ಕನ್ನಡಿಗರ ಹೃದಯದಲ್ಲಿ ಮನೆ ಮಾಡಿದ ಅಪ್ಪಟ ಕನ್ನಡಿಗನಿಗೆ ಸಂದ ಪ್ರತಿಷ್ಠಿತ ಗೌರವಗಳಿವು – PUNEETH RAJKUMAR AWARDS AND HONORS

ಕನ್ನಡಿಗರ ಹೃದಯದಲ್ಲಿ ಮನೆ ಮಾಡಿದ ಅಪ್ಪಟ ಕನ್ನಡಿಗನಿಗೆ ಸಂದ ಪ್ರತಿಷ್ಠಿತ ಗೌರವಗಳಿವು – PUNEETH RAJKUMAR AWARDS AND HONORS

1976ರಿಂದ 1988ರವರೆಗೆ ಬಾಲನಟನಾಗಿ ಕಾಣಿಸಿಕೊಂಡ ಪುನೀತ್​ ರಾಜ್​ಕುಮಾರ್,​​ 2002ರಲ್ಲಿ ‘ಅಪ್ಪು’ ಚಿತ್ರದ ಮೂಲಕ ನಾಯಕ ನಟನಾಗಿ ವೃತ್ತಿಜೀವನ ಆರಂಭಿಸಿದರು. ಪವರ್​ ಸ್ಟಾರ್​ ಸೇವೆಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ.

ಮಾರ್ಚ್​​​ 17, ಸೋಮವಾರ ಕರುನಾಡಿನ ನಗುಮೊಗದ ಒಡೆಯ ಪುನೀತ್​ ರಾಜ್​​​ಕುಮಾರ್​ ಅವರ ಜನ್ಮದಿನ. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಕಲಾವಿದನ 50ನೇ ಸಾಲಿನ ಜನ್ಮದಿನೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. 1976ರಿಂದ 1988ರ ವರೆಗೆ ಮಗುವಿನ ಪಾತ್ರ, ಬಾಲನಟನಾಗಿ ಕಾಣಿಸಿಕೊಂಡ ಪುನೀತ್​ ರಾಜ್​ಕುಮಾರ್,​​ 2002ರಲ್ಲಿ ‘ಅಪ್ಪು’ ಚಿತ್ರದ ಮೂಲಕ ನಾಯಕ ನಟನಾಗಿ ವೃತ್ತಿಜೀವನ ಆರಂಭಿಸಿದರು. ನಗುಮೊಗದ ಒಡೆಯನ ಸೇವೆಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ.

Power star Puneeth Rajkumar
ದಿ.ನಟ​ ಪುನೀತ್​ ರಾಜ್​ಕುಮಾರ್
  • ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಬೆಟ್ಟದ ಹೂವು (1985) ಚಿತ್ರದಲ್ಲಿ ಬಾಲನಟನಾಗಿ ಅತ್ಯುತ್ತಮ ಅಭಿನಯ.
  • ಸೌತ್ ಫಿಲ್ಮ್‌ಫೇರ್ ಪ್ರಶಸ್ತಿ : 1986ರಲ್ಲಿ ಅತ್ಯುತ್ತಮ ಬಾಲನಟ ವಿಶೇಷ ಪ್ರಶಸ್ತಿ (ಬೆಟ್ಟದ ಹೂವು).
  • ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು : ಮಿಲನ (2007-08) – ಅತ್ಯುತ್ತಮ ನಟ, ಜಾಕಿ (2010-11) – ಅತ್ಯುತ್ತಮ ನಟ.
  • ಸೈಮಾ ಅವಾರ್ಡ್ಸ್: ಹುಡುಗರು (2011) – ಅತ್ಯುತ್ತಮ ನಟ, ಯಾರೇ ಕೂಗಾಡಲಿ (2013) – ಯೂತ್​ ಐಕಾನ್​ ಆಫ್​ ಸೌತ್ ಇಂಡಿಯಾ, ರಣ ವಿಕ್ರಮ (2016) – ಅತ್ಯುತ್ತಮ ನಟ, ರಾಜಕುಮಾರ (2018) – ಅತ್ಯುತ್ತಮ ನಟ.
  • ಫಿಲ್ಮ್‌ಫೇರ್ ಅವಾರ್ಡ್ಸ್​ ಸೌತ್ : ಅರಸು (2007) – ಅತ್ಯುತ್ತಮ ನಟ, ಹುಡುಗರು (2011) – ಅತ್ಯುತ್ತಮ ನಟ, ರಣ ವಿಕ್ರಮ (2015) – ಅತ್ಯುತ್ತಮ ನಟ, ರಾಜಕುಮಾರ (2017) – ಅತ್ಯುತ್ತಮ ನಟ.

ಮರಣೋತ್ತರ ಗೌರವ :

  • 67ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕ ರತ್ನ ಗೌರವಕ್ಕೆ ಪಾತ್ರರಾದರು.
  • 2022ರ ಮಾರ್ಚ್ 22ರಂದು, ಮೈಸೂರು ವಿಶ್ವವಿದ್ಯಾಲಯದ 102ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಲಾಯಿತು. ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪ್ರಶಸ್ತಿಯನ್ನು ಸ್ವೀಕರಿಸಿದರು.
  • ರಾಜ್ಯ ಸರ್ಕಾರವು ನಟನ ಜನ್ಮದಿನವನ್ನು “ಸ್ಫೂರ್ತಿ ದಿನ” ಎಂದು ಆಚರಿಸಲು ಘೋಷಿಸಿತು.
  • 2022ರ ಮೇ 3ರಂದು, ಬಸವಶ್ರೀ ಪ್ರಶಸ್ತಿಯನ್ನು ನೀಡಲಾಯಿತು.
  • 212ನೇ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನವನ್ನು ಅಪ್ಪು ಹಾಗೂ ಡಾ.ರಾಜ್‌ಕುಮಾರ್ ಅವರಿಗೆ ಗೌರವವಾಗಿ ಸಮರ್ಪಿಸಲಾಯಿತು.
  • 2022ರ ಮೈಸೂರು ದಸರಾ ಮೆರವಣಿಗೆಯಲ್ಲಿ, ಅವರಿಗೆ ಸಮರ್ಪಿತವಾದ ಟ್ಯಾಬ್ಲೋವನ್ನು ತಯಾರಿಸಲಾಗಿತ್ತು.
  • 67ನೇ ಫಿಲ್ಮ್‌ಫೇರ್ ಪ್ರಶಸ್ತಿಗಳಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು.
  • ಅವರ ನಿಧನದ ಒಂದು ವರ್ಷದೊಳಗೆ ಬಿಡುಗಡೆಯಾದ ಎಲ್ಲಾ 200 ಕನ್ನಡ ಚಲನಚಿತ್ರಗಳು ತಮ್ಮ ಆರಂಭಿಕ ಕ್ರೆಡಿಟ್‌ಗಳಲ್ಲಿ ಅಪ್ಪು ಅವರಿಗೆ ಗೌರವ ಸಲ್ಲಿಸಿದವು.
Power star Puneeth Rajkumar
ದಿ.ನಟ​ ಪುನೀತ್​ ರಾಜ್​ಕುಮಾರ್
  • ನಟನ ಕೊನೆ ಚಿತ್ರ ‘ಗಂಧದ ಗುಡಿ’ ಬಿಡುಗಡೆ ಸಂದರ್ಭದಲ್ಲಿ ವರ್ಷ ಅಕ್ಟೋಬರ್ 22 ಮತ್ತು 23ರಂದು ಬೆಂಗಳೂರಿನ ರೆಸ್ಟೋರೆಂಟ್‌ಗಳು ‘ಫುಡ್​ ಫೆಸ್ಟಿವಲ್​ – ಫ್ಲೇವರ್ಸ್ ಆಫ್ ಗಂಧದ ಗುಡಿ’ಯನ್ನು ಆಯೋಜಿಸಿದ್ದವು.
  • ಮೊದಲ ಪುಣ್ಯಸ್ಮರಣೆಯಂದು ಅವರ ಸ್ಮಾರಕದ ಹೊರಗೆ ಹೂಮಾಲೆಗಳನ್ನು ಹೊಂದಿರುವ 75 ಕಟೌಟ್‌ಗಳಿದ್ದವು.
  • 2023ರಲ್ಲಿ ಬಳ್ಳಾರಿಯಲ್ಲಿ ನಡೆದ ಬಳ್ಳಾರಿ ಉತ್ಸವದ ಉದ್ಘಾಟನೆಯ ಭಾಗವಾಗಿ 23 ಅಡಿ ಎತ್ತರದ ಪುನೀತ್ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
  • ಮಾರ್ಚ್ 2023ರಲ್ಲಿ, ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು ಗೋವಿಂದರಾಜನಗರ ಕ್ಷೇತ್ರದ ನಾಯಂಡಹಳ್ಳಿಯಲ್ಲಿ ನಟನ ಹೆಸರಿನಲ್ಲಿ ನಿರ್ಮಿಸಲಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದರು.
  • ಕರ್ನಾಟಕ ಆರೋಗ್ಯ ಇಲಾಖೆಯು 2023ರ ಅಕ್ಟೋಬರ್ 31ರಂದು ಹೃದಯ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಚಿಕಿತ್ಸೆ ನೀಡಲು ಡಾ.ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಪ್ರಾರಂಭಿಸಿತು.

ಹೀಗೆ ನಟನಿಗೆ ಹಲವು ಪ್ರಶಸ್ತಿಗಳು, ಪ್ರತಿಷ್ಠಿತ ಗೌರವ, ವಿಶೇಷ ಮನ್ನಣೆ ಸಂದಿವೆ. ಅಭಿಮಾನಿಗಳು ನಟನ ಹೆಸರಲ್ಲಿ ಸಮಾಜ ಸೇವೆ ಮುಂದುವರಿಸಿದ್ದು, ಇದು ತಮ್ಮ ಮೆಚ್ಚಿನ ನಟನಿಗೆ ನೀಡುತ್ತಿರುವ ಗೌರವವಾಗಿದೆ.

Leave a Reply

Your email address will not be published. Required fields are marked *