Pilichandi: ಅಬ್ಬರಿಸುವ ದೈವ ಪಿಲಿಚಂಡಿಗಿದೆ ವಿಶಿಷ್ಟ ನೇಮೋತ್ಸವ, ದೈವ ಮುಟ್ಟಿದ ನಂತರವೇ ಊರಿಗೆ ಅನ್ನ ಆಹಾರ! | Pattanaje month Pili Chamundi Pudvar Nemotsava unveiled in Tulunadu | ಭವಿಷ್ಯ

Pilichandi: ಅಬ್ಬರಿಸುವ ದೈವ ಪಿಲಿಚಂಡಿಗಿದೆ ವಿಶಿಷ್ಟ ನೇಮೋತ್ಸವ, ದೈವ ಮುಟ್ಟಿದ ನಂತರವೇ ಊರಿಗೆ ಅನ್ನ ಆಹಾರ! | Pattanaje month Pili Chamundi Pudvar Nemotsava unveiled in Tulunadu | ಭವಿಷ್ಯ

Last Updated:

ತುಳುನಾಡಿನ ಪತ್ತನಾಜೆ ತಿಂಗಳಲ್ಲಿ ಪಿಲಿ ಚಾಮುಂಡಿ, ಉಳ್ಳಾಕುಲು, ಶಿರಾಡಿ ದೈವಗಳಿಗೆ ಮಾತ್ರ ಪುದ್ವಾರ್ ನೇಮ ನಡೆಯುತ್ತದೆ. ಪಿಲಿ ಚಾಮುಂಡಿ ನೇಮ ತುಲಾ ಸಂಕ್ರಮಣದಂದು ವಿಶೇಷವಾಗಿ ಆಚರಿಸಲಾಗುತ್ತದೆ.

+

ಪಿಲಿಚಂಡಿ

ಪಿಲಿಚಂಡಿ ನೇಮ

ದಕ್ಷಿಣ ಕನ್ನಡ: ದೈವಗಳ ನಾಡು ತುಳುನಾಡಿನಲ್ಲಿ (Tulu Nadu) ಆಚರಣೆಯಲ್ಲಿರುವ ಪತ್ತನಾಜೆ ಎನ್ನುವ ತಿಂಗಳುಗಳಲ್ಲಿ ತುಳುನಾಡಿನಲ್ಲಿ ಯಾವುದೇ ರೀತಿಯ ದೈವಗಳ (Demi God) ಕೋಲ, ತಂಬಿಲಗಳು ನಡೆಯುವುದಿಲ್ಲ. ಸುಮಾರು 3 ತಿಂಗಳ ಕಾಲ ತುಳುನಾಡಿನಲ್ಲಿ ಪತ್ತನಾಜೆ ಮುಂದುವರಿದು, ದೀಪಾವಳಿಯ ವೇಳೆಗೆ ಅದು ಮುಕ್ತಾಯವಾಗುತ್ತದೆ. ಆದರೆ ಪತ್ತನಾಜೆಯ ತಿಂಗಳಲ್ಲೂ ತುಳುನಾಡಿನ ಕೆಲವು ದೈವಗಳಿಗೆ ಮಾತ್ರ ನೇಮೋತ್ಸವ (Rituals) ನಡೆಯುತ್ತದೆ.  ಪುದ್ವಾರ್ ನೇಮ ಎಂದು ಇದನ್ನು ಕರೆಯಲಾಗುತ್ತಿದ್ದು, ಕೆಲವೇ ಕೆಲವು ದೈವಸ್ಥಾನಗಳಲ್ಲಿ ಮಾತ್ರವೇ ನೇಮ ನಡೆಯುತ್ತದೆ.

ಪುದ್ವಾರ್‌ ನೇಮದಂದು ಗಡಿ ಕಾಯೋ ರಾಜಂದೈವಕ್ಕೆ ವಿಶೇಷ ಪೂಜೆ

ತುಳುನಾಡಿನಲ್ಲಿ ಹಲವು ಪ್ರಕಾರದ ದೈವಗಳಿದ್ದು, ಅವುಗಳಲ್ಲಿ ಕೆಲವು ಪ್ರಧಾನ ದೈವಗಳೆಂದು ಗುರುತಿಸಲ್ಪಟ್ಟಿವೆ. ರಾಜನ್ ದೈವ ಎಂದು ಕರೆಯುವ ಈ ದೈವಗಳ ಚಾವಡಿಗಳಲ್ಲಿ ಪುದ್ವಾರ್ ನೇಮ ನಡೆಯುತ್ತದೆ. ಪುದ್ವಾರ್ ಎಂದರೆ ಹೊಸ ಅಕ್ಕಿ ಊಟ ಎನ್ನುವ ಕನ್ನಡ ಅರ್ಥ ಬರುತ್ತದೆ. ಉಳ್ಳಾಕುಲು, ಪಿಲಿಚಾಮುಂಡಿ, ಶಿರಾಡಿ ದೈವ ಹೀಗೆ ಕೆಲವು ಪ್ರಧಾನ ದೈವಗಳ ಸ್ಥಾನಗಳಲ್ಲಿ ಮಾತ್ರವೇ ಈ ಪುದ್ವಾರ್  ನೇಮ ನಡೆಯುತ್ತದೆ.

ದೈವದ ಊಟದ ನಂತರವೇ ಉಳಿದವರ ಊಟ ಉಪಚಾರ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲ ಸಮೀಪದ ಪಡುಮಲೆಯ ಕಿನ್ನಿಮಾಣಿ-ಪೂಮಾಣಿ ದೈವಸ್ಥಾನದ ವ್ಯಾಪ್ತಿಗೆ ಬರುವ  ಪಿಲಿ ಚಾಮುಂಡಿ ದೈವಸ್ಥಾನದಲ್ಲೂ ಈ ಪುದ್ವಾರ್ ನೇಮೋತ್ಸವವು ಪ್ರತೀ ವರ್ಷವೂ ತುಲಾ ಸಂಕ್ರಮಣದಂದು ನಡೆಯುತ್ತದೆ. ದೈವಸ್ಥಾನಕ್ಕೆ ಸಂಬಂಧಪಟ್ಟ ಗ್ರಾಮಸ್ಥರ ಜೊತೆಗೆ ಇತರ ಗ್ರಾಮದ ಜನ ಕೂಡಾ ಈ ಪುದ್ವಾರ್ ನೇಮವನ್ನು ನೋಡಿ, ದೈವ ಹೊಸಕ್ಕಿಯ ಊಟ ಸ್ವೀಕರಿಸಿದ ಬಳಿಕ ಗ್ರಾಮಸ್ಥರೆಲ್ಲಾ ಸೇರಿ ಹೊಸಕ್ಕಿ ಊಟ ಮಾಡೋದು ಈ ನೇಮೋತ್ಸವದ ಹಿಂದಿರುವ ಉದ್ದೇಶವೂ ಆಗಿದೆ.

ಪಿಲಿ ಚಾಮುಂಡಿ ಎಂಬ ರಕ್ಷಕ ದೈವ ನುಡಿಗಿದೆ ಬಹು ಪ್ರಾಮುಖ್ಯತೆ

ಇದನ್ನೂ ಓದಿ: Tulu Culture: ಈಗ ಮೇಳದ ಆಟಗಳು ಬಂದ್‌, ಇನ್ನೇನಿದ್ದರೂ ಮನೆ ಮನೆಯಲ್ಲಿ ಯಕ್ಷಗಾನ! ಯಾಕೆ ಗೊತ್ತಾ? ಇಲ್ಲಿದೆ ಉತ್ತರ

ಪಿಲಿ ಚಾಮುಂಡಿ ದೈವವು ತುಳುನಾಡಿನಲ್ಲಿ ಅತ್ಯಂತ  ಪ್ರಭಾವಶಾಲಿ ದೈವವಾಗಿದ್ದು, ಸ್ತ್ರೀ ಪ್ರಧಾನ ದೈವವಾಗಿರುವುದರಿಂದ ದೇವಿಯ ಪ್ರತಿರೂಪವಾಗಿಯೂ ಈ ದೈವವನ್ನು ಆರಾಧಿಸಿಕೊಂಡು ಬರಲಾಗುತ್ತಿದೆ.  ಅತ್ಯಂತ ಆಕರ್ಷಕ ಮುಖವರ್ಣಿಕೆಯ ಜೊತೆಗೆ ರೌದ್ರ ರೂಪದ ಈ ದೈವದ‌ ನರ್ತನವು ದೈವದ ಮೇಲಿನ ಭಯ-ಭಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ನೇಮೋತ್ಸವ ಪ್ರಾರಂಭವಾಗುವ ಮೊದಲು ಕ್ಷೇತ್ರದ ಪ್ರಧಾನ ದೈವಗಳಾದ ಕಿನ್ನಿಮಾಣಿ-ಪೂಮಾಣಿ ದೈವದ ನಡೆಯಲ್ಲಿ ಪ್ರಾರ್ಥನೆ ನೆರವೇರಿದ ಬಳಿಕ ಪಿಲಿಚಾಮುಂಡಿ ದೈವದ ನರ್ತನ ಸೇವೆ ಆರಂಭಗೊಳ್ಳುತ್ತದೆ. ಈ ಸಂದರ್ಭದಲ್ಲಿ ದೈವವು ಗ್ರಾಮದ ಹಿರಿಯರನ್ನು ಮತ್ತು ದೈವಕ್ಕೆ ಸಂಬಂಧಪಟ್ಟವರಲ್ಲಿ ಕೆಲವು ವಿಚಾರಗಳನ್ನು ಹೇಳುವ ಮತ್ತು ಸೂಚಿಸುವ ಮೂಲಕ ಭೂಮಿಯ ಮೇಲೆ ತನ್ನ ಇರುವಿಕೆಯನ್ನೂ ಪ್ರಕಟಪಡಿಸುತ್ತದೆ.