Puttur: ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣ ಉತ್ಸವ, ಹಸಿರು ಹೊರೆಕಾಣಿಕೆ ಸಮರ್ಪಣೆ! | Mahalingeshwara Temple | ದಕ್ಷಿಣ ಕನ್ನಡ

Puttur: ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣ ಉತ್ಸವ, ಹಸಿರು ಹೊರೆಕಾಣಿಕೆ ಸಮರ್ಪಣೆ! | Mahalingeshwara Temple | ದಕ್ಷಿಣ ಕನ್ನಡ

Last Updated:

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ನೇತೃತ್ವದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಸಿರುವಾಣಿ ಮೆರವಣಿಗೆ, ಸಾಮೂಹಿಕ ವಿವಾಹ, ಅನ್ನಸಂತರ್ಪಣೆ ನಡೆಯಿತು.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ (Srinivasa Kalyanotsava) ಸಮಿತಿ ಇದರ ಸಾರಥ್ಯದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ (Temple) ದೇವರಮಾರು ಗದ್ದೆಯಲ್ಲಿ ನ.29 ಮತ್ತು 30 ರಂದು ನಡೆಯುವ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ನ.28ರಂದು ಸಂಜೆ ಹಸಿರುವಾಣಿ  (Hasiruvani) ಹೊರೆಕಾಣಿಕೆ ಮೆರವಣಿಗೆ ವೈಭವದಿಂದ ನಡೆಯಿತು. ಈ ಬಾರಿ ವಿಶೇಷವಾಗಿ ಸಾಮೂಹಿಕ ವಿವಾಹ ಮತ್ತು ಹಿಂದವಿ ಸಾಮ್ರಾಜ್ಯೋತ್ಸವ ನಡೆಯಲಿದ್ದು, ಮೂರು ದಿನವೂ ನಡೆಯುವ ನಿರಂತರ ಅನ್ನಸಂತರ್ಪಣೆಗೆ (Anna Santharpane) ದೊಡ್ಡ ಮಟ್ಟದಲ್ಲಿ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು.

ಹಸಿರು ಹೊರೆಕಾಣಿಕೆ ಮೆರವಣಿಗೆ

ತಾಲೂಕಿನ ವಿವಿಧ ಗ್ರಾಮಗಳಿಂದ ಬರುವ ಹೊರೆಕಾಣಿಕೆಯು ದರ್ಬೆಗೆ ಬಂದು ಅಲ್ಲಿಂದ ಜೊತೆಯಾಗಿ ಮೆರವಣಿಗೆಯು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಗೆ ಬಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಹಸಿರುವಾಣಿಯನ್ನು ಉಗ್ರಾಹಣ ಮುಹೂರ್ತ ನಡೆಯಿತು. ದರ್ಬೆಯಲ್ಲಿ ತಂತ್ರಿವರ್ಯರಾದ ಸುಬ್ರಹ್ಮಣ್ಯ ಬಳ್ಳಕುರಾಯ, ಕುಂಟಾರು ತಂತ್ರಿ ಗುರು ತಂತ್ರಿಯವರು ತೆಂಗಿನ ಕಾಯಿ ಒಡೆದ ಮೂಲಕ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.

ಶ್ರೀನಿವಾಸ ಕಲ್ಯಾಣೋತ್ಸವ

ದೇವಳದ ಸಭಾಭವನದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ದೀಪ ಪ್ರಜ್ವಲನೆ ಮೂಲಕ ಉಗ್ರಾಣ ಮುಹೂರ್ತ ನೆರವೇರಿಸಿದರು. ತಂತ್ರಿವರ್ಯರಾದ ಸುಬ್ರಹ್ಮಣ್ಯ ಬಳ್ಳಕುರಾಯ ಅವರು ಮಾತನಾಡಿ ದೂರದ ತಿರುಪತಿ ಶ್ರೀನಿವಾಸನ ದರ್ಶನವನ್ನು ಬಹಳ ಹತ್ತಿರದಲ್ಲಿ ನಮಗೆಲ್ಲ ದೊರಕಿಸಿ ಕೊಡುತ್ತಿರುವ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‍ನ ಸೇವಾ ಕಾರ್ಯಗಳಿಗೆ ನಮ್ಮ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಅಲ್ಲಿ ನಿರಂತರ ನಡೆಯುವ ಅನ್ನಪ್ರಸಾದ ಸೇವೆಗೆ ಸಮರ್ಪಣಾ ಭಾವದಿಂದ ಸಹಕಾರ ಕೊಡೋಣ ಎಂದರು.

ಕುಂಟಾರು ಗುರುತಂತ್ರಿಯವರು ಮಾತನಾಡಿ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ, ಹಿಂದವಿ ಸಾಮ್ರಾಜ್ಯೋತ್ಸವದಲ್ಲಿ ಎಲ್ಲರು ಭಾಗಿಯಾಗಬೇಕು. ಒಳ್ಳೆಯ ಕಾರ್ಯಕ್ರಮಕ್ಕೆ ಜೊತೆಯಾಗೋಣ. ಅರುಣ್ ಕುಮಾರ್ ಪುತ್ತಿಲ ಅವರು ಮಾಡುವ ಧಾರ್ಮಿಕ ಕಾರ್ಯಕ್ರಮದಲ್ಲಿ ನಾವೆಲ್ಲ ಬೆನ್ನೆಲುಬಾಗಿ ಧಾರ್ಮಿಕ ವೃತ್ತಿಯಲ್ಲಿ ತೊಡಗಿಸಿಕೊಂಡ ನಮ್ಮ ಆದ್ಯ ಕರ್ತವ್ಯ. ಧಾರ್ಮಿಕವಾಗಿ ಒಂದು ಕಾರ್ಯಕ್ರಮ ಮಾಡಬೇಕಾದರೆ ಈ ರೀತಿಯ ಎಲ್ಲಾ ವ್ಯವಸ್ಥೆ ಒದಗಿಬಂದಾಗ ಮಾತ್ರ ವೈದಿಕ ಕಾರ್ಯಕ್ರಮಕ್ಕೆ ವೇದಿಕೆ ಸಿಗುತ್ತದೆ. ಈ ನಿಟ್ಟಿನಲ್ಲಿ ಹಿಂದೂ ನಾಯಕ ಅನ್ನುವ ರೀತಿಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಒಳ್ಳೆಯ ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಜೊತೆಯಲ್ಲಿ ಸೇರಿಕೊಂಡು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಒಳ್ಳೆಯದಾಗಿ ನಡೆಸಿಕೊಂಡು ಬರಲು ದೇವರಲ್ಲಿ ಪ್ರಾರ್ಥನೆ ಮಾಡೋಣ ಎಂದರು.