Positive Story: ಪ್ಲಾಸ್ಟಿಕ್ ತ್ಯಾಜ್ಯದಿಂದ ಇಕೋ ಬ್ರಿಕ್ಸ್ ತಯಾರಿ, ಬಂಟ್ವಾಳದ ಈ ಕಾಲೇಜಿನ ವಿದ್ಯಾರ್ಥಿಗಳ ಕೆಲಸಕ್ಕೆ ಭಾರೀ ಮೆಚ್ಚುಗೆ | Bantwals Carmel College Students Prepared of eco bricks from plastic waste

Positive Story: ಪ್ಲಾಸ್ಟಿಕ್ ತ್ಯಾಜ್ಯದಿಂದ ಇಕೋ ಬ್ರಿಕ್ಸ್ ತಯಾರಿ, ಬಂಟ್ವಾಳದ ಈ ಕಾಲೇಜಿನ ವಿದ್ಯಾರ್ಥಿಗಳ ಕೆಲಸಕ್ಕೆ ಭಾರೀ ಮೆಚ್ಚುಗೆ | Bantwals Carmel College Students Prepared of eco bricks from plastic waste

Last Updated:

ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿಗಳು ಪ್ಲಾಸ್ಟಿಕ್ ತ್ಯಾಜ್ಯಗಳಾದ ಬಾಟಲಿ, ಚೀಲ, ಚಾಕೋಲೇಟ್ ಕವರ್ ಬಳಸಿಕೊಂಡು ಇಕೋ ಬ್ರಿಕ್ಸ್ ಸಿದ್ಧಪಡಿಸುತ್ತಿದ್ದಾರೆ. ಈ ಇಕೋ ಬ್ರಿಕ್ಸ್ ಗಳನ್ನು ಇಟ್ಟಿಗೆ ರೀತಿಯಲ್ಲಿ ಬಳಸಿಕೊಂಡು ಆಸನಗಳನ್ನು ಸಹ ನಿರ್ಮಿಸಲಾಗಿದೆ.

X

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಎಲ್ಲೆಂದರಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲಿ, ಚೀಲ, ಚಾಕೋಲೇಟ್ ಕವರ್‌ಗಳನ್ನು ಆರಿಸಿ ತಂದು ಅವುಗಳನ್ನ ಇಕೋ ಬ್ರಿಕ್ಸ್‌ಗಳಾಗಿ (Eco-Bricks) ಮಾರ್ಪಡಿಸುತ್ತಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಡಂಕಾಪುವಿನಲ್ಲಿರುವ ಕಾರ್ಮೆಲ್ ಕಾಲೇಜು (Carmel College) ವಿದ್ಯಾರ್ಥಿಗಳು. ಇವರ ಈ ಪ್ರಯತ್ನ ಸ್ಥಳೀಯರಲ್ಲಿ ಕುತೂಹಲ ಮೂಡಿಸುತ್ತಿದೆ. 

ಎಷ್ಟೇ ಜಾಗೃತಿ ಮೂಡಿಸಿದ್ರೂ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೇಗೆ ವಿಲೇವಾರಿ ಮಾಡಬೇಕು ಎನ್ನುವ ಪ್ರಶ್ನೆ. ಇದಕ್ಕೆ ಪರಿಹಾರ ಎನ್ನುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿಗಳು ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ ಮಾಡಿ ತೋರಿಸಿದ್ದಾರೆ.

ಪ್ಲಾಸ್ಟಿಕ್ ತ್ಯಾಜ್ಯದಿಂದ ಇಕೋ ಬ್ರಿಕ್ಸ್

ಎಲ್ಲೆಂದರಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲಿ, ಚೀಲ, ಚಾಕೋಲೇಟ್ ಕವರ್‌ಗಳನ್ನು ಆರಿಸಿ ತಂದು ಅವುಗಳನ್ನ ಇಕೋ ಬ್ರಿಕ್ಸ್ ಗಳಾಗಿ ಮಾರ್ಪಡಿಸುತ್ತಿದ್ದಾರೆ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿಗಳು. ಹೌದು, ಬಂಟ್ವಾಳ ತಾಲೂಕಿನ ಮೊಡಂಕಾಪುವಿನಲ್ಲಿರುವ ಕಾರ್ಮೆಲ್ ಕಾಲೇಜು ವಿದ್ಯಾರ್ಥಿಗಳು ಪ್ಲಾಸ್ಟಿಕ್ ತ್ಯಾಜ್ಯದಿಂದ ಇಕೋ ಬ್ರಿಕ್ಸ್‌ಗಳನ್ನು ತಯಾರಿಸುತ್ತಿದ್ದಾರೆ.

ಇಟ್ಟಿಗೆ ರೂಪದಲ್ಲಿ ಇಕೋ ಬ್ರಿಕ್ಸ್ ಬಳಕೆ

ಬಳಕೆಯಾದ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಪ್ಲಾಸ್ಟಿಕ್ ಚೀಲ, ಚಾಕೋಲೇಟ್ ರ್ಯಾಪರ್ ಸೇರಿದಂತೆ ಎಲ್ಲ ರೀತಿಯ ಪಾಸ್ಟಿಕ್‌ಗಳ ಚೂರನ್ನು ತುಂಬಿ ಅವುಗಳನ್ನು ಗಟ್ಟಿ ಮಾಡುತ್ತಾರೆ. ಬಳಿಕ ಅದನ್ನು ಕೆಲವು ಸಿವಿಲ್ ಕೆಲಸಗಳಲ್ಲಿ ಇಟ್ಟಿಗೆ ರೂಪದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದನ್ನೇ ಬಳಸಿಕೊಂಡು ಕಾಂಕ್ರೀಟ್ ಆಸನಗಳನ್ನು ಸಹ ನಿರ್ಮಿಸಿದ್ದಾರೆ.

ಇದನ್ನೂ ಓದಿ: Bidar: ಮಹಾರಾಷ್ಟ್ರದ ತುಳಜಾಪುರಕ್ಕೆ ಕರ್ನಾಟಕದ ಭಕ್ತರ ದಂಡು- 250 ಕಿ.ಮೀ ಪಾದಯಾತ್ರೆ

ಇಕೋ ಬ್ರಿಕ್ಸ್ ಬಳಸಿ ಆಸನ ವ್ಯವಸ್ಥೆ

ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ 50 ಇಕೋ ಬ್ರಿಕ್‌ಗಳನ್ನು ಉಪಯೋಗಿಸಿ ನಿರ್ಮಿಸಿದ ಆಸನ ವ್ಯವಸ್ಥೆ ಪ್ರಯಾಣಿಕರ ಗಮನ ಸೆಳೆಯುತ್ತಿದೆ. ಕಾಲೇಜು ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ಬಂಟ್ವಾಳ ಪುರಸಭೆ ಹಾಗೂ ಲಯನ್ಸ್‌ ಕ್ಲಬ್‌ ಬಂಟ್ವಾಳ ಸಹಕಾರ ನೀಡಿದೆ. ಈ ಹಿಂದೆ ಇದೇ ಮಾದರಿಯ ಬೆಂಚ್‌ಗಳನ್ನು ಕಾರ್ಮೆಲ್ ಕಾಲೇಜು ಆವರಣ ಹಾಗೂ ಕಿನ್ನಿಬೆಟ್ಟು ಶಾಲೆಯಲ್ಲೂ ನಿರ್ಮಿಸಲಾಗಿತ್ತು.

ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಚಂದ್ರಿಕಾ ರೈ ಎಂಬುವವರು ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ತರಬೇತುಗೊಳಿಸಿದ್ದರು. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ದೊಡ್ಡ ಸಮಸ್ಯೆಯಾಗದಂತೆ ನಿಯಂತ್ರಿಸುವ ಮತ್ತು ಮರುಬಳಕೆಯ ಜವಾಬ್ದಾರಿ ಎಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಬಂಟ್ವಾಳದ ಕಾರ್ಮೆಲ್ ಕಾಲೇಜಿನ ಪ್ರಯತ್ನ ಒಂದು ಹೆಜ್ಜೆ ಮುಂದಿದೆ.