PKL 2025: ಫೈನಲ್​ ಪ್ರವೇಶಿಸಿದ ಪುಣೇರಿ ಪಲ್ಟನ್! ಅಂಕಪಟ್ಟಿಯ ಟಾಪ್​ ತಂಡಗಳಿಂದಲೇ ಟ್ರೋಫಿಗಾಗಿ ಬಿಗ್​ಫೈಟ್ | Dabang Delhi vs Puneri Paltan: A Battle for Kabaddi Supremacy in PKL 2025 Final | ಕ್ರೀಡೆ

PKL 2025: ಫೈನಲ್​ ಪ್ರವೇಶಿಸಿದ ಪುಣೇರಿ ಪಲ್ಟನ್! ಅಂಕಪಟ್ಟಿಯ ಟಾಪ್​ ತಂಡಗಳಿಂದಲೇ ಟ್ರೋಫಿಗಾಗಿ ಬಿಗ್​ಫೈಟ್ | Dabang Delhi vs Puneri Paltan: A Battle for Kabaddi Supremacy in PKL 2025 Final | ಕ್ರೀಡೆ

Last Updated:

ತೆಲುಗು ಟೈಟಾನ್ಸ್ ವಿರುದ್ಧ ಗೆಲ್ಲುವ ಮೂಲಕ, ಪುಣೇರಿ ಪಲ್ಟನ್ ತಂಡ ಪ್ರೊ ಕಬಡ್ಡಿ ಲೀಗ್ 2025 ಫೈನಲ್‌ಗೆ ಪ್ರವೇಶಿಸಿತು. ಶುಕ್ರವಾರ ಪ್ರಶಸ್ತಿ ಕದನ ನಡೆಯಲಿದೆ. ಈ ಪ್ರಶಸ್ತಿ ಪಂದ್ಯದಲ್ಲಿ, ದಬಾಂಗ್ ಡೆಲ್ಲಿ ಮತ್ತು ಪುಣೇರಿ ಪಲ್ಟನ್ ತಂಡಗಳು ಟ್ರೋಫಿಗಾಗಿ ಕಾದಾಡಲಿವೆ.

ಪ್ರೋ ಕಬಡ್ಡಿ ಲೀಗ್ ಫೈನಲ್​ನಲ್ಲಿ ಡೆಲ್ಲಿ-ಪುಣೆ ಪೈಪೋಟಿ (PHOTO:@ProKabaddi)
ಪ್ರೋ ಕಬಡ್ಡಿ ಲೀಗ್ ಫೈನಲ್​ನಲ್ಲಿ ಡೆಲ್ಲಿ-ಪುಣೆ ಪೈಪೋಟಿ (PHOTO:@ProKabaddi)

ಪ್ರೊ ಕಬಡ್ಡಿ ಲೀಗ್ (PKL)-2025 ರಲ್ಲಿ ತೆಲುಗು ಟೈಟಾನ್ಸ್ ತಂಡದ ಪ್ರಯಾಣ ಕ್ವಾಲಿಫೈಯರ್-2 ರೊಂದಿಗೆ ಕೊನೆಗೊಂಡಿತು. ಬುಧವಾರ (ಅಕ್ಟೋಬರ್ 29) ದೆಹಲಿಯಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಪುಣೇರಿ ಪಲ್ಟನ್ 5 ಅಂಕಗಳಿಂದ ತೆಲುಗು ಟೈಟಾನ್ಸ್ ತಂಡವನ್ನ ಸೋಲಿಸಿತು. ಈ ರೋಮಾಂಚಕಾರಿ ಪಂದ್ಯದಲ್ಲಿ ಪಲ್ಟನ್ 50-45 ಅಂಕಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು. ಈ ಸೋಲಿನೊಂದಿಗೆ ತೆಲುಗು ಟೈಟಾನ್ಸ್ ಪಂದ್ಯಾವಳಿಯಿಂದ ನಿರ್ಗಮಿಸಿತು. ಪಂದ್ಯದ ಆರಂಭದಲ್ಲಿ ತೆಲುಗು ಟೈಟಾನ್ಸ್ ಪ್ರಾಬಲ್ಯ ತೋರಿಸಿದರೂ, ಆಟದ ಕೊನೆಯ ಹಂತದಲ್ಲಿ ಮಾಡಿದ ಅನಗತ್ಯ ತಪ್ಪುಗಳು ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು.

ಭರತ್ ಹೂಡಾ ಅವರ ಅದ್ಭುತ ಹೋರಾಟ ವ್ಯರ್ಥ

ತೆಲುಗು ಟೈಟಾನ್ಸ್ ಆಲ್ ರೌಂಡರ್ ಭರತ್ ಹೂಡಾ ಈ ಪಂದ್ಯದಲ್ಲಿ ವೈಯಕ್ತಿಕ ಅತ್ಯುತ್ತಮ ಪ್ರದರ್ಶನ ನೀಡಿದರು. ಭರತ್ ಹೂಡಾ ಬರೋಬ್ಬರಿ 23 ರೈಡ್ ಪಾಯಿಂಟ್‌ಗಳನ್ನು ಗಳಿಸುವ ಮೂಲಕ ಮಿಂಚಿದರು. ಆದರೆ, ಭರತ್ ಹೂಡಾರ ಈ ಹೋರಾಟ ಪಂದ್ಯವನ್ನ ಗೆಲ್ಲಲು ಸಾಧ್ಯವಾಗಲಿಲ್ಲ. ಅವರಿಗೆ ಇತರ ರೈಡರ್‌ಗಳಿಂದ ಹೆಚ್ಚಿನ ಬೆಂಬಲ ಸಿಗಲಿಲ್ಲ. ಮತ್ತೊಂದೆಡೆ, ತೆಲುಗು ಟೈಟಾನ್ಸ್ ಡಿಫೆಂಡರ್‌ಗಳು ಪುಣೇರಿ ಪಲ್ಟನ್ ರೈಡರ್‌ಗಳನ್ನು ತಡೆಯಲು ಮತ್ತು ಎದುರಿಸಲು ವಿಫಲರಾದರು. ಪುಣೇರಿ ಪಲ್ಟನ್ ಪರ ಆದಿತ್ಯ ಶಿಂಧೆ ಅತ್ಯುತ್ತಮ ಪ್ರದರ್ಶನ ನೀಡಿದರು ಮತ್ತು 22 ಅಂಕಗಳನ್ನು ಗಳಿಸಿದರು. ಇದು ಅವರ ಗೆಲುವಿಗೆ ಪ್ರಮುಖ ಕಾರಣವಾಯಿತು.

ಪಿಕೆಎಲ್ 2025 ಅಂತಿಮ ಕದನ

ತೆಲುಗು ಟೈಟಾನ್ಸ್ ವಿರುದ್ಧ ಗೆಲ್ಲುವ ಮೂಲಕ, ಪುಣೇರಿ ಪಲ್ಟನ್ ತಂಡ ಪ್ರೊ ಕಬಡ್ಡಿ ಲೀಗ್ 2025 ಫೈನಲ್‌ಗೆ ಪ್ರವೇಶಿಸಿತು. ಶುಕ್ರವಾರ ಪ್ರಶಸ್ತಿ ಕದನ ನಡೆಯಲಿದೆ. ಈ ಪ್ರಶಸ್ತಿ ಪಂದ್ಯದಲ್ಲಿ, ದಬಾಂಗ್ ಡೆಲ್ಲಿ ಮತ್ತು ಪುಣೇರಿ ಪಲ್ಟನ್ ತಂಡಗಳು ಟ್ರೋಫಿಗಾಗಿ ಕಾದಾಡಲಿವೆ. ಈ ಎರಡು ತಂಡಗಳು ಈಗಾಗಲೇ ತಲಾ ಒಮ್ಮೆ ಚಾಂಪಿಯನ್ ಆಗಿವೆ.

ಚಾಂಪಿಯನ್ ತಂಡದ ಬಹುಮಾನ ಮೊತ್ತವೆಷ್ಟು?

2025 ರ ಪ್ರೊ ಕಬಡ್ಡಿ ಲೀಗ್ ವಿಜೇತ ತಂಡಕ್ಕೆ ನೀಡುವ ಬಹುಮಾನ ಮೊತ್ತ ಇನ್ನೂ ರಿವೀಲ್ ಆಗಿಲ್ಲ. ಆದರೆ ಕಳೆದ ವರ್ಷ ವಿಜೇತ ತಂಡ ₹3 ಕೋಟಿ ಬಹುಮಾನ ಪಡೆದಿತ್ತು. ಕಳೆದ ಋತುವಿನಲ್ಲಿ, ಹರಿಯಾಣ ಸ್ಟೀಲರ್ಸ್ ಚಾಂಪಿಯನ್ ಆಗಿ ₹3 ಕೋಟಿ ಪಡೆದುಕೊಂಡಿತ್ತು. ಇದಲ್ಲದೆ, ಈ ಫೈನಲ್‌ನಲ್ಲಿ ಸೋತ ತಂಡವು ₹1.8 ಕೋಟಿ ಬಹುಮಾನ ಪಡೆಯಲಿದೆ.

ಈ ಎರಡು ತಂಡಗಳಲ್ಲಿ ಯಾವುದೇ ಗೆದ್ದರು, ಅವರಿಗೆ 2ನೇ ಟ್ರೋಫಿಯಾಗಲಿದೆ. ಪುಣೇರಿ ಪಲ್ಟನ್ 2023ರಲ್ಲಿ ಚಾಂಪಿಯನ್ ಆಗಿತ್ತು. ದಬಾಂಗ್ ಡೆಲ್ಲಿ 2021ರಲ್ಲಿ ಚಾಂಪಿಯನ್ ಆಗಿತ್ತು.  ಇದುವರೆಗೆ ಪಾಟ್ನಾ ಪೈರೇಟ್ಸ್ (3 ಬಾರಿ) ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ (2 ಬಾರಿ) ಮಾತ್ರ ಒಂದಕ್ಕಿಂತ ಹೆಚ್ಚು ಬಾರಿ ಟ್ರೋಫಿ ಜಯಿಸಿವೆ. ಬೆಂಗಳೂರು ಬುಲ್ಸ್, ಬೆಂಗಾಲ್ ವಾರಿಯರ್ಸ್, ದಬಾಂಗ್ ಡೆಲ್ಲಿ, ಪುಣೇರಿ ಪಲ್ಟನ್, ಯು ಮುಂಬಾ, ಹರಿಯಾಣ ಸ್ಟೀಲರ್ಸ್ ತಂಡಗಳು ತಲಾ ಒಂದು ಬಾರಿ ಚಾಂಪಿಯನ್ ಆಗಿವೆ.

2025 ರ ಪ್ರೊ ಕಬಡ್ಡಿ ಲೀಗ್ ನಲ್ಲಿ ಹನ್ನೆರಡು ತಂಡಗಳು ಸ್ಪರ್ಧಿಸಿದ್ದವು. ತೆಲುಗು ಟೈಟಾನ್ಸ್, ತಮಿಳು ತಲೈವಾಸ್, ಬೆಂಗಳೂರು ಬುಲ್ಸ್, ಬೆಂಗಾಲ್ ವಾರಿಯರ್ಸ್, ಯು ಮುಂಬಾ, ಹರಿಯಾಣ ಸ್ಟೀಲರ್ಸ್, ದಬಾಂಗ್ ದೆಹಲಿ ಕೆಸಿ, ಗುಜರಾತ್ ಜೈಂಟ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್, ಯುಪಿ ಯೋಧಾ ಮತ್ತು ಪುಣೇರಿ ಪಲ್ಟನ್ ತಂಡಗಳು ಈ ಬಾರಿ ಕಣದಲ್ಲಿದ್ದವು.