Patriotic Tourism: ಪುತ್ತೂರಿಗೆ ಬಂದವರು ಈ ಕಟ್ಟೆ ಮಿಸ್‌ ಮಾಡ್ಕೋಬೇಡಿ, ನೀವು ದೇಶವನ್ನು ಪ್ರೀತಿಸುತ್ತೀರಾ? ಹಾಗಾದರೆ ಇಲ್ಲಿ 5 ನಿಮಿಷ ಕೂರಲೇಬೇಕು! | The story of Gandhikatte in Puttur shining as a beacon of patriotism | ದಕ್ಷಿಣ ಕನ್ನಡ

Patriotic Tourism: ಪುತ್ತೂರಿಗೆ ಬಂದವರು ಈ ಕಟ್ಟೆ ಮಿಸ್‌ ಮಾಡ್ಕೋಬೇಡಿ, ನೀವು ದೇಶವನ್ನು ಪ್ರೀತಿಸುತ್ತೀರಾ? ಹಾಗಾದರೆ ಇಲ್ಲಿ 5 ನಿಮಿಷ ಕೂರಲೇಬೇಕು! | The story of Gandhikatte in Puttur shining as a beacon of patriotism | ದಕ್ಷಿಣ ಕನ್ನಡ

Last Updated:

ಪುತ್ತೂರಿನ ಗಾಂಧಿಕಟ್ಟೆ ಗಾಂಧೀಜಿ 1934ರಲ್ಲಿ ಭಾಷಣ ಮಾಡಿದ ಸ್ಥಳವಾಗಿ ರಾಷ್ಟ್ರಭಕ್ತಿಯ ಪ್ರತೀಕವಾಗಿದೆ. ಪ್ರತಿವರ್ಷ ರಾಷ್ಟ್ರೀಯ ಹಬ್ಬಗಳನ್ನು ಇಲ್ಲಿ ಆಚರಿಸಲಾಗುತ್ತದೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣಕನ್ನಡ: ಇದು ಅಂತಿಂಥಾ ಕಟ್ಟೆಯಲ್ಲ, ತುಳುನಾಡಿನಲ್ಲಿ ಮಾನವ (Human) ಜನ್ಮದಲ್ಲಿ ಉಪಕಾರ ಮಾಡಿ ತೀರಿದವರನ್ನು ದೈವತ್ವಕ್ಕೇರಿಸಿ “ಕಟ್ಟೆ”ಗಳಲ್ಲಿ ಆರಾಧಿಸುವುದು (Devotion) ರೂಢಿ. ಆದರೆ ಕಟ್ಟೆ ತುಳುನಾಡಿಗೆ ಸಂಬಂಧಿಸಿದ್ದಲ್ಲ ಬದಲಿಗೆ ಇಡೀ ಭಾರತಕ್ಕೆ (India) ಸಂಬಂಧಿಸಿದ ಕಟ್ಟೆ! ಹೌದು, ಕಟ್ಟೆ ಈಗ ಪುಣ್ಯ ಪುರುಷರೊಬ್ಬರ ಹೆಸರಲ್ಲಿ ರಾಷ್ಟ್ರಭಕ್ತಿ ಉದ್ದೀಪನೆಗೊಳಿಸುವ ಜ್ಯೋತಿ (Light) ಆಗಿ ಬೆಳಗುತ್ತಿದೆ‌.

ಮಂಗಳೂರಿಗೆ 3 ಬಾರಿ ಭೇಟಿ ನೀಡಿದ್ದರು ಗಾಂಧೀಜಿ

ರಾಷ್ಟ್ರಪಿತ ಮಹಾತ್ಮಾಗಾಂಧಿಯವರು ದೇಶವನ್ನೆಲ್ಲಾ ಸುತ್ತಿ ಸಂಘಟಿಸಿದ ಮಹನೀಯರು. ಆ ಹಿನ್ನಲೆಯಲ್ಲಿ ಮೂರು ಸಲ ಮಂಗಳೂರಿಗೆ ಬರುವ ಜರೂರತ್ತೂ ಕೂಡ ಬಂದಿತ್ತು. ಸ್ವಾತಂತ್ರ್ಯ ಹೋರಾಟದ ಆ ಕಾಲದಲ್ಲಿ ಬ್ರಿಟಿಷರ ವಿರುದ್ಧ ತನ್ನ ಅಹಿಂಸಾತ್ಮಕ ಹೋರಾಟವನ್ನು ಕಿಚ್ಚನ್ನು ಹಚ್ಚಿದವರು ಗಾಂಧೀಜಿ. ಹೀಗೆ ದೇಶದೆಲ್ಲೆಡೆ ಸಂಚರಿಸಿ ದೇಶದ ಜನರನ್ನು ಒಗ್ಗೂಡಿಸಿದ್ದ ಗಾಂಧೀಜಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿಗೂ ಆಗಮಿಸಿದ್ದರು. 1934 ರಲ್ಲಿ ಪುತ್ತೂರು ನಗರದ ಮಧ್ಯಭಾಗದಲ್ಲಿರುವ ಕಟ್ಟೆಯಲ್ಲಿ ಅಂದು ಗಾಂಧೀಜಿ ಕುಳಿತು ಸಾರ್ವಜನಿಕ ಭಾಷಣವನ್ನು ಮಾಡಿದ್ದರು. ಗಾಂಧೀಜಿ ಕುಳಿತು ಭಾಷಣ ಮಾಡಿದ್ದ ಕಟ್ಟೆ ಕ್ರಮೇಣ ಗಾಂಧಿ ಕಟ್ಟೆಯಾಗಿ ಹೆಸರುವಾಸಿಯಾಗಿದೆ.

ಗಾಂಧೀಕಟ್ಟೆ ಈಗ ದೇಶಭಕ್ತಿಯ ದ್ಯೋತಕ

ಗಾಂಧೀಜಿ ಪುತ್ತೂರಿಗೆ ಬಂದು ಹೋದ ಬಳಿಕವೂ ಪ್ರತೀವರ್ಷ ಗಾಂಧೀಜಿಯನ್ನು ಗಾಂಧೀ‌ಕಟ್ಟೆಯ ಮೂಲಕ ನೆನಪಿಸುವ ಕಾರ್ಯ ಪುತ್ತೂರಿನಲ್ಲಿ ನಡೆದಿದೆ. ಗಾಂಧಿಯ ಜನ್ಮದಿನಾಚರಣೆಯನ್ನು ಪ್ರತೀ ವರ್ಷ ಇದೇ ಗಾಂಧೀಕಟ್ಟೆಯಲ್ಲಿ ಆಚರಣೆ ಮಾಡುವ ಸಂಪ್ರದಾಯವೂ ನಡೆದುಕೊಂಡು ಬಂದಿದೆ. ದುಸ್ಥಿತಿಯಲ್ಲಿದ್ದ ಗಾಂಧಿಕಟ್ಟೆಯನ್ನು ಇತ್ತೀಚಿನ ಕೆಲವು ವರ್ಷಗಳ ಹಿಂದೆ ನವೀಕರಿಸುವ ಕಾರ್ಯ ನಡೆದಿದೆ‌.

ಗಾಂಧಿ ಮತ್ತು ಕಾನೂನು, ಗೆದ್ದಿದ್ದು ಶಾಂತಿ ಪ್ರಿಯ ಮಹಾತ್ಮ

ವಿಪರ್ಯಾಸವೆಂದರೆ ಒಂದು ಕಾನೂನು ಸಂಘರ್ಷದಲ್ಲಿ ಇಲ್ಲಿನ ಗಾಂಧೀತಾತ ಪಾರತಂತ್ರ್ಯ ಅನುಭವಿಸಿ ಈಗ ಸ್ವತಂತ್ರನಾಗಿದ್ದಾನೆ. ಇದರ ನವೀಕರಣ ಕಾರ್ಯಕ್ಕೆ ಕೋರ್ಟ್ ಕೆಲ ನಿಬಂಧನೆ ಹಾಕಿದ್ದರಿಂದ ಆ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಕಳೆದ ಐದು ವರ್ಷದಲ್ಲಿ ಕ್ರಮೇಣ ಆ ಕಟ್ಟಳೆಗಳು ತೆರುವಾಗಿ ಈ ಗಾಂಧಿ ಕಟ್ಟೆ ಈಗ ಸ್ವಾತಂತ್ರ್ಯ ಚರಿತೆಯ ಕಥೆ ಹೇಳುವ ತಾಣವಾಗಿದೆ.

ಗಾಂಧಿ ಹಾದಿಯನ್ನು ನೆನಪಿಸೋ ಕಟ್ಟೆ

ಇದನ್ನೂ ಓದಿ: Achievement: ತಮಿಳುನಾಡಲ್ಲಿ ತುಳುನಾಡ ʼಪೊಣ್ʼ ಗಳ ಜಯಭೇರಿ, ಪಡುಮಲೆಯಲ್ಲಿ ಹಬ್ಬದ ವಾತಾವರಣ!

ಗಾಂಧಿಕಟ್ಟೆ ಸಮಿತಿ ಎನ್ನುವ ಸಮಿತಿಯನ್ನೂ ರಚಿಸಲಾಗಿದೆ. ಪುತ್ತೂರು ಸಹಾಯಕ ಆಯುಕ್ತರ ನೇತೃತ್ವದ ಈ ಸಮಿತಿಯು ಪ್ರತಿವರ್ಷ ಗಾಂಧಿಕಟ್ಟೆಯಲ್ಲಿ ಗಾಂಧಿ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ. ಗಾಂಧೀಜಿಯ ಪ್ರತಿಮೆಗೆ ಹಾರಾರ್ಪಣೆ ಮಾಡಿ, ಭಜನೆಯನ್ನು ಹಾಡುವ ಮೂಲಕ ಇಲ್ಲಿ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಗಾಂಧಿಕಟ್ಟೆಯಲ್ಲಿ ಗಾಂಧಿ‌ ಬಂದ ಕಥೆಗಳನ್ನೂ ಸಾರ್ವಜನಿಕರಿಗೆ ಹೇಳುವ ವ್ಯವಸ್ಥೆಯೂ ಪ್ರತಿ ಬಾರಿ ಇಲ್ಲಿ ನಡೆಯುತ್ತದೆ.