ನವಜೋತ್ ಸಿಂಗ್ ಸಿಧು ಹಿಂದೆ ಬಿದ್ದ ಹುಡುಗಿ ಯಾರು?
ನವಜೋತ್ ಸಿಂಗ್ ಸಿಧು ಹಿಂದೆ ಬಿದ್ದ ಆ ಹುಡುಗಿ ಬೇರೆ ಯಾರೋ ಅಲ್ಲ. ಅದು ಪತ್ನಿ ನವಜೋತ್ ಕೌರ್ ಆಗಿದ್ದರು. ನವಜೋತ್ ಕೌರ್ ಎಂ.ಬಿ.ಬಿ.ಎಸ್. ಓದುವ ಸಮಯದಲ್ಲಿಯೇ ಸಿಧು ಹಿಂದೆ ಬಿದ್ದಿದ್ದರು. ಮೊದಲ ನೋಟಕ್ಕೆ ಲವ್ ಆಗಿ ಬಿಟ್ಟಿತ್ತು. ಕ್ರಿಕೆಟ್ ಪ್ರ್ಯಾಕ್ಟೀಸ್ ಬಿಟ್ಟು ನವಜೋತ್ ಕೌರ್ ಮನೆ ಮುಂದೆ ಬಂದು ನಿಲ್ತಾ ಇದ್ದರು.
1991 ರಲ್ಲಿ ಮ್ಯಾರೇಜ್ ಆದ ಸಿಧು
ಆದರೂ, ನವಜೋತ್ ಕೌರ್ ಕೇರ್ ಮಾಡ್ತಾನೇ ಇರಲಿಲ್ಲ. ಒಂದೇ ಒಂದು ದಿನವೂ ಪ್ರೀತಿ ಮಾಡ್ತಿನಿ ಅಂತ ಹೇಳಲಿಲ್ಲ. ಆದರೆ, ನವಜೋತ್ ಸಿಂಗ್ ಸಿಧು ಅವಿರತ ಪ್ರಯತ್ನದಿಂದಲೇ ನವಜೋತ್ ಕೌರ್ ಕೊನೆಗೂ ಸಿಧು ಪ್ರೀತಿಯ್ನ ಒಪ್ಪಿದರು. ಆದರೆ, ಸಿಧು ಅಷ್ಟು ಬೇಗ ಮದುವೆಗೆ ಒಪ್ಪಲೇ ಇಲ್ಲ ನೋಡಿ. ಅದಕ್ಕೆ ಕಾರಣವೂ ಇದೆ.
ಇದನ್ನೂ ಓದಿ: Kannada Movie Release: ಈ ವಾರ ಕನ್ನಡದಲ್ಲಿ ಎರಡಲ್ಲ, ಆರು ಸಿನಿಮಾ ರಿಲೀಸ್!
ಪ್ರೀತಿಸಿದ ಹುಡುಗಿಯ ಜಾತಕ ಕೇಳಿದ ಸಿಧು
ನವಜೋತ್ ಸಿಂಗ್ ಸಿಧು ಲವ್ ಅನ್ನ ನವಜೋತ್ ಕೌರ್ ಒಪ್ಪಿದರು. ಆದರೆ, ನವಜೋತ್ ಸಿಂಗ್ ಸಿಧು ಅಷ್ಟು ಬೇಗ ಮದುವೆ ಆಗಲು ಒಪ್ಪಲಿಲ್ಲ. ಕಾರಣ, ಜಾತಕವೇ ಆಗಿತ್ತು. ಜಾತಕ ಸಿಕ್ಕರೆ ಸಾಕು. ನೋಡಿದ್ಮೇಲೆ ಮದುವೆ ಆಗಿಯೇ ಬಿಡೋದೇ ಅಂತಲೂ ಹೇಳಿದರು.
ಪ್ರೀತಿಸಿದ ಹುಡುಗಿಯ ಜಾತಕ ಕೇಳಿದ ಸಿಧು
ಆದರೆ, ಈ ಮಾತು ಕೇಳಿದ್ಮೇಲೆ ನವಜೋತ್ ಕೌರ್ ಶಾಕ್ ಆದ್ರು. ಇದೇನಿದು..? ಇಷ್ಟು ದಿನ ಲವ್ ಮಾಡು ಅಂತ ಹಿಂದೆ ಬಿದ್ದರು. ಈಗ ನೋಡಿದ್ರೆ ಜಾತಕ ಬೇಕು ಅಂತಿದ್ದಾರೆ ಅಂತಲೂ ಕೇಳಿದರು. ಆದರೂ ಬೇಕು ಅಂತಲೇ ಸಿಧು ಹಠ ಹಿಡಿದರು. ಹಾಗೋ ಹೀಗೋ ಒಂದು ವರ್ಷವೇ ಕಳೆದು ಹೋಯಿತು ನೊಡಿ. ಜಾತಕವೂ ಚೆನ್ನಾಗಿಯೇ ಇತ್ತು. ಇಬ್ಬರ ಗುಣಗಳೂ ಹೊಂದಾಣಿಕೆ ಆಗಿದ್ದವು.
ಇದನ್ನೂ ಓದಿ: Pooja Hegde: ರಜನಿಯ ಕೂಲಿ ಚಿತ್ರದಲ್ಲಿ ಪೂಜಾ ಹೆಗ್ಡೆ ಪಾತ್ರ ಏನು?
1991 ರಲ್ಲಿ ಮ್ಯಾರೇಜ್ ಆದ ಸಿಧು
ನವಜೋತ್ ಸಿಂಗ್ ಸಿಧು ಮತ್ತು ನಜಜೋತ್ ಕೌರ್ ಮದುವೆ ಆದ್ರು. ಕೆಲವೇ ಕೆಲವು ಸ್ನೇಹಿತರ ಸಮ್ಮುಖದಲ್ಲಿಯೇ ವಿವಾಹವಾದ್ರು. ನವಜೋತ್ ಸಿಂಗ್ ಸಿಧು ಹುಟ್ಟಿದ ಊರು ಪಟಿಯಾಲಾದಲ್ಲಿಯೇ ಇವರ ಮದುವೆ ಆಯಿತು. ಈ ಒಂದು ಮದುವೆಯ ಫೋಟೋ ಆ ಮೇಲೆ ಪೇಪರ್‌ಗಳಲ್ಲಿ ದೊಡ್ಡ ಸುದ್ದಿನೂ ಆಯಿತು ನೋಡಿ.
ಆ ಮೇಲೆ ಈ ಜೋಡಿಗೆ ಮಕ್ಕಳು ಆದರು. ಒಬ್ಬರ ಮಗ ಇದ್ದಾನೆ. ಆತನ ಹೆಸರು ಕರಣ್ ಹಾಗೂ ಮಗಳ ಹೆಸರು ರಬಿಯಾ ಅಂತಲೇ ಇದೆ. ಇವರ ಈ ಒಂದು ಲವ್ ಸ್ಟೋರಿ ಬಗ್ಗೆ ಕಪಿಲ್ ಶರ್ಮಾ ಶೋದಲ್ಲಿ ಸ್ವತಃ ನವಜೋತ್ ಸಿಂಗ್ ಸಿಧು ಮತ್ತು ನವಜೋತ್ ಕೌರ್ ಅವರು ಹೇಳಿಕೊಂಡಿದ್ದರು. ಹಾಗೇನೆ ನವಜೋತ್ ಸಿಂಗ್ ಸಿಧು ಪತ್ನಿ ಡಾಕ್ಟರ್ ನವಜೋತ್ ಕೌರ್ ಅವರಿಗೆ ಕ್ಯಾನ್ಸರ್ ಇರೋದು ಕಳೆದ ವರ್ಷ ಗೊತ್ತಾಗಿದೆ. ಸಿಧು ತಮ್ಮ ಎಲ್ಲ ಕೆಲಸದೊಂದಿಗೆ ಪತ್ನಿಯ ಸೇವೆ ಕೂಡ ಮಾಡಿದ್ದಾರೆ. ಪ್ರೆಸ್ ಮೀಟ್ ಮಾಡಿ ನನ್ನ ಪತ್ನಿಗೆ ಕ್ಯಾನ್ಸರ್ ಗುಣ ಆಗಿದೆ ಅಂತಲೂ ಹೇಳಿಕೊಂಡಿದ್ದಾರೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka
April 17, 2025 7:33 PM IST