಿಕೊಂಡಾಗ ನಜೀರ್ ಜೂನಿಯರ್ ತಮ್ಮ ಆಫ್-ಸ್ಪಿನ್ ಬೌಲಿಂಗ್‌ನಿಂದ ಖ್ಯಾತಿ ಗಳಿಸಿದ್ದರು. ನಜೀರ್ ಅವರ ನಿಧಾನಗತಿಯ ಬೌಲಿಂಗ್ ರಿಚರ್ಡ್ಸ್ ಸೇರಿದಂತೆ ಪ್ರವಾಸಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸುವಲ್ಲಿ ದೊಡ್ಡ ಪಾತ್ರ ವಹಿಸಿತ್ತು. ಇವರ ಬೌಲಿಂಗ್‌ನಿಂದಾಗಿ ಪಾಕಿಸ್ತಾನ ಸರಣಿ ಗೆದ್ದು ಬೀಗಿತ್ತು. ಮಾತ್ರವಲ್ಲ ತಂಡಕ್ಕೆ ಸೇರಿಸಿಕೊಂಡಿದ್ದ ಇಮ್ರಾನ್ ಖಾನ್ ಅವರ ಆಯ್ಕೆಯನ್ನು ಅವರು ಸಮರ್ಥಿಸಿಕೊಂಡಿದ್ದರು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 800ಕ್ಕೂ ಅಧಿಕ ವಿಕೆಟ್

ಮುಹಮ್ಮದ್ ನಜೀರ್ ಜೂನಿಯರ್ 800 ಕ್ಕೂ ಹೆಚ್ಚು ಪ್ರಥಮ ದರ್ಜೆ ವಿಕೆಟ್‌ಗಳನ್ನು ಪಡೆದಿದ್ದಾರೆ. ಭಾರತ ವಿರುದ್ಧದ ಸರಣಿ ಸೇರಿದಂತೆ 14 ಟೆಸ್ಟ್‌ ಮತ್ತು 4 ಏಕದಿನ ಪಂದ್ಯಗಳನ್ನು ಅವರು ಪಾಕಿಸ್ತಾನ ತಂಡದ ಪರ ಆಡಿದ್ದಾರೆ. ಇದಾದ ಬಳಿಕ ಅವರು ಅಂಪೈರಿಂಗ್ ಜವಾಬ್ದಾರಿ ಕೂಡ ನಿರ್ವಹಿಸಿದ್ದಾರೆ. ಅವರು 5 ಟೆಸ್ಟ್‌ಗಳು ಮತ್ತು 15 ಏಕದಿನ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದಾರೆ.