Pritvi Shaw: ಮುಂಬೈ ಬಿಟ್ಟು ಬಂದ ನಂತರ ಮೊದಲ ಪಂದ್ಯದಲ್ಲೇ ಪೃಥ್ವಿ ಶಾ ಭರ್ಜರಿ ಶತಕ! | Prithvi Shaw Smashes Century on Maharashtra Debut in Buchi Babu Tournament 2025 | ಕ್ರೀಡೆ

Pritvi Shaw: ಮುಂಬೈ ಬಿಟ್ಟು ಬಂದ ನಂತರ ಮೊದಲ ಪಂದ್ಯದಲ್ಲೇ ಪೃಥ್ವಿ ಶಾ ಭರ್ಜರಿ ಶತಕ! | Prithvi Shaw Smashes Century on Maharashtra Debut in Buchi Babu Tournament 2025 | ಕ್ರೀಡೆ

Last Updated:

ಫಿಟನ್​ ಸಮಸ್ಯೆ ಹಾಗೂ ಅಶಿಸ್ತಿನ ಕಾರಣ ಮೊದಲು ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದ ಪೃಥ್ವಿ ಶಾ ನಂತರ ಐಪಿಎಲ್, ಮುಂಬೈ ರಣಜಿ ತಂಡಗಳಿಂದಲೂ ಕಡೆಗಣಿಸಲ್ಪಟ್ಟರು. ಇದೀಗ ಮಹಾರಾಷ್ಟ್ರ ಪರ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಅವರು ಬುಚಿ ಬಾಬು ಟೂರ್ನಮೆಂಟ್ ಹಾಗೂ ರಣಜಿ ಟ್ರೋಫಿಯಲ್ಲಿ ಪೃಥ್ವಿ ಶಾ ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರಿಸಿದರೆ, ಅವರು ಭಾರತೀಯ ತಂಡಕ್ಕೆ ಪುನಾರಾಗಮನ ಮಾಡುವ ಆಸೆಗೆ ಮತ್ತೊಂದು ಅವಕಾಶ ಸಿಗಲಿದೆ.

ಪೃಥ್ವಿ ಶಾ  ಶತಕಪೃಥ್ವಿ ಶಾ  ಶತಕ
ಪೃಥ್ವಿ ಶಾ ಶತಕ

ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ (Prithvi Shaw) ಕೊನೆಗೂ ಫಾರ್ಮ್‌ಗೆ ಮರಳಿದ್ದಾರೆ. ಕೆಲವು ಸಮಯದಿಂದ ಕಳಪೆ ಆಟ ಮತ್ತು ಫಿಟ್‌ನೆಸ್ ಸಮಸ್ಯೆಗಳಿಂದ (Fitness Issue) ಬಳಲುತ್ತಿರುವ ಈ ಮುಂಬೈ ಮಾಜಿ ಆಟಗಾರ, ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿಯಾದ ಬುಚಿ ಬಾಬು ಟೂರ್ನಮೆಂಟ್‌ನಲ್ಲಿ (Buchi Babu Tournament 2025) ಭರ್ಜರಿ ಶತಕ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ದೇಶೀಯ ಕ್ರಿಕೆಟ್ ಋತುವಿನ ಆರಂಭಕ್ಕೂ ಮೊದಲು ಮುಂಬೈನಿಂದ ಮಹಾರಾಷ್ಟ್ರ ತಂಡಕ್ಕೆ ಸ್ಥಳಾಂತರಗೊಂಡ ಪೃಥ್ವಿ ಶಾ, ಆ ತಂಡಕ್ಕಾಗಿ ತಮ್ಮ ಚೊಚ್ಚಲ ಪಂದ್ಯದಲ್ಲಿ ಶತಕ ಗಳಿಸಿ ಗಮನ ಸೆಳೆದಿದ್ದಾರೆ. ಛತ್ತೀಸ್‌ಗಢ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಪೃಥ್ವಿ ಶಾ 122 ಎಸೆತಗಳಲ್ಲಿ ಶತಕ ಪೂರೈಸಿದರು. ಏಕದಿನ ಶೈಲಿಯಲ್ಲಿ ಆಕ್ರಮಣಕಾರಿಯಾಗಿ ಆಡಿದ ಪೃಥ್ವಿ ಶಾ, ತಮ್ಮ ಕ್ಲಾಸಿಕ್ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆದಿದ್ದಾರೆ.

ಜವಾಬ್ದಾರಿಯುವ ಶತಕ

ಇನ್ನಿಂಗ್ಸ್ ಆರಂಭಿಸಿ ಮೊದಲ ವಿಕೆಟ್​​ಗೆ 70 ರನ್​ಗಳಿಸಿ ಉತ್ತಮ ಆರಂಭ ಪಡದಿದ್ದ ಮಹಾರಾಷ್ಟ್ರ ತಂಡ ದಿಢೀರ್ ಕುಸಿತ ಕಂಡಿತು. ಇದರಲ್ಲಿ ಪೃಥ್ವಿ ಶಾ ಜೊತೆಗಾರ ಸಚಿನ್ ದಾಸ್ ಕೊಡುಗೆ ಕೇವಲ 10 ರನ್​. ಅವರು 10 ರನ್​ಗಳಿಸಿ ಶಶಾಂಕ್ ತಿವಾರಿಗೆ ವಿಕೆಟ್ ನೀಡಿದರು. ನಂತರ ಬಂದ ಸಿದ್ದೇಶ್ ವೀರ್ (4) ಹಾಗೂ ಋತುರಾಜ್ ಗಾಯಕ್ವಾಡ್(1) ದಯನೀಯ ವೈಫಲ್ಯ ಅನುಭವಿಸಿದರು. ಆದರೆ ಪೃಥ್ವಿ ಕ್ಕ್ರೀಸ್​​ನಲ್ಲಿ ಗಟ್ಟಿಯಾಗಿ ಉಳಿದು ಶತಕ ಪೂರೈಸಿದರು. 53 ಓವರ್‌ರನಲ್ಲಿ ಔಟಾಗುವ ಮುನ್ನ ಅವರು ಪೃಥ್ವಿ ಶಾ 141 ಎಸೆತಗಳಲ್ಲಿ 15 ಬೌಂಡರಿ, 1 ಸಿಕ್ಸರ್ ಸಹಿತ 111 ರನ್ ಗಳಿಸಿದರು.

ನಾಯಕ ಅಂಕಿತ್ ಬವಾನೆ (0) ಹಾಗೂ ಸಿದ್ಧಾರ್ಥ್ ಮಾಥ್ರೆ (21) ಮಾತ್ರೆ ಕೂಡ ನಿರಾಶಾದಾಯಕ ಪ್ರದರ್ಶನ ತೋರಿದರು.

ಹೊಸ ತಂಡ, ಹೊಸ  ಕನಸು

ಫಿಟನ್​ ಸಮಸ್ಯೆ ಹಾಗೂ ಅಶಿಸ್ತಿನ ಕಾರಣ ಮೊದಲು ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದ ಪೃಥ್ವಿ ಶಾ ನಂತರ ಐಪಿಎಲ್, ಮುಂಬೈ ರಣಜಿ ತಂಡಗಳಿಂದಲೂ ಕಡೆಗಣಿಸಲ್ಪಟ್ಟರು. ಇದೀಗ ಮಹಾರಾಷ್ಟ್ರ ಪರ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಅವರು ಬುಚಿ ಬಾಬು ಟೂರ್ನಮೆಂಟ್ ಹಾಗೂ ರಣಜಿ ಟ್ರೋಫಿಯಲ್ಲಿ ಪೃಥ್ವಿ ಶಾ ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರಿಸಿದರೆ, ಅವರು ಭಾರತೀಯ ತಂಡಕ್ಕೆ ಪುನಾರಾಗಮನ ಮಾಡುವ ಆಸೆಗೆ ಮತ್ತೊಂದು ಅವಕಾಶ ಸಿಗಲಿದೆ.

ಕಮ್​ಬ್ಯಾಕ್ ಮಾಡಲಿ ಎಂದು ಫ್ಯಾನ್ಸ್ ಬಯಕೆ

ಮಹಾರಾಷ್ಟ್ರ ತಂಡಕ್ಕಾಗಿ ಮೊದಲ ಪಂದ್ಯದಲ್ಲಿ ಶತಕ ಗಳಿಸಿದ ನಂತರ ಪೃಥ್ವಿ ಶಾ ಅವರ 2.0 ಯು ಆರಂಭ ಬೌಲರ್‌ಗಳಿಗೆ ಶಾಕ್ ನೀಡಲಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಕರುಣ್ ನಾಯರ್ ಕೂಡ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ 8 ವರ್ಷಗಳ ದೀರ್ಘ ಕಾಯುವಿಕೆಯ ನಂತರ ತಂಡಕ್ಕೆ ಮರುಪ್ರವೇಶ ಮಾಡಿದ್ದರು. ಪೃಥ್ವಿ ಶಾಗೂ ಅದೇ ರೀತಿಯ ಅವಕಾಶ ಸಿಗಲಿ ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ.

ಇದಕ್ಕೂ ಮೊದಲು ಛತ್ತೀಸ್‌ಗಢ ತಂಡ 89.3 ಓವರ್‌ಗಳಲ್ಲಿ 252 ರನ್‌ಗಳಿಗೆ ಆಲೌಟ್ ಆಗಿತ್ತು. ಸಂಜೀತ್ ದೇಸಾಯಿ 93 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅವ್ನಿಶ್ ಸಿಂಗ್ (52) ಅರ್ಧಶತಕ ಗಳಿಸಿ ಅವರಿಗೆ ಸಾಥ್ ನೀಡಿದರು.

ಪೃಥ್ವಿ ಶಾ‌ರ ಹಿನ್ನೆಲೆ

25 ವರ್ಷದ ಪೃಥ್ವಿ ಶಾ, 2018ರಲ್ಲಿ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು, ಅದರಲ್ಲಿ ಶುಭ್​ಮನ್ ಗಿಲ್ ಟೂರ್ನಮೆಂಟ್‌ನ ಶ್ರೇಷ್ಠ ಆಟಗಾರರಾಗಿದ್ದರು. ಆದರೆ, ಶಾ‌ರ ಅಂತರರಾಷ್ಟ್ರೀಯ ವೃತ್ತಿಜೀವನವು ನಿರೀಕ್ಷೆಯಂತೆ ರೂಪುಗೊಳ್ಳಲಿಲ್ಲ. ಕಳೆದ ಋತುವಿನಲ್ಲಿ ಫಿಟ್‌ನೆಸ್ ಮತ್ತು ಶಿಸ್ತಿನ ಸಮಸ್ಯೆಗಳಿಂದಾಗಿ ಮುಂಬೈ ರಣಜಿ ತಂಡದಿಂದ ಕೈಬಿಡಲ್ಪಟ್ಟಿದ್ದರು. ಇದರಿಂದ ಅವರು ಜುಲೈ 2025ರಲ್ಲಿ ಮಹಾರಾಷ್ಟ್ರಕ್ಕೆ ಸ್ಥಳಾಂತರಗೊಂಡರು.

ಮಹಾರಾಷ್ಟ್ರ ತಂಡವನ್ನು ಅಂಕಿತ್ ಬಾವನೆ ನಾಯಕತ್ವದಲ್ಲಿ ಮುನ್ನಡೆಸುತ್ತಿದ್ದಾರೆ, ಮತ್ತು ಇದರಲ್ಲಿ ಋತುರಾಜ್ ಗಾಯಕ್ವಾಡ್, ಸೌರಭ್ ನಾವಲೆ, ರಾಜವರ್ಧನ್ ಹಂಗರಗೇಕರ್, ಮುಕೇಶ್ ಚೌಧರಿ ಮುಂತಾದ ಆಟಗಾರರಿದ್ದಾರೆ.

ಬುಚಿ ಬಾಬು ಟೂರ್ನಮೆಂಟ್‌ನ ಮಹತ್ವ

ಬುಚಿ ಬಾಬು ಆಮಂತ್ರಣ ಕ್ರಿಕೆಟ್ ಟೂರ್ನಮೆಂಟ್ ಭಾರತದ ದೇಶೀಯ ಕ್ರಿಕೆಟ್ ಋತುವಿನ ಮುನ್ನೆಲೆಯಲ್ಲಿ ಒಂದು ಪ್ರಮುಖ ಸಿದ್ಧತಾ ಸ್ಪರ್ಧೆಯಾಗಿದ್ದು, ತಮಿಳುನಾಡು ಕ್ರಿಕೆಟ್ ಬೋರ್ಡ್ ಆಯೋಜಿಸುತ್ತದೆ. ಈ ವರ್ಷ ಚೆನ್ನೈನಲ್ಲಿ ಆಗಸ್ಟ್ 18ರಿಂದ ಸೆಪ್ಟೆಂಬರ್ 9ರವರೆಗೆ ನಡೆಯುತ್ತಿದ್ದು, 16 ತಂಡಗಳು ನಾಲ್ಕು ಗುಂಪುಗಳಾಗಿ ವಿಂಗಡಿತವಾಗಿವೆ. ಪೃಥ್ವಿ ಶಾ‌ರ ಈ ಪ್ರದರ್ಶನವು ಭಾರತ ತಂಡಕ್ಕೆ ಮರಳುವ ಅವರ ಆಕಾಂಕ್ಷೆಗೆ ಬಲ ತಂದಿದೆ.