Last Updated:
ದಕ್ಷಿಣ ಕನ್ನಡದಲ್ಲಿ ಬೇಸಿಗೆ ಕಾಲದ ತಾಟಿ ಹಣ್ಣು ಈಗ ತಮಿಳುನಾಡಿನಿಂದ ಬರುತ್ತಿದ್ದು,
ಡಿಸೆಂಬರ್, ಜನವರಿ, ಫೆಬ್ರವರಿಯಲ್ಲೇ ಸಿಗುತ್ತಿದೆ. ತಾಟಿ ಹಣ್ಣು ದೇಹದ ಉಷ್ಣಾಂಶ ತಗ್ಗಿಸಲು ಜನಪ್ರಿಯವಾಗಿದೆ.
ದಕ್ಷಿಣ ಕನ್ನಡ: ಬೇಸಿಗೆ (Summer) ಕಾಲದಲ್ಲಿ ನಮ್ಮ ದಾಹವನ್ನು ತಣಿಸಲು ನಿಸರ್ಗ ನಮಗೆ ತನ್ನ ಹಲವಾರು ಉತ್ಪನ್ನಗಳನ್ನು ವರದಾನವಾಗಿ ಕೊಡುತ್ತಿದೆ. ಉದಾಹರಣೆಗೆ ಎಳನೀರು, ನಿಂಬೆಹಣ್ಣು, ತಾಳೆಹಣ್ಣು, ಕರ್ಬುಜ ಹಣ್ಣು, ಇವೆಲ್ಲವೂ ಸಹ ಬೇಸಿಗೆ ಕಾಲದಲ್ಲಿ ಜನರ (People) ದೇಹವನ್ನು ತಂಪು ಮಾಡಲು ತಯಾರಿರುತ್ತವೆ. ಎಲ್ಲಾ ಪ್ರದೇಶಗಳಲ್ಲಿಯೂ ಇವುಗಳು ಸಿಗುತ್ತವೆ. ಅದರಲ್ಲೂ ಮಟ ಮಟ ಮಧ್ಯಾಹ್ನದ ಬಿಸಿಲಿನಲ್ಲಿ ತಾಟಿ ಹಣ್ಣಿನ (Palm Fruit) ಜ್ಯೂಸ್ ಅಥವಾ ಈ ಹಣ್ಣಿನ ತೊಳೆಗಳನ್ನು ತಿನ್ನಬೇಕು ಎಂದು ಪ್ರತಿಯೊಬ್ಬರೂ ಸಹ ಅಂದುಕೊಳ್ಳುತ್ತಾರೆ. ಅದು ಅಲ್ಲದೇ ಇದು ವರ್ಷಕ್ಕೆ ಕೇವಲ ಒಂದು ಬಾರಿ ಬರುವ ಬೆಳೆ ಮಾತ್ರ. ಅದೇ ಪ್ರಕಾರ ಕರಾವಳಿ (Coastal) ಭಾಗದಲ್ಲಿ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಂಡುಬರುವ ತಾಳೆ ಹಣ್ಣು (ತಾಟಿ ಹಣ್ಣು, ಐಸ್ ಆಪಲ್ ಅಥವಾ ಈರೋಳ್) ಈ ಭಾಗದ ಜನರ ದಾಹದ ಜೊತೆಗೆ ಇಲ್ಲಿನ ಉಷ್ಣಾಂಶದಿಂದ ಬಿಸಿಯೇರುವ ದೇಹದ ಉಷ್ಣಾಂಶವನ್ನೂ ತಣ್ಣಗೆ ಮಾಡುತ್ತೆ. ಆದ್ರೆ ಈಗ ಚಳಿಗಾಲದಲ್ಲೂ ಮಾರಾಟ ಜೋರಾಗಿದೆ. ಏಕೆ ಅಂತ ನೋಡಿ.
ಕರಾವಳಿಯಲ್ಲಿ ಯತೇಚ್ಛವಾಗಿ ಸಿಗುತ್ತಿದ್ದ ತಾಳೆ ಬದಲಿಗೆ ತಮಿಳುನಾಡಿನಿಂದ ಜಿಲ್ಲೆಗೆ ಸಾಕಷ್ಟು ಪ್ರಮಾಣದಲ್ಲಿ ತಾಳೆಹಣ್ಣುಗಳು ಬರುತ್ತಿವೆ. ಕರಾವಳಿಯಲ್ಲಿ ಈ ಹಣ್ಣು ಜನವರಿ, ಫೆಬ್ರವರಿ ತಿಂಗಳಿನಲ್ಲಿ ತಿನ್ನಲು ಯೋಗ್ಯವಾದ ಸ್ಥಿತಿಗೆ ಬಂದರೆ ತಮಿಳುನಾಡಿನ ಹಣ್ಣುಗಳು ಈಗಲೇ ತಿನ್ನಲು ಯೋಗ್ಯವಾಗಿ ಬೆಳೆಯುವ ಹಿನ್ನಲೆಯಲ್ಲಿ ಆ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಣ್ಣುಗಳು ದಕ್ಷಿಣ ಕನ್ನಡ ಜಿಲ್ಲೆಗೆ ಬರುತ್ತಿವೆ. ನೂರು ರೂಪಾಯಿಗೆ ಮೂರು ಹಣ್ಣುಗಳಂತೆ ಇದು ಮಾರಾಟವಾಗುತ್ತಿದ್ದು, ಒಂದು ಹಣ್ಣಿನಲ್ಲಿ ಸಾಮಾನ್ಯವಾಗಿ 3 ಕಣ್ಣಿನಾಕಾರದ ಪಲ್ಪ್ ತಿನ್ನಲು ಸಿಗುತ್ತದೆ.
ನೋಡಲು ಪುಟ್ಟ ತೆಂಗಿನ ಕಾಯಿ ರೀತಿ ಕಾಣುವ ತಾಟಿ ಹಣ್ಣುಗಳು ಮರದಲ್ಲಿ ಗುಂಪು ಗುಂಪಾಗಿ ಕಂಡು ಬರುತ್ತವೆ. ತೆಂಗಿನಕಾಯಿಯ ರೀತಿ ಇದನ್ನು ಸಿಪ್ಪೆ ಸುಲಿದು ಒಳಗೆ ಹಲಸಿನ ತೊಳೆಯಂತಹ ಮೂರು ತೊಳೆಗಳು ಕಂಡುಬರುತ್ತವೆ.
ತಾಟಿ ಹಣ್ಣಿನಲ್ಲಿ ತಾಪಮಾನವನ್ನು ತಂಪು ಮಾಡುವ ಗುಣ ಲಕ್ಷಣಗಳು ಹೆಚ್ಚಾಗಿವೆ. ಹಾಗಾಗಿ ಇವುಗಳಿಂದ ಜ್ಯೂಸ್ ತಯಾರು ಮಾಡಿ ಸೇವಿಸಲಾಗುತ್ತದೆ.
Dakshina Kannada,Karnataka
December 15, 2025 4:14 PM IST