Last Updated:
ಪ್ಲೇ ಆಫ್ ಪ್ರವೇಶದ ಮೇಲೆ ಕಣ್ಣಿಟ್ಟಿರುವ ಪಂಜಾಬ್ ಕಿಂಗ್ಸ್ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸಿಡಿಲಬ್ಬರ ಬ್ಯಾಟಿಂಗ್ ಮಾಡಿ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ 237 ರನ್ಗಳ ಬೃಹತ್ ಗುರಿ ನೀಡಿದೆ.
ಪ್ಲೇ ಆಫ್ ಪ್ರವೇಶದ ಮೇಲೆ ಕಣ್ಣಿಟ್ಟಿರುವ ಪಂಜಾಬ್ ಕಿಂಗ್ಸ್ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸಿಡಿಲಬ್ಬರ ಬ್ಯಾಟಿಂಗ್ ಮಾಡಿ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ 237 ರನ್ಗಳ ಬೃಹತ್ ಗುರಿ ನೀಡಿದೆ. ಧರ್ಮಶಾಲದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಪ್ರಭಸಿಮ್ರನ್ ಸಿಂಗ್ (91) ಅರ್ಧಶತಕ ಹಾಗೂ ಶ್ರೇಯಸ್ ಅಯ್ಯರ್ (45), ಜೋಶ್ ಇಂಗ್ಲಿಸ್ (30) ಹಾಗೂ ಶಶಾಂಕ್ ಸಿಂಗ್ (33) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 236 ಮೊತ್ತ ದಾಖಲಿಸಿತು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಮೊದಲ ಓವರ್ನಲ್ಲೇ ಪ್ರಿಯಾಂಶ್ (1) ವಿಕೆಟ್ ಬೇಗ ಕಳೆದುಕೊಂಡಿತು. 3ನೇ ಕ್ರಮಾಂಕದಲ್ಲಿ ಬಡ್ತಿ ಪಡೆದಯ ಬಂದ ಜೋಸ್ ಇಂಗ್ಲಿಸ್ 2ನೇ ವಿಕೆಟ್ಗೆ ಪ್ರಭಸಿಮ್ರನ್ ಸಿಂಗ್ ಜೊತೆ ಸೇರಿ 22 ಎಸೆತಗಳಲ್ಲಿ 48 ರನ್ ಸೇರಿಸಿದರು. ಇಂಗ್ಲಿಸ್ 14 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ಸಹಿತ 30 ರನ್ಗಳಿಸಿ ಔಟ್ ಆದರು. ನಂತರ ಬಂದ ಶ್ರೇಯಸ್ ಅಯ್ಯರ್ ಕೂಡ ಅಬ್ಬರದಾಟವನ್ನ ಮುಂದುವರಿಸಿದರು.
ಶ್ರೇಯಸ್ ಅಯ್ಯರ್ ಹಾಗೂ ಪ್ರಭಸಿಮ್ರನ್ ಸಿಂಗ್ 47 ಎಸೆತಗಳಲ್ಲಿ 78 ರನ್ಗಳ ಜೊತೆಯಾಟ ನಡೆಸಿದರು. ಅಯ್ಯರ್ 25 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 45 ರನ್ಗಳಿಸಿದರು. ಪ್ರಭಸಿಮ್ರನ್ ಸಿಂಗ್ 48 ಎಸೆತಗಳಲ್ಲಿ 6 ಬೌಂಡರಿ, 7 ಸಿಕ್ಸರ್ಗಳ ಸಹಿತ 91 ರನ್ಗಳಿಸಿ 19ನೇ ಓವರ್ನಲ್ಲಿ ಔಟ್ ಆಗಿ ಕೇವಲ 9 ರನ್ಗಳಿಂದ ಶತಕ ಮಿಸ್ ಮಾಡಿಕೊಂಡರು. ಕೊನೆಯಲ್ಲಿ ಅಬ್ಬರಿಸಿದ ಶಶಾಂಕ್ ಸಿಂಗ್ 15 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 33, ಮಾರ್ಕಸ್ ಸ್ಟೋಯಿನಿಸ್ 5 ಎಸೆತಗಳಲ್ಲಿ ಅಜೇಯ 15 ರನ್ಗಳಿಸಿದರು.
ಲಖನೌ ಸೂಪರ್ ಜೈಂಟ್ಸ್ ಪರ ಇಂದೇ ಮೊದಲ ಅವಕಾಶ ಪಡೆದಿದ್ದ ಆಕಾಶ್ ಸಿಂಗ್ 30ಕ್ಕೆ2, ದಿಗ್ವೇಶ್ ಸಿಂಗ್ ರಾಠಿ 46ಕ್ಕೆ 2 ವಿಕೆಟ್, ಪ್ರಿನ್ಸ್ ಯಾದವ್ 43ಕ್ಕೆ1 ವಿಕೆಟ್ ಪಡೆದರು.