ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ಸಂಭ್ರಮಾಚರಣೆ ಕೆಲವೇ ಹೊತ್ತಲೇ ಶೋಕಕ್ಕೆ ತಿರುಗಿತು. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡರು. ಇದೀಗ ಕ್ರಿಕೆಟ್ ಲೋಕದ ಲೆಜೆಂಡರಿ ಆಟಗಾರ, ಕನ್ನಡಿಗ ರಾಹುಲ್ ದ್ರಾವಿಡ್ ಕೂಡ ಈ ದುರಂತದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಬೇಸರ ವ್ಯಕ್ತಪಡಿಸಿದ ಕ್ರಿಕೆಟ್ ಲೆಜೆಂಡ್
ಮಾಧ್ಯಮದೊಂದಿಗೆ ಮಾತನಾಡುತ್ತಾ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್, ’ತುಂಬಾ ನಿರಾಶಾದಾಯಕ ಮತ್ತು ತುಂಬಾ ದುಃಖಕರ. ಬೆಂಗಳೂರು ಸ್ಫೋರ್ಟ್ಸ್ ಬಗ್ಗೆ ತುಂಬಾ ಒಲವು ಹೊಂದಿರುವ ನಗರ. ನಾನು ಕೂಡಾ ಇಲ್ಲಿಂದ ಬಂದವನು. ಇಲ್ಲಿನ ಜನರು ಕ್ರಿಕೆಟ್ ಮಾತ್ರವಲ್ಲ, ಎಲ್ಲಾ ಕ್ರೀಡೆಗಳನ್ನು ಇಷ್ಟ ಪಡುತ್ತಾರೆ. ಅಲ್ಲದೇ ಅವರು ಎಲ್ಲಾ ಟೀಂಗಳನ್ನು ಸಹ ಫಾಲೋ ಮಾಡ್ತಾರೆ. ಅದು ಫುಟ್ಬಾಲ್ ತಂಡವಾಗಿರಬಹುದು ಅಥವಾ ಕಬಡ್ಡಿ ತಂಡವಾಗಿರಬಹುದು. ಇಂತಹ ಘಟನೆ ನಡೆದಿರುವುದು ನಿಜಕ್ಕೂ ಹೃದಯವಿದ್ರಾವಕವಾಗಿದೆ‘ ಎಂದು ಮೃತಪಟ್ಟ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
ಕಾಲ್ತುಳಿತದ ಎಫೆಕ್ಟ್, BCCI ಖಡಕ್ ನಿರ್ಧಾರ; ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯಗಳು ಶಿಫ್ಟ್!
ಬೆಂಗಳೂರು ಕಾಲ್ತುಳಿತ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಅನೇಕ ಕ್ರೀಡಾಪಟುಗಳು ಈ ಬಗ್ಗೆ ಪ್ರತಿಕ್ರಿಯಿಸಿದ್ರು. ಜೀವಕ್ಕಿಂತ ಯಾವುದು ದೊಡ್ಡದಲ್ಲ. ವಿಜಯೋತ್ಸವದ ಅವಶ್ಯಕತೆ ಇರಲಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ರು. ಇದರ ಬೆನ್ನಲ್ಲೇ ಕ್ರೀಡಾಭಿಮಾನಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಶಿಫ್ಟ್ ಮಾಡಲಾಗಿದೆ ಎಂದು ವರದಿ ಆಗಿದೆ.
ರಾಹುಲ್ ದ್ರಾವಿಡ್
ಬೆಂಗಳೂರಿನಿಂದ ಪಂದ್ಯಗಳು ಬೇರೆಡೆ ಸ್ಥಳಾಂತರ!
ಚಿನ್ನಸ್ವಾಮಿಯಲ್ಲಿ ನಡೆದ ಕಾಲ್ತುಳಿತದ ಎಫೆಕ್ಟ್ ಮುಂಬವರು ಪಂದ್ಯಾವಳಿ ಮೇಲೂ ಆಗಿದೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕ್ರಿಕೆಟ್ ಪಂದ್ಯಗಳನ್ನು ಬಿಸಿಸಿಐ ಸ್ಥಳಾಂತರ ಮಾಡಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಕಾಲ್ತುಳಿತದ ಘಟನೆ ಬಳಿಕ ಬಿಸಿಸಿಐ ಪಂದ್ಯ ಸ್ಥಳಾಂತರಕ್ಕೆ ನಿರ್ಧಾರ ಮಾಡಿದೆ ಎನ್ನಲಾಗ್ತಿದೆ.
ಬೆಂಗಳೂರಿನಿಂದ ರಾಜ್ ಕೋಟ್ಗೆ ಪಂದ್ಯಗಳು ಶಿಫ್ಟ್
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಪಂದ್ಯಗಳನ್ನು ನಡೆಸಲು ಈ ಮೊದಲು ಬಿಸಿಸಿಐ ನಿರ್ಧಾರ ಮಾಡಿತ್ತು. ಇದೀಗ ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದ ಹಿನ್ನೆಲೆ ಬೆಂಗಳೂರಿನಿಂದ ರಾಜ್ ಕೋಟ್ ಗೆ ಪಂದ್ಯಗಳನ್ನ ಸ್ಥಳಾಂತರ ಮಾಡಿದ್ದಾರೆ ಎನ್ನಲಾಗ್ತಿದೆ.
ಭಾರತ ಹಾಗೂ ಸೌತ್ ಆಫ್ರಿಕಾ ಮ್ಯಾಚ್
ಭಾರತ ಹಾಗೂ ಸೌತ್ ಆಫ್ರಿಕಾ ನಡುವೆ ನವೆಂಬರ್ 13 ರಿಂದ 19ರ ವರೆಗೆ ಮೂರು ಏಕದಿನ ಪಂದ್ಯಗಳು ನಡೆಯಬೇಕಿತ್ತು. ಆದರೆ ಈಗ ಬೆಂಗಳೂರಿನಿಂದ ರಾಜ್ಕೋಟ್ಗೆ ಪಂದ್ಯಗಳು ಸ್ಥಳಾಂತರಗೊಂಡಿದೆ. ಆದ್ರೆ ಪಂದ್ಯ ಸ್ಥಳಾಂತರ ಬಗ್ಗೆ ಬಿಸಿಸಿಐ ಯಾವುದೇ ನಿರ್ದಿಷ್ಟ ಕಾರಣ ನೀಡಿಲ್ಲ ಎನ್ನಲಾಗ್ತಿದೆ.
ಇತ್ತ ಸ್ಟೇಡಿಯಂ ಸ್ಥಳಾಂತಕ್ಕೆ ಸರ್ಕಾರದ ಚಿಂತನೆ
ಕಾಲ್ತುಳಿದ ಘಟನೆ ಬಳಿಕ ಕ್ರಿಕೆಟ್ ಕ್ರೀಡಾಂಗಣವನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಮಾತಾಡಿದ ಸಿಎಂ ಸಿದ್ದರಾಮಯ್ಯ ಅವರು ಕ್ರೀಡಾಂಗಣ ಸ್ಥಳಾಂತರಕ್ಕೆ ಪರಿಶೀಲಿಸಲಾಗುತ್ತಿದೆ. ಯಾವುದೇ ಸರ್ಕಾರದ ಅಡಿಯಲ್ಲಿ ಇಂತಹ ಅಹಿತಕರ ಘಟನೆ ನಡೆಯಬಾರದು. ವೈಯಕ್ತಿಕವಾಗಿ, ಈ ಘಟನೆ ನನಗೆ ಮತ್ತು ನನ್ನ ಸರ್ಕಾರಕ್ಕೆ ತೀವ್ರ ನೋವುಂಟು ಮಾಡಿದೆ ಎಂದು ಹೇಳಿದ್ರು.
Bangalore [Bangalore],Bangalore,Karnataka
June 10, 2025 8:47 PM IST
Rahul Dravid on Stampede: ಕಾಲ್ತುಳಿತದ ಬಗ್ಗೆ ಮೌನ ಮುರಿದ ರಾಹುಲ್ ದ್ರಾವಿಡ್; ಆರ್‌ಸಿಬಿ, ರಾಜ್ಯ ಸರ್ಕಾರದ ಬಗ್ಗೆ ಮಾಜಿ ಕ್ರಿಕೆಟಿಗ ಹೇಳಿದ್ದೇನು?