Puttur: 2 ವರ್ಷದಿಂದ ಸೂರಿಗಾಗಿ ಅಲೆದಾಟ; ನ್ಯಾಯ ಕೊಡ್ಸಿ ಅಂದ್ರು ಡೋಂಟ್​ಕೇರ್​​ | Elderly couple protest after losing home government negligence exposed in dakshina kannada puttur | ದಕ್ಷಿಣ ಕನ್ನಡ

Puttur: 2 ವರ್ಷದಿಂದ ಸೂರಿಗಾಗಿ ಅಲೆದಾಟ; ನ್ಯಾಯ ಕೊಡ್ಸಿ ಅಂದ್ರು ಡೋಂಟ್​ಕೇರ್​​ | Elderly couple protest after losing home government negligence exposed in dakshina kannada puttur | ದಕ್ಷಿಣ ಕನ್ನಡ

Last Updated:

ಅವ್ರು ವೃದ್ಧ ದಂಪತಿ, ವ್ಯಕ್ತಿಯೊಬ್ಬರ ಸ್ವಾಧೀನದಲ್ಲಿದ್ದ ಭೂಮಿಯಲ್ಲಿ ವಾಸವಾಗಿದ್ರು. ಆದ್ರೆ ಅಧಿಕಾರಿಗಳು ಏಕಾಏಕಿ ತಮ್ಮ ಮನೆ ಧ್ವಂಸ ಮಾಡಿದ್ದಾರೆಂದು ಕಣ್ಣೀರು ಹಾಕ್ತಿದ್ದಾರೆ. ನ್ಯಾಯ ಸಿಗೋವರೆಗೂ ಧರಣಿ ಮಾಡ್ತೀವಿ ಅಂತಿದ್ದಾರೆ.

ಮನೆಗಾಗಿ ಧರಣಿ ಕುಳಿತ ವೃದ್ಧ ದಂಪತಿ
ಮನೆಗಾಗಿ ಧರಣಿ ಕುಳಿತ ವೃದ್ಧ ದಂಪತಿ

ಮಂಗಳೂರು: ಕಳೆದ ಎರಡು ವರ್ಷದಿಂದ ಈ ವೃದ್ಧ ದಂಪತಿ ಗೋಳು (Old Couple) ಕೇಳೋರಿಲ್ಲದಂತಾಗಿದೆ. ಮನೆ ಕಳ್ಕೊಂಡು ಕಚೇರಿ ಕಚೇರಿ (Government Office) ಅಲೀತಿದ್ರು ಯಾರೊಬ್ಬರು ಕ್ಯಾರೆ ಅಂತಿಲ್ಲ. ಸ್ವಾಮಿ ನಮ್ಮನೆ ಕೆಡವಿದ್ದಾರೆ, ನ್ಯಾಯ ಕೊಡಿಸಿ ಅಂದ್ರು (Protrst For Shelter) ಸ್ಪಂದಿಸ್ತಿಲ್ಲ. ಇದೀಗ ನ್ಯಾಯ ಸಿಗೋವರೆಗೂ (Dakshina Kannada) ಧರಣಿ ಕೈ ಬಿಡಲ್ಲ ಅಂತಾ ಪಟ್ಟಿಡಿದು ಕೂತಿದ್ದಾರೆ.

ಇವ್ರು ಮುತ್ತುಸ್ವಾಮಿ ಮತ್ತು ರಾಧಮ್ಮ ದಂಪತಿ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿಗಳು. ಕಳೆದ ಹಲವು ವರ್ಷಗಳಿಂದ ವ್ಯಕ್ತಿಯೊಬ್ಬರ ಸ್ವಾಧೀನದಲ್ಲಿದ್ದ ಭೂಮಿಯಲ್ಲಿ ವಾಸವಾಗಿದ್ದರು. 6 ವರ್ಷಗಳ ಕಾಲ ಜೋಪಡಿಯಲ್ಲೇ ಜೀವನ ಮಾಡಿದವ್ರು ನಂತ್ರ ಚಿಕ್ಕದೊಂದು ಮನೆ ಕಟ್ಕೊಂಡು ಬದುಕ್ತಿದ್ರು. ಆದರೆ ಕೌಕ್ರಾಡಿ ಗ್ರಾಮ ಪಂಚಾಯತ್ ಅಧಿಕಾರಿಗಳು ಇದು ಸರ್ಕಾರಕ್ಕೆ ಸೇರಿದ ಜಾಗ. ಅಕ್ರಮವಾಗಿ ಮನೆ ನಿರ್ಮಿಸಲಾಗಿದೆ ಅಂತಾ 2024 ಡಿಸೆಂಬರ್ 11ರಂದು ಮನೆ ಧ್ವಂಸ ಮಾಡಿದ್ದಾರೆ. ಅಲ್ಲದೇ ಅಲ್ಲಿಂದ ತೆರವುಗೊಳಿಸಬೇಕೆಂದು ವ್ಯಕ್ತಿಯೊಬ್ಬರು ನ್ಯಾಯಾಲಯದಲಲ್ಲಿ ಸಾರ್ವಜನಿಕ ದಾವೆ ಹೂಡಿದ್ದರು. ಹೀಗಾಗಿ ಯಾವ ಕಚೇರಿಗೆ ಹೋದ್ರೂ ಪ್ರಕರಣ ನ್ಯಾಯಾಲಯದಲ್ಲಿದೆ ಅಂತಾ ಸಬೂಬು ಹೇಳಿ ಕಳಿಸಿದ್ರಂತೆ.

ತಹಶೀಲ್ದಾರ್, ಜಿಲ್ಲಾಧಿಕಾರಿ ಸರ್ಕಾರಿ ಕಚೇರಿಗೆ ಅಲೆಯುತ್ತಿದ್ದರೂ ಯಾವುದೇ ಪ್ರಯೋಜನೆ ಆಗಿಲ್ಲ. ನಮ್ಮನ್ನು ಕಚೇರಿಯಿಂದ ಹೊರ ಹಾಕಿದ್ದಾರೆ. ಮನೆ, ನೀರು ಇಲ್ಲದೇ, ಮಲಗಲು ಜಾಗ ಇಲ್ಲದೇ, ಮಳೆಯಲ್ಲಿ ಟರ್ಪಲ್ ಕಟ್ಟಿಕೊಂಡು ಜೀವನ ಮಾಡಿದ್ದೇವೆ. ಟರ್ಪಲ್ ಮೇಲೆ ಬಿದ್ದ ಮಳೆ ನೀರನ್ನೇ ಸಂಗ್ರಹಿಸಿ ಕುಡಿಯೋಕೆ ಬಳಸಿದ್ದೇವೆ. ನ್ಯಾಯ ಕೇಳಲು ಬಂದರೆ ಯಾರು ಪ್ರತಿಕ್ರಿಯೆಯನ್ನೇ ಕೊಟ್ಟಿಲ್ಲ. ಆದ್ದರಿಂದಲೇ ವಿಧಿ ಇಲ್ಲದೇ ಧರಣಿ ಕುಳಿತಿಕೊಂಡಿದ್ದೇವೆ ಎಂದು ಸಂತ್ರಸ್ತ ವೃದ್ಧ ಅಳಲು ತೊಡಿಕೊಂಡಿದ್ದಾರೆ.

ಕಷ್ಟಪಟ್ಟು ಕಟ್ಕೊಂಡಿದ್ದ ಮನೆ ನೆಲಸಮ ಆದ್ರೂ ಅದೇ ಜಾಗದಲ್ಲೇ ವಾಸ ಮಾಡ್ತಿದ್ದಾರೆ. ಆದರೆ ಕಾಟ ಮಾತ್ರ ತಪ್ಪಿಲ್ಲ, ಹೀಗಾಗಿ ಆ ಜಾಗವನ್ನ ಉಳಿಸಿಕೊಡುವಂತೆ ವೃದ್ಧದಂಪತಿ ಮಕ್ಕಳ ಜೊತೆ ಧರಣಿಗೆ ಕೂತಿದ್ದಾರೆ. ಇವರ ಬೆಂಬಲಕ್ಕೆ ಬಿಜೆಪಿ ನಿಂತಿದ್ದು, ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ. ವೃದ್ಧ ದಂಪತಿಗಳಿಗೆ ಸರಕಾರ ಅನ್ಯಾಯ ಮಾಡಿದೆ ಅಂತಾ ಮಾಜಿ ಶಾಸಕ ಸಂಜೀವ ಮಠಂದೂರು ಗುಡುಗಿದ್ರು.

ಸರ್ಕಾರಕ್ಕೆ ಬಡವರು ಪರ ಕಳಕಳಿ ಇದ್ದರೆ ಕೂಡಲೇ ಇವರಿಗೆ ನೆಲೆ ಕಲ್ಪಿಸಿಕೊಡಬೇಕು. ಇವರು ಕರ್ನಾಟಕದ ಮತದಾರರು, ಇವರಿಗೆ ನೆಲೆ ಇಲ್ಲ ಎಂದರೇ ಸರ್ಕಾರ ಕಾಳಜಿ ಯಾರ ಪರ ಇದೇ ಎಂದು ಗೊತ್ತಾಗುತ್ತದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.