Pilikula: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 2 ಮರಿಗಳಿಗೆ ಜನ್ಮ ನೀಡಿದ ರಾಣಿ ಹುಲಿ! | Rani Tiger gave born to two cubs in Pilikula Biological Park

Pilikula: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 2 ಮರಿಗಳಿಗೆ ಜನ್ಮ ನೀಡಿದ ರಾಣಿ ಹುಲಿ! | Rani Tiger gave born to two cubs in Pilikula Biological Park


Last Updated:

2016 ರಲ್ಲಿ ಐದು ಮರಿಗಳಿಗೆ ಜನ್ಮ ನೀಡುವ ಮೂಲಕ ದಾಖಲೆ ನಿರ್ಮಿಸಿದೆ. ನಂತರ 2021ರಲ್ಲಿ ಮತ್ತೆ ಮೂರು ಮರಿಗಳಿಗೆ ಜನ್ಮ ನೀಡಿದೆ‌. ಇದೀಗ ಮತ್ತೆ ಎರಡು ಮರಿಗಳಿಗೆ ಜನ್ಮ ನೀಡಿದ ರಾಣಿ ಒಟ್ಟಾರೆ 10 ಮರಿಗಳ ತಾಯಿಯಾಗಿದ್ದಾಳೆ.

X

ವಿಡಿಯೋ

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಮಂಗಳೂರಿನ(Mangaluru) ಪಿಲಿಕುಳ ಜೈವಿಕ ಉದ್ಯಾನವನದಲ್ಲಿ(Pilikula Biological Park) ಹುಲಿಗಳ ಸಂಖ್ಯೆ(Tigers Numbers) ವೃದ್ಧಿಯಾಗಿದೆ. ‌ರಾಣಿ ಎಂಬ ಹುಲಿ ಎರಡು ಮರಿಗಳಿಗೆ ಜನ್ಮ ನೀಡಿದ್ದು, ಉದ್ಯಾನವನದ ಹುಲಿ ಸಂತತಿಯನ್ನು 10ಕ್ಕೆ ಹೆಚ್ಚಿಸಿದೆ. ಒಂದು ಗಂಡು ಮತ್ತು ಒಂದು ಹೆಣ್ಣು ಮರಿಗೆ ಈಗ ಎರಡು ತಿಂಗಳಾಗಿದ್ದು, ಆರೋಗ್ಯವಾಗಿವೆ. ರಾಣಿ ಹುಲಿ ಪಿಲಿಕುಳದ ಹುಲಿಗಳ ಮಹಾತಾಯಿಯೂ ಆಗಿದ್ದಾಳೆ. ರಾಣಿ ಈವರೆಗೆ ಒಟ್ಟು ಹತ್ತು ಹುಲಿ ಮರಿಗಳಿಗೆ ಜನ್ಮ ನೀಡಿದ್ದಾಳೆ. 2016 ರಲ್ಲಿ ಐದು ಮರಿಗಳಿಗೆ ಜನ್ಮ ನೀಡುವ ಮೂಲಕ ದಾಖಲೆ ನಿರ್ಮಿಸಿದೆ. ನಂತರ 2021ರಲ್ಲಿ ಮತ್ತೆ ಮೂರು ಮರಿಗಳಿಗೆ ಜನ್ಮ ನೀಡಿದೆ‌. ಇದೀಗ ಮತ್ತೆ ಎರಡು ಮರಿಗಳಿಗೆ ಜನ್ಮ ನೀಡಿದ ರಾಣಿ ಒಟ್ಟಾರೆ 10 ಮರಿಗಳ ತಾಯಿಯಾಗಿದ್ದಾಳೆ.

ರಾಣಿಯನ್ನು ಪ್ರಾಣಿ ವಿನಿಮಯ ಕಾರ್ಯಕ್ರಮದ ಅಂಗವಾಗಿ 2016ರಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಪಿಲಿಕುಳಕ್ಕೆ ಕರೆತರಲಾಗಿತ್ತು‌. ಅದಕ್ಕೆ ಪ್ರತಿಯಾಗಿ ಪಿಲಿಕುಳದ ಗಂಡು ಹುಲಿಯನ್ನು ಬನ್ನೇರುಘಟ್ಟಕ್ಕೆ ಕಳುಹಿಸಲಾಗಿತ್ತು. ಪಿಲಿಕುಳವು 15 ಕ್ಕೂ ಹೆಚ್ಚು ಹುಲಿಗಳನ್ನು ಹೊಂದಿತ್ತು‌. ಈಗ ಪಿಲಿಕುಳದಲ್ಲಿ ಹತ್ತು ಹುಲಿಗಳಿವೆ.

ಇದನ್ನೂ ಓದಿ: Mysuru: ಪ್ರಾಣಿ-ಪಕ್ಷಿಗಳನ್ನು ತಂಪಾಗಿಡಲು ಮಾಸ್ಟರ್‌ ಪ್ಲ್ಯಾನ್ ಮಾಡಿದ ಮೃಗಾಲಯ!

ಪಿಲಿಕುಳ ಜೈವಿಕ ಉದ್ಯಾನವನ್ನು ನಿರ್ಮಿಸುವಾಗ ಶಿವಮೊಗ್ಗದ ತಾವರೆಕೊಪ್ಪದಿಂದ ಹುಲಿಮರಿಯನ್ನು ತರಲಾಗಿತ್ತು. ಆದರೆ ಇದೀಗ ಪಿಲಿಕುಳದ ಹುಲಿಗಳಿಗೆ ಭಾರೀ ಬೇಡಿಕೆ ಇದೆ. ಶಿವಮೊಗ್ಗ, ಹಂಪಿಯಿಂದಲೂ ಬೇಡಿಕೆ ಇದೆ. ಪಿಲಿಕುಳಕ್ಕೆ ಮಧ್ಯಪ್ರದೇಶದಿಂದ ವಿನಿಮಯದಡಿ ಹುಲಿಯನ್ನು ತರುವ ಯೋಜನೆಯೂ ಪಿಲಿಕುಳ ಮೃಗಾಲಯಕ್ಕೆ ಇದೆ.

ಕೇಂದ್ರ ಮೃಗಾಲಯ ಪ್ರಾಧಿಕಾರದ ಅಧೀನದಲ್ಲಿ ಬರುವ ಪಿಲಿಕುಳ, ದೇಶದ 18 ಅತೀ ದೊಡ್ಡ ಮೃಗಾಲಯಗಳ ಪೈಕಿ ಒಂದು. ಇಡೀ ದೇಶದಲ್ಲಿ 150 ಮೃಗಾಲಯಗಳಿವೆ. ರಾಣಿಯ ನೂತನ ಮರಿಗಳು ಸದ್ಯ ಆರೋಗ್ಯದಿಂದ ಇದ್ದು, ದತ್ತು ಸ್ವೀಕರಕ್ಕಾಗಿ ದಾನಿಗಳಿಗೆ ಮೃಗಾಲಯ ಆಹ್ವಾನ ನೀಡಿದೆ. ದಾನಿಗಳು ಸೂಚಿಸಿದ ಹೆಸರನ್ನು ಹುಲಿಮರಿಗಳಿಗೆ ಇಡಲಾಗುವುದು ಅಂತಾ ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕರಾದ ಎಚ್.ಜಯಪ್ರಕಾಶ್ ಭಂಡಾರಿ ಹೇಳಿದ್ದಾರೆ.