Last Updated:
ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಶುಭ ಘಳಿಗೆಯಲ್ಲಿ ಉಪಸ್ಥಿತರಿದ್ದು, ಲಕ್ಷ ದೀಪಗಳಲ್ಲಿ ಕಂಗೊಳಿಸಿದ ಮಹಾಲಿಂಗೇಶ್ವರ ಸ್ವಾಮಿಯನ್ನು ಕಣ್ತುಂಬಿಕೊಂಡರು.
ದಕ್ಷಿಣಕನ್ನಡ: ಇತಿಹಾಸ ಪ್ರಸಿದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ(Puttur Mahalingeshwara Temple) ವೈಭವದ ಲಕ್ಷದೀಪೋತ್ಸವ(Laksha Deepotsava) ನಡೆಯಿತು. ಲಕ್ಷ ದೀಪಗಳನ್ನು ಹಚ್ಚುವ ಮೂಲಕ ಭಕ್ತರು ಮಹಾಲಿಂಗೇಶ್ವರ ಸ್ವಾಮಿಯ ದೀಪೋತ್ಸವದಲ್ಲಿ ಸಂಭ್ರಮಿಸಿದರು. ದೀಪೋತ್ಸವದ ಅಂಗವಾಗಿ ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ನ. 30 ರಂದು ನಡೆದ ದೀಪೋತ್ಸವದಲ್ಲಿ ಸಂಜೆ ಸ್ವಾಮಿಯ ಬಲಿ ಉತ್ಸವ ನಡೆದು, ಬಳಿಕ ಮಹಾಮಂಗಳಾರತಿ ನಡೆಯಿತು. ಮಹಾಮಂಗಳಾರತಿಯ ದೀಪದಿಂದ ದೇವಸ್ಥಾನ ರಥಬೀದಿ ಸಹಿತ ಒಳಾಂಗಣದಲ್ಲಿ ಹಲವಾರು ಸಂಘ ಸಂಸ್ಥೆಗಳ ಕಾರ್ಯಕರ್ತರಿಂದ ಅಚ್ಚುಕಟ್ಟಾಗಿ ಜೋಡಿಸಿಡಲಾದ ಹಣತೆ ಉರಿಸಲಾಯಿತು.
ಇದನ್ನೂ ಓದಿ: Mandya: ಕಾರಿಗಿಂತ ದುಬಾರಿ ಈ ಜೋಡೆತ್ತುಗಳು- ಮಂಡ್ಯ ಕೃಷಿ ಮೇಳದಲ್ಲಿ ಎಲ್ಲರ ಕಣ್ಮನ ಸೆಳೆದ ರಾಸುಗಳು!
ದೇವಸ್ಥಾನದ ಇಡೀ ವಠಾರ ಹಣತೆಯ ಬೆಳಕಿನಿಂದ ಸೇರಿದ್ದ ಸಾವಿರಾರು ಭಕ್ತಾದಿಗಳು ಭಕ್ತಿಯಲ್ಲಿ ಮಿಂದೆದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಹೊರಾಂಗಣದಲ್ಲಿ ಕುಣಿತ ಭಜನೆ ನಡೆಯಿತು. ಬಳಿಕ ಹೊರಾಂಗಣದಲ್ಲಿ ಶ್ರೀ ದೇವರ ಬಲಿ ಹೊರಟು, ಕಟ್ಟೆಪೂಜೆ, ಚಂದ್ರಮಂಡಲ ಉತ್ಸವ, ಕೆರೆ ಉತ್ಸವ ನಡೆಯಿತು. ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಶುಭ ಘಳಿಗೆಯಲ್ಲಿ ಉಪಸ್ಥಿತರಿದ್ದು, ಲಕ್ಷ ದೀಪಗಳಲ್ಲಿ ಕಂಗೊಳಿಸಿದ ಮಹಾಲಿಂಗೇಶ್ವರ ಸ್ವಾಮಿಯನ್ನು ಕಣ್ತುಂಬಿಕೊಂಡರು.
ಕಾರ್ತಿಕ ಮಾಸದಲ್ಲಿ ಪ್ರತಿವರ್ಷವೂ ಎಲ್ಲಾ ದೇವಸ್ಥಾನಗಳಲ್ಲಿ ನಡೆಯುವಂತೆ ಹತ್ತೂರಿನ ಒಡೆಯ ಪುತ್ತೂರಿನ ಮಹಾಲಿಂಗೇಶ್ವರ ಸ್ವಾಮಿಯ ಸನ್ನಿಧಿಯಲ್ಲೂ ಲಕ್ಷ ದೀಪೋತ್ಸವ ನಡೆಯುತ್ತದೆ. ದೇವಸ್ಥಾನದ ತಂತ್ರಿಗಳಾದ ರವೀಶ್ ತಂತ್ರಿಗಳು ಲಕ್ಷ ದೀಪೋತ್ಸವದ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿದರು.
Dakshina Kannada,Karnataka
December 03, 2024 3:08 PM IST