Last Updated:
ಶನಿವಾರ ನಡೆಯಲಿರುವ ಡಬ್ಲ್ಯುಸಿಎಲ್-2025ರ ಫೈನಲ್‌ನಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ತಂಡವು ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡವನ್ನು ಎದುರಿಸಲಿದೆ. ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೆಲಿಯಾ ಚಾಂಪಿಯನ್ಸ್ ವಿರುದ್ಧ 1 ರನ್ ರೋಚಕ ಜಯ ಸಾಧಿಸಿ ಫೈನಲ್ ತಲುಪಿದೆ. ಶನಿವಾರ ಫೈನಲ್ ಪಂದ್ಯ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿದೆ.
ವಿಶ್ವ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ (WCL)-2025ರ ಸೆಮಿಫೈನಲ್‌ನಲ್ಲಿ ಭಾರತ ಚಾಂಪಿಯನ್ಸ್ (India Champions) ತಂಡವು ದೀರ್ಘಕಾಲದ ಪ್ರತಿಸ್ಪರ್ಧಿ ಪಾಕಿಸ್ತಾನ ಚಾಂಪಿಯನ್ಸ್ (Pakistan Champions) ವಿರುದ್ಧ ಆಡದೆ ಹಿಂದೆ ಸರಿದಿದೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಭಯೋತ್ಪಾದನೆಯನ್ನು ಉತ್ತೇಜಿಸುವ ದೇಶದೊಂದಿಗೆ ಕ್ರೀಡೆಯಲ್ಲಿ ಯಾವುದೇ ಸಂಬಂಧ ಹೊಂದಲು ಇಷ್ಟವಿಲ್ಲ ಎಂದು ಭಾರತೀಯ ಆಟಗಾರರು ಪಂದ್ಯವನ್ನು ಬಹಿಷ್ಕರಿಸಿದ್ದಾರೆ. ದೇಶದ ಘನತೆಗೆ ಮೊದಲ ಆದ್ಯತೆ ನೀಡಿ ಈ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ಭಾರತ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯಿತು, ಆದರೆ ಪಾಕಿಸ್ತಾನ ಚಾಂಪಿಯನ್ಸ್ ನೇರವಾಗಿ ಫೈನಲ್‌ಗೆ ತಲುಪಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಖಾಸಗಿ ಕ್ರಿಕೆಟ್ ಲೀಗ್‌ಗಳಲ್ಲಿ ದೇಶದ ಹೆಸರನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಸುದ್ದಿ ಸಂಸ್ಥೆ ಎಎನ್‌ಐ ವರದಿಯ ಪ್ರಕಾರ, “ಖಾಸಗಿ ಕಂಪನಿಗಳು ಪಾಕಿಸ್ತಾನದ ಹೆಸರನ್ನು ತಮ್ಮ ಲೀಗ್‌ಗಳಲ್ಲಿ ಬಳಸಿದರೆ, ಕಾನೂನು ಕ್ರಮ ಕೈಗೊಳ್ಳುತ್ತೇವೆ,” ಎಂದು ಪಿಸಿಬಿ ತಿಳಿಸಿದೆ. ಗುರುವಾರ ನಡೆದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. “ಡಬ್ಲ್ಯುಸಿಎಲ್‌ನಲ್ಲಿ ಭಾರತದ ಬಹಿಷ್ಕಾರವು ದೇಶದ ಘನತೆಗೆ ಕಳಂಕ ತಂದಿದೆ. ಹೀಗಾಗಿ ಖಾಸಗಿ ಲೀಗ್‌ಗಳಲ್ಲಿ ದೇಶದ ಹೆಸರನ್ನು ಬಳಸದಿರಲು ನಿರ್ಧರಿಸಲಾಗಿದೆ,” ಎಂದು ಪಿಸಿಬಿಗೆ ಸನಿಹದ ಮೂಲಗಳು ತಿಳಿಸಿವೆ.
ಇದೇ ವೇಳೆ, ಏಷ್ಯಾಕಪ್ 2025ರಲ್ಲಿ ಪಾಕಿಸ್ತಾನ ವಿರುದ್ಧ ಆಡಲು ಭಾರತಕ್ಕೆ ಸರ್ಕಾರದಿಂದ ಅನುಮತಿ ದೊರೆತಿದೆ. ಈ ವರ್ಷ ಟಿ20 ಸ್ವರೂಪದಲ್ಲಿ ನಡೆಯಲಿರುವ ಈ ಪಂದ್ಯಾವಳಿಯ ಆತಿಥ್ಯವನ್ನು ಭಾರತ ವಹಿಸಲಿದೆ. ಆದರೆ, ಒಪ್ಪಂದದಂತೆ ಭಾರತ ಮತ್ತು ಪಾಕಿಸ್ತಾನ ತಂಡಗಳು ತಟಸ್ಥ ಸ್ಥಳವಾದ ಯುಎಇಯಲ್ಲಿ ಆಡಲಿವೆ. ಲೀಗ್ ಹಂತದಲ್ಲಿ ಒಮ್ಮೆ ಮತ್ತು ಸೂಪರ್ ಫೋರ್‌ನಲ್ಲಿ ಒಮ್ಮೆ ಈ ಎರಡು ತಂಡಗಳು ಮುಖಾಮುಖಿಯಾಗುವ ಸಾಧ್ಯತೆಯಿದೆ.
ಶನಿವಾರ ನಡೆಯಲಿರುವ ಡಬ್ಲ್ಯುಸಿಎಲ್-2025ರ ಫೈನಲ್‌ನಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ತಂಡವು ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡವನ್ನು ಎದುರಿಸಲಿದೆ. ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೆಲಿಯಾ ಚಾಂಪಿಯನ್ಸ್ ವಿರುದ್ಧ 1 ರನ್ ರೋಚಕ ಜಯ ಸಾಧಿಸಿ ಫೈನಲ್ ತಲುಪಿದೆ. ಶನಿವಾರ ಫೈನಲ್ ಪಂದ್ಯ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬದಲಿಗೆ, ಭಾರತವು ‘ಆಪರೇಷನ್ ಸಿಂಧೂರ್’ ಮೂಲಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದೆ. ಇದಕ್ಕೆ ಪಾಕಿಸ್ತಾನ ಸೇನೆ ಪ್ರತಿಕ್ರಿಯೆ ಭಾಗವಾಗಿ ಭಾರತದ ಗಡಿ ಭಾಗದ ಮೇಲೆ ದಾಳಿ ನಡೆಸಿತ್ತು. ಆದರೆ ಭಾರತೀಯ ಸೇನೆ ತನ್ನ ರಕ್ಷಣಾ ವ್ಯವಸ್ಥೆಯ ಮೂಲಕ ಪಾಕಿಸ್ತಾನ ದಾಳಿಯನ್ನ ಹಿಮ್ಮೆಟ್ಟಿಸಿತ್ತು. ಈ ಘಟನೆಗಳು ಭಾರತ-ಪಾಕಿಸ್ತಾನ ಕ್ರಿಕೆಟ್ ಸಂಬಂಧಗಳಲ್ಲಿ ಮತ್ತಷ್ಟು ಹದಗೆಡಿಸಿದೆ.
August 02, 2025 8:03 PM IST