Last Updated:
ಕ್ರಿಕೆಟ್ ಹಾಂಗ್ ಕಾಂಗ್ ಅಧಿಕೃತವಾಗಿ ಅಶ್ವಿನ್ ಟೀಮ್ ಇಂಡಿಯಾ ಪರ ಪುನರಾಗಮನ ಮಾಡಲಿದ್ದಾರೆ ಎಂದು ಘೋಷಿಸಿದೆ. ಅಶ್ವಿನ್ ಜೊತೆಗೆ, ಹಲವಾರು ಮಾಜಿ ಭಾರತೀಯ ಕ್ರಿಕೆಟಿಗರು ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸಲಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಭಾರತ ತಂಡ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(Ravichandra Ashwin) ಮತ್ತೊಮ್ಮೆ ಭಾರತ ತಂಡಕ್ಕೆ ಪುನರಾಗಮನ ಮಾಡಲಿದ್ದಾರೆ. ನವೆಂಬರ್ 7 ರಿಂದ 9 ರವರೆಗೆ ನಡೆಯಲಿರುವ ಹಾಂಗ್ ಕಾಂಗ್ ಸಿಕ್ಸಸ್ (Hong kong Sixes) ಟೂರ್ನಮೆಂಟ್‌ನಲ್ಲಿ ಅವರು ತಂಡವನ್ನು ಪ್ರತಿನಿಧಿಸಲಿದ್ದಾರೆ. ಕ್ರಿಕೆಟ್ ಹಾಂಗ್ ಕಾಂಗ್ ಅಧಿಕೃತವಾಗಿ ಅಶ್ವಿನ್ ಟೀಮ್ ಇಂಡಿಯಾ ಪರ ಪುನರಾಗಮನ ಮಾಡಲಿದ್ದಾರೆ ಎಂದು ಘೋಷಿಸಿದೆ. ಅಶ್ವಿನ್ ಜೊತೆಗೆ, ಹಲವಾರು ಮಾಜಿ ಭಾರತೀಯ ಕ್ರಿಕೆಟಿಗರು ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸಲಿದ್ದಾರೆ.
ಏಳು ವರ್ಷಗಳ ಅಂತರದ ನಂತರ ಕಳೆದ ವರ್ಷ (2024) ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಮೆಂಟ್ ಪುನರಾರಂಭವಾಯಿತು. ಈ ಆವೃತ್ತಿಯನ್ನು ಹೆಚ್ಚು ರೋಮಾಂಚನಗೊಳಿಸಲು ಆಯೋಜಕರು ಅಶ್ವಿನ್ ಅವರಂತಹ ತಾರೆಯರನ್ನು ಆಹ್ವಾನಿಸಿದ್ದಾರೆ. ಕಳೆದ ವರ್ಷ ಅಂತರರಾಷ್ಟ್ರೀಯ ನಿವೃತ್ತಿಯ ನಂತರ, ಈ ವರ್ಷ ಐಪಿಎಲ್‌ಗೆ ವಿದಾಯ ಹೇಳಿದ ಅಶ್ವಿನ್, ಪ್ರಪಂಚದಾದ್ಯಂತದ ಎಲ್ಲಾ ಸ್ವರೂಪಗಳ ಲೀಗ್‌ಗಳಲ್ಲಿ ಭಾಗವಹಿಸುವುದಾಗಿ ಘೋಷಿಸಿದ್ದಾರೆ. ಅಶ್ವಿನ್ ಅವರ ಹೊಸ ಪ್ರಯಾಣ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಮೆಂಟ್‌ನೊಂದಿಗೆ ಪ್ರಾರಂಭವಾಗುತ್ತದೆ.
ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿ, ಪ್ರತಿ ತಂಡವು ಕೇವಲ ಆರು ಆಟಗಾರರನ್ನು ಮಾತ್ರ ಹೊಂದಿರಲಿದೆ. ಪ್ರತಿಯೊಬ್ಬ ಆಟಗಾರನು ಒಂದು ಓವರ್ ಬೌಲ್ ಮಾಡಬೇಕಾಗುತ್ತದೆ. ಬ್ಯಾಟ್ಸ್‌ಮನ್‌ಗಳು 50 ರನ್ ಸಿಡಿಸಿದ ನಂತರ ನಿವೃತ್ತರಾಗುವಂತೆ ವಿಶೇಷ ನಿಯಮಗಳಿರುತ್ತವೆ. ಈ ಪಂದ್ಯಾವಳಿಯು ಹಿಂದೆ (ಟಿ 20 ಆಗಮನಕ್ಕೂ ಮೊದಲು) ಸಾಕಷ್ಟು ಅಭಿಮಾನಿಗಳನ್ನು ಹೊಂದಿತ್ತು. ಆದಾಗ್ಯೂ, ಟಿ20 ಲೀಗ್ಗಳ ಆಗಮನದೊಂದಿಗೆ, ಈ ಸ್ವರೂಪ ಜನಪ್ರೀಯತೆ ಕಳೆದುಕೊಂಡಿತ್ತು. ಈಗ ಅದು ತನ್ನ ಅಸ್ತಿತ್ವವನ್ನು ತೋರಿಸಲು ಪ್ರಯತ್ನಿಸುತ್ತಿದೆ.
ಅಶ್ವಿನ್ ಕಳೆದ ವರ್ಷದ ಕೊನೆಯಲ್ಲಿ (ಡಿಸೆಂಬರ್ 18, 2024) ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಮತ್ತು ಈ ವರ್ಷದ ಆಗಸ್ಟ್ 27 ರಂದು ಐಪಿಎಲ್‌ನಿಂದ ನಿವೃತ್ತಿ ಘೋಷಿಸಿದರು ಎಂದು ತಿಳಿದುಬಂದಿದೆ. ಅಶ್ವಿನ್ ಐಪಿಎಲ್ ನಿವೃತ್ತಿಯ ನಂತರ, ಭಾರತೀಯ ಕ್ರಿಕೆಟ್‌ನೊಂದಿಗಿನ ಎಲ್ಲಾ ಸಂಬಂಧಗಳು ಕಡಿದುಕೊಂಡಿದ್ದಾರೆ.
ಈಗ ಅವರು ವಿಶ್ವದ ಯಾವುದೇ ಪಂದ್ಯಾವಳಿಯಲ್ಲಿ ಭಾಗವಹಿಸಬಹುದು. ಈ ವಿಷಯದಲ್ಲಿ ಅವರಿಗೆ ಬಿಸಿಸಿಐನಿಂದ ಯಾವುದೇ ಆಕ್ಷೇಪಣೆಗಳಿಲ್ಲ. ಐಪಿಎಲ್ ಸೇರಿದಂತೆ ಭಾರತೀಯ ಕ್ರಿಕೆಟ್‌ನೊಂದಿಗಿನ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡ ಯಾವುದೇ ಭಾರತೀಯ ಕ್ರಿಕೆಟಿಗ, ಅವರು ಇಷ್ಟಪಡುವ ವಿಶ್ವದ ಎಲ್ಲಿಯಾದರೂ ಕ್ರಿಕೆಟ್ ಆಡಬಹುದು.
September 18, 2025 11:24 PM IST