ಎರಡು ಅಥವಾ ಮೂರು ಕ್ರಿಕೆಟ್ ಸಂಸ್ಥೆಗಳಿಂದ ಕರೆಗಳು ಬಂದಿದ್ದರೂ, 25 ವರ್ಷದ ಪೃಥ್ವಿ ಶಾ ಮಹಾರಾಷ್ಟ್ರ ಪರ ಆಡಲು ಆಯ್ಕೆ ಮಾಡಿಕೊಂಡಿರುವಂತೆ ಹೇಳಿದ್ದಾರೆ. ಅದು ನಿಜವಾದರೆ, ಪೃಥ್ವಿ ಶಾ, ಟೀಮ್ ಇಂಡಿಯಾದ ಆರಂಭಿಕ ಆಟಗಾರರಲ್ಲಿ ಒಬ್ಬರಾದ ಋತುರಾಜ್ ಗಾಯಕ್ವಾಡ್ ಅವರ ನಾಯಕತ್ವದಲ್ಲಿ ಆಡಲಿದ್ದಾರೆ. ಮಹಾರಾಷ್ಟ್ರ ದೇಶೀಯ ತಂಡವನ್ನು ಮುನ್ನಡೆಸುತ್ತಿರುವ ಋತು, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ.