Last Updated:
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಪ್ರತಿ ತಿಂಗಳು ಶುದ್ಧ ಎಳ್ಳೆಣ್ಣೆ ಅಭಿಷೇಕ ನಡೆಯಲಿದೆ.
ದಕ್ಷಿಣ ಕನ್ನಡ: ಇತಿಹಾಸ ಪ್ರಸಿದ್ಧ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ (Putturu) ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಇತ್ತೀಚೆಗೆ ನಡೆದ ಶುದ್ಧ ಎಳ್ಳೆಣ್ಣೆ (Sesame Oil) ಅಭಿಷೇಕದ ಪ್ರಸಾದವನ್ನು ಪಡೆದ ಭಕ್ತರಲ್ಲಿ (Devotees) ಬಹಳಷ್ಟು ಉತ್ತಮ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಬೇಡಿಕೆಯಂತೆ ಪ್ರತಿ ತಿಂಗಳು (Every Month) ಮಹಾಲಿಗೇಶ್ವರ ದೇವರಿಗೆ ಎಳ್ಳೆಣ್ಣೆ ಅಭಿಷೇಕ ಮಾಡುವ ಸಲುವಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಎಳ್ಳೆಣ್ಣೆ ಸಂಗ್ರಹ ಸಮರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ದೇವಳದ ಸೇವಾ ವಿಭಾಗದಿಂದ ಈ ಎಳ್ಳೆಣ್ಣೆ ಸೇವೆಗೆ 500 ರೂಪಾಯಿ ದರ ನಿಗದಿಪಡಿಸಲಾಗಿದೆ. ದೇವಸ್ಥಾನದಲ್ಲಿ ನಡೆದ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಶುದ್ಧ ಎಳ್ಳೆಣ್ಣೆ ದೇವರಿಗೆ ಅಭಿಷೇಕ ಮಾಡುವುದು ಮತ್ತು ಅಭಿಷೇಕದ ಎಣ್ಣೆಯನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಿಸಬೇಕೆಂದು ತಿಳಿಸಲಾಗಿತ್ತು. ಈ ಪ್ರಸಾದ ಎಣ್ಣೆಯು ಚರ್ಮ ರೋಗ ಸಹಿತ ಇತರ ಎಲ್ಲಾ ರೋಗಳಿಗೆ ಔಷಧಿಯಾಗಲಿದೆ. ದೇವಸ್ಥಾನದಲ್ಲಿ ಸಾನಿಧ್ಯವೃದ್ಧಿಗಾಗಿ ಎಲ್ಲಾ ರೀತಿಯ ಪೂಜೆ ಪುರಸ್ಕಾರ ನಿರಂತರ ಮಾಡಲು ದೇವಸ್ಥಾನದ ವ್ಯವಸ್ಥಾಲನಾ ಸಮಿತಿ ನಿರ್ಧರಿಸಿದೆ.
ಪ್ರಶ್ನಾ ಚಿಂತನೆಯ ಪ್ರಕಾರ ದೇವರಿಗೆ ಎಳ್ಳೆಣ್ಣೆ ಅಭಿಷೇಕ ಮಾಡಲು ಸೂಚಿಸಲಾಗಿತ್ತು. ಮೊದಲ ಬಾರಿಗೆ ತಿಂಗಳ ಹಿಂದೆ ಈ ಸೇವೆಯನ್ನು ಮಾಡಲಾಗಿತ್ತು. ಬಳಿಕದ ದಿನ ಭಕ್ತರ ಬೇಡಿಕೆಯಂತೆ ಇದೀಗ ಪ್ರತಿ ತಿಂಗಳು ಎಳ್ಳೆಣ್ಣೆ ಅಭಿಷೇಕ ಮಾಡುವ ನಿರ್ಧಾರವನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸೂಚನೆಯಂತೆ ಮಾಡಲಾಗಿದೆ. ಭಕ್ತರು ತಿಂಗಳ 29 ದಿವಸ ಎಳ್ಳೆಣ್ಣೆ ಸಮರ್ಪಣೆ ಮಾಡಬೇಕು. 30 ನೇ ದಿನ ಶುದ್ಧ ಎಳ್ಳೆಣ್ಣೆಯನ್ನು ಶ್ರೀ ದೇವರಿಗೆ ಅಭಿಷೇಕ ಮಾಡಲಾಗುವುದು. ಅಭಿಷೇಕದ ಎಳ್ಳೆಣ್ಣೆಯನ್ನು ಸೇವಾರಶೀದಿ ಮಾಡಿದ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುವುದು. ಇದು ನಿರಂತರ ಪ್ರತಿ ತಿಂಗಳು ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾಹಿತಿ ನೀಡಿದ್ದಾರೆ.
ಎಳ್ಳೆಣ್ಣೆಯ ಪ್ರಯೋಜನಗಳು ಈ ರೀತಿ ಇವೆ.. ಸ್ನಾನ ಮಾಡುವುದಕ್ಕೆ ವೊದಲು ದೇಹಮರ್ದನ ತೈಲವನ್ನಾಗಿ ಬಳಸುತ್ತಾರೆ.ಆಯುರ್ವೇದದ ಮದ್ದುಗಳನ್ನು ತಯಾರು ಮಾಡುವುದರಲ್ಲಿ ಉಪಯೋಗಿಸುತ್ತಾರೆ.ಆರೋಮಾಥೆರಫಿಯಲ್ಲಿಯು ಎಳ್ಳೆಣ್ಣೆಯನ್ನು ಬಳಸುತ್ತಾರೆ.ಈಗಲೂ ಗ್ರಾಮಗಳಲ್ಲಿ ಸಣ್ಣ ಮಕ್ಕಳಿಗೆ ಎಳ್ಳೆಣ್ಣೆಯನ್ನು ಮೈ ಕೈಗೆ ಹಚ್ಚಿ, ಆಮೇಲೆ ಜಳಕ ಮಾಡಿಸುತ್ತಾರೆ. ಗ್ರಹದೋಷ ನಿವಾರಣಾ ಸಂಧರ್ಭದಲ್ಲಿ ಎಳ್ಳನ್ನು ದಾನ ಮಾಡುತ್ತಾರೆ. ಶನಿದೇವರಿಗೆ ಎಳ್ಳೆಣ್ಣೆ ದೀಪ ಹಚ್ಚುತ್ತಾರೆ.
ಬನಸ್ಪತಿ/ವನಸ್ಪತಿ ಯಲ್ಲಿ 10% ಎಳ್ಳೆಣ್ಣೆಯನ್ನು ಖಂಡಿತವಾಗಿ ಮಿಶ್ರಣ ಮಾಡಿರುತ್ತಾರೆ. ಎಳ್ಳೆಣ್ಣೆಯಲ್ಲಿ ಸೆಸಮೋಲ್ ,ಮತ್ತು ಸೆಸಮಿನ್ ಇರುತ್ತವೆ. ಈ ಎರಡು ರಕ್ತದೊತ್ತಡವನ್ನು ಕಡಿಮೆ ಮಾಡುತ್ತವೆ.
Dakshina Kannada,Karnataka
November 12, 2025 8:52 AM IST