PBKS vs LSG: ಲಖನೌ ಸೂಪರ್​ ಜೈಂಟ್ಸ್​ಗೆ ಮತ್ತೊಂದು ಹೀನಾಯ ಸೋಲು! 37 ರನ್​ಗಳಿಂದ ಗೆದ್ದು 2ನೇ ಸ್ಥಾನಕ್ಕೇರಿದ ಪಂಜಾಬ್ | ipl 2025 punjab kings beat lucknow super giants by 37 runs

PBKS vs LSG: ಲಖನೌ ಸೂಪರ್​ ಜೈಂಟ್ಸ್​ಗೆ ಮತ್ತೊಂದು ಹೀನಾಯ ಸೋಲು! 37 ರನ್​ಗಳಿಂದ ಗೆದ್ದು 2ನೇ ಸ್ಥಾನಕ್ಕೇರಿದ ಪಂಜಾಬ್ | ipl 2025 punjab kings beat lucknow super giants by 37 runs

Last Updated:

ಪಂಜಾಬ್ ಕಿಂಗ್ಸ್ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 37 ರನ್​ಗಳ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. 237 ರನ್​ಗಳ ಗುರಿ ಬೆನ್ನಟ್ಟಿದ ಲಖನೌ 199 ರನ್​ಗಳಿಗೆ ಸೀಮಿತವಾಯಿತು.

ಪಂಜಾಬ್ ಕಿಂಗ್ಸ್ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್

ಸಂಘಟಿತ ಪ್ರದರ್ಶನ ತೋರಿದ ಪಂಜಾಬ್ ಕಿಂಗ್ಸ್​ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 37 ರನ್​ಗಳ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಧರ್ಮಾಶಾಲಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 236 ರನ್​ಗಳ ಬೃಹತ್ ಮೊತ್ತ ದಾಖಲಿಸಿತ್ತು. 237 ರನ್​ಗಳ ಗುರಿ ಬೆನ್ನಟ್ಟಿದ ಲಖನೌ ಸೂಪರ್ ಜೈಂಟ್ಸ್ ಆಯುಷ್ ಬದೋನಿ (74) ಹಾಗೂ ಅಬ್ದುಲ್ (45) ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ 20 ಓವರ್ಗಳಲ್ಲಿ ವಿಕೆಟ್ ಕಳೆದುಕೊಂಡು 199 ರನ್​ಗಳಿಸಿದಷ್ಟೇ ಶಕ್ತವಾಯಿತು.