Last Updated:
ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾವನ್ನು 180 ರನ್ಗಳಿಗೆ ಆಲೌಟ್ ಮಾಡಿ ತಂಡದ ಮೇಲೆ ಹಿಡಿತ ಸಾಧಿಸಿತು. ಆದರೆ ಆಸ್ಟ್ರೇಲಿಯಾದ ಭಯಾನಕ ವೇಗದ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ಕೇವಲ 190 ರನ್ಗಳಿಗೆ ಕಟ್ಟಿಹಾಕಿದರು.
ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ (West Indies vs Australia) ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ ಬಾರ್ಬಡೋಸ್ನಲ್ಲಿ ನಡೆಯಿತು. ಈ ಪಂದ್ಯವನ್ನು ಆಸ್ಟ್ರೇಲಿಯಾ 159 ರನ್ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾವನ್ನು 180 ರನ್ಗಳಿಗೆ ಆಲೌಟ್ ಮಾಡಿ ತಂಡದ ಮೇಲೆ ಹಿಡಿತ ಸಾಧಿಸಿತು. ಆದರೆ ಆಸ್ಟ್ರೇಲಿಯಾದ ಭಯಾನಕ ವೇಗದ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ಕೇವಲ 190 ರನ್ಗಳಿಗೆ ಕಟ್ಟಿಹಾಕಿದರು.
ಟ್ರಾವಿಸ್ ಹೆಡ್, ಬ್ಯೂ ವೆಬ್ಸ್ಟರ್ ಮತ್ತು ಅಲೆಕ್ಸ್ ಕ್ಯಾರಿ ಅವರ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 310 ರನ್ ಗಳಿಸಿತು. 300 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 141 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಬರೋಬ್ಬರಿ 159 ರನ್ಗಳ ಅಂತರದಲ್ಲಿ ಗೆದ್ದು ಬೀಗಿತು. ಈ ಪಂದ್ಯದ ಮೂಲಕ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ವಿಶೇಷ ದಾಖಲೆ ಬರೆದರು.
ಆಸ್ಟ್ರೇಲಿಯಾದ ಅತಿದೊಡ್ಡ ಶಕ್ತಿ ಎಂದರೆ ಅದು ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್, ವೇಗಿಗಳಾದ ಜೋಶ್ ಹ್ಯಾಜಲ್ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಈ ವೇಗದ ಬೌಲರ್ಗಳು ಯಾವುದೇ ಸಂದರ್ಭದಲ್ಲಿಯಾದ್ರು ಎದುರಾಳಿ ಆಟಗಾರರನ್ನು ಕಟ್ಟಿಹಾಕುತ್ತಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ನಲ್ಲಿ ಕೂಡ ಈ ಮೂವರು ವೇಗಿಗಳು ಕಮಾಲ್ ಮಾಡಿದರು. ವಿಂಡೀಸ್ನ 20 ವಿಕೆಟ್ಗಳಲ್ಲಿ ಈ ಇಬ್ಬರು ಬರೋಬ್ಬರಿ 14 ವಿಕೆಟ್ ಪಡೆದು ಮಿಂಚಿದರು.
ಈ ನಡುವೆ ಕಮಿನ್ಸ್ ವೆಸ್ಟ್ ಇಂಡೀಸ್ ನಾಯಕ ರೋಸ್ಟನ್ ಚೇಸ್ ಅವರ ವಿಕೆಟ್ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದರು. ಹೌದು ಕಮಿನ್ಸ್ ಅವರು ನಾಯಕನಾಗಿ ವಿಶ್ವದ 10 ಮಂದಿ ನಾಯಕರನ್ನು ಔಟ್ ಮಾಡಿದ ಸಾಧನೆ ಮಾಡಿದ ವಿಶ್ವದ ಮೊದಲ ನಾಯಕ ಎನಿಸಿಕೊಂಡರು. ಕಮ್ಮಿನ್ಸ್ ತಮ್ಮ ವೃತ್ತಿಜೀವನದಲ್ಲಿ ರೋಹಿತ್ ಶರ್ಮಾ ಅವರನ್ನು 6 ಬಾರಿ, ಡೀನ್ ಎಲ್ಗರ್ ಅವರನ್ನು 3 ಬಾರಿ, ಬೆನ್ ಸ್ಟೋಕ್ಸ್, ಟೆಂಬಾ ಬವುಮಾ, ಕ್ರೈಗ್ ಬ್ರಾಥ್ವೈಟ್, ಟಿಮ್ ಸೌಥಿ ಅವರನ್ನು ತಲಾ ಎರಡು ಬಾರಿ ಮತ್ತು ಜೋ ರೂಟ್, ಶಾನ್ ಮಸೂದ್, ಜಸ್ಪ್ರೀತ್ ಬುಮ್ರಾ ಮತ್ತು ರೋಸ್ಟನ್ ಚೇಸ್ ಅವರನ್ನು ಒಮ್ಮೆ ಔಟ್ ಮಾಡಿದ್ದಾರೆ. ಮಾತ್ರವಲ್ಲ, ಕಮಿನ್ಸ್ ಕಳೆದ 6 ಪಂದ್ಯಗಳಲ್ಲಿ ಎದುರಾಳಿ ನಾಯಕನನ್ನು 6 ಬಾರಿ ಔಟ್ ಮಾಡಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕ ರಿಚಿ ಬೆನಾಡ್ ಅವರ 63 ವರ್ಷಗಳ ಹಳೆಯ ದಾಖಲೆಯನ್ನು ಮುತಿದರು. ಅವರು ಆಸ್ಟ್ರೇಲಿಯಾ ಟೆಸ್ಟ್ ನಾಯಕನಾಗಿ 138 ವಿಕೆಟ್ ಪಡಿದ್ದಾರೆ. ಸದ್ಯ, ಕಮಿನ್ಸ್ ನಾಯಕನಾಗಿ 140 ವಿಕೆಟ್ಗಳನ್ನು ಪಡೆದಿದ್ದಾರೆ. ಆ ಮೂಲಕ ಬೆನಾಡ್ ದಾಖಲೆ ಮುರಿದಿದ್ದಾರೆ. ನಾಯಕನಾಗಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಪಾಕಿಸ್ತಾನದ ದಿಗ್ಗಜ ಇಮ್ರಾನ್ ಖಾನ್ ಅವರ ಹೆಸರಿನಲ್ಲಿದೆ, ಅವರು ನಾಯಕನಾಗಿ 187 ವಿಕೆಟ್ಗಳನ್ನು ಪಡೆದಿದ್ದಾರೆ.
ನ್ಯೂಸ್ 18 ಕನ್ನಡ ಕ್ರೀಡಾ ವಿಭಾಗದಲ್ಲಿ ಕ್ರಿಕೆಟ್ ಅಪ್ಡೇಟ್ಸ್, ಮ್ಯಾಚ್ ಅಪ್ಡೇಟ್ಸ್, ಮ್ಯಾಚ್ ರಿವೀವ್ಸ್, ಲೈವ್ ಸ್ಕೋರ್ಗಳು, ಪಂದ್ಯ ವಿಶ್ಲೇಷಣೆ, ಆಟಗಾರರ ಪ್ರೊಫೈಲ್ಗಳು ಮತ್ತು ಇತರ ಕ್ರೀಡೆಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಿರಿ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
June 28, 2025 2:52 PM IST
Pat Cummins: ಟೆಸ್ಟ್ ಕ್ರಿಕೆಟ್ನಲ್ಲಿ ವಿಶ್ವದಾಖಲೆ ಬರೆದ ಆಸಿಸ್ ನಾಯಕ! ಜಗತ್ತಿನ ಯಾವುದೇ ಆಟಗಾರನಿಂದ ಮಾಡಲಾಗದ ಸಾಧನೆ ಮಾಡಿದ ಕಮಿನ್ಸ್