PKL 2025: ಪ್ರೊ ಕಬಡ್ಡಿ ಲೀಗ್​​ನ ಎಲ್ಲಾ ತಂಡಗಳ ರಿಟೇನ್​ ಆಟಗಾರರ ಸಂಪೂರ್ಣ ಲಿಸ್ಟ್ ಇಲ್ಲಿದೆ | Pro Kabaddi League 2025 Full list of retained players all franchise ahead of Season 12 Auction

PKL 2025: ಪ್ರೊ ಕಬಡ್ಡಿ ಲೀಗ್​​ನ ಎಲ್ಲಾ ತಂಡಗಳ ರಿಟೇನ್​ ಆಟಗಾರರ ಸಂಪೂರ್ಣ ಲಿಸ್ಟ್ ಇಲ್ಲಿದೆ | Pro Kabaddi League 2025 Full list of retained players all franchise ahead of Season 12 Auction

ದಬಾಂಗ್ ಡೆಲ್ಲಿ (Dabang Delhi) ತಮ್ಮ ಸ್ಟಾರ್ ರೈಡರ್ಸ್ ನವೀನ್​ ಕುಮಾರ್​​ರನ್ನ ರಿಲೀಸ್ ಮಾಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ದಬಾಂಗ್ ದೆಹಲಿ ತಂಡ 8ನೇ ಸೀಸನ್‌ನಲ್ಲಿ ಚಾಂಪಿಯನ್ ಆಗಿತ್ತು. ನವೀನ್ ಕುಮಾರ್ ಈ ತಂಡಕ್ಕಾಗಿ 6 ಸೀಸನ್‌ಗಳಲ್ಲಿ ಆಡಿ 1102 ರೈಡಿಂಗ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ಆದರೆ, ದೆಹಲಿ ತಂಡವು ಈ ಬಾರಿ ಅವರನ್ನು ಬಿಡುಗಡೆ ಮಾಡಿದೆ. ಇದರಿಂದ ಇತರ ಫ್ರಾಂಚೈಸಿಗಳು ನವೀನ್‌ರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿಸುತ್ತಿವೆ. ನವೀನ್ ಜೊತೆಗೆ ಪವನ್ ಶೆರಾವತ್ ಕೂಡ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

83 ಆಟಗಾರರ ರಿಟೇನ್

12 ಫ್ರಾಂಚೈಸಿಗಳು ಒಟ್ಟು 83 ಆಟಗಾರರನ್ನು ಉಳಿಸಿಕೊಂಡಿವೆ. ಉಳಿದವರನ್ನು ಬಿಡುಗಡೆ ಮಾಡಲಾಗಿದೆ. ಈ ಆಟಗಾರರನ್ನು ನಾಲ್ಕು ವಿಭಾಗಗಳಾಗಿ (ಎ, ಬಿ, ಸಿ, ಡಿ) ವಿಂಗಡಿಸಲಾಗಿದೆ.

ಎ ವಿಭಾಗ: 30 ಲಕ್ಷ ರೂ.

ಬಿ ವಿಭಾಗ: 20 ಲಕ್ಷ ರೂ.

ಸಿ ವಿಭಾಗ: 13 ಲಕ್ಷ ರೂ.

ಡಿ ವಿಭಾಗ: 9 ಲಕ್ಷ ರೂ.

ಪ್ರತಿ ಫ್ರಾಂಚೈಸಿಗೆ ಒಟ್ಟು 5 ಕೋಟಿ ರೂ. ಮಿತಿಯಿದೆ. ಉಳಿಸಿಕೊಂಡ ಆಟಗಾರರಿಗೆ ಖರ್ಚು ಮಾಡಿದ ನಂತರ ಉಳಿದ ಮೊತ್ತವನ್ನು ಹರಾಜಿನಲ್ಲಿ ಆಟಗಾರರನ್ನು ಖರೀದಿಸಲು ಬಳಸಲಾಗುತ್ತದೆ. ಈ ತಿಂಗಳ 31 ಮತ್ತು ಜೂನ್ 1 ರಂದು ಮುಂಬೈನಲ್ಲಿ ಎರಡು ದಿನಗಳ ಕಾಲ ಆಟಗಾರರ ಹರಾಜು ನಡೆಯಲಿದೆ.

ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರ ಪಟ್ಟಿ

ಬೆಂಗಾಲ್ ವಾರಿಯರ್ಸ್: ವಿಶ್ವಾಸ್, ಯಶ್ ಮಲಿಕ್, ಮಂಜೀತ್, ದೀಪ್ ಕುಮಾರ್, ಸುಶೀಲ್ ಕಂಬ್ರಾಕರ್.

ಬೆಂಗಳೂರು ಬುಲ್ಸ್: ಚಂದ್ರ ನಾಯಕ್, ಲಕ್ಕಿ ಕುಮಾರ್, ಮಂಜೀತ್, ಪಂಕಜ್.

ದಬಾಂಗ್ ಡೆಲ್ಲಿ: ಸಂದೀಪ್, ಮೋಹಿತ್.

ಗುಜರಾತ್ ಜೈಂಟ್ಸ್: ಹಿಮಾಂಶು ಸಿಂಗ್, ಹಿಮಾಂಶು, ಪ್ರತೀಕ್ ದಹಿಯಾ, ರಾಕೇಶ್.

ಹರಿಯಾಣ ಸ್ಟೀಲರ್ಸ್: ರಾಹುಲ್ ಸೆಪ್ಟಾಲ್, ವಿನಯ್, ಶಿವಂ ಅನಿಲ್, ಜೈದೀಪ್, ಜಯಸೂರ್ಯ, ವಿಶಾಲ್ ತಾಟೆ, ಸಾಹಿಲ್ ಮಣಿಕಂದನ್, ವಿಕಾಸ್ ರಾಮದಾಸ್ ಜಾಧವ್.

ಜೈಪುರ ಪಿಂಕ್ ಪ್ಯಾಂಥರ್ಸ್: ರೆಜಾ ಮಿರ್ಬಘೇರಿ, ಅಭಿಷೇಕ್, ರೋನಕ್ ಸಿಂಗ್, ನಿತಿನ್ ಕುಮಾರ್, ಸೋಂಬಿರ್, ರಿತಿಕ್ ಶರ್ಮಾ.

ಪಾಟ್ನಾ ಪೈರೇಟ್ಸ್: ಹಮೀದ್ ಮಿರ್ಜಾಯ್ ನಾದಿರ್, ತ್ಯಾಗರಾಜನ್ ಯುವರಾಜ್, ಸುಧಾಕರ್, ಅಯಾನ್, ನವದೀಪ್, ದೀಪಕ್, ಸಾಹಿಲ್ ಪಾಟೀಲ್.

ಪುಣೇರಿ ಪಲ್ಟನ್: ಅಭಿನೇಶ್, ಗೌರವ್ ಖತ್ರಿ, ಪಂಕಜ್ ಮೋಹಿತೆ, ಅಸ್ಲಾಂ ಮುಸ್ತಫಾ, ಮೋಹಿತ್ ಗೋಯತ್, ದಾದಾಸೊ ಶಿವಾಜಿ ಪೂಜಾರಿ, ಆದಿತ್ಯ ತುಷಾರ್ ಶಿಂಧೆ.

ತಮಿಳ್ ತಲೈವಾಸ್: ಮೊಯಿನ್ ಶಫಾಗಿ, ಹಿಮಾಂಶು, ಸಾಗರ್, ನಿತೇಶ್ ಕುಮಾರ್, ನರೇಂದ್ರ, ರೋನಕ್, ವಿಶಾಲ್ ಚಹಾಲ್, ಆಶಿಶ್, ಅನುಜ್ ಗಾವಡೆ, ಧೀರಜ್ ರವೀಂದ್ರ ಬೈಲ್ಮಾರೆ.

ತೆಲುಗು ಟೈಟಾನ್ಸ್: ಶಂಕರ್ ಭೀಮರಾಜ್, ಅಜಿತ್ ಪಾಂಡುರಂಗ ಪವಾರ್, ಅಂಕಿತ್, ಪ್ರಫುಲ್ ಜವಾರೆ, ಸಾಗರ್ ಚೇತನ್ ಸಾಹು, ನಿತಿನ್, ರೋಹಿತ್.

ಯು ಮುಂಬಾ: ಸುನಿಲ್ ಕುಮಾರ್, ರೋಹಿತ್, ಅಮೀರ್ ಮೊಹಮ್ಮದ್, ಸತೀಶ್ ಕಣ್ಣನ್, ಮುಕಿಲನ್ ಷಣ್ಮುಗಂ, ಅಜಿತ್ ಚೌಹಾಣ್, ದೀಪಕ್ ಕುಂದು, ಲೋಕೇಶ್ ಗೋಸ್ಲಿಯಾ, ಸನ್ನಿ.

ಯುಪಿ ಯೋಧಾಸ್: ಸುಮಿತ್, ಭವಾನಿ ರಜಪೂತ್, ಸಾಹುಲ್ ಕುಮಾರ್, ಸುರೇಂದರ್ ಗಿಲ್, ಅಶು ಸಿಂಗ್, ಹಿತೇಶ್ ಗಗನ್ ಗೌಡ, ಶಿವಂ ಚೌಧರಿ, ಜಯೇಶ್ ವಿಕಾಸ್ ಮಹಾಜನ್, ಗಂಗಾರಾಮ್, ಸಚಿನ್, ಕೇಶವ್ ಕುಮಾರ್.